ಕೇರಳದಲ್ಲಿರುವ ಕೊಟ್ಟಾಯಂ ಜಿಲ್ಲೆಯಲ್ಲಿಯ ಪೊನಕುನ್ನಮದಲ್ಲಿ
ಹಿಂದೂ ಜನಜಾಗೃತಿ ಸಮಿತಿ ಮತ್ತು ಸನಾತನದ ಕಾರ್ಯಕ್ಕೆ ರಾಷ್ಟ್ರೀಯ
ಸ್ವಯಂಸೇವಕ ಸಂಘದ ಕಾರ್ಯಕರ್ತರು ಮಾಡಿದ ವಿರೋಧದ ಕೆಲವು ಉದಾಹರಣೆಗಳು
ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ೨೦೧೦ ರ ಡಿಸೆಂಬರ್ ೧೯ ರಂದು ಪೊನಕುನ್ನಮದಲ್ಲಿ
ಹಿಂದೂ ಧರ್ಮಜಾಗೃತಿ ಸಭೆಯು ನಡೆಯಿತು. ಈ ಸಭೆಯ ಪ್ರಸಾರ ಮಾಡುತ್ತಿರುವಾಗ ಪೊನಕುನ್ನಮದಲ್ಲಿ ಸಮಿತಿಯ ಕಾರ್ಯಕರ್ತರು ಸಂಘದ ಕಾರ್ಯಕರ್ತರಿಂದ ವಿವಿಧ ರೀತಿಯಲ್ಲಿ ವಿರೋಧವನ್ನು ಎದುರಿಸಬೇಕಾಯಿತು.
ಹಿಂದೂ ಧರ್ಮಜಾಗೃತಿ ಸಭೆಯು ನಡೆಯಿತು. ಈ ಸಭೆಯ ಪ್ರಸಾರ ಮಾಡುತ್ತಿರುವಾಗ ಪೊನಕುನ್ನಮದಲ್ಲಿ ಸಮಿತಿಯ ಕಾರ್ಯಕರ್ತರು ಸಂಘದ ಕಾರ್ಯಕರ್ತರಿಂದ ವಿವಿಧ ರೀತಿಯಲ್ಲಿ ವಿರೋಧವನ್ನು ಎದುರಿಸಬೇಕಾಯಿತು.
ಸಂಘ ಪರಿವಾರದ ಮುಖಂಡರಲ್ಲಿ ಸವಿನಯ ವಿನಂತಿ!
ಸ್ಥಳೀಯ ಮಟ್ಟದ ಕಾರ್ಯಕರ್ತರು ತಮ್ಮಿಂದ ಆಜ್ಞೆಯಿಲ್ಲದಿದ್ದರೂ ಮೇಲಿಂದ ಆಜ್ಞೆ ಬಂದಿದೆಯೆಂದು ಹೇಳುತ್ತಾ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯವರನ್ನು ವಿರೋಧಿಸುತ್ತಿದ್ದಾರೆ. ದಯವಿಟ್ಟು ಈ ಕಾರ್ಯಕರ್ತರಿಗೆ ಹಿಂದೂ ಐಕ್ಯತೆಯ ಆವಶ್ಯಕತೆಯನ್ನು ತಿಳಿಸಿ ಹೇಳಿರಿ!
‘ಹಿಂದೂ, ದೇವಸ್ಥಾನ ಮತ್ತು ಹಿಂದೂರಾಷ್ಟ್ರ ಇವುಗಳ ಬಗ್ಗೆ ಯಾರು ಏನೂ ಮಾಡದಿರುವುದರಿಂದ ಸನಾತನಕ್ಕೆ ನಿರುಪಾಯವಾಗಿ ಈ ಕಾರ್ಯವನ್ನು ಮಾಡಬೇಕಾಗಿದೆ. ಈ ಕಾರ್ಯವನ್ನು ಸಂಘ ಪರಿವಾರದವರು ಮಾಡಿದರೆ ಸನಾತನ ಮೊದಲಿನಂತೆ ಕೇವಲ ಮೋಕ್ಷಪ್ರಾಪ್ತಿಗಾಗಿ ಸಾಧಕರಿಗೆ ಮಾರ್ಗದರ್ಶನ ಮಾಡುವುದು !’ (ಪುಷ್ಯ ಶು.ಪಂಚಮಿ, ಕಲಿಯುಗ ವರ್ಷ ೫೧೧೨ (೯.೧.೨೦೧೧))
೧. ಸಮಿತಿಯ ಕಾರ್ಯದಲ್ಲಿ ಆಸಕ್ತಿ ತೋರಿಸಿದ ಮತ್ತು ಹಿಂದೂ ಧರ್ಮಜಾಗೃತಿ ಸಭೆಯ ಪ್ರಸಾರಕ್ಕೆ ಸಹಾಯ ಮಾಡುವ ಓರ್ವ ಸಂಘದ ಕಾರ್ಯಕರ್ತನಿಗೆ ಅವರದ್ದೇ ಮಂಡಲ ಕಾರ್ಯನಿರ್ವಾಹಕರು ಇತರ ಕಾರ್ಯಕರ್ತರೊಡನೆ ಅವನ ಮನೆಗೆ ಹೋಗಿ ಹೊಡೆದರು. ಈ ಕಾರ್ಯಕರ್ತನ ಮನೆಯ ಬದಿಯಲ್ಲಿ ಓರ್ವ ಕ್ರೈಸ್ತನು ಹಂದಿ ಸಾಕುವ ವ್ಯಾಪಾರ ಮಾಡುತ್ತಾನೆ. ಆ ಹಂದಿಗಳಿಗೆ ಆಕಳುಗಳನ್ನು ಕೊಂದ ನಂತರ ಉಳಿದಿರುವ ಅವಯವಗಳನ್ನು ನೀರಿನಲ್ಲಿ ಕುದಿಸಿ ತಿನ್ನಲು ಕೊಡುತ್ತಾನೆ. ಈ ಪದಾರ್ಥಗಳ ದುರ್ಗಂಧ ಎಷ್ಟು ಬರುತ್ತದೆಯೆಂದರೆ, ಆ ವಾತಾವರಣದಲ್ಲಿ ಉಸಿರಾಡಲೂ ಕಠಿಣವಾಗುತ್ತದೆ. ಆದುದರಿಂದ ಸಂಘದ ಈ ಕಾರ್ಯಕರ್ತನು ಆ ಕ್ರೈಸ್ತನನ್ನು ತೀವ್ರವಾಗಿ ವಿರೋಧಿಸಿದನು. ಅವನ ವಿರುದ್ಧ ಪೊಲೀಸರಲ್ಲಿ ದೂರು ನೋಂದಾಯಿಸಿದನು. ಈ ಕಾರಣದಿಂದ ಸಂಘದ ಇತರ ಕಾರ್ಯಕರ್ತರು ಈ ಕಾರ್ಯಕರ್ತನಿಗೆ ಹೊಡೆದರು ಮತ್ತು ಅವನಿಗೆ, ‘ನೀನು ಸಂಘದ ಕಾರ್ಯಕರ್ತನಾಗಿದ್ದು ನಮಗೆ ಕೇಳದೆ ಅವನನ್ನು ಹೇಗೆ ವಿರೋಧಿಸಿದೆ?’ ಎಂದರು. (ಸಂಘವು ತನ್ನ ಇಂತಹ ವೃತ್ತಿಯ ಕಾರ್ಯಕರ್ತರಿಗೆ ಸುಸಂಸ್ಕಾರ ಮತ್ತು ಸಭ್ಯತೆಯನ್ನು ಕಲಿಸುವುದೇ? ಸಂಘದ ವರಿಷ್ಠ ಮುಖಂಡರು ಇಂತಹ ಕಾರ್ಯಕರ್ತರಿಗೆ ಯೋಗ್ಯ ದಿಕ್ಕು ತೋರಿಸಬೇಕು, ಇಲ್ಲದಿದ್ದರೆ ಪ್ರಾಮಾಣಿಕ ಕಾರ್ಯಕರ್ತರು ಹಿಂದುತ್ವಕ್ಕಾಗಿ ಕಾರ್ಯ ಮಾಡುವುದನ್ನೇ ಬಿಟ್ಟುಬಿಡಬಹುದು! ಈಗ ತಮ್ಮದೇ ಪ್ರಾಮಾಣಿಕ ಕಾರ್ಯಕರ್ತನಿಗೆ ಹೊಡೆಯುವ ಸಮಯವಲ್ಲ ಬದಲಾಗಿ ಒಬ್ಬೊಬ್ಬ ಕಾರ್ಯಕರ್ತನನ್ನು ಜೋಡಿಸಿ ಧರ್ಮ ದ್ರೋಹಿ ಮತ್ತು ದೇಶದ್ರೋಹಿಗಳೊಡನೆ ಸಂಘಟಿತರಾಗಿ ಹೋರಾಡುವ ಸಮಯ ಬಂದಿದೆ! -ಸಂಕಲನಕಾರರು)
೨.ಕೇರಳದಲ್ಲಿಯ ಸಂಘದ ವರಿಷ್ಠ ನೇತಾರರು ಅವರ ಕಾರ್ಯಕರ್ತರಿಗೆ ಸಂಚಾರಿವಾಣಿಯ ಮೂಲಕ ಮುಂದಿನ ಕಿರುಸಂದೇಶವನ್ನು ಕಳುಹಿಸಿದರು, ‘ಹಿಂದೂ ಜನಜಾಗೃತಿ ಸಮಿತಿಯೊಡನೆ ಸಂಘದ್ದು ಯಾವುದೇ ಸಂಬಂಧವಿಲ್ಲ. ಅವರ ಜಾಲದಿಂದ ಎಚ್ಚರವಾಗಿರಿ.’ (ಸಮಿತಿಯು ಎಂದೂ ಅದನ್ನು ‘ಸಂಘದ್ದಾಗಿದೆ ಅಥವಾ ಯಾವುದಾದರೂ ಸಂಘಟನೆಗೆ ಸಂಬಂಧಿತವಾಗಿದೆ’ ಎಂದು ಹೇಳುವುದಿಲ್ಲ. ಸಮಿತಿಯು ರಾಷ್ಟ್ರ ಮತ್ತು ಧರ್ಮದ ಕಾರ್ಯಕ್ಕಾಗಿ ಏನಾದರೂ ಮಾಡಲಿಚ್ಛಿಸುವವರಿಗೆ ಹಕ್ಕಿನ ವ್ಯಾಸಪೀಠವಾಗಿದೆ. ಶ್ರೀಕೃಷ್ಣನು ಸಮಿತಿಯ ಅಧಿಷ್ಠಾನವಾಗಿದ್ದಾನೆ. ರಾಷ್ಟ್ರರಕ್ಷಣೆ ಮತ್ತು ಧರ್ಮ ಜಾಗೃತಿಗಾಗಿ ಕಾರ್ಯನಿರತವಾಗಿರುವ ಹಿಂದೂಗಳನ್ನು ಸಂಘಟಿತಗೊಳಿಸುವುದೇ ಸಮಿತಿಯ ಧ್ಯೇಯವಾಗಿದೆ. ನಿಜವೆಂದರೆ ಇಂತಹ ಸಂಘಟನೆಗೆ ಸಂಘದ ಎಲ್ಲ ಕಾರ್ಯಕರ್ತರು ಸಹಾಯ ಮಾಡುವುದೇ ಹಿಂದೂಗಳಿಗೆ ಅಪೇಕ್ಷಿತವಾಗಿದೆ. ಆದರೆ ಇಲ್ಲಿ ಸಹಾಯ ಮಾಡುವುದು ಬಿಡಿ, ಬದಲಾಗಿ ಸಂಘದ ಕೆಲವು ಕಾರ್ಯಕರ್ತರು ಮತ್ತು ಮುಖಂಡರು ಸಮಿತಿಯ ಕಾರ್ಯಕ್ಕೆ ನಿರ್ಬಂಧ ಹೇರಲು ಪ್ರಯತ್ನಿಸುತ್ತಿದ್ದಾರೆ. ಅವರ ಈ ಪ್ರಯತ್ನವು ಹಿಂದೂರಾಷ್ಟ್ರ ನಿರ್ಮಿತಿಯ ಕಾರ್ಯಕ್ಕೆ ವಿಘ್ನ ತಂದೊಡ್ಡುವಂತಹದ್ದಾಗಿದೆ ಎಂದು ದುಃಖದಿಂದ ಹೇಳಬೇಕಾಗುತ್ತದೆ. ವಿಹಿಂಪನ ವರಿಷ್ಠ ಮುಖಂಡರು ಅವರ ಕಾರ್ಯಕರ್ತರಿಗೆ ಹಿಂದೂಸಂಘಟನೆಯ ಆವಶ್ಯಕತೆಯನ್ನು ತಿಳಿಸಿ ಹೇಳವುದು ಹಿಂದೂ ಜನಜಾಗೃತಿ ಸಮಿತಿಗೆ ಅಪೇಕ್ಷಿತವಾಗಿದೆ ! - ಸಂಕಲನಕಾರರು) ಈ ಸಂದೇಶವನ್ನು ಕಳುಹಿಸಿದ ಸಂಘದ ಮುಖಂಡನು ಸಮಿತಿಯ ಕಾರ್ಯಕರ್ತರಿಗೆ ಸಂಚಾರವಾಣಿಯ ಮೂಲಕ ಸಂಪರ್ಕಿಸಿ ‘ಹಿಂದುತ್ವಕ್ಕಾಗಿ ನೀವೇನು ಕಾರ್ಯಮಾಡುವಿರಿ, ನಮ್ಮ ಡಾಕ್ಟರರು (ಡಾ.ಹೆಡಗೆವಾರ) ಏನು ಹೇಳಿದ್ದಾರೋ, ಅದರ ಮುಂದೆ ಏನೂ ಹಿಂದುತ್ವವಿಲ್ಲ, ಇನ್ನು ಮುಂದೆ ನೀವು ನಮ್ಮನ್ನು ಸಂಪರ್ಕಿಸಬೇಡಿ’ ಎಂದರು. (ಡಾ. ಹೆಡಗೆವಾರರ ಬಗ್ಗೆ ಸಮಿತಿಯ ಪ್ರತಿಯೊಬ್ಬ ಕಾರ್ಯಕರ್ತನಿಗೆ ಗೌರವವಿದೆ. ಇಂದು ಸಂಘದ ಕೆಲವು ಕಾರ್ಯಕರ್ತರು ಸಮಿತಿಗೆ ವಿರೋಧಿಸುತ್ತಿದ್ದಾರೆ. ಹೀಗೆ ವಿರೋಧಿಸುವುದು ಡಾ.ಹೆಡಗೆವಾರರಿಗಾದರೂ ಒಳ್ಳೆಯದೆನಿಸುತ್ತಿತ್ತೇ ಎಂಬುದರ ವಿಚಾರವನ್ನೂ ವಿರೋಧಿಸುವವರು ಮಾಡಬೇಕು ! -ಸಂಕಲನಕಾರರು)
೩. ಸಭೆಗಾಗಿ ಓರ್ವ ಸಂತರನ್ನು ಆಮಂತ್ರಿಸಲಾಗಿತ್ತು. ಈ ಸಂತರಿಗೂ ಸಂಘದ ನೇತಾರರು ಒತ್ತಡ ಹಾಕಿ ಅವರಿಗೆ ‘ನೀವು ಸಭೆಗೆ ಹೋಗಬೇಡಿ’, ಎಂದು ಹೇಳಿರುವುದಾಗಿ ಆ ಸಂತರು ಸಮಿತಿಯ ಕಾರ್ಯಕರ್ತರಿಗೆ ಹೇಳಿದರು. (ಸಂತರೆಂದರೆ ಸಾಕ್ಷಾತ್ ಈಶ್ವರನ ಸಗುಣ ಸಾಕಾರ ರೂಪವಾಗಿರುತ್ತಾರೆ! ಅವರಿಗೆ ‘ಧರ್ಮಕಾರ್ಯದಲ್ಲಿ ಪಾಲ್ಗೊಳ್ಳಬೇಡಿ’ ಎಂದು ಹೇಳಿ ಒತ್ತಡ ತರುವುದು ಧರ್ಮದ್ರೋಹವೇ ಆಗಿದೆ. ಈ ರೀತಿ ವೃತ್ತಿಯುಳ್ಳ ಕಾರ್ಯಕರ್ತರಿಗೆ ಸಂಘವು ಸುಸಂಸ್ಕೃತಿ ಮತ್ತು ಸಭ್ಯತೆ ಕಲಿಸುವುದೇ? - ಸಂಕಲನಕಾರರು)
೪. ಹಿಂದೂ ಜನಜಾಗೃತಿ ಸಮಿತಿಯ ಕಾರ್ಯದಲ್ಲಿ ಸಂಘದ ಕಾರ್ಯಕರ್ತರು ಭಾಗವಹಿಸಬಾರದೆಂದು, ಸಂಘದ ವರಿಷ್ಠ ಮುಖಂಡರು ಜಿಲ್ಲಾಸ್ತರದಲ್ಲಿ ಸಭೆಗಳನ್ನು ತೆಗೆದುಕೊಂಡರು. ಈ ಸಭೆಯಲ್ಲಿ ಅವರು ಸನಾತನ ಸಂಸ್ಥೆ ಮತ್ತು ಹಿಂದೂ ಜನ ಜಾಗೃತಿ ಸಮಿತಿಯವರಲ್ಲಿ ಬಹಳಷ್ಟು ಹಣವಿದೆ. (ಹಿಂದೂ ಜನಜಾಗೃತಿ ಸಮಿತಿಯ ಕಾರ್ಯವು ಧರ್ಮಾಭಿಮಾನಿಗಳಿಂದ ಸಿಗುವ ಅರ್ಪಣೆಯಿಂದಲೇ ನಡೆಯುತ್ತದೆ. ಹಾಗೆಯೇ ಸಮಿತಿಯ ಕಾರ್ಯದಿಂದ ಪ್ರಭಾವಿತರಾದ ಅನೇಕ ಧರ್ಮಾಭಿಮಾನಿಗಳು ಸಮಿತಿಯ ಕಾರ್ಯಕ್ಕಾಗಿ ವಸ್ತು, ಸಭಾಗೃಹ ಇತ್ಯಾದಿ ವಸ್ತುಗಳನ್ನು ಉಚಿತವಾಗಿ ಅಥವಾ ಕಡಿಮೆ ದರದಲ್ಲಿ ನೀಡುತ್ತಾರೆ. ಸಮಿತಿಯ ಪ್ರತಿಯೊಬ್ಬ ಕಾರ್ಯಕರ್ತನು ಪ್ರಸಾರದಿಂದ ಹಿಡಿದು ಸಭೆಯ ಮೈದಾನದಲ್ಲಿ ಸಣ್ಣ ಗುಂಡಿ ತೋಡುವ ಕೆಲಸಗಳನ್ನು ಸ್ವತಃ ಮಾಡುತ್ತಾನೆ. ಈಶ್ವರನ ಆಶೀರ್ವಾದದಿಂದ ಸಮಿತಿಗೆ ಆವಶ್ಯಕವಿರುವಷ್ಟು ಧನವು ನಿಶ್ಚಿತವಾಗಿ ದೊರಕುತ್ತದೆ.-ಸಂಕಲನಕಾರರು) ಅವರು ನಮ್ಮ ಕಾರ್ಯಕರ್ತರನ್ನು ಹಣದ ಆಮಿಷವೊಡ್ಡಿ ತಮ್ಮೊಂದಿಗೆ ಸೇರಿಸಿಕೊಳ್ಳುತ್ತಿದ್ದಾರೆ. (ಸಮಿತಿಯ ಕಾರ್ಯವು ಅರ್ಪಣೆಯಿಂದಲೇ ನಡೆಯುತ್ತದೆ. ಸಮಿತಿಯ ಬಳಿ ಇರುವ ಹಣವು ಈಶ್ವರನದ್ದಾಗಿದೆ ಮತ್ತು ನಾವು ಆ ಹಣದ ಕೇವಲ ವಿಶ್ವಸ್ಥರಾಗಿದ್ದೇವೆ ಎಂಬುದು ಸಮಿತಿಯ ಧೋರಣೆಯಾಗಿದೆ. ಒಂದೊಂದು ಚಿಕ್ಕಾಸು ಕೂಡ ಈಶ್ವರೀ ಕಾರ್ಯಕ್ಕಾಗಿಯೇ ಬಳಕೆಯಾಗಬೇಕು ಎಂಬುದು ಸಮಿತಿಯ ಕಟಾಕ್ಷ ಧೋರಣೆಯಾಗಿದೆ. ಆದ್ದರಿಂದ ಸಂಘದ ಕೆಲವು ಮುಖಂಡರು ಹೇಳುವಂತೆ ಹಣವನ್ನು ಅನಾವಶ್ಯಕ ವೆಚ್ಚ ಮಾಡುವ ಮಹಾ ಪಾಪವನ್ನು ಸಮಿತಿಯು ಎಂದೂ ಮಾಡಲಾರದು ! ಸಂಘದ ವರಿಷ್ಠ ಮುಖಂಡರು ಅವರ ಈ ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಡುವರೇ?-ಸಂಕಲನಕಾರರು) ಇವರಿಗೆ ವಿದೇಶದಿಂದ ಬಹಳ ಹಣ ಬರುತ್ತದೆ. (ವಿದೇಶದಿಂದ ಯಾವುದೇ ಹಿಂದುತ್ವವಾದಿ ಸಂಘಟನೆಗಳು ಹಣಗಳಿಸುವುದು ಎಷ್ಟು ಕಠಿಣವಿದೆ ಇದು ಸಂಘದ ವರಿಷ್ಠ ಮುಖಂಡರಿಗೆ ಚೆನ್ನಾಗಿ ಗೊತ್ತಿದೆ. ಆದರೂ ಈ ಕಾರ್ಯಕರ್ತರು ಇಂತಹ ನಿರಾಧಾರ ಮಾತುಗಳನ್ನಾಡಿ ಏನು ಗಳಿಸಲಿದ್ದಾರೆ? - ಸಂಕಲನಕಾರರು) ಇವರಿಗೆ ಪ್ರಸಿದ್ಧಿಗಾಗಿ ಇಷ್ಟು ಹಣ ಎಲ್ಲಿಂದ ಬರುತ್ತದೆಯೆಂದು ಗೊತ್ತಿಲ್ಲ. (ಸಮಿತಿಯ ಕಾರ್ಯವು ಹಣದ ಅಬ್ಬರದಲ್ಲಿ ಅಲ್ಲ; ಧರ್ಮಕ್ಕಾಗಿ ಕಾರ್ಯ ಮಾಡುವ ಕಾರ್ಯಕರ್ತರು ನೀಡಿರುವ ಅವರ ಬಹುಮೂಲ್ಯ ಸಮಯ ಮತ್ತು ಈಶ್ವರನ ಆಶೀರ್ವಾದದ ಮೇಲೆಯೇ ನಡೆಯುತ್ತದೆ. ಯಾವುದಾದರೊಂದು ಸಂಘಟನೆಗೆ ಪ್ರಸಿದ್ಧಿಗಾಗಿ ಹತ್ತು ರೂಪಾಯಿ ತಗಲುವುದಾದರೆ, ಸಮಿತಿಯ ಅದೇ ಕಾರ್ಯವು ಒಂದು ಅಥವಾ ಎರಡು ರೂಪಾಯಿಯಲ್ಲಾಗುತ್ತದೆ. - ಸಂಕಲನಕಾರರು) ಅವರ ಕಾರ್ಯದಲ್ಲಿ ಗೌಪ್ಯತೆ ಇದೆ. (ಎಲ್ಲ ಸಂಘಟನೆಗಳು ಸೇರಿ ಸಮಿತಿಯಾಗಿದೆ. ಅನೇಕ ಸ್ಥಳಗಳಲ್ಲಿ ಸಂಘಪರಿವಾರದ ಕಾರ್ಯಕರ್ತರು ಸಮಿತಿಗೆ ಸಕ್ರಿಯ ಸಹಾಯವನ್ನೂ ಮಾಡುತ್ತಿದ್ದಾರೆ. ಸಮಿತಿಯು ಕಾರ್ಯಕ್ರಮದ ಮೊದಲು ಮತ್ತು ನಂತರ ಸಾರ್ವಜನಿಕ ಸಭೆಗಳನ್ನು ತೆಗೆದುಕೊಂಡೇ ಎಲ್ಲವನ್ನು ನಿಗದಿ ಪಡಿಸುತ್ತದೆ. ಹೀಗಿರುವಾಗ ಈ ರೀತಿ ದೋಷಾರೋಪಣೆ ಮಾಡುವುದು ತಪ್ಪಾಗಿದೆ. -ಸಂಕಲನಕಾರರು) ಇವರು ಮುಂದೆ ಇಲ್ಲಿಯೂ ಬಾಂಬ್‌ಸ್ಫೋಟ ನಡೆಸಬಹುದು. (ಸಮಿತಿಯು ಎಂದೂ ಹಿಂಸಾ ಕೃತ್ಯಗಳನ್ನು ಬೆಂಬಲಿಸಿಲ್ಲ. ಸಮಿತಿಯ ಪ್ರತಿಯೊಂದು ಕಾರ್ಯವು ಕಾನೂನಿನ ಚೌಕಟ್ಟಿನಲ್ಲಿಯೇ ನಡೆಯುತ್ತದೆ. ಅನೇಕ ಸ್ಥಳಗಳಲ್ಲಿ ಪೊಲೀಸರೂ ಸಮಿತಿಯ ಕಾರ್ಯವನ್ನು ಪ್ರಶಂಸಿಸಿದ್ದಾರೆ. ಹೀಗಿರುವಾಗ ಈ ರೀತಿ ಆರೋಪ ಹೊರಿಸಿ ಸಂಘದ ಈ ಕೆಲವು ಮುಖಂಡರು ಒಂದು ರೀತಿಯಲ್ಲಿ ಧರ್ಮಾಂಧಪ್ರೇಮಿಯಾಗಿರುವ ಈಗಿನ ಸರಕಾರದಂತೆ ಹಿಂದುತ್ವವನ್ನು ಅಗೌರವಿಸುವ ಕೃತ್ಯವೆಸಗಿದ್ದಾರೆ ಎಂದು ಖೇದದಿಂದ ಹೇಳಬೇಕಾಗುತ್ತದೆ! ಸಂಘದ ವರಿಷ್ಠ ಮುಖಂಡರು ಈ ಸ್ಥಳೀಯ ಮುಖಂಡರಿಗೆ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಡುವರೇ? - ಸಂಕಲನಕಾರರು)
೫. ಸಮಿತಿಗೆ ಸಹಾಯ ಮಾಡುವ ಓರ್ವ ಕಾರ್ಯಕರ್ತನಿಗೆ ಸಂಘದ ನೇತಾರರು, ‘ನೀನು ಸಂಘದ ವಿರುದ್ಧ ಹೋದರೆ, ನಿನ್ನ ವಿವಾಹವಾಗಲಾರದು. ನಿನಗೆ ಯಾರೂ ಹೆಣ್ಣು ಕೊಡುವುದಿಲ್ಲ’ ಎಂದು ಬೆದರಿಸಿದರು.
೬.ಕೊಟ್ಟಾಯಂನಲ್ಲಿಯೂ ೨೦೧೦ರ ನವೆಂಬರ್ ೧೪ರಂದು ಸಭೆಯಾಯಿತು. ಈ ಸಭೆಗಾಗಿ ಸಂಘದ ಇಬ್ಬರು ಕಾರ್ಯಕರ್ತರನ್ನು ವಕ್ತಾರರಾಗಿ ಆಮಂತ್ರಿಸಲಾಗಿತ್ತು. ಸಭೆಯ ದಿನವೇ ಅವರು ಬರುವುದಿಲ್ಲವೆಂದರು. ಇವರಲ್ಲಿ ಒಬ್ಬರು ತನಗೆ ವೈಯಕ್ತಿಕ ಕೆಲಸವಿದೆಯೆಂದು ಹೇಳಿದರು. ಇನ್ನೊಬ್ಬರು ಮಾತ್ರ ‘ನಮ್ಮ ವರಿಷ್ಠ ಮುಖಂಡರು ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯವರ ವ್ಯಾಸಪೀಠಕ್ಕೆ ಹೋಗಬಾರದು ಎಂದಿದ್ದಾರೆ’ ಎಂದರು.
No comments:
Post a Comment