ಪೊಲ್ಯಾಂಡ್‌ನಲ್ಲಿ ಕ್ರೈಸ್ತ ನನ್‌ಳಿಂದ ಭಗವಾನ ಶ್ರೀಕೃಷ್ಣನ ಅವಮಾನ!

ಪೊಲ್ಯಾಂಡ್‌ನಲ್ಲಿ ಕ್ರೈಸ್ತ ನನ್‌ಳಿಂದ ಭಗವಾನ ಶ್ರೀಕೃಷ್ಣನ ಅವಮಾನ! 
ನನ್‌ಳು ‘ಇಸ್ಕಾನ್’ ಮೇಲೆ ದಾಖಲಿಸಿದ ಖಟ್ಲೆ ರದ್ದು
ವಾರ್ಸಾ: ಹಿಂದೂ ಧರ್ಮವು ಜಗತ್ತಿನಾದ್ಯಂತ ತೀವ್ರಗತಿಯಲ್ಲಿ ಪಸರಿಸುತ್ತಿರುವುದನ್ನು ನೋಡಿ ವಾರ್ಸಾ ಎಂಬಲ್ಲಿನ ಓರ್ವ ಕ್ರೈಸ್ತ ನನ್‌ಳು ‘ಇಸ್ಕಾನ್’ನ ವಿರುದ್ಧ ನ್ಯಾಯಾಲಯದಲ್ಲಿ ಖಟ್ಲೆಯನ್ನು ದಾಖಲಿಸಿದ್ದಾಳೆ. ‘ಪೋಲ್ಯಾಂಡದಲ್ಲಿ ‘ಇಸ್ಕಾನ್’ವು ಶ್ರೀಕೃಷ್ಣನ ಬಗ್ಗೆ ಪ್ರಚಾರ ಮಾಡುತ್ತಿದೆ ಮತ್ತು ಅವರಿಗೆ ಪೋಲ್ಯಾಂಡ್‌ನಲ್ಲಿ ಅನೇಕ ಅನುಯಾಯಿಗಳು ದೊರಕುತ್ತಿದ್ದಾರೆ. ೧೬ ಸಾವಿರ ಸ್ತ್ರೀಯರೊಂದಿಗೆ ವಿವಾಹ ಮಾಡಿ ಕೊಂಡ ಶ್ರೀಕೃಷ್ಣನ ವರ್ತನೆ ಒಳ್ಳೆಯದಿರಲಿಲ್ಲ ಆದುದರಿಂದ ಇಂತಹ ಶ್ರೀಕೃಷ್ಣನ ಸ್ತುತಿ ಮಾಡುವ ‘ಇಸ್ಕಾನ್’ನ ಮೇಲೆ ನಿರ್ಬಂಧ ಹೇರಬೇಕು’ ಎಂದು ನನ್‌ಳು ನ್ಯಾಯಾಲಯದಲ್ಲಿ ಆಗ್ರಹಿಸಿದ್ದಳು.
(ಹಿಂದೂಗಳ ಧರ್ಮಗ್ರಂಥಗಳ ಬಗ್ಗೆ ಯಾವುದೇ ಅಧ್ಯಯನ ಮಾಡದೇ  ಹಿಂದೂಗಳ ಶ್ರದ್ಧಾಸ್ಥಾನವಾಗಿರುವ ಶ್ರೀಕೃಷ್ಣನ ಮೇಲೆ ಈ ರೀತಿ ಅಶ್ಲೀಲವಾಗಿ ಆರೋಪಿಸುವ ಧೈರ್ಯವನ್ನು ತೋರಿಸುವ ನನ್ ಬಗ್ಗೆ ಪ್ರತಿಯೊಬ್ಬ ಹಿಂದೂ ವಿಚಾರ ಮಾಡಬೇಕು. ಹಿಂದೂಗಳು ಅಸಂಘಟಿತರಿರುವುದರಿಂದ ಅವರ ಶ್ರದ್ಧಾಸ್ಥಾನಗಳ ಮೇಲೆ ಪದೇ ಪದೇ ಇಂತಹ ಆಘಾತಗಳಾಗುತ್ತಿವೆ. ಇತರ ಪಂಥದವರು ಸಂಘಟಿತರಿರುವುದರಿಂದ ಅವರ ಶ್ರದ್ಧಾಸ್ಥಾನಗಳನ್ನು ಟೀಕಿಸಲು ಯಾರೂ ಧೈರ್ಯ ತೋರಲಾರರು. - ಸಂಪಾದಕರು)
ನನ್ ದೀಕ್ಷೆ ಸ್ವೀಕರಿಸುವಾಗಿನ ಶಪಥ ವಿಧಿಯಲ್ಲಿ ‘ನನ್’ಳ ವಿವಾಹವು ಯೇಸು ಕ್ರಿಸ್ತನೊಂದಿಗೆ ಆಗಿರುತ್ತದೆ ಎಂದು ಹೇಳಲಾಗುತ್ತದೆ. ಆ ಬಗ್ಗೆ ‘ಇಸ್ಕಾನ್’ ಯುಕ್ತಿವಾದವನ್ನು ಮಂಡಿಸುತ್ತಾ, ‘ಜಗತ್ತಿನಾದ್ಯಂತ ೧೦ಲಕ್ಷ ನನ್‌ಗಳಿದ್ದಾರೆ. ಅವರೆಲ್ಲರೂ ಯೇಸು ಕ್ರಿಸ್ತನೊಂದಿಗೆ ವಿವಾಹವಾಗಿದ್ದಾರೆ. ಆದುದರಿಂದ ಯೇಸುವಿನ ಮೇಲೆ ೧೦ಲಕ್ಷ ಸ್ತ್ರೀಯರೊಂದಿಗೆ ಮದುವೆಯಾದ ಆರೋಪ ಹಾಕಬಹುದು. ಇದರಿಂದ ಯೇಸು ಮತ್ತು ಶ್ರೀಕೃಷ್ಣನಲ್ಲಿ ಯಾರ ವರ್ತನೆ ಕೆಟ್ಟದಿದೆ?’ ಎಂದು ನ್ಯಾಯಾಲಯದಲ್ಲಿ ಪ್ರಶ್ನಿಸಿದರು. ಆಗ ನ್ಯಾಯಾಲಯವು ‘ಇಸ್ಕಾನ್’ನ ಬಗ್ಗೆ ಇರುವ ಖಟ್ಲೆಯನ್ನು ಅದೇ ಕ್ಷಣದಲ್ಲಿ ರದ್ದು ಗೊಳಿಸಿತು. (ಭಗವಾನ ಶ್ರೀಕೃಷ್ಣನನ್ನು ಅರಿತುಕೊಳ್ಳಲು ಅವನ ಭಕ್ತರಾಗಬೇಕು. ಶಬ್ದಾರ್ಥವನ್ನು ತೆಗೆದುಕೊಂಡು ಹಿಂದೂ ದೇವತೆಗಳನ್ನು ಟೀಕಿಸುವವರು ಹೀಗೆಯೇ ಸಿಕ್ಕಿ ಬೀಳುವರು. - ಸಂಪಾದಕರು)


No comments:

Post a Comment