ಸಂಘ ಪರಿವಾರದಲ್ಲಿನ ಎಲ್ಲ ಸಂಘಟನೆಗಳ ಕಾರ್ಯದ ಬಗ್ಗೆ ಸನಾತನಕ್ಕೆ ಅತೀವ ಆದರವಿದೆ. ಆದರೂ ಕೆಲವು ಬೆರಳೆಣಿಕೆಯಷ್ಟು ಕಾರ್ಯಕರ್ತರಿಂದ ಹಿಂದೂ ಸಂಘಟನೆಗೆ ಹಾನಿಯಾಗಬಾರದು ಹಾಗೂ ಸಂಘ ಪರಿವಾರದ ಕಾರ್ಯಕರ್ತರಿಂದ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಗಳ ಅಪಪ್ರಚಾರಕ್ಕೆ ಸಂಬಂಧಿಸಿದಂತೆ ಧರ್ಮಾಭಿಮಾನಿ ಹಿಂದೂಗಳಿಗೆ ಎರಡೂ ಸಂಘಟನೆಗಳ ಮತವು ತಿಳಿಯಬೇಕು ಹಾಗೂ ಸಂಘ ಪರಿವಾರದ ವರಿಷ್ಠ ನೇತಾರರು ಈ ಕಾರ್ಯಕರ್ತರಿಗೆ ತಿಳಿಸಿ ಹೇಳಬೇಕು ಎಂಬ ಏಕೈಕ ಉದ್ದೇಶದಿಂದ ಈ ವೃತ್ತಾಂತವನ್ನು ಇಲ್ಲಿ ಕೊಡುತ್ತಿದ್ದೇವೆ. ಇದರಲ್ಲಿ ಸಂಘ ಪರಿವಾರದ ಮಾನಹಾನಿ ಮಾಡುವ ಯಾವುದೇ ಉದ್ದೇಶವಿಲ್ಲ.
ಸಂಘ ಪರಿವಾರದ ಬಗ್ಗೆ ಒಳ್ಳೆಯ ಮತ್ತು ಕೆಟ್ಟ ಅನುಭವಗಳನ್ನು ತಿಳಿಸಿ!
ಸಂಘ ಪರಿವಾರದ ಕೆಲವು ಕಾರ್ಯಕರ್ತರಿಂದ ಮತ್ತು ಸ್ವಯಂಸೇವಕರಿಂದ ಕೆಲವು ಕಡೆಗಳಲ್ಲಿ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ಇವುಗಳ ಕಾರ್ಯದಲ್ಲಿ ಅಡಚಣೆ ತರಲಾಗುತ್ತಿದೆ. ಆದರೆ ಇನ್ನು ಕೆಲವು ಸ್ಥಳಗಳಲ್ಲಿ ಅವರು ಇವೆರಡು ಸಂಘಟನೆಗಳಿಗೆ ಸಹಾಯವನ್ನೂ ಮಾಡುತ್ತಿದ್ದಾರೆ.
ಇಂತಹ ಅನೇಕ ಕಾರ್ಯಕರ್ತರಿಗೆ ಮತ್ತು ಸ್ವಯಂಸೇವಕರಿಗೆ ಸನಾತನ ಸಂಸ್ಥೆ ಮತ್ತು ಸಮಿತಿಯು ಸಮಾಜದಲ್ಲಿ ಪ್ರಸಾರ ಮಾಡುತ್ತಿರುವಾಗ ಅವರ ಕಾರ್ಯದಲ್ಲಿ ಸಂಘ ಪರಿವಾರದ ಕೆಲವು ಕಾರ್ಯಕರ್ತರಿಂದ ಆಗುತ್ತಿರುವ ವಿರೋಧವು ಒಪ್ಪಿಗೆಯಾಗುವುದಿಲ್ಲ. ಆದರೂ ಅವರು ಆದಷ್ಟು ಸಹಾಯವನ್ನು ಮಾಡುತ್ತಿದ್ದಾರೆ. ಸಂಘ ಪರಿವಾರದ ಈ ಕೆಲವು ಕಾರ್ಯಕರ್ತರ ಮತ್ತು ಮುಖಂಡರ ಈ ಅವಿವೇಕಿ ಭೂಮಿಕೆಯಿಂದ ಹಿಂದೂ ಸಂಘಟನೆಗಳ ಕಾರ್ಯದ ಹಾನಿಯಾಗುತ್ತಿದೆ. ಅದರ ಬಗ್ಗೆ ಇತರ ವರಿಷ್ಟ ಮುಖಂಡರು ವಿಚಾರ ಮಾಡಬೇಕು ಹಾಗೂ ಸನಾತನ ಮತ್ತು ಸಮಿತಿಯ ಭೂಮಿಕೆಯು ಸಂಘದ ವರಿಷ್ಠ ಮುಖಂಡರು ಮತ್ತು ಧರ್ಮಾಭಿಮಾನಿಗಳಿಗೆ ತಿಳಿಯಬೇಕು, ಎಂಬುದಕ್ಕಾಗಿ ವಿವಿಧ ಸ್ಥಳಗಳಲ್ಲಿ ಸಂಘ ಪರಿವಾರವು ಮಾಡಿದ ವಿರೋಧ ಮತ್ತು ಸಹಾಯದ ಮಾಹಿತಿಯನ್ನು ನೀಡುವ ಲೇಖನ ಮಾಲಿಕೆಯನ್ನು ಪ್ರಾರಂಭಿಸಿದ್ದೇವೆ. ಯಾವ ಹಿಂದುತ್ವವಾದಿಗಳಿಗೆ ಈ ಬಗ್ಗೆ ಸಂಘದ ಒಳ್ಳೆಯ ಮತ್ತು ಕೆಟ್ಟ ಅನುಭವ ಬಂದಿದ್ದರೆ ಅವರು ಅದನ್ನು ಸಮೀಪದ ‘ಸನಾತನ ಪ್ರಭಾತ’ ದ ಕಾರ್ಯಾಲಯಕ್ಕೆ ಕಳುಹಿಸಬೇಕು.
No comments:
Post a Comment