ಕರ್ನಾಟಕ ರಾಜ್ಯದಲ್ಲಿ ಸಂಘಪರಿವಾರದ ಕೆಲವು ಕಾರ್ಯಕರ್ತರಿಂದ ...

ಕರ್ನಾಟಕ ರಾಜ್ಯದಲ್ಲಿ ಸಂಘಪರಿವಾರದ ಕೆಲವು 
ಕಾರ್ಯಕರ್ತರಿಂದ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರಿಗೆ ಹಾಗೂ 
ಸನಾತನದ ಸಾಧಕರಿಗೆ ಧರ್ಮಪ್ರಸಾರ ಮಾಡುತ್ತಿರುವಾಗ ಬಂದಂತಹ ಕಹಿ ಅನುಭವಗಳು

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ೪ ಡಿಸೆಂಬರ್ ೨೦೧೦ ರಂದು ಹಿಂದೂ ಜನಜಾಗೃತಿ ಸಮಿತಿಯು ಹಿಂದೂ ಧರ್ಮಜಾಗೃತಿ ಸಭೆಯನ್ನು ಆಯೋಜಿಸಿತ್ತು. ಅಲ್ಲಿ ಪ್ರಸಾರ ಮಾಡುತ್ತಿರುವಾಗ ಸಂಘ ಪರಿವಾರದ ಸಂಘಟನೆಯ ಕೆಲವು ಕಾರ್ಯಕರ್ತರಿಂದ ಬಂದಂತಹ ಕಹಿ ಅನುಭವಗಳನ್ನು ಇಲ್ಲಿ ನೀಡುತ್ತಿದ್ದೇವೆ. (ಮುಂದುವರಿದ ಭಾಗ: ಕಳೆದ ಭಾಗಕ್ಕೆ ಇಲ್ಲಿ ಕ್ಲಿಕ್ ಮಾಡಿ: http://kannadasanatanprabhat.blogspot.com/2011/02/blog-post_1247.html)

ತುಮಕೂರಿನಲ್ಲಾದ ಹಿಂದೂ ಧರ್ಮ ಜಾಗೃತಿ ಸಭೆಯ ಕಾರ್ಯದಲ್ಲಿ ಸಂಘದ ವರಿಷ್ಟ ಮುಖಂಡರು ಮೊದಲು ಸಹಾಯ ಮಾಡುವುದು; ಆದರೆ ‘ಸನಾತನ ಪ್ರಭಾತ’ವೆಂಬ ನಿಯತಕಾಲಿಕೆಯು ಸಂಘವನ್ನು ಟೀಕಿಸುತ್ತದೆ’, ಎಂಬ ಕಾರಣಕ್ಕೆ ಜಗಳವಾಡಿ ಪೊಲೀಸರಲ್ಲಿ ದೂರು ನೀಡುವ ಬೆದರಿಕೆ ಹಾಕುವುದು!

ಕ್ರಿ.ಶ.೨೦೦೮ ರಲ್ಲಿ ತುಮಕೂರಿನಲ್ಲಿ ಹಿಂದೂ ಧರ್ಮಜಾಗೃತಿ ಸಭೆಯ ಆಯೋಜನೆ ನಡೆಯುತ್ತಿತ್ತು. ಆಗ ರಾ.ಸ್ವ. ಸಂಘದ ವರಿಷ್ಟ ಮುಖಂಡರು ಹಿಂದೂ ಜನಜಾಗೃತಿ ಸಮಿತಿಗೆ ಸಹಾಯ ಮಾಡುತ್ತಿದ್ದರು. ಅದೇ ಸಮಯದಲ್ಲಿ ‘ಸನಾತನ ಪ್ರಭಾತ’ದಲ್ಲಿ ಸಂಘದ ವಿಷಯದ ಲೇಖನವು ಪ್ರಕಟಗೊಂಡಿತ್ತು. ಆ ಲೇಖನ ಅವರಿಗೆ ಹಿಡಿಸಲಿಲ್ಲ. ಸಭೆಗೆ ಇನ್ನೂ ೪-೫ ದಿನಗಳಿರುವಾಗ ಅವರು ಸನಾತನದ ಕೆಲವು ಸಾಧಕರನ್ನು ಒಂದು ಸ್ಥಳಕ್ಕೆ ಕರೆಯಿಸಿ ಕೊಂಡರು. ಅಲ್ಲಿ ಹೋದ ನಂತರ ಸ್ವಲ್ಪ ಸಮಯ ಚೆನ್ನಾಗಿ ಮಾತನಾಡಿದರು. ನಂತರ ಇದ್ದಕ್ಕಿದ್ದಂತೆ ಭಯಂಕರ ಕೋಪದಿಂದ ಜೋರಾಗಿ ಮಾತನಾಡಲಾರಂಭಿಸಿದರು. ‘ನೀವು ನಮ್ಮ ವಿರುದ್ಧ ಏಕೆ ಬರೆಯುತ್ತೀರಿ?’ ಎಂಬುದೇ ಅವರ ಮುಖ್ಯ ಆಕ್ಷೇಪವಾಗಿತ್ತು. (‘ಸನಾತನ ಪ್ರಭಾತ’ದಲ್ಲಿ ಸಂಘ ಪರಿವಾರದ ಸಂಘಟನೆಯ ಬಗ್ಗೆ ಮುದ್ರಿಸಿರುವ ಲೇಖನದಲ್ಲಿ ತಮ್ಮನ್ನು ವಿರೋಧಿಸುವ ಉದ್ದೇಶವಿಲ್ಲ,  ಹಿಂದೂ ರಾಷ್ಟ್ರವನ್ನೇನಾದರೂ ಸ್ಥಾಪಿಸಬೇಕೆಂದಿದ್ದರೆ, ತಾವು ತಮ್ಮನ್ನು ಕಠೋರವಾಗಿ ಆತ್ಮ ಪರೀಕ್ಷಣೆ ಮಾಡಿಕೊಳ್ಳಬೇಕು. ತಮಗೆ ಹಾಗೆ ಮಾಡಲು ಸಾಧ್ಯವಿಲ್ಲದಿದ್ದರೆ, ಯಾರಾದರೂ ಬೇರೆಯವರು ತಮ್ಮ ತಪ್ಪುಗಳನ್ನು ಹೇಳುತ್ತಿದ್ದರೆ, ಅದನ್ನು ನಮ್ರತೆಯಿಂದ ಸ್ವೀಕರಿಸಿ ಸುಧಾರಣೆ ಮಾಡಿಕೊಳ್ಳುವುದು ಅಪೇಕ್ಷಿತವಿತ್ತು. ಹೀಗೇನೂ ಮಾಡದೇ ಈ ರೀತಿ ವಿರೋಧಿಸಿದರೆ ಏನು ಸಾಧಿಸಿದಿರಿ? - ಸಂಪಾದಕರು)
ಸಾಧಕರು ಅವರಿಗೆ, ‘ನಾವು ತತ್ತ್ವನಿಷ್ಠರಾಗಿದ್ದೇವೆ. ನಾವು ಯಾವುದೇ ತಪ್ಪುಗಳ ಬಗ್ಗೆ ಜನಪ್ರಬೋಧನೆ ಮಾಡುತ್ತಲೇ ಇರುತ್ತೇವೆ. ನಮ್ಮ ಉದ್ದೇಶ ಕೇವಲ ಜನ ಪ್ರಭೋಧನೆಯಾಗಿದೆ. ನಮಗೆ ನಿಮ್ಮ ಮೇಲೆ ದ್ವೇಷವಿಲ್ಲ. ಕೇವಲ ತತ್ತ್ವದಲ್ಲಿ ವ್ಯತ್ಯಾಸವಿದೆ’ ಎಂದು ತಿಳಿಸಿ ಹೇಳಲು ಪ್ರಯತ್ನಿಸಿದರು. ಆಗ ಅವರು ಇನ್ನೂ ಬೈದರು. ಇನ್ನೋರ್ವ ಸಾಧಕಿಯನ್ನು ಉದ್ದೇಶಿಸಿ, ‘ಒಂದು ಅಕ್ಷರ ವನ್ನೂ ಉಚ್ಚರಿಸಬೇಡಿ. ನನಗೆ ತಿಳಿಸಲು ಪ್ರಯತ್ನಿಸಿದಲ್ಲಿ, ಈಗಲೇ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುತ್ತೇನೆ’ ಎಂದರು. (ಈ ರೀತಿ ಬೆದರಿಕೆಯ ಮಾತುಗಳನ್ನು ತನ್ನದೇ ಹಿಂದೂ ಬಾಂಧವರ ಮೇಲೆ ಉಪಯೋಗಿಸುವ ಈ ಮುಖಂಡರಿಗೆ ಸಂಘವು ಸಭ್ಯತೆ ಹಾಗೂ ಸುಸಂಸ್ಕೃತಿಯನ್ನು ಕಲಿಸುವುದೇ? - ಸಂಕಲನಕಾರರು) ಅವರು ಎಷ್ಟು ಜೋರಾಗಿ ಬೈದರೆಂದರೆ, ಆ ಅವಾಂತರವನ್ನು ಕೇಳಿ ಕೆಲವು ಸಾಧಕರು ಅಲ್ಲಿಗೆ ಬರಬೇಕಾಯಿತು. ಕೊನೆಗೆ ಅವರು, ‘ನಾನೇ ನಿಮಗೆ ಸಭೆಗಾಗಿ ಅನುಮತಿಯನ್ನು ಪಡೆಯಲು ಹಾಗೂ ಜಿಲ್ಲಾಧಿಕಾರಿಯಿಂದ ಸಭೆಯನ್ನು ತೆಗೆದುಕೊಳ್ಳುವುದರ ಸಲುವಾಗಿ ಅನುಮತಿಯನ್ನು ಪಡೆದುಕೊಂಡೆನು. ನೀವು ಸಭೆಯನ್ನು ಹೇಗೆ ನಡೆಸುತ್ತೀರೋ ನಾನು ನೋಡುತ್ತೇನೆ’ ಎಂದರು. ಇದಾದ ೨ ದಿನದಲ್ಲಿ ಜಿಲ್ಲಾಧಿಕಾರಿಗಳಿಂದ ಸಾಧಕರಿಗೆ ‘ಸಭೆಯನ್ನು ರದ್ದು ಗೊಳಿಸಿ’ ಎಂಬ ಆದೇಶವು ಬಂದಿತು. ಆದ್ದರಿಂದ ಇಷ್ಟು ದಿನಗಳ ಹಿಂದಿನಿಂದ ತಯಾರಿಯನ್ನು ನಡೆಸಿಯೂ ಕೊನೆಗೆ ಸಭೆಯನ್ನು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. (ಇಂತಹ ಮುಖಂಡರೇ ಹಿಂದೂ ಸಂಘಟನೆ ಹಾಗೂ ಹಿಂದೂ ರಾಷ್ಟ್ರದ ನಿರ್ಮಾಣದಲ್ಲಿ ನಿಜವಾದ ಅಡಚಣೆಯಾಗಿದ್ದಾರೆ! ಸಂಘ ಪರಿವಾರದಲ್ಲಿನ ವರಿಷ್ಠ ಮುಖಂಡರು ಇಂತಹ ಮುಖಂಡರಿಗೆ ಹಿಂದೂ ಸಂಘಟನೆಯ ಆವಶ್ಯಕತೆಯನ್ನು ತಿಳಿಸಿ ಹೇಳುವರೇ? - ಸಂಕಲನಕಾರರು) ಇಂದು ಕೂಡ ತುಮಕೂರು ಜಿಲ್ಲೆಯಲ್ಲಿ ರಾ.ಸ್ವ. ಸಂಘದ ಪ್ರಭಾವವಿದೆ. ಇದರಿಂದ ಸಂಸ್ಥೆಯ ಕಾರ್ಯಕ್ಕೆ ದೊಡ್ಡ ಅಡಚಣೆಯುಂಟಾಗುತ್ತಿದೆ. ಅಲ್ಲಿ ಉಚ್ಚ ದರ್ಜೆಯ ಅಧಿಕಾರಿಗಳಾಗಿರುವ ಅನೇಕ ಜನರು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿಯಾದರೂ ರಾ.ಸ್ವ. ಸಂಘದ ಪ್ರಭಾವದಲ್ಲಿದ್ದಾರೆ. ರಾ.ಸ್ವ. ಸಂಘದಿಂದಾಗಿ ಸಮಾಜದಲ್ಲಿರುವ ಅನೇಕ ವ್ಯಕ್ತಿಗಳಲ್ಲಿ ಹಿಂದೂ ಜನಜಾಗೃತಿ ಸಮಿತಿ ಹಾಗೂ ಸನಾತನ ಸಂಸ್ಥೆಯ ಬಗ್ಗೆ ತಪ್ಪು ತಿಳುವಳಿಕೆಯಿದೆ. ಆದ್ದರಿಂದ ಕಾರ್ಯದಲ್ಲಿ ಅಡಚಣೆಗಳು ಬರುತ್ತವೆ.
೨೬ ಡಿಸೆಂಬರ್ ೨೦೧೦ ರಂದು ತುಮಕೂರು ಜಿಲ್ಲೆಯಲ್ಲಿ ನಡೆದ ಪ್ರದರ್ಶನಕ್ಕೆ ರಾ.ಸ್ವ. ಸಂಘದ ಕೆಲವು ಸ್ವಯಂಸೇವಕರು ಭೇಟಿ ನೀಡಿದರು. ಆಗ ಅವರು ‘ನೀವು ಹಾಗೂ ನಾವು ಎಲ್ಲರೂ ಒಂದೇ ಆಗಿದ್ದೇವೆ. ನೀವು ನಿಮ್ಮ ಪತ್ರಿಕೆಯಲ್ಲಿ ನಮ್ಮ ವಿರುದ್ಧ ಬರೆಯಬೇಡಿ. (ಸನಾತನವು ಕಳೆದ ಕೆಲವು ತಿಂಗಳಿನಿಂದ ತನ್ನ ವರ್ತಮಾನ ಪತ್ರಿಕೆಯಲ್ಲಿ ಸಂಘದ ವಿರುದ್ಧ ಬರೆಯುತ್ತಿರಲಿಲ್ಲ. ಆದರೂ ಕೆಲವು ಸ್ವಯಂಸೇವಕರಿಂದ ಸನಾತನದ ಕಾರ್ಯಕ್ಕೆ ತೀವ್ರ ವಿರೋಧವಾಗುತ್ತಲಿದೆ. ಮಹಾರಾಷ್ಟ್ರದ ವಿದರ್ಭದಲ್ಲಿಯೂ ಕೆಲವು ಮುಖಂಡರು ಸನಾತನದ ೩೦೦ ಸತ್ಸಂಗಗಳನ್ನು ನಿಲ್ಲಿಸಿದರು, ಆ ವೇಳೆ ಸನಾತನವು ತನ್ನ ಯಾವುದೇ ಪತ್ರಿಕೆಯಲ್ಲಿ ಸಂಘದ ವಿರುದ್ಧ ಬರೆದಿರಲಿಲ್ಲ. ಹಾಗಾಗಿ ಈ ಸ್ವಯಂ ಸೇವಕರು ಈ ರೀತಿ ವಿರೋಧಿಸುವ ತಮ್ಮ ವರಿಷ್ಠರಿಗೆ ಮೊದಲು ತಿಳಿಸಿ ಹೇಳಬೇಕು. -ಸಂಪಾದಕರು)
(ಮುಂದುವರಿಯುವುದು)

ಸಾಧಕರಿಗೆ ಸೂಚನೆ ಮತ್ತು ವಾಚಕರಲ್ಲಿ ವಿನಂತಿ!

ಸಂಘ ಪರಿವಾರದಲ್ಲಿನ ಎಲ್ಲ ಸಂಘಟನೆಗಳ ಕಾರ್ಯದ ಬಗ್ಗೆ ಸನಾತನಕ್ಕೆ ಅತೀವ ಆದರವಿದೆ. ಆದರೂ ಕೆಲವು ಬೆರಳೆಣಿಕೆಯಷ್ಟು ಕಾರ್ಯಕರ್ತರಿಂದ ಹಿಂದೂ ಸಂಘಟನೆಗೆ ಹಾನಿಯಾಗಬಾರದು ಹಾಗೂ ಸಂಘಪರಿವಾರದ ಕಾರ್ಯಕರ್ತರಿಂದ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಗಳ ಅಪಪ್ರಚಾರಕ್ಕೆ ಸಂಬಂಧಿಸಿದಂತೆ ಧರ್ಮಾಭಿಮಾನಿ ಹಿಂದೂಗಳಿಗೆ ಎರಡೂ ಸಂಘಟನೆಗಳ ಅಭಿಪ್ರಾಯವು ತಿಳಿಯಬೇಕು ಹಾಗೂ ಸಂಘ ಪರಿವಾರದ ವರಿಷ್ಠ ನೇತಾರರು ಈ ಕಾರ್ಯಕರ್ತರಿಗೆ ತಿಳಿಸಿ ಹೇಳಬೇಕು ಎಂಬ ಏಕೈಕ ಉದ್ದೇಶದಿಂದ ಈ ವೃತ್ತಾಂತವನ್ನು ಇಲ್ಲಿ ಕೊಡುತ್ತಿದ್ದೇವೆ. ಇದರಲ್ಲಿ ಸಂಘ ಪರಿವಾರದ ಮಾನಹಾನಿ ಮಾಡುವ ಯಾವುದೇ ಉದ್ದೇಶವಿಲ್ಲ.
ಸಂಘ ಪರಿವಾರದ ಬಗ್ಗೆ ಒಳ್ಳೆಯ ಮತ್ತು ಕೆಟ್ಟ ಅನುಭವಗಳನ್ನು ತಿಳಿಸಿ!
ಸಂಘ ಪರಿವಾರದ ಕೆಲವು ಕಾರ್ಯಕರ್ತರಿಂದ ಮತ್ತು ಸ್ವಯಂಸೇವಕರಿಂದ ಕೆಲವು ಕಡೆಗಳಲ್ಲಿ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ಇವುಗಳ ಕಾರ್ಯದಲ್ಲಿ ಅಡಚಣೆ ತರಲಾಗುತ್ತಿದೆ. ಆದರೆ ಇನ್ನು ಕೆಲವು ಸ್ಥಳಗಳಲ್ಲಿ ಅವರು ಇವೆರಡು ಸಂಘಟನೆಗಳಿಗೆ ಸಹಾಯವನ್ನೂ ಮಾಡುತ್ತಿದ್ದಾರೆ. ಇಂತಹ ಅನೇಕ ಕಾರ್ಯಕರ್ತರಿಗೆ ಮತ್ತು ಸ್ವಯಂಸೇವಕರಿಗೆ ಸನಾತನ ಸಂಸ್ಥೆ ಮತ್ತು ಸಮಿತಿಯು ಸಮಾಜದಲ್ಲಿ ಪ್ರಸಾರ ಮಾಡುತ್ತಿರುವಾಗ ಅವರ ಕಾರ್ಯದಲ್ಲಿ ಸಂಘ ಪರಿವಾರದ ಕೆಲವು ಕಾರ್ಯಕರ್ತರಿಂದ ಆಗುತ್ತಿರುವ ವಿರೋಧವು ಒಪ್ಪಿಗೆಯಾಗುವುದಿಲ್ಲ. ಆದರೂ ಅವರು ಆದಷ್ಟು ಸಹಾಯ ವನ್ನು ಮಾಡುತ್ತಿದ್ದಾರೆ. ಸಂಘ ಪರಿವಾರದ ಈ ಕೆಲವು ಕಾರ್ಯಕರ್ತರ ಮತ್ತು ಮುಖಂಡರ ಈ ಅವಿವೇಕಿ ಭೂಮಿಕೆಯಿಂದ ಹಿಂದೂ ಸಂಘಟನೆಗಳ ಕಾರ್ಯಕ್ಕೆ ಹಾನಿಯಾಗುತ್ತಿದೆ. ಅದರ ಬಗ್ಗೆ ಇತರ ವರಿಷ್ಟ ಮುಖಂಡರು ವಿಚಾರ ಮಾಡಬೇಕು ಹಾಗೂ ಸನಾತನ ಮತ್ತು ಸಮಿತಿಯ ಭೂಮಿಕೆಯು ಸಂಘದ ವರಿಷ್ಠ ಮುಖಂಡರು ಮತ್ತು ಧರ್ಮಾಭಿಮಾನಿಗಳಿಗೆ ತಿಳಿಯಬೇಕು, ಎಂಬುದಕ್ಕಾಗಿ ವಿವಿಧ ಸ್ಥಳಗಳಲ್ಲಿ ಸಂಘ ಪರಿವಾರವು ಮಾಡಿದ ವಿರೋಧ ಮತ್ತು ಸಹಾಯದ ಮಾಹಿತಿಯನ್ನು ನೀಡುವ ಲೇಖನಮಾಲಿಕೆಯನ್ನು ಪ್ರಾರಂಭಿಸಿದ್ದೇವೆ. ಯಾವ ಹಿಂದುತ್ವವಾದಿಗಳಿಗೆ ಈ ಬಗ್ಗೆ ಸಂಘದ ಒಳ್ಳೆಯ ಮತ್ತು ಕೆಟ್ಟ ಅನುಭವ ಬಂದಿದ್ದರೆ ಅವರು ಅದನ್ನು ಸಮೀಪದ ‘ಸನಾತನ ಪ್ರಭಾತ’ದ ಕಾರ್ಯಾಲಯಕ್ಕೆ ಕಳುಹಿಸಬೇಕು.

No comments:

Post a Comment