ಪಾಕ್‌ನಲ್ಲಿ ಆದಾಯ ತೆರಿಗೆ ತುಂಬುತ್ತಿರುವ ಕಾಶ್ಮೀರದ ಜನರು!

ಜಾತ್ಯತೀತ ರಾಜಕಾರಣಿಗಳ ದೌರ್ಬಲ್ಯದ ದುಷ್ಪರಿಣಾಮ

ಇಸ್ಲಾಮಾಬಾದ್: ಕಾಶ್ಮೀರದ ಆರು ನಗರಗಳಲ್ಲಿ ನಾಲ್ಕುನೂರಕ್ಕಿಂತ ಹೆಚ್ಚು ವ್ಯಕ್ತಿಗಳು ಭಾರತದ ಬದಲು ಪಾಕಿಸ್ತಾನದಲ್ಲಿ ಆದಾಯ ತೆರಿಗೆ ತುಂಬುತ್ತಿದ್ದಾರೆ ಎಂದು ಪಾಕಿಸ್ತಾನದ ವಿತ್ತಮಂತ್ರಿ (ಅರ್ಥ ಮಂತ್ರಿ) ಹಿನಾ ರಬ್ಬನಿಯವರು ಮಾಹಿತಿ ನೀಡಿದ್ದಾರೆ. ರಬ್ಬನಿಯವರು ತೆರಿಗೆ ತುಂಬಿಸುವವರ ಸಂಖ್ಯೆಯ ಕಾಗದ ಪತ್ರಗಳನ್ನು ಪಾಕಿಸ್ತಾನ ಸಂಸತ್ತಿನ ವರಿಷ್ಠ ಸದನದಲ್ಲಿ ಪ್ರಸ್ತುತ ಪಡಿಸಿದರು. ಭಾರತ ಇದು ವರೆಗೆ ಈ ಬಗ್ಗೆ ಏನೂ ಪ್ರತಿಕ್ರಿಯೆ ವ್ಯಕ್ತಪಡಿಸಲಿಲ್ಲ. (ಜಗತ್ತಿನಲ್ಲಿ ಕೇವಲ ಭಾರತದಲ್ಲಿ ಮಾತ್ರ ಇಂತಹ ಘಟನೆಗಳಾಗುತ್ತವೆ. ಕಾಶ್ಮೀರ ಹಾಗೂ ಪಾಕಿಸ್ತಾನದ ಬಗ್ಗೆ ನಮ್ಮ ಜಾತ್ಯತೀತ ರಾಜಕಾರಣಿಗಳ ಇದು ವರೆಗಿನ ಬಾಲಿಶ ಧೋರಣೆಗಳಿಂದಲೇ ಈ ಸ್ಥಿತಿ ಉದ್ಭವಿಸಿದೆ. ಭಾರತದ ರಾಜಕಾರಣಿಗಳು ಈ ಬಗ್ಗೆ ಏನಾದರೂ ಪರಿಹಾರೋಪಾಯ ಮಾಡುವರೋ ಅಥವಾ ಸುಮ್ಮನಿದ್ದು ಬಿಡುವರೋ? - ಸಂಪಾದಕರು)

No comments:

Post a Comment