ಬಿಲ್ವಪತ್ರೆ: ಶಿವಲಿಂಗದಲ್ಲಿ ಆಹತ (ಶಿವಲಿಂಗದ ಮೇಲೆ ಬೀಳುವ ನೀರಿನ ಘರ್ಷಣೆಯಿಂದ ಉಂಟಾಗುವ) ನಾದ ಮತ್ತು ಅನಾಹತ (ಸೂಕ್ಷ್ಮ) ನಾದ ಹೀಗೆ ೨ ಪವಿತ್ರಕಗಳಿರುತ್ತವೆ. ಈ ಎರಡು ಪವಿತ್ರಕಗಳು ಮತ್ತು ಬಿಲ್ವಪತ್ರೆಯಲ್ಲಿನ ಪವಿತ್ರಕ ಹೀಗೆ ಮೂರು ಪವಿತ್ರಕಗಳನ್ನು ಆಕರ್ಷಿಸಲು ೩ ಎಲೆಗಳುಳ್ಳ ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸುತ್ತಾರೆ. ಎಳೆಯ ಬಿಲ್ವಪತ್ರೆಯು ಆಹತ (ನಾದಭಾಷೆ) ಮತ್ತು ಅನಾಹತ (ಪ್ರಕಾಶ ಭಾಷೆ) ಧ್ವನಿಗಳನ್ನು ಒಂದುಗೂಡಿಸಬಲ್ಲದು. ಬಿಲ್ವಪತ್ರೆಯನ್ನು ಶಿವಲಿಂಗದ ಮೇಲೆ ಕೆಳಮುಖವಾಗಿಟ್ಟು ತೊಟ್ಟನ್ನು ನಮ್ಮ ಕಡೆಗೆ ಬರುವಂತೆ ಅರ್ಪಿಸುತ್ತಾರೆ. ಹೀಗೆ ಮಾಡುವುದರಿಂದ ಮೂರೂ ಎಲೆಗಳಿಂದ ಒಟ್ಟಿಗೆ ಬರುವ ಶಕ್ತಿಯು ನಮ್ಮ ಕಡೆಗೆ ಬರುತ್ತದೆ. ಈ ಮೂರೂ ಪವಿತ್ರಕಗಳ ಒಟ್ಟು ಗೂಡಿದ ಶಕ್ತಿಯಿಂದ ತ್ರಿಗುಣಗಳು ಕಡಿಮೆಯಾಗಲು ಸಹಾಯವಾಗುತ್ತದೆ.
ಬಿಲ್ವಪತ್ರೆಯಲ್ಲಿ ಶೇ.೨ರಷ್ಟು ಶಿವತತ್ತ್ವವಿರುತ್ತದೆ. ಶಿವಲಿಂಗಕ್ಕೆ ಬಿಲ್ವ ಪತ್ರೆಯನ್ನು ಅರ್ಪಿಸಿದಾಗ ಬಿಲ್ವಪತ್ರೆಯ ತುಂಬಿ(ತೊಟ್ಟಿ)ನಲ್ಲಿ ಸಗುಣ ಶಿವತತ್ತ್ವವು ಜಾಗೃತವಾಗಿ ಅದರಿಂದ ಚೈತನ್ಯ ಮತ್ತು ಶಿವತತ್ತ್ವವು ಪ್ರಕ್ಷೇಪಿತವಾಗತೊಡಗುತ್ತದೆ. ಬಿಲ್ವವು ಶಿವಲಿಂಗದಲ್ಲಿರುವ ಶೇ.೫ (೨*) ರಷ್ಟು ಶಿವತತ್ತ್ವವನ್ನು ತನ್ನಲ್ಲಿ ಹೀರಿಕೊಳ್ಳುತ್ತದೆ. ನೀರಿನಲ್ಲಿ, ಧಾನ್ಯಗಳಲ್ಲಿ ಶಿವತತ್ತ್ವದಿಂದ ತುಂಬಿದ ಬಿಲ್ವಪತ್ರೆಗಳನ್ನು ಹಾಕಿಟ್ಟರೆ ಅದರಲ್ಲಿನ ಶಿವತತ್ತ್ವವು ಅವುಗಳಲ್ಲಿಯೂ ಸೇರುತ್ತದೆ. - ಈಶ್ವರ (ಕು.ಮಧುರಾ ಭೋಸಲೆಯವರ ಮಾಧ್ಯಮದಿಂದ ೫.೨.೨೦೦೫, ಮಧ್ಯಾಹ್ನ ೨.೫೦ ರಿಂದ ೩.೪೪)
*ಕೆಟ್ಟಶಕ್ತಿಗಳು ಹೇಳಿದ ತಪ್ಪು ಮಾಹಿತಿ
ಬಿಲ್ವಾರ್ಚನೆ: ‘ಓಂ ನಮಃ ಶಿವಾಯ’ ಈ ಮಂತ್ರವನ್ನು ಜಪಿಸುತ್ತಾ ಅಥವಾ ಭಗವಾನ್ ಶಂಕರನ ಒಂದು ಹೆಸರನ್ನು ಉಚ್ಚರಿಸುತ್ತಾ ಒಂದೊಂದೆ ಬಿಲ್ವಪತ್ರೆಯನ್ನು ಶಿವಲಿಂಗಕ್ಕೆ ಅರ್ಪಿಸುವುದನ್ನು ಬಿಲ್ವಾರ್ಚನೆ ಎನ್ನುತ್ತಾರೆ. ಬಿಲ್ವಪತ್ರೆಗಳನ್ನು ಇಡೀ ಶಿವಲಿಂಗವು ಪೂರ್ತಿಯಾಗಿ ಮುಚ್ಚುವಂತೆ ಅರ್ಪಿಸಬೇಕು. ಬಿಲ್ವಪತ್ರೆಗಳನ್ನು ಮೂರ್ತಿಯ ಚರಣಗಳಿಂದ (ಲಿಂಗದ ಕೆಳಭಾಗದಿಂದ) ಅರ್ಪಿಸಲು ಪ್ರಾರಂಭಿಸಿ ಮೇಲ್ಬದಿಗೆ ಹೋಗಬೇಕು. ಇದರಿಂದ ಬಿಲ್ವಾರ್ಚನೆಯನ್ನು ಚರಣಗಳಿಂದ ಪ್ರಾರಂಭಿಸಿದ ಲಾಭವಾಗುತ್ತದೆ. ಅಲ್ಲದೇ ಬಿಲ್ವಪತ್ರೆಗಳನ್ನು ಸರಿಯಾಗಿ ಅರ್ಪಿಸಿ ಇಡೀ ಮೂರ್ತಿಯನ್ನು ಮುಚ್ಚಲು ಸಾಧ್ಯವಾಗುತ್ತದೆ. - ಬ್ರಹ್ಮತತ್ತ್ವ
No comments:
Post a Comment