ಗೋವಾದಲ್ಲಿ ದೇವಸ್ಥಾನಗಳ ಧ್ವಂಸವಾಗಿದ್ದು ಅಪ್ಪಟ ಸುಳ್ಳೆಂದ...

ಗೋವಾದಲ್ಲಿ ದೇವಸ್ಥಾನಗಳ ಧ್ವಂಸವಾಗಿದ್ದು ಅಪ್ಪಟ ಸುಳ್ಳೆಂದ 
ಹಿಂದೂದ್ವೇಷಿ ‘ಐ.ಬಿ.ಎನ್.- ಲೋಕಮತ’ದ ವಿರುದ್ಧ ಭುಗಿಲೆದ್ದ ಜನಾಕ್ರೋಶ

‘ಐ.ಬಿ.ಎನ್. ಲೋಕಮತ’ದ ಸಂಪಾದಕ ನಿಖಿಲ ವಾಗಳೆಯವರು ಜನವರಿ ೨೧ ರಂದು ‘ಆಜಚಾ ಸವಾಲ’ ಈ ಕಾರ್ಯಕ್ರಮದಲ್ಲಿ ಸನಾತನ ಸಂಸ್ಥೆಯ ವಕ್ತಾರರಾದ ಶ್ರೀ.ಅಭಯ ವರ್ತಕರವರು ಗೋವಾದಲ್ಲಿ ದೇವಸ್ಥಾನಗಳ ಮೇಲಾದ ಹಲ್ಲೆಗಳ ಬಗ್ಗೆ ಹೇಳುತ್ತಿರುವಾಗ ಅವುಗಳನ್ನು ಅಪ್ಪಟ ಸುಳ್ಳೆಂದು ಹೇಳುತ್ತಾ ಹಿಂದೂಗಳ ಧಾರ್ಮಿಕ ಭಾವನೆಯನ್ನು ನೋಯಿಸಿದರು. ಇದರಿಂದ ಶ್ರೀ.ವರ್ತಕರವರು ಈ ಕಾರ್ಯಕ್ರಮದಿಂದ ಎದ್ದು ಹೋದರು. ವಾಗಳೆಯವರ ಹಿಂದೂದ್ರೋಹಿ ಕೃತಿಯ ವಿರುದ್ಧ ಸಂಪೂರ್ಣ ಮಹಾರಾಷ್ಟ್ರ, ಗೋವಾದಲ್ಲಿ ಹಿಂದೂಗಳ ಆಕ್ರೋಶ ತಾರಕಕ್ಕೇರಿದ್ದು ಅನೇಕ ಕಡೆ ಪ್ರತಿಭಟನೆಗಳಾದವು.

‘ಸನಾತನ ಸಂಸ್ಥೆ ಸುಳ್ಳು ಹೇಳುತ್ತದೆ’ ಎನ್ನುವ ನಿಖಿಲವಾಗಳೆಗೆ ಛಡಿಯೇಟು

ಗೋವಾದಲ್ಲಾದ ಮೂರ್ತಿಭಗ್ನದ ದಾಖಲೆ ಪತ್ರಕರ್ತರಿಗೆ ಸಾದರ

ಮುಂಬೈ: ವಾರ್ತಾ ನಿವೇದಕರಾದ ನಿಖಿಲ ವಾಗಳೆಯವರು ಸೂತ್ರಸಂಚಾಲಕರ ಚೌಕಟ್ಟಿನಲ್ಲಿರಬೇಕು. ಹುಕುಂಶಾಹಿ ಅಥವಾ ಧ್ವನಿ ಏರಿಸಿದರೆ ಸತ್ಯ ಅಡಗುವುದಿಲ್ಲ ಎಂಬ ವಾಸ್ತವವನ್ನು ಸನಾತನ ಸಂಸ್ಥೆಯ ವಕ್ತಾರ ಶ್ರೀ.ಅಭಯ ವರ್ತಕರವರು ಜನವರಿ ೨೨ ರಂದು ಮುಂಬೈ ಮರಾಠಿ ಸಂಘದ ಪತ್ರಕರ್ತರ ಪರಿಷತ್ತಿನಲ್ಲಿ ಸ್ಪಷ್ಟಪಡಿಸಿದರು. ಅಲ್ಲದೇ ಅವರು ಸುದ್ದಿ ಮಾಧ್ಯಮದವರೆದುರು ಸನಾತನ ಸಂಸ್ಥೆಯ ಸತ್ಯದ ಪಕ್ಷವನ್ನು ಮಂಡಿಸಿದರು. ಈ ಸಮಯದಲ್ಲಿ ‘ಐ.ಬಿ. ಎನ್. ಲೋಕಮತ’ ವಾರ್ತಾವಾಹಿನಿಯ ಸುದ್ದಿಗಾರನು ಈ ಸುದ್ದಿಗೋಷ್ಠಿಯನ್ನು ಹಾಳು ಗೆಡವಲು ವ್ಯರ್ಥ ಪ್ರಯತ್ನ ಮಾಡಿದನು. (ಎಲ್ಲೆಡೆ ಒತ್ತಡ ತಂತ್ರವನ್ನು ಅನುಸರಿಸಿ ಹಿಂದುತ್ವದ ಧ್ವನಿಯನ್ನು ಅಡಗಿಸಲು ಯತ್ನಿಸುವ ‘ಐ.ಬಿ.ಎನ್.-ಲೋಕಮತ ವಾಹಿನಿ ಹಾಗೂ ಅದರ ಪರ್ತಕರ್ತರು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭಕ್ಕೆ ಕಳಂಕಪ್ರಾಯರಾಗಿದ್ದಾರೆ. ಸತ್ಯ ಹೇಳುವ ಹೆಸರಿನಲ್ಲಿ ಸತ್ಯವನ್ನು ಮುಚ್ಚಿಡಲು ಪ್ರಯತ್ನಿಸುವ ಇಂತಹ ಪತ್ರಕರ್ತರ ಮೇಲೆ ಎಲ್ಲ ಪತ್ರಕರ್ತರು ಬಹಿಷ್ಕಾರ ಹಾಕಬೇಕು ! - ಸಂಪಾದಕರು)

ಜನಾಕ್ರೋಶದ ತುಣುಕುಗಳು
ನಿಖಿಲ ವಾಗಳೆ ಹಿಂದೂಗಳಲ್ಲಿ ಕೂಡಲೇ ಕ್ಷಮೆಯಾಚಿಸಲಿ. ಇಲ್ಲದಿದ್ದರೆ ಆಂದೋಲನಕ್ಕೆ ಇಳಿಯುವೆವು -ಗೋಮಾಂತಕ ಮಂದಿರ ಮಹಾಸಂಘ
ಹಿಂದೂಗಳ ಶಕ್ತಿಯನ್ನು ಕ್ಷುಲ್ಲಕವೆಂದು ತಿಳಿದು ತಪ್ಪು ಮಾಡಬೇಡಿ! -ಹಿಂದೂ ಸ್ವಾಭಿಮಾನ ಪ್ರತಿಷ್ಠಾನ
ಪಂಢರಪುರದಲ್ಲಿ ೩೦೦ಹಿಂದೂ ಕುಟುಂಬದವರಿಂದ ‘ಐ.ಬಿ.ಎನ್.- ಲೋಕಮತ’ ನಿಲ್ಲಿಸಲು ನಿರ್ಧಾರ
ಕೊಲ್ಹಾಪುರದಲ್ಲಿ ನಿಖಿಲ ವಾಗಳೆಯವರ ಪ್ರತಿಮೆಗೆ ಚಪ್ಪಲಿ ಹಾರ.
ಧರ್ಮಾಭಿಮಾನಿಗಳು ಮುಂದಿನ ಕ್ರಮಾಂಕದಲ್ಲಿ ಖಂಡಿಸುತ್ತಿದ್ದಾರೆ.
ದೂ.: (೦೨೨)೬೬೮೯೯೦೦೦
ಫ್ಯಾಕ್ಸ್:(೦೨೨) ೬೬೭೧೪೭೬೫
ನಿಖಿಲ ವಾಗಳೆಯವರ ಸಂಚಾರೀ ವಾಣಿ: ೯೮೩೩೧೩೦೭೨೦
ಈ ಕುರಿತಾದ ವಿಡಿಯೋ ವೀಕ್ಷಿಸಿ: http://www.youtube.com/watch?v=7mS7FIYLmNQ

No comments:

Post a Comment