ಫಲಕಗಳ ಮೂಲಕ ರಾಷ್ಟ್ರ ಮತ್ತು ಧರ್ಮಜಾಗೃತಿ ಮಾಡಲು ಅಮೂಲ್ಯ ಅವಕಾಶ!

ಇಂದು ಎಲ್ಲೆಡೆ ಹಿಂದೂಗಳ ಮೇಲೆ ವಿವಿಧ ರೀತಿಯ ಹಲ್ಲೆಗಳಾಗುತ್ತಿವೆ. ಹಿಂದುತ್ವಕ್ಕೆ ಅಸ್ತಿತ್ವದ ಪ್ರಶ್ನೆ ಎದುರಾಗಿದೆ. ಇಂತಹ ಸ್ಥಿತಿಯಲ್ಲಿ ಹಿಂದೂಗಳನ್ನು ಜಾಗೃತಗೊಳಿಸುವುದು ಅತೀ ಅವಶ್ಯಕವಾಗಿದೆ. ಆದುದರಿಂದ ಹಿಂದೂಗಳೇ, ಈ ಕೆಳಗಿನ ವಿಷಯಗಳನ್ನು ದೇವಸ್ಥಾನಗಳಲ್ಲಿ, ಮನೆಯ ಹೊರಗೆ ಅಥವಾ ಇತರ ಸಾರ್ವಜನಿಕ ಸ್ಥಳಗಳಲ್ಲಿ ಫಲಕದ ಮೇಲೆ ಬರೆದು ಧರ್ಮರಕ್ಷಣೆಯ ಕಾರ್ಯವನ್ನು ಮಾಡಿ!
ಸೂಚನೆ: ಈ ಮಾಹಿತಿಯನ್ನು ತಮ್ಮ ಸ್ಥಳೀಯ ಪರಿಸ್ಥಿತಿಗನುಸಾರ ತಾರತಮ್ಯದಿಂದ ಬರೆಯಬೇಕು.
೧.ಭಾರತೀಯರೇ, ಅಮೇರಿಕಾದ ದೃಷ್ಟಿಯಲ್ಲಿ ನಿಮ್ಮ ಬೆಲೆಯನ್ನು ಅರಿತುಕೊಳ್ಳಿರಿ!
ಅಮೇರಿಕಾದಲ್ಲಿರುವ ಟೆವಾಲಿ ವಿಶ್ವವಿದ್ಯಾಲಯದಲ್ಲಿ ಅಕ್ರಮವಾಗಿ ಪ್ರವೇಶ ಮಾಡಿದರೆಂಬ ಸುಳ್ಳು ಆಪಾದನೆಯಿರುವ ಭಾರತೀಯ ವಿದ್ಯಾರ್ಥಿಗಳ ಮೇಲೆ ಗಮನವಿಡಲು ಅವರ ಕಾಲಿಗೆ ‘ರೆಡಿಯೋ ಕಾಲರ್’ ಎಂಬ ಪ್ರಾಣಿಗಳ ಕುತ್ತಿಗೆಗೆ ಕಟ್ಟುವ ಎಲೆಕ್ಟ್ರಾನಿಕ್ ಉಪಕರಣವನ್ನು ಕಟ್ಟಿದ್ದಾರೆ.
೨.ನಾಗರಿಕರೇ, ಕಾಶ್ಮೀರದ ಪೊಲೀಸರ ರಾಷ್ಟ್ರಘಾತಕ ಕೃತಿಗಳನ್ನು ತಿಳಿಯಿರಿ!
ಕಾಶ್ಮೀರದಲ್ಲಿನ ಶ್ರೀನಗರದ ಲಾಲ ಚೌಕದಲ್ಲಿ ಪ್ರಜಾಪ್ರಭುತ್ವದ ದಿನ ಧ್ವಜ ಹಾರಿಸಲು ಪ್ರಯತ್ನಿಸಿದ ಭಾಜಪದ ಯುವಕರನ್ನು ಪೊಲೀಸರು ಅಮಾನವೀಯವಾಗಿ ಥಳಿಸಿದರು. ಆಗ ಪೊಲೀಸರ ಕೈಯಲ್ಲಿ ‘ಭಾರತೀಯ ನಾಯಿಗಳೇ, ಹಿಂತಿರುಗಿ’ ಎಂಬ ಘೋಷಣೆಯ ಫಲಕವಿತ್ತು.
೩.ನಾಗರಿಕರೇ, ಸಮಾಜವನ್ನು ಅನೈತಿಕತೆಯ ಹಾದಿಯಲ್ಲಿ ಕರೆದುಕೊಂಡು ಹೋಗುವ ಪ್ರಸ್ತಾಪವನ್ನು ರದ್ದುಪಡಿಸಲು ಸರಕಾರವನ್ನು ಒತ್ತಾಯಿಸಿ!
ಪ್ರತ್ಯಕ್ಷ ಲೈಂಗಿಕ ಸಂಬಂಧವನ್ನು ಬಿಟ್ಟು ಇತರ ಶಾರೀರಿಕ ಸಂಬಂಧಕ್ಕಾಗಿ ೧೨ ವರ್ಷ ವಯಸ್ಸಿನ ಮಿತಿಯನ್ನು ನಿಗದಿ ಪಡಿಸಬೇಕು ಎಂದು ಕೇಂದ್ರೀಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯವು ಪ್ರಸ್ತಾಪವನ್ನು ಮಂಡಿಸಿದೆ.
೪.ಹಿಂದೂಗಳೇ, ರಾಜ್ಯದಲ್ಲಿ ನಿಮ್ಮ ಶ್ರದ್ಧಾಸ್ಥಾನಗಳ ಮೇಲಿನ ಆಘಾತಗಳನ್ನು ಅರಿತುಕೊಳ್ಳಿರಿ!
ಅ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ೮೦೦ ವರ್ಷಕ್ಕಿಂತ ಪುರಾತನವಾಗಿರುವ ಬ್ರಹ್ಮಸನ್ನಿಧಿ ದೈವಸ್ಥಾನವನ್ನು ರಸ್ತೆ ಅಗಲೀಕರಣಕ್ಕಾಗಿ ಸ್ಥಳಾಂತರ ಮಾಡಲು ಭಾಜಪ ಸರಕಾರವು ಪ್ರಯತ್ನಿಸುತ್ತಿದೆ.
ಆ.ಬಾಗಲಕೋಟೆ ಜಿಲ್ಲೆಯ ಮಂಜೇಶ್ವರದಲ್ಲಿರುವ ಬಸವಣ್ಣರ ಮೂರ್ತಿಯನ್ನು ರಾತ್ರಿ ಸಮಯದಲ್ಲಿ ಅಜ್ಞಾತ ಹಿಂದೂದ್ವೇಷಿಗಳು ಧ್ವಂಸ ಮಾಡಿದ್ದಾರೆ.
೫.ಹಿಂದೂಗಳೇ, ಹಿಂದೂಬಹುಸಂಖ್ಯಾತ ರಾಷ್ಟ್ರದಲ್ಲಿನ ಗೋವಂಶದ ದುಃಸ್ಥಿತಿಯನ್ನು ಅರಿತುಕೊಳ್ಳಿರಿ!
ಬೆಳಗಾವಿಯಲ್ಲಿ ಅಕ್ರಮವಾಗಿ ಕಳ್ಳಸಾಗಾಣಿಕೆ ನಡೆಸಿ ಗೋವಾಗೆ ಒಯ್ಯಲಾಗುತ್ತಿದ್ದ ೧೦ ಸಾವಿರ ಕಿಲೋಗಿಂತ ಹೆಚ್ಚು ಗೋಮಾಂಸ, ೯ ಆಕಳು ಮತ್ತು ಎತ್ತುಗಳನ್ನು ಗೋಪ್ರೇಮಿಗಳ ಮುಂದಾಳತ್ವದಿಂದ ಪೊಲೀಸರು ಹಿಡಿದರು. ಕಳೆದ ೩೦ ದಿನಗಳ ಕಾಲಾವಧಿಯಲ್ಲಿ ಗೋವಾದಲ್ಲಿ ಗೋಮಾಂಸವನ್ನು ಜಪ್ತಿ ಮಾಡಿದ ಮೂರನೇ ಘಟನೆ ಇದಾಗಿದೆ.
೬.ಹಿಂದೂಗಳೇ, ಪಾಕಿಸ್ತಾನದಲ್ಲಿನ ಹಿಂದೂಗಳ ದುಃಸ್ಥಿತಿಯನ್ನು ಅರಿತುಕೊಳ್ಳಿರಿ!
ಪಾಕಿಸ್ತಾನದ ಸಂಸತ್ತಿನ ಸದಸ್ಯರು ಅಲ್ಲಿ ಹಿಂದೂಗಳ ಮೇಲೆ ಅತ್ಯಾಚಾರವಾಗುತ್ತಿದೆಯೆಂದು ಒಪ್ಪಿಕೊಂಡಿದ್ದಾರೆ. ಹಿಂದೂಗಳ ಅಪಹರಣ, ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ, ಸಂಪತ್ತಿನ ಲೂಟಿ, ಕೊಲೆ ಇತ್ಯಾದಿ ಪ್ರಕರಣಗಳು ತುಂಬ ಹೆಚ್ಚಾಗಿದೆಯೆಂದು ಓರ್ವ ಸಂಸತ್ತಿನ ಸದಸ್ಯನು ಹೇಳಿದ್ದಾನೆ.
೭.ನಾಗರಿಕರೇ, ಅರುಣಾಚಲ ಪ್ರದೇಶದ ಮೇಲೆ ತನ್ನ ಹಕ್ಕಿದೆ ಎಂದು ಹೇಳುವ ಚೀನಾದ ವಿರುದ್ಧ ಏನೂ ಮಾಡದ ರಾಜಕಾರಣಿಗಳ ನಿಷ್ಕ್ರಿಯತೆಯನ್ನು ಅರಿತುಕೊಳ್ಳಿರಿ!
ಚೀನಾ ತನ್ನ ಅಧಿಕೃತ ನಕಾಶೆಯಲ್ಲಿ ಅರುಣಾಚಲ ಪ್ರದೇಶವು ತನ್ನ ರಾಜ್ಯವೆಂದು ತೋರಿಸಿದ್ದು ಅದರ ವಿರುದ್ಧ ಯಾವುದೇ ಸ್ಪಷ್ಟ ಕೃತಿ ಮಾಡದೇ ಭಾರತದ ಪ್ರಧಾನಮಂತ್ರಿಗಳು, ‘ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗವಾಗಿದೆ’ ಎಂದು ಹೇಳಿದ್ದಾರೆ.

No comments:

Post a Comment