ಕಾರವಾರದಲ್ಲಿ ದೇವಸ್ಥಾನ ಕೆಡಹುವುದರ ವಿರುದ್ಧ ಪ್ರತಿಭಟನೆ

ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗೆ ಮನವಿ ನೀಡುತ್ತಿರುವ ಹಿಂದೂ ಧರ್ಮಾಭಿಮಾನಿಗಳು

ಕಾರವಾರ : ಇಲ್ಲಿನ ಅಮರಾಯಿ ಎಂಬಲ್ಲಿನ ೩೦೦ ವರ್ಷ ಪುರಾತನ ವಾಟಮಾರ್ಗ ದೇವಸ್ಥಾನವಿದೆ. ಈ ದೇವಸ್ಥಾನದ ಬದಿಯಲ್ಲಿ ನಂತರ ರಸ್ತೆ ನಿರ್ಮಿಸಿರುವುದರಿಂದ ಈ ದೇವಸ್ಥಾನವನ್ನು ಅಧಿಕೃತವೆಂದು ನಿರ್ಧರಿಸಲಾಗಿದೆ. ಈ ದೇವಸ್ಥಾನವನ್ನು ಕೆಡಹ ಬಾರದೆಂದು ಕಾರವಾರದಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಎದುರು ದಿನಾಂಕ ೨೮.೧.೨೦೧೧ರಂದು ಆಂದೋಲನ ನಡೆಸಲಾಯಿತು. ಈ ಆಂದೋಲನದಲ್ಲಿ ಹಿಂದೂ ಜನ ಜಾಗೃತಿ ಸಮಿತಿ, ದೇವಸ್ಥಾನದ ವಿಶ್ವಸ್ತರು, ಇತರ ಹಿಂದುತ್ವವಾದಿ ಸಂಘಟನೆಗಳು, ಧರ್ಮಾಭಿಮಾನಿಗಳು, ಹಿಂದೂ ಸಂಪ್ರದಾಯದ ಅನುಯಾಯಿಗಳು ಹಾಗೂ ನ್ಯಾಯಾಧೀಶರು ಉಪಸ್ಥಿತರಿದ್ದರು. ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳಿಗೆ ನಿವೇದನೆ ನೀಡಲಾಯಿತು. ಅವರಿಬ್ಬರೂ, ‘ಯಾರಿಗೂ ತೊಂದರೆಯಾಗದಂತೆ ಪ್ರಯತ್ನಿಸುತ್ತೇವೆ. ಎಲ್ಲರೊಂದಿಗೆ ಚರ್ಚಿಸಿ ನಿರ್ಣಯ ತೆಗೆದುಕೊಳ್ಳುತ್ತೇವೆ. ಈ ದೇವಸ್ಥಾನವನ್ನು ಬೇರೆ ಕಡೆಗೆ ಸ್ಥಳಾಂತರಿಸಿದ ನಂತರ ಇದನ್ನು ಕೆಡಹುತ್ತೇವೆ ಎಂದರು. (೩೦೦ ವರ್ಷಗಳಷ್ಟು ಪುರಾತನವಾದ ದೇವಸ್ಥಾನದ ಬದಿಯಲ್ಲಿ ರಸ್ತೆಯನ್ನು ನಿರ್ಮಿಸಿ ಈಗ ದೇವಸ್ಥಾನವನ್ನು ಕೆಡವಲು ಪ್ರಯತ್ನಿಸುವ ಕರ್ನಾಟಕ ರಾಜ್ಯದ ಹಿಂದೂದ್ರೋಹಿ ಭಾಜಪ ಸರಕಾರ! -ಸಂಪಾದಕರು) ಈ ಸಮಯ ದಲ್ಲಿ ೧೨೫ ಧರ್ಮಾಭಿಮಾನಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪ್ರಸಾರಮಾಧ್ಯಮದವರು ಹಾಗೂ ೮ ಜನ ಪತ್ರಕರ್ತರು ಉಪಸ್ಥಿತರಿದ್ದರು.

No comments:

Post a Comment