ಸಾಂಸ್ಕೃತಿಕ ಸ್ಮಾರಕ ಲಭಿಸಿದ ಹಂಪಿ ಮೇಲಿನ ಅತಿಕ್ರಮಣ ತೆರವುಗೊಳಿಸಿ!

ಸರಕಾರಕ್ಕೆ ಉಚ್ಚ ನ್ಯಾಯಾಲಯದ ತಾಕೀತು
  ಸಾಂಸ್ಕೃತಿಕ ಸ್ಮಾರಕ ಲಭಿಸಿದ ಹಂಪಿ ಮೇಲಿನ ಅತಿಕ್ರಮಣ ತೆರವುಗೊಳಿಸಿ!
ಬೆಂಗಳೂರು: ಸಾಂಸ್ಕೃತಿಕ ಸ್ಮಾರಕ ಲಭಿಸಿರುವ ಹಂಪಿ ಮೇಲಿನ ಅತಿಕ್ರಮಣದ ಬಗ್ಗೆ ಕರ್ನಾಟಕ ಉಚ್ಚ ನ್ಯಾಯಾಲಯವು ಕಳವಳ ವ್ಯಕ್ತಪಡಿಸಿದೆ. ಈ ಅತಿಕ್ರಮಣವನ್ನು ತೆರವುಗೊಳಿಸಬೇಕು ಮತ್ತು ಅದರ ಬಗ್ಗೆ ನ್ಯಾಯಾಲಯಕ್ಕೆ ವರದಿಯನ್ನು ಒಪ್ಪಿಸಬೇಕು ಎಂದು ಉಚ್ಚ ನ್ಯಾಯಾಲಯವು ಸರಕಾರಕ್ಕೆ ಆದೇಶಿಸಿದೆ. ವಿಧಾನಸೌಧದ ಮೇಲೆ ಯಾರಾದರೂ ಅತಿಕ್ರಮಣ ಮಾಡಿದರೆ ಸರಕಾರ ಅದನ್ನು ಒಪ್ಪಿಕೊಳ್ಳುವುದೇ? ‘ಹಂಪಿ ನಮಗೆ ವಿಧಾನಸೌಧದಂತಿದೆ’ ಎಂದು ನ್ಯಾಯಾಲಯವು ಹೇಳಿದೆ. ಅತಿಕ್ರಮಣದಿಂದ ಹಂಪಿಯ ಸಾಂಸ್ಕೃತಿಕ ಸ್ಮಾರಕ ನಾಶವಾಗುತ್ತಿದೆ. ಹಂಪಿ ‘ಕಳ್ಳರ ಬಿಡಾರ’ವಾಗಿದೆ ಎಂದು ಮುಖ್ಯ ನ್ಯಾಯಾಧೀಶ ಜೆ.ಎಸ್.ಖೆಹರ ಹಾಗೂ ನ್ಯಾಯಾಧೀಶ ಎ.ಎಸ್.ಬೋಪನ್ನರ ವಿಭಾಗೀಯ ಪೀಠವು ಆಕ್ರೋಶ ವ್ಯಕ್ತಪಡಿಸಿದೆ. (ಎಲ್ಲ ಸಂಗತಿಗಳನ್ನು ನ್ಯಾಯಾಲಯ ಹೇಳಬೇಕೆಂದರೆ ಸರಕಾರವೆಂಬ ಬಿಳಿ ಆನೆ ಏಕೆ ಸಾಕಬೇಕು ? - ಸಂಪಾದಕರು)

No comments:

Post a Comment