ಕೇರಳದಲ್ಲಿರುವ ಸಂಘದ ಕಾರ್ಯಕರ್ತರು ಹಿಂದೂ ಜನಜಾಗೃತಿ
ಸಮಿತಿಯಕಾರ್ಯಕರ್ತರಿಗೆ ಹೇಳಿದ ಕೆಲವು ಅಂಶಗಳು
೧.ವಿಶ್ವಮಂಗಲ ಗೋಗ್ರಾಮ ಯಾತ್ರೆಯ ಸಮಯದಲ್ಲಿ ವಿಶ್ವ ಹಿಂದೂ ಪರಿಷತ್ತಿನ ರಾಜ್ಯ ಸಹಕಾರ್ಯ ನಿರ್ವಾಹಕರು ಹೊಟೇಲಿಗೆ ಹೋಗಿ ಗೋಮಾಂಸ ತಿಂದರು.
೨.ಮೂಂಗಮ ಎಂಬಲ್ಲಿ ಸಂಘದ ಓರ್ವ ಪ್ರಚಾರಕನನ್ನು ಧರ್ಮಾಂಧರು ಮಸೀದಿಯ ಮುಂದೆ ನಿಲ್ಲಿಸಿ ಅವನ ಚೀಲದಲ್ಲಿ ಬಾಂಬ್ ಇದೆಯೇ ಎಂದು ತಪಾಸಣೆ ಮಾಡಿದರು. ಅವನ ಚೀಲದಲ್ಲಿ ಒಂದು ಚೂರಿ ಸಿಕ್ಕಿದ್ದರಿಂದ ಆ ಧರ್ಮಾಂಧರು ಅವನ ಬಟ್ಟೆ ತೆಗೆದು ಅವನನ್ನು ಕೇವಲ ಅಂತರ್ವಸ್ತ್ರದಲ್ಲಿ ಮಸೀದಿಯ ಮುಂದೆ ಎರಡು ಘಂಟೆ ನಿಲ್ಲಿಸಿದರು. ನಂತರ ಸಂಘದ ಕಾರ್ಯಕರ್ತರು ಬಂದು ಅವನನ್ನು ಕರೆದುಕೊಂಡು ಹೋದರು. ಇಂತಹ ಮಾನಹಾನಿಯಾಗಿಯೂ ಸಂಘದ ಮುಖಂಡರು ಒಂದು ಸಾಮಾನ್ಯ ಪ್ರತಿಭಟನೆಯನ್ನು ನೋಂದಾಯಿಸಲಿಲ್ಲ.೩.ಮೂಂಗಮ ಎಂಬಲ್ಲಿ ಪಂಚಾಯತಿ ಚುನಾವಣೆಯ ಸಮಯದಲ್ಲಿ ಭಾಜಪದ ವಾಹನವನ್ನು ಮಸೀದಿಯ ಸಮೀಪದಿಂದ ಹೋಗಲು ಬಿಡಲಿಲ್ಲ. (ಭಾರತದಲ್ಲಿ ಪಾಕ್ ನಿರ್ಮಾಣವಾಗಿರುವುದಕ್ಕೆ ಇದು ನಿದರ್ಶನವಾಗಿದೆ. - ಸಂಕಲನಕಾರರು)
೪.ಪುಂಜಾರ ಎಂಬಲ್ಲಿ ಓರ್ವ ಹಿಂದೂವಿನ ಶಾಲೆಯಿದೆ. ಅದರ ವಿಶ್ವಸ್ಥರು ಸಂಘದಲ್ಲಿದ್ದಾರೆ. ಆ ಶಾಲೆಯಲ್ಲಿ ಅರಬೀ ಭಾಷೆಯನ್ನು ಕಲಿಸುತ್ತಿದ್ದಾರೆ.
೫.ಮೂಂಗಮ ಎಂಬಲ್ಲಿನ ಧರ್ಮಾಂಧರು ಹಿಂದೂಗಳ ಮನೆಗೆ ಹೋಗಿ ‘ನಾವು ಹಿಂದೆ ಬ್ರಾಹ್ಮಣರಾಗಿದ್ದೆವು; ಆದರೆ ಅದರಿಂದ ನಮಗೆ ಏನೂ ಲಾಭವಾಗಲಿಲ್ಲ. ಈಗ ಇಸ್ಲಾಂ ಸ್ವೀಕರಿಸಿದ ನಂತರ ನಾವು ಸುಖವಾಗಿದ್ದೇವೆ’ ಎಂದು ಹೇಳುತ್ತಾರೆ. ಬಹಳಷ್ಟು ಬಾರಿ ಅವರು ಸಂಘದ ಮುಖಂಡರ ಮನೆಗೂ ಹೋಗುತ್ತಾರೆ.
೬. ಕೇರಳದಲ್ಲಿ ಒಂದು ಧರ್ಮಾಂಧ ಸಂಘಟನೆಯು ಹಿಂದೂ ಸಂಘಟನೆಗಳಿಗೆ ಬಡ್ಡಿಯಿಲ್ಲದ ಸಾಲವನ್ನು ಉದಾರವಾಗಿ ನೀಡುತ್ತದೆ. ಇದಕ್ಕಾಗಿ ಅವರು ಹಿಂದೂಗಳಿಂದ ೨ ಛಾಯಾಚಿತ್ರಗಳನ್ನು ಮತ್ತು ಗುರುತುಪತ್ರವನ್ನು ತೆಗೆದುಕೊಳ್ಳುತ್ತಾರೆ. ಹಣ ತಿರುಗಿಸಿದ ನಂತರವೂ ಅವರು ಹಿಂದೂಗಳಿಗೆ ಅವರ ಗುರುತುಪತ್ರ ಮತ್ತು ಛಾಯಾಚಿತ್ರಗಳನ್ನು ಹಿಂತಿರುಗಿ ಕೊಡುವುದಿಲ್ಲ. ಯಾವ ಹಿಂದೂಗಳಿಗೆ ಹಣ ಹಿಂತಿರುಗಿ ಕೊಡಲು ಸಾಧ್ಯ ವಿಲ್ಲವೋ ಅಲ್ಲಿ ಅವರ ಮತಾಂತರ ಮಾಡುವ ಪ್ರಯತ್ನಗಳು ಪ್ರಾರಂಭವಾಗುತ್ತವೆ.
ಇವೆಲ್ಲ ಘಟನೆಗಳು ಸಂಘದವರು ಪ್ರಬಲವಾಗಿರುವ ಜಿಲ್ಲೆಯಲ್ಲೇ ನಡೆಯುತ್ತಿದೆ. ಅಲ್ಲಿನ ಹಿಂದೂಗಳೇ ಈ ಸ್ಥಿತಿಯಲ್ಲಿದ್ದರೆ ಇತರ ಜಿಲ್ಲೆಯಲ್ಲಿನ ಸ್ಥಿತಿ ಹೇಗಿರಬಹುದು ಎಂದು ವಿಚಾರ ಮಾಡದಿರುವುದೇ ಉತ್ತಮ.
೭.ಸಂಘದ ಇನ್ನೊಬ್ಬ ಕಾರ್ಯಕರ್ತನು ಸಮಿತಿಯ ಪ್ರಸಾರ ಕಾರ್ಯದಲ್ಲಿ ಸಹಾಯ ಮಾಡುತ್ತಾನೆ. ಆ ಕಾರ್ಯಕರ್ತನಿಗೆ ಕೇರಳದಲ್ಲಿರುವ ಸಮಿತಿಯ ಕಾರ್ಯಕರ್ತನು, ‘ನೀವು ನಿಮ್ಮ ವರಿಷ್ಠರು ನೀಡಿದ ಸೂಚನೆಗಳಂತೆ ನಡೆಯದಿದ್ದರೆ, ನಿಮ್ಮ ವರಿಷ್ಠ ಮುಖಂಡರು ಏನು ಮಾಡುವರು’ ಎಂದು ಕೇಳಿದನು. ಆಗ ಈ ಕಾರ್ಯಕರ್ತನು, ‘ಒಂದೆಂದರೆ ನಮ್ಮಲ್ಲಿಯ ಕೆಲವು ವರಿಷ್ಠ ನೇತಾರರು ‘ನನ್ನಂತೆ ಕೃತಿ ಮಾಡುವವರು ಸಂಘಟನೆಯ ಶತ್ರುವಾಗಿದ್ದಾರೆ’ ಎಂದು ಹೇಳುತ್ತಾ ಸುತ್ತುತ್ತಾರೆ, ಕೆಲವೊಮ್ಮೆ ಧರ್ಮಾಂಧರಿಂದ ಅಥವಾ ಇತರ ವಿರೋಧಕರಿಂದ ನಮಗೆ ಅಮಾನುಷ ಥಳಿತಕ್ಕೊಳಗಾಗುವಂತೆ ನೋಡುತ್ತಾರೆ. ನಮ್ಮ ಬಗ್ಗೆ ಹೀನ ಮಟ್ಟಕ್ಕೆ ಹೋಗಿ ಅಪಪ್ರಚಾರ ಮಾಡುತ್ತಾರೆ, ಕೆಲವು ವರಿಷ್ಠ ಮುಖಂಡರು ಕಾರ್ಯಕರ್ತರೊಂದಿಗೆ ಬಂದು ಸ್ವತಃ ಥಳಿಸುತ್ತಾರೆ ಮತ್ತು ಕೆಲವೊಮ್ಮೆ ಸುಳ್ಳು ಅಪಾದನೆ ಹೊರಿಸಿ ಪೊಲೀಸರು ಬಂಧಿಸುವಂತೆ ನೋಡಿಕೊಳ್ಳುತ್ತಾರೆ’ ಎಂದರು. (ಸಂಘವು ಹಿಂದೂಗಳ ಆಶಾಸ್ಥಾನವಾಗಿದೆ. ಸಂಘವು ಹಿಂದೂ ರಾಷ್ಟ್ರದ ಸ್ಥಾಪನೆಯಲ್ಲಿ ತನ್ನ ಯೋಗದಾನವನ್ನು ಯೋಗ್ಯ ರೀತಿಯಿಂದ ನೆರವೇರಿಸ ಬೇಕೆಂಬುದೇ ಹಿಂದೂಗಳ ಅಪೇಕ್ಷೆಯಾಗಿದೆ. ಸಂಘಟನೆಯ ಇಂತಹ ಕೆಲವು ಕಾರ್ಯಕರ್ತರಿಂದಾಗುವ ಕೃತಿಗಳಿಂದ ಸಂಘದ ಮಾನಹಾನಿಯಾಗುತ್ತಿದ್ದರೆ ಮತ್ತು ಇತರ ಹಿಂದುತ್ವವಾದಿ ಸಂಘಟನೆ ಮತ್ತು ಸಂಘದ ನಡುವೆ ಬಿರುಕು ನಿರ್ಮಾಣವಾಗುತ್ತಿದ್ದರೆ, ಸಂಘದ ವರಿಷ್ಠ ಮುಖಂಡರು ಇಂತಹ ಮುಖಂಡರಿಗೆ ತಿಳಿಸಿ ಹೇಳಬೇಕು!- ಸಂಕಲನಕಾರರು)
No comments:
Post a Comment