ಭಾಜಪ ಸರಕಾರದ ರಾಜ್ಯದಲ್ಲಿ ಹಿಂದೂಗಳ ಅಸುರಕ್ಷಿತ ದೇವಸ್ಥಾನಗಳು!


ರಾಜ್ಯದಲ್ಲಿನ ಗಣಿ ಉದ್ಯಮದ ಹಗರಣದಿಂದ ಶ್ರೀ ಸುಗ್ಗಲಮ್ಮ ದೇವಸ್ಥಾನ ನಾಶ!
ಸನಾತನವು ಹೇಳುತ್ತಿದ್ದ ಕೆಟ್ಟ ಕಾಲ ಇದೇ !

ಬೆಂಗಳೂರು: ಕರ್ನಾಟಕ-ಆಂಧ್ರ ಪ್ರದೇಶದ ಗಡಿಯಲ್ಲಿರುವ ಶ್ರೀ ಸುಗ್ಗಲಮ್ಮ ದೇವಸ್ಥಾನವನ್ನು ಗಣಿ ಉದ್ಯಮದಿಂದ ನಾಶ ಮಾಡಲಾಗಿದೆ. ಕರ್ನಾಟಕ ಗಣಿ ಉದ್ಯಮ ಹಗರಣದ ವಿಚಾರಣೆ ಮಾಡುತ್ತಿರುವ ಸಿಬಿಐ ತಂಡವು ಈ ದೇವಸ್ಥಾನದ ಮೂಲಕ ಬಳ್ಳಾರಿಯಲ್ಲಿನ ರೆಡ್ಡಿ ಸಹೋದರರ ಓಬಳಾಪುರಂ ಗಣಿ ಕಂಪನಿಯ ವಿಚಾರಣೆ ಆರಂಭಿಸಿದೆ. ಕೇಂದ್ರೀಯ ಧಾರ್ಮಿಕ ಸ್ಥಳಗಳ ಅಧಿಕಾರ ಸಮಿತಿಯು ತನ್ನ ವರದಿಯಲ್ಲಿ ಎರಡೂ ರಾಜ್ಯಗಳ ಸರಕಾರಗಳಿಗೂ ಗಡಿಯನ್ನು ತೋರಿಸುವ ಸ್ಥಳಗಳ ಮೂಲ ಪ್ರತಿಯನ್ನು ಪ್ರಸ್ತುತ ಪಡಿಸುವಂತೆ ಆಗ್ರಹಿಸಿತ್ತು. ಸಿಬಿಐ ಅಧಿಕಾರಿಗಳು ಓಬಳಾಪುರಂ ಗಣಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ರೆಡ್ಡಿಯವರಿಗೆ ದೇವಸ್ಥಾನದ ಅವಶೇಷ ತೋರಿಸುವಂತೆ ಆಗ್ರಹಿಸಿದ ನಂತರ ರೆಡ್ಡಿಯವರು ಆ ಜಾಗದಲ್ಲಿ ದೇವಸ್ಥಾನ ಇರಲೇ ಇಲ್ಲ ಎಂದು ಹೇಳಿದರು. ಓಬಳಾಪುರಂ ಗಣಿ ಕಂಪನಿಯ ಗಣಿ ವ್ಯವಸ್ಥಾಪಕ ಶಿವಕುಮಾರರನ್ನು ವಿಚಾರಣೆ ಮಾಡಿದಾಗ ಅವರು ಆ ಜಾಗದಲ್ಲಿದ್ದ ದೇವಸ್ಥಾನವು ಗಣಿ ಚಟುವಟಿಕೆಗಳ ಸಮಯದಲ್ಲಿ ನಾಶವಾಗಿರುವುದನ್ನು ಒಪ್ಪಿಕೊಂಡರು. (ಹಣದ ಆಸೆಯಿಂದ ದೇವಸ್ಥಾನವನ್ನೇ ನಾಶ ಮಾಡುವ ಧರ್ಮದ್ರೋಹಿ ಜನ್ಮಹಿಂದೂಗಳು! -ಸಂಪಾದಕರು)
ಸಿಬಿಐನ ಅಧಿಕಾರಿಗಳು ‘ಬಳ್ಳಾರಿ ಆಯರ್ನ್ ಮತ್ತು ಪೆವೆಟ್ ಲಿಮಿಟೆಡ್’ನ ಸಿಬ್ಬಂದಿಗಳಿಗೆ ದೇವಸ್ಥಾನದ ಬಗ್ಗೆ ವಿಚಾರಿಸಿದರು. ಅವರು ಆ ಜಾಗದಲ್ಲಿ ದೇವಸ್ಥಾನವಿದ್ದುದನ್ನು ಒಪ್ಪಿಕೊಂಡರು. ರೆಡ್ಡಿ ಸಹೋದರರಲ್ಲಿ ಗಣಿ ಉದ್ಯಮದ ಸಂಪೂರ್ಣ ವಿಚಾರಣೆ ಮಾಡಲಾಗುವುದೆಂದು ತಂಡದ ಮುಖ್ಯ ಉಪಮಹಾನಿರೀಕ್ಷಕ ಶ್ರೀ.ವಿ.ವಿ.ಲಕ್ಷ್ಮೀನಾರಾಯಣರವರು ತಿಳಿಸಿದರು.


ಗುಡ್ಡೆಕಲ್‌ನ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ೭ಲಕ್ಷ ರೂಪಾಯಿಗಳ ಆಭರಣ ಕಳವು!

ಶಿವಮೊಗ್ಗ: ಇಲ್ಲಿನ ಪ್ರಸಿದ್ಧ ಗುಡ್ಡೆಕಲ್ ಶ್ರೀಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ದಲ್ಲಿ ೭ಲಕ್ಷ ರೂಪಾಯಿ ಬೆಲೆಯ ಆಭರಣವನ್ನು ಅಜ್ಞಾತರು ಕಳವು ಮಾಡಿದ್ದಾರೆ. ೧೬ಕಿಲೋ ಬೆಳ್ಳಿಯ ಪ್ರಭಾವಳಿ, ೨ ಕಿಲೋ ಕಿರೀಟ ಮತ್ತು ಇತರ ಸಣ್ಣ-ಪುಟ್ಟ ಆಭರಣ ಹಾಗೆಯೇ ದೇವಸ್ಥಾನದಲ್ಲಿನ ೨ಕಾಣಿಕೆ ಹುಂಡಿಯನ್ನು ಕಳವು ಮಾಡಲಾಗಿದೆ. ಈ ಕಾಣಿಕೆ ಹುಂಡಿಯು ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿ ಸಿಕ್ಕಿತು. ದೇವಸ್ಥಾನದ ಅರ್ಚಕರು ಬೆಳಗ್ಗೆ ೬.೩೦ಕ್ಕೆ ಪೂಜೆ ಮಾಡಲು ಬಂದಾಗ ಈ ಘಟನೆಯು ಬೆಳಕಿಗೆ ಬಂದಿತು. ಕಳ್ಳರು ದೇವಸ್ಥಾನದ ಬೀಗ ಮುರಿದು ಒಳ ಪ್ರವೇಶಿಸಿದ್ದರು. ಈ ಘಟನೆಯ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರನ್ನು ನೋಂದಾಯಿಸಲಾಗಿದೆ.

No comments:

Post a Comment