ಪನೋಲಿಬೈಲು ದೈವಸ್ಥಾನ ಸರಕಾರದ ವಶಕ್ಕೆ!


ದಕ್ಷಿಣ ಕನ್ನಡ: ಇಲ್ಲಿನ ಪನೋಲಿಬೈಲು ದೈವಸ್ಥಾನವು ಕರ್ನಾಟಕ ಸರಕಾರದ ವಶವಾಗಿದೆ. ಸರಕಾರದ ಸಹಾಯಕ ಆಯುಕ್ತ ಪ್ರಭುಲಿಂಗ ಕವಳಿಕಟ್ಟೆಯವರು ದೈವ ಸ್ಥಾನದ ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಅನೇಕ ವರ್ಷಗಳಿಂದ ದೈವ ಸ್ಥಾನದ ಆಡಳಿತ ಮೊಕ್ತೇಸರರಾಗಿದ್ದ ಶ್ರೀ.ಸಚ್ಚಿದಾನಂದ ಹೆಗ್ಡೆ ಬರಂಗೆರೆಯವರ ವಿರುದ್ಧ ಜಮೀನಿನ ವಿವಾದಕ್ಕೆ ಸಂಬಂಧಿತ ಆರೋಪಗಳನ್ನು ಉಲ್ಲೇಖಿಸಿ ಡಾ. ಅಮ್ಮೆಂಬಲ ಬಲಪ್ಪಾರವರ ನೇತೃತ್ವದ ಪನೋಲಿಬೈಲು ಅಭಿವೃದ್ಧಿ ಸಮಿತಿಯು ಅವರ ವಿರುದ್ಧ ಸರಕಾರಕ್ಕೆ ದೂರು ನೀಡಿತ್ತು. ನಂತರ ಈ ಪ್ರಕರಣ ನ್ಯಾಯಪ್ರವಿಷ್ಠವಾಗಿರು ವಾಗಲೇ ನ್ಯಾಯಾಲ ಯದ ಸಮ್ಮತಿಯಲ್ಲಿ ಸರಕಾರವು ದಾಖಲೆ ವಶಪಡಿಸಿಕೊಂಡು ಭಂಡಾರಕ್ಕೆ ಬೀಗ ಜಡಿದು ದೈವಸ್ಥಾನದ ವ್ಯವಸ್ಥಾಪನೆ ಯನ್ನು ವಶಪಡಿಸಿ ಕೊಂಡಿತು. ಪೊಲೀಸರ ಬಂದೋಬಸ್ತಿನಲ್ಲಿ ಸಹಾಯಕ ಆಯುಕ್ತರು ದೈವಸ್ಥಾನದ ವ್ಯವಸ್ಥಾಪನೆ ಪಡೆದುಕೊಂಡರು.  ಈ ದೈವ ಸ್ಥಾನದ ವಾರ್ಷಿಕ ಆದಾಯ ೫೦ ಲಕ್ಷ ರೂಪಾಯಿಯಷ್ಟಿದೆ. (ಈ ಆದಾಯದತ್ತ ಕಣ್ಣಿಟ್ಟು ದೈವಸ್ಥಾನವನ್ನು ಕಬಳಿಸಲು ಹಾತೊರೆಯುವ ರಾಜಕಾರಣಿಗಳಿಗೆ ಅವ ಕಾಶ ದೊರೆತಂತಾಗಿದೆ! - ಸಂಪಾದಕರು)

No comments:

Post a Comment