ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮತ್ತು ಅದರ ನಂತರವೂ ಸಮಾಜ, ರಾಷ್ಟ್ರ ಮತ್ತು ಧರ್ಮಕ್ಕಾಗಿ ಎಷ್ಟೋ ನ್ಯಾಯವಾದಿಗಳು (ವಕೀಲರು) ಅಮೂಲ್ಯವಾದ ಕಾರ್ಯವನ್ನು ಮಾಡಿದ್ದಾರೆ. ಲೋಕಮಾನ್ಯ ತಿಲಕರು, ಸ್ವಾ.ಸಾವರಕರರು, ಸ್ವಾಮಿ ವಿವೇಕಾನಂದರು ಇವರೆಲ್ಲ ಅವರಲ್ಲಿದ್ದ ಕಾನೂನಿನ ಬಗೆಗಿನ ಜ್ಞಾನವನ್ನು ಕೇವಲ ರಾಷ್ಟ್ರ ಹಾಗೂ ಧರ್ಮಕ್ಕಾಗಿ ಉಪಯೋಗಿಸಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ದೊರಕಿ ೬೪ ವರ್ಷಗಳಾದರೂ ದೇಶದ ದುಃಸ್ಥಿತಿಯಲ್ಲಿ ಬದಲಾವಣೆಯಾಗಿಲ್ಲ. ಎಲ್ಲ ಕ್ಷೇತ್ರಗಳಲ್ಲಿಯೂ ರಾಜಕಾರಣಿಗಳ ಬೇಜವಾಬ್ದಾರಿತನದಿಂದ ಜನತೆಯು ಹಿಂಸೆಯನ್ನು ಅನುಭವಿಸುತ್ತಿದೆ. ಆದ್ದರಿಂದ ನ್ಯಾಯವಾದಿಗಳೇ, ಇಂತಹ ಸ್ಥಿತಿಯಲ್ಲಿ ನಿಮ್ಮ ವ್ಯವಸಾಯವನ್ನು ಸಂಭಾಳಿಸಿಕೊಂಡು ನೀವು ಸಮಾಜ,
ರಾಷ್ಟ್ರ ಹಾಗೂ ಧರ್ಮಕ್ಕಾಗಿ ಮುಂದೆ ನೀಡಿರುವ ಯಾವುದಾದರೂ ಒಂದು ಅಥವಾ ಒಂದಕ್ಕಿಂತ ಹೆಚ್ಚು ವಿಷಯಗಳ ಬಗ್ಗೆ ನಾಗರಿಕರಿಗೆ ಸಂವಿಧಾನದತ್ತ ಮೂಲಭೂತ ಹಕ್ಕುಗಳನ್ನು ಆಚರಣೆಯಲ್ಲಿ ತರಲು ನ್ಯಾಯಾಲಯದಲ್ಲಿ ಸಂಘರ್ಷವನ್ನು ಮಾಡಿದರೆ ಸ್ವಲ್ಪ ಮಟ್ಟಿಗಾದರೂ ಜನರ ಮೇಲಿನ ಅನ್ಯಾಯವನ್ನು ದೂರಗೊಳಿಸುವಂತಹ ಅತ್ಯಮೂಲ್ಯವಾದ ಕಾರ್ಯವು ನಿಮ್ಮಿಂದ ಆಗುತ್ತದೆ. ಈ ರೀತಿ ಮಾಡಿದರೆ ‘ನೀವು ಸ್ವಲ್ಪ ಮಟ್ಟಿಗಾದರೂ ಸಮಾಜದ ಋಣವನ್ನು ತೀರಿಸಿದಂತಾಗುತ್ತದೆ’ ಅದೇ ರೀತಿ ರಾಷ್ಟ್ರರಕ್ಷಣೆ ಹಾಗೂ ರಾಷ್ಟ್ರಜಾಗೃತಿಯ ಕಾರ್ಯದಲ್ಲಿ ನೀವೂ ಕೈ ಜೋಡಿಸಿದಂತಾಗುತ್ತದೆ.
೧.ಚಲಾವಣೆಯಲ್ಲಿರುವ ಕಳ್ಳ ನೋಟು ಪ್ರಕರಣದಲ್ಲಿ ಸರಕಾರದ ವಿರುದ್ಧವಾಗಿ ಜನಹಿತ ಯಾಚಿಕೆಯನ್ನು ದಾಖಲಿಸುವುದು: ನಮ್ಮ ದೇಶದಲ್ಲಿರುವ ದೇಶದ್ರೋಹಿಗಳು ದೊಡ್ಡ ಪ್ರಮಾಣದಲ್ಲಿ ಕಳ್ಳ ನೋಟುಗಳನ್ನು ತುರುಕಿಸಿದ್ದಾರೆ. ಇದರ ಪರಿಣಾಮವಾಗಿ ಎಷ್ಟೋ ಸಲ ಸಾಮಾನ್ಯ ನಾಗರಿಕನಿಗೇನಾದರೂ ಕಳ್ಳ ನೋಟು ಸಿಕ್ಕಲ್ಲಿ ಅವನ ತಪ್ಪಿಲ್ಲದಿದ್ದರೂ ಪೊಲೀಸರು ಅವನನ್ನೇ ಹಿಡಿಯುತ್ತಾರೆ. ಜನಸಾಮಾನ್ಯರು ತಮ್ಮ ಖಾತೆಯಲ್ಲಿ ಹಣವನ್ನು ಜಮೆ ಮಾಡುವಾಗ ಕಳ್ಳ ನೋಟು ಸಿಕ್ಕಲ್ಲಿ ಅಲ್ಲಿನ ಅಧಿಕಾರಿಯು ಆ ನೋಟುಗಳನ್ನು ಜಮೆ ಮಾಡಿಲ್ಲವೆಂದು ತೋರಿಸುತ್ತಾನೆ, ಅಂದರೆ ಇಂತಹ ಪ್ರಕರಣಗಳಲ್ಲಿ ಜನತೆಯ ತಪ್ಪಿಲ್ಲದಿದ್ದರೂ ಅವರು ಆ ಆರ್ಥಿಕ ನಷ್ಟವನ್ನು ಅನುಭವಿಸುತ್ತಾರೆ. ಇದಕ್ಕೆ ಕಾರಣವೇನೆಂದರೆ ‘ಆ ನೋಟು ನಿಮ್ಮಲ್ಲಿರುವ ಬಗ್ಗೆ ಪೊಲೀಸರಿಗೆ ತಿಳಿದಾಗ, ಪೊಲೀಸರು ತೊಂದರೆ ಕೊಡಲು ನಿಮ್ಮ ಹಿಂದೆ ಬೀಳುತ್ತಾರೆ, ಇದು ಅನ್ಯಾಯವಾಗಿದೆ. ವಾಸ್ತವದಲ್ಲಿ ‘ಕಳ್ಳ ನೋಟುಗಳನ್ನು ಚಲಾವಣೆಗೆ ಬರದಂತೆ ನೋಡಿಕೊಳ್ಳುವುದು, ಅವುಗಳನ್ನು ಚಲಾವಣೆಗೆ ತರುವಂತಹ ವ್ಯಕ್ತಿಯನ್ನು ಪ್ರತಿಬಂಧಿಸುವುದು ಹಾಗೂ ಅವನಿಗೆ ಶಿಕ್ಷೆ ವಿಧಿಸುವುದು’, ಇದು ಸರಕಾರದ ಕರ್ತವ್ಯವಾಗಿದೆ. ಆದರೂ ಸರಕಾರವು ತನ್ನ ಕರ್ತವ್ಯವನ್ನು ಕಟ್ಟುನಿಟ್ಟಾಗಿ ಪಾಲಿಸದಿರುವುದರಿಂದ ನಿರಪರಾಧಿ ಜನತೆಯು ತೊಂದರೆಯನ್ನು ಅನುಭವಿಸಬೇಕಾಗಿದೆ. ಇದಕ್ಕಾಗಿ ಉಚ್ಚ ಅಥವಾ ಸರ್ವೋಚ್ಚ ನ್ಯಾಯಾಲಯದಲ್ಲಿ ಸರಕಾರದ ವಿರುದ್ಧ ಜನಹಿತ ಯಾಚಿಕೆಯನ್ನು ದಾಖಲಿಸಬಹುದು.
೨.ಭ್ರಷ್ಟಾಚಾರದ ಬಗ್ಗೆ ಸಂದೇಹವಿರುವ ವ್ಯಕ್ತಿಯ ಆಸ್ತಿಗೆ ಸಂಬಂಧಿಸಿ ಅವನ ವಿರುದ್ಧ ಜನಹಿತ ಯಾಚಿಕೆಯನ್ನು ದಾಖಲಿಸುವುದು: ದೇಶದಲ್ಲಿನ ಎಲ್ಲ ಕ್ಷೇತ್ರದಲ್ಲಿ ಹರಡಿರುವ ಭ್ರಷ್ಟಾಚಾರವನ್ನು ಹೋಗಲಾಡಿಸುವ ಸಲುವಾಗಿ ಭ್ರಷ್ಟ ಅಧಿಕಾರಿಗಳು, ರಾಜಕಾರಣಿಗಳು, ಮಂತ್ರಿಗಳು ಹಾಗೂ ಅವರ ನೆಂಟರಿಷ್ಟರ ಆಸ್ತಿಯ ಬಗ್ಗೆ ಅವಶ್ಯಕ ಮಾಹಿತಿಯನ್ನು ಆಯಾ ಖಾತೆಯಿಂದ ಮಾಹಿತಿಹಕ್ಕು ಅಧಿಕಾರದಡಿ ಪಡೆದುಕೊಳ್ಳುವುದು ಹಾಗೂ ಆ ಮಾಹಿತಿಯನ್ನು ಆಧಾರವಾಗಿಟ್ಟುಕೊಂಡು ಸಂಬಂಧಿತರ ಮೇಲೆ ಉಚ್ಚ ಅಥವಾ ಸರ್ವೋಚ್ಚ ನ್ಯಾಯಾಲಯದಲ್ಲಿ ಜನಹಿತ ಯಾಚಿಕೆಯನ್ನು ದಾಖಲಿಸುವುದು.
೩.ಕಪ್ಪು ಹಣದ ರೂಪದಲ್ಲಿ ದೇಶದ ಹೊರಗೆ ತೆಗೆದುಕೊಂಡು ಹೋಗಿರುವ ದೇಶದ ಹಣವನ್ನು ಪುನಃ ಪಡೆದುಕೊಳ್ಳುವ ಸಲುವಾಗಿ ಜನಹಿತ ಯಾಚಿಕೆಯನ್ನು ದಾಖಲಿಸುವುದು: ದೇಶದ್ರೋಹಿಗಳು ವಿದೇಶಗಳಿಗೆ ಕೊಂಡೊಯ್ದ ಕಪ್ಪು ಹಣವನ್ನು ಪುನಃ ತೆಗೆದುಕೊಂಡು ಬಂದಲ್ಲಿ, ಹಿಂದೂಸ್ಥಾನದ ವಿದೇಶೀ ಹಣದ ಬೆಟ್ಟದಷ್ಟಿರುವ ಸಾಲವನ್ನು ತೀರಿಸಬಹುದು. ದೇಶಹಿತಕ್ಕಾಗಿ ಈ ಕೆಲಸಕ್ಕೆ ಉಚ್ಚ ಅಥವಾ ಸರ್ವೋಚ್ಛ ನ್ಯಾಯಾಲಯದಲ್ಲಿ ಸರಕಾರದ ವಿರುದ್ಧ ಜನಹಿತ ಯಾಚಿಕೆಯನ್ನು ದಾಖಲಿಸಬಹುದು.
೪.ಪಠ್ಯಕ್ರಮದಲ್ಲಿ ಸುಳ್ಳು ಇತಿಹಾಸವನ್ನು ಮತ್ತು ದೇಶ ಹಾಗೂ ಧರ್ಮದ್ರೋಹಿ ಪಾಠವನ್ನು ಹೇಳಿಕೊಡಲು ಕಾರಣರಾಗಿರುವ ಅಧಿಕಾರಿಗಳ ವಿರುದ್ಧ ಕಾನೂನುಬದ್ಧ ಕಾರ್ಯಾಚರಣೆ ನಡೆಸುವುದು: ಶಾಲೆ ಹಾಗೂ ಮಹಾವಿದ್ಯಾಲಯಗಳ ಪಠ್ಯಕ್ರಮದಲ್ಲಿ ಬಂದಿರುವ ಪುಸ್ತಕಗಳಲ್ಲಿ ನಿಜವಾದ ಇತಿಹಾಸವನ್ನು ತೆಗೆದು ಸುಳ್ಳು ಇತಿಹಾಸವನ್ನು ಕಲಿಸಲಾಗುತ್ತಿದೆ. ಇಂತಹ ಸುಳ್ಳು ಇತಿಹಾಸ, ಹಾಗೆಯೇ ರಾಷ್ಟ್ರ ಹಾಗೂ ಧರ್ಮದ್ರೋಹಿಗಳ ಬಗೆಗಿನ ವಿಷಯಗಳನ್ನು ಒಳಗೊಂಡಿರುವ ಪಠ್ಯಕ್ರಮದಲ್ಲಿ ಸೇರಿಸುವ ಜವಾಬ್ದಾರ ಅಧಿಕಾರಿಗಳ ಹೆಸರು ಹಾಗೂ ಇತರ ಅವಶ್ಯಕ ಮಾಹಿತಿಯನ್ನು ಮಾಹಿತಿ ಹಕ್ಕು ಅಧಿಕಾರದಿಂದ ಪಡೆಯುವುದು ಹಾಗೂ ಅವರು ಮಾಡಿರುವ ಅಪರಾಧಕ್ಕಾಗಿ ಅವರಿಗೆ ಶಿಕ್ಷೆ ವಿಧಿಸಲು ಅವರ ವಿರುದ್ಧದ ಕಾನೂನುಬದ್ಧ ಮಾರ್ಗದಲ್ಲಿ ಕಾರ್ಯಾಚರಣೆಯನ್ನು ನಡೆಸುವುದು. ೫. ದೇಶದಲ್ಲಿನ ಉಚ್ಚ ನ್ಯಾಯಾಲಯಗಳು ಹಾಗೂ ಸರ್ವೋಚ್ಚ ನ್ಯಾಯಾಲಯವು ಜನಹಿತಕ್ಕಾಗಿ ಆಗಾಗ ನೀಡಿರುವ ಆದೇಶಗಳನ್ನು (ಉದಾ. ಧ್ವನಿಪ್ರದೂಷಣೆ, ಜಲಪ್ರದೂಷಣೆ ಇತ್ಯಾದಿ) ಪಾಲಿಸದಿರುವ ಕಾನೂನುದ್ರೋಹಿ ಸರಕಾರೀ ಇಲಾಖೆಗಳ ವಿರುದ್ಧ ನ್ಯಾಯಾಲಯದಲ್ಲಿ ಕಾರ್ಯಾಚರಣೆ ನಡೆಸುವುದು.
೬.ಹಿಂದೂ ಸಂಸ್ಕೃತಿ ಹಾಗೂ ಹಿಂದೂ ಧರ್ಮವನ್ನು ನಾಮಾವಶೇಷಗೊಳಿಸಲು ಹಿಂದೂ ಸಂಘಟನೆಗಳ ವಿರುದ್ಧ ಸುಳ್ಳು ಹೇಳಿಕೆಗಳನ್ನು ಹಾಗೂ ಲೇಖನಗಳನ್ನು ಬರೆಯುವವರ ವಿರುದ್ಧ ನ್ಯಾಯಾಲಯದ ಹೋರಾಟ ನಡೆಸುವುದು. (ಉದಾ: ದಿಗ್ವಿಜಯ ಸಿಂಗರವರು ಹಿಂದೂ ಸಂಘಟನೆಗಳ ವಿರುದ್ಧ ಮಾಡಿರುವ ಅಸಂಬದ್ಧ ಹಾಗೂ ನಿರಾಧಾರ ಸುಳ್ಳು ಹೇಳಿಕೆಗಳು)
ಈ ಮೇಲಿನ ಪಟ್ಟಿಯಲ್ಲಿ ಸಮಾಜದ ಮೇಲಾಗುವ ಅನ್ಯಾಯದ ಬಗ್ಗೆ ಕೆಲವು ಉದಾಹರಣೆಗಳನ್ನು ನೀಡಲಾಗಿದೆ. ನಿಮಗೆ ಇವುಗಳಲ್ಲದೇ ಇನ್ನೂ ಅನೇಕ ಉದಾಹರಣೆಗಳು ತಿಳಿದಿರಬಹುದು. ಇವುಗಳಲ್ಲಿ ಯಾವುದೇ ವಿಷಯದ ಬಗ್ಗೆ ಸಮಾಜ, ಧರ್ಮ ಹಾಗೂ ರಾಷ್ಟ್ರದ ಹಿತಕ್ಕಾಗಿ ಉಚಿತವಾಗಿ ಸೇವೆ ಮಾಡಲು ಇಚ್ಛಿಸುವ ನ್ಯಾಯವಾದಿಗಳು ಹೆಚ್ಚಿನ ಮಾಹಿತಿಗಾಗಿ ಸನಾತನ ಸಂಸ್ಥೆಯ ಗೌರವಾನ್ವಿತ ಕಾನೂನು ವಿಷಯದ ಸಲಹೆಗಾರರಾದ ನ್ಯಾಯವಾದಿ ಶ್ರೀ. ರಾಮದಾಸ ಕೇಸರಕರ ಇವರನ್ನು ಸಂಚಾರೀ ವಾಣಿ ಕ್ರಮಾಂಕ ೦೯೪೦೪೯ ೫೬೦೧೨ ಅಥವಾ vidhisangh@gmail.com ಈ ವಿ-ಅಂಚೆಯ ವಿಳಾಸದಿಂದ ಸಂಪರ್ಕಿಸಿ.
ಸಾಧಕರು ಸತ್ತ್ವದ ಬಂಧನದಲ್ಲಿರುತ್ತಾರೆ, ಆದುದರಿಂದ ಅವರು ಮುಕ್ತರಾಗುತ್ತಾರೆ. ಆದರೆ ಇತರರು ರಜ-ತಮದ ಬಂಧನದಲ್ಲಿರುತ್ತಾರೆ; ಆದುದರಿಂದ ಸಿಲುಕುತ್ತಾರೆ. -ಡಾ.ಆಠವಲೆ (ಕ್ರಿ.ಶ. ೧೯೯೧)
No comments:
Post a Comment