ಜಾತ್ಯತೀತವಾದವು ‘ಭಾರತದ ಸತ್ತ್ವಗುಣಸಮೃದ್ಧ ಆಚಾರಸಂಹಿತೆಯನ್ನು ನಾಶ ...

ಪ.ಪೂ.ಡಾಕ್ಟರರು ಬರೆದ ‘ಭಾರತದ ಸಂವಿಧಾನ ಜಾತ್ಯತೀತವಾಗಿರುವುದರಿಂದ 
ಕಳೆದ ೬೩ ವರ್ಷಗಳಲ್ಲಿ ...’ ಈ ಲೇಖನದ ಬಗ್ಗೆ ‘ಓರ್ವ ವಿದ್ವಾಂಸರ’ ಭಾಷ್ಯೆ

ಜಾತ್ಯತೀತವಾದವು ‘ಭಾರತದ ಸತ್ತ್ವಗುಣಸಮೃದ್ಧ ಆಚಾರಸಂಹಿತೆಯನ್ನು 
ನಾಶ ಮಾಡಿರುವುದರಿಂದ ಈಶ್ವರೀ ರಾಜ್ಯ ಸ್ಥಾಪನೆಗೆ ಈಗ ಪರ್ಯಾಯವಿಲ್ಲ’ 
ಎಂಬ ಉದ್ಗಾರದಿಂದ ಪ.ಪೂ. ಡಾಕ್ಟರರು ಈ ನಿದ್ರಿತ ಹಿಂದೂಗಳಿಗೆ ಸ್ಪಷ್ಟ ಎಚ್ಚರಿಕೆ ನೀಡುವುದು!


ಡಾ.ಆಠವಲೆ: ‘ಭಾರತದ ಸಂವಿಧಾನವು ಜಾತ್ಯತೀತವಾಗಿರುವುದರಿಂದ ಕಳೆದ ೬೩ವರ್ಷಗಳಲ್ಲಿ ದೇಶವು ರಸಾತಳಕ್ಕೆ ತಲುಪಿತು. ಈಶ್ವರೀ ರಾಜ್ಯದಲ್ಲಿ ಅದು ಧರ್ಮಾಧಿಷ್ಠಿತವಾಗಿರುವುದರಿಂದ ಭಾರತಕ್ಕೆ ಪುನಃ ಹಿಂದಿನ ಸುವರ್ಣಕಾಲವು ಪ್ರಾಪ್ತವಾಗುವುದು!’ (ಚೈತ್ರ ಹುಣ್ಣಿಮೆ/ಕೃ.೧, ಕಲಿಯುಗ ವರ್ಷ ೫೧೧೨ (೩೦.೩.೨೦೧೦))

೨.‘ಓರ್ವ ವಿದ್ವಾಂಸರ ಭಾಷ್ಯೆ
೨ಅ.ಧರ್ಮಾಧಿಷ್ಠದ ಅರ್ಥ: ಧರ್ಮಾಧಿಷ್ಠವೆಂದರೆ ಸುಸಂಸ್ಕಾರ.
೨ಆ.ಸುಸಂಸ್ಕಾರದ ಅರ್ಥ: ಸುಸಂಸ್ಕಾರವೆಂದರೆ ಸಂಸ್ಕೃತಿಜನ್ಯ ಆಚಾರ ಹಾಗೂ ವಿಚಾರವು ಚಿತ್ತದ ಮೇಲೆ ಅಚ್ಚೊತ್ತಿ ಜೀವದಿಂದ ಅದರಂತೆ ಕೃತಿ ಹಾಗೂ ಕರ್ಮ ಸಂಗ್ರಹ ಮಾಡುವುದು. ಈ ಪ್ರಕ್ರಿಯೆಯಿಂದ ಉತ್ಪನ್ನವಾಗುವ ಪುಣ್ಯ ಸಂಗ್ರಹದಿಂದ ಒಂದು ದಿನ ಜೀವವು ನರಜನ್ಮದಿಂದ ಮುಕ್ತವಾಗುತ್ತದೆ.

೨ಇ.ಭಾರತದ ಜಾತ್ಯತೀತ ಸಂವಿಧಾನವು ಮಾಡಿದಂತಹ ಸತ್ತ್ವ ಗುಣದ ನಾಶ ಹಾಗೂ ಈ ಪ್ರಕ್ರಿಯೆಯ ಪರಿಣಾಮ ಜನ್ಯ ಹಂತ
೧.ಭಾರತದ ಸಂವಿಧಾನದಲ್ಲಿ ಅಧರ್ಮದ ಕುಸಂಸ್ಕರಣವಾದುದರಿಂದ ಭಾರತದಲ್ಲಿನ ಹೆಚ್ಚು ಕಡಿಮೆ ಇಡೀ ಮಾನವ ಕುಲವು ಭ್ರಷ್ಟವಾಗಿದೆ.
೨.ತನು, ಮನ ಹಾಗೂ ಧನದ ಸ್ತರದಲ್ಲಿ ಮಾನವನು ಭ್ರಷ್ಟನಾದಾಗ ಅವನು ನಿಜವಾದ ಅರ್ಥದಲ್ಲಿ ‘ದುರ್ಜನ’ನೆಂದು ಪರಿಗಣಿಸಲ್ಪಡುತ್ತಾನೆ.
೩.ತನುವಿನ ಭ್ರಷ್ಟತೆಯು ಕೃತಿಯ ಸ್ತರದಲ್ಲಿರುತ್ತದೆ. ಮನಸ್ಸಿನ ಭ್ರಷ್ಟತೆಯು ವಿಚಾರದಲ್ಲಿರುತ್ತದೆ, ಧನದ ಭ್ರಷ್ಟತೆಯು ಲೋಭದಲ್ಲಿರುತ್ತದೆ. ಈ ಮೂರು ಸ್ತರದಲ್ಲಿ ರಾಜ್ಯಾಡಳಿತ ಪಾಪಿಯಾಗಿದೆ.
೪.ಕುಸಂಸ್ಕಾರ, ಅಂದರೆ ಚಿತ್ತದ ಮೇಲಿನ ಸತ್ತ್ವಗುಣಾತ್ಮಕ ಬೀಜವು ಕ್ಷಯವಾಗಿ ಅಲ್ಲಿ ರಜ-ತಮಾತ್ಮಕ ಬೀಜ ಧಾರಣೆಯ ನಿರ್ಮಿತಿಯಾಗುತ್ತದೆ.
೫.ಕುಸಂಸ್ಕಾರದಲ್ಲಿ ಹಿಂದೂ ಧರ್ಮದ ವಿರುದ್ಧದ ನುಡಿಗಳು, ವಿಚಾರಗಳ ರೂಪದಲ್ಲಿ ಚಿತ್ತಪಟಲದಲ್ಲಿ ಕುಸಂಸ್ಕರಣವಾಗುತ್ತದೆ. ಇದರಿಂದ ಜೀವವು ಅಸುರರ ಕೈಯಲ್ಲಿನ ಬೆದರುಗೊಂಬೆಗಳಾಗುತ್ತದೆ. ಈ ಬೆದರುಗೊಂಬೆಯು ಅನೇಕಾಧಿಕಾರಿಗಳಿಂದ ಜನತಾಜನಾರ್ಧನನನ್ನು ದೋಚಲು ನೋಡುತ್ತದೆ. ಇದರಿಂದಲೇ ರಾಜ್ಯಾಡಳಿತದ ಭ್ರಷ್ಟ ಕಾರ್ಯಪದ್ಧತಿಯ ಉದಯವಾಗುತ್ತದೆ. 
೬.ಸರಕಾರವು ಸ್ವೇಚ್ಛೆಯಿಂದ ರಾಜ್ಯಾಡಳಿತವನ್ನು ನಡೆಸುತ್ತದೆ; ಆದುದರಿಂದ ಅದರಲ್ಲಿ ಅಹಂಕಾರದ ಗಾಳಿಯು ನುಸುಳಲು ಸಮಯ ತಗಲುವುದಿಲ್ಲ.
೭.ಅಹಂಕಾರದಿಂದ ಮನುಷ್ಯನ ವಿಚಾರವಂತಿಕೆಯು ಕ್ಷೀಣಿಸಿ ರಜ-ತಮದ ಸ್ತರದಲ್ಲಿ ದೃಷ್ಟಿಯೆದುರು ಅಂಧಕಾರಮಯ ಜಗತ್ತಿನ ಉದಯವಾದುದರಿಂದ ಒಂದು ದಿನ ಇದರಿಂದ ದೊಡ್ಡ ದುರ್ಜನವೃತ್ತಿಯು ಜನಿಸುತ್ತದೆ.
೮.ಈಗಿನ ಸರಕಾರವು ಸ್ವಾರ್ಥಿಯಾಗಿರುವುದರಿಂದ ಹಾಗೂ ಸರಕಾರ ನಡೆಸುವವರಿಗೆ ತ್ಯಾಗದ ಮಹತ್ವ ಗೊತ್ತಿಲ್ಲದ ಕಾರಣ ಸ್ವಾರ್ಥದಿಂದ ಅವರ 
ಪಾಪದ ಕೊಡ ತುಂಬುವ ಕಾರ್ಯವು ಅಖಂಡವಾಗಿ ನಡೆಯುತ್ತಿದೆ.
೨ಈ.ಈಶ್ವರೀ ರಾಜ್ಯದಲ್ಲಿ ಶಿಸ್ತು ಹಾಗೂ ಅದರಿಂದ ಭಾರತಕ್ಕೆ ಸುವರ್ಣ ಕಾಲವು ಪ್ರಾಪ್ತವಾಗುವ ಕಾರಣಗಳು
೧.ಶಿಸ್ತು ಅಂದರೆ ಅನುಕರಣೀಯ ಆಡಳಿತ. ಕೇವಲ ಈಶ್ವರೀ ರಾಜ್ಯ ಇಂತಹ ಆಡಳಿತದಲ್ಲಿರುವುದು; ಏಕೆಂದರೆ ಈ ಸರಕಾರವು ಸಾಧಕರಿಂದ ಸಂತರ ಆಶೀರ್ವಾದದ ಸಹಾಯದಿಂದ ನಡೆಸಲಾಗುವುದರಿಂದ ಇದರಲ್ಲಿ ಸತ್ತ್ವಗುಣವೃದ್ಧಿಯ ನಿರ್ಮಿತಿಯಾಗುತ್ತದೆ.
೨.ಇದರಿಂದ ಕಾಲವೂ ಸ್ಥಳಕ್ಕೆ, ಅಂದರೆ ಕಾರಣಜನ್ಯ ಪರಿಸ್ಥಿತಿಗೆ ಅನುಕೂಲವಾಗುವುದರಿಂದ ಸಾಧನೆಗೆ ಪೋಷಕ ವಾತಾವರಣವು ನಿರ್ಮಾಣವಾಗಿ ಪ್ರಜೆಗಳು ಆನಂದದಲ್ಲಿರುವರು.
೩.ಧರ್ಮಾಧಿಷ್ಠತೆಯಿಂದ ಕಾಲದ ಶಕ್ತಿಯು ಸ್ಥಳಕ್ಕೆ ಪ್ರದಾನವಾಗುವುದರಿಂದ ಪ್ರತಿಯೊಂದು ಕರ್ಮದಿಂದ ಯಶಸ್ಸು ಖಂಡಿತವಾಗಿ ಸಿಗುತ್ತದೆ; ಏಕೆಂದರೆ ಕಾಲ ಇದು ಸದಾಕಾಲ ಯಶಸ್ಸಿನ ಶಿಖರದಲ್ಲಿರುತ್ತದೆ.
೪.ಧರ್ಮದಲ್ಲಿ ಹೇಳಿದಂತಹ ನೈತಿಕ ಮೌಲ್ಯಗಳು ವರ್ಣಕ್ಕನುಸಾರ ಹಾಗೂ ಅವರ ಸಾಧನೆಯ ಮಾರ್ಗಕ್ಕನುಸಾರವಾಗಿ ಆಯಾ ಪ್ರಕೃತಿಧರ್ಮದಂತೆ ಕಾಲವನ್ನೇ ಗುರು ಮಾಡುವಂತಹದ್ದಾಗಿದೆ.
೫.ಧರ್ಮಾಧಿಷ್ಠಿತ ಆಚಾರದ ಪಾಲನೆಯಿಂದ ದೇಹದಲ್ಲಿ ಕರ್ಮಯೋಗದ ಸಂವರ್ಧನೆಯಾಗಿ ಜೀವ ಕೃತಿಮುಕ್ತವಾಗುತ್ತದೆ.
೬.ಭಕ್ತಿಯಿಂದ ಭಾವವು ಹೆಚ್ಚಾಗುವುದರಿಂದ ಜೀವವು ಕರ್ಮಮುಕ್ತವಾಗಲು ಸಹಾಯವಾಗುತ್ತದೆ; ಏಕೆಂದರೆ ದೇಹದಲ್ಲಿ ನಿರ್ಮಾಣವಾದ ಭಾವಶಕ್ತಿಯಿಂದ ವಿಚಾರಗಳ ಶುದ್ಧೀಕರಣವಾಗುತ್ತದೆ.
೨ಉ.ಭಾರತದ ಸಂವಿಧಾನವು ದೇಶಕ್ಕೆ ಸುವರ್ಣಕಾಲ ನೀಡಲು ಸಾಧ್ಯವಾಗದಿರುವ ಕಾರಣಗಳು
೧.ಭಾರತದ ಸಂವಿಧಾನದಲ್ಲಿ ಹೇಳಿದಂತಹ ನಿಯಮ ಮಾನವನ ಬುದ್ಧಿಸಂಗ್ರಹ ರೂಪಿ ಶಕ್ತಿಯ ಸ್ವೇಚ್ಛಾನಿರ್ಮಿತ ವಿಚಾರ ರೂಪಿ ಪ್ರಭಾವದೊಂದಿಗೆ ಸಂಬಂಧಿಸಿರುವುದರಿಂದ ಅದು ರಾಜ್ಯಾಡಳಿತ ನಡೆಸಲು ವ್ಯರ್ಥವಾಯಿತು; ಕಾರಣ ಇದರಲ್ಲಿ ಚೈತನ್ಯರೂಪಿ ಆಚಾರಗಳ ಅಭಾವವಿತ್ತು.
೨.ಕೇವಲ ಚೈತನ್ಯವು ಯಾವುದಾದರೊಂದು ಘಟಕದಲ್ಲಿನ ಚೇತನವನ್ನು ವರ್ಷಾನುವರ್ಷ ಉಳಿಸಿಕೊಳ್ಳಬಹುದು. ಚೇತನವಿಲ್ಲದಲ್ಲಿ ಶಾಶ್ವತವು ಉದಯಿಸಲು ಸಾಧ್ಯವಿಲ್ಲ. ಜಾತ್ಯತೀತ ಸಂವಿಧಾನದ ವಿಷಯದಲ್ಲಿ ಇದೇ ರೀತಿಯಾಯಿತು.
೩.ಜಾತ್ಯತೀತ ಸಂವಿಧಾನವು ಜನರನ್ನು ಭ್ರಷ್ಟತೆಯಿಂದ ಕೂಡಿರುವ ಪ್ರಜಾಪ್ರಭುತ್ವವನ್ನು ನೀಡಿರುವುದರಿಂದ ಭಾರತದಲ್ಲಿ ಸುವರ್ಣಕಾಲವಿತ್ತೆಂದು ಕೇವಲ ಪುಸ್ತಕದ ಹಾಳೆಯ ಮೇಲೆ ಬರೆಯುವುದಕ್ಕಷ್ಟೇ ಸೀಮಿತವಾಗಿದೆ.
೪.ಜಾತ್ಯತೀತವಾದವು ಭಾರತದಲ್ಲಿನ ಸತ್ತ್ವಗುಣಸಮೃದ್ಧ ಆಚಾರಸಂಹಿತೆಯನ್ನು ಕ್ಷೀಣಿಸಿದ್ದರಿಂದ ‘ಈಶ್ವರೀ ರಾಜ್ಯ ಸ್ಥಾಪನೆ ಯಾಗದೇ ಬೇರೆ ಪರ್ಯಾಯವಿಲ್ಲ’ ಎಂದು ಪ.ಪೂ.ಡಾಕ್ಟರರು ಹೇಳಿರುವರು ಹಾಗೂ ಈಶ್ವರೀ ರಾಜ್ಯದ ರೂಪದಲ್ಲಿ ಮಾನವರಿಗೆ ಸತ್ತ್ವಗುಣದ ಸಹಾಯದಿಂದ ಉರ್ಜಿತಾವಸ್ಥೆಯು ಬಂದು ಅದಕ್ಕೆ ಸುವರ್ಣಕಾಲವು ಪ್ರಾಪ್ತವಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
(ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ಅಧಿಕ ವೈಶಾಖ ಶು. ೧೧, ಕಲಿಯುಗ ವರ್ಷ ೫೧೧೨ (೨೫.೪.೨೦೧೦), ಮಧ್ಯಾಹ್ನ ೧.೫೯)

No comments:

Post a Comment