ಮುಂಬೈ ವಿದ್ಯಾಪೀಠದಲ್ಲಿ ಸತ್ಯನಾರಾಯಣ ಪೂಜೆಯ ನಂತರ ಮದ್ಯದ ಮೇಜವಾನಿ!

ಮುಂಬೈ : ಮುಂಬೈ ವಿದ್ಯಾಪೀಠದ ಕಾಲಿನಾ ಎಂಬಲ್ಲಿನ ಪರೀಕ್ಷಾ ಕೊಠಡಿಯಲ್ಲಿ ಸತ್ಯನಾರಾಯಣ ಮಹಾಪೂಜೆಯನ್ನು ಆಯೋಜಿಸಲಾಗಿತ್ತು. ಸತ್ಯನಾರಾಯಣ ಪೂಜೆಯ ನಂತರ ಈ ಪರೀಕ್ಷೆಯ ಕೊಠಡಿಯ ಹತ್ತಿರದ ಉಪಹಾರಗೃಹದ ಮಾಳಿಗೆಯಲ್ಲಿ ಮದ್ಯದ ಮೇಜವಾನಿ ಏರ್ಪಡಿಸಿದ್ದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಇದರಲ್ಲಿ ವಿದ್ಯಾಲಯದ ಸಿಬ್ಬಂದಿಗಳು ಪಾಲ್ಗೊಂಡಿದ್ದರು. (ಜ್ಞಾನದಾನ ಮಾಡುವ ವಿದ್ಯಾಪೀಠದಂತಹ ಪವಿತ್ರ ಕ್ಷೇತ್ರದಲ್ಲಿ ಸತ್ಯನಾರಾಯಣ ಮಹಾಪೂಜೆಯ ಸಮಯದಲ್ಲಿ ಮದ್ಯದ ಮೇಜವಾನಿ ನಡೆಸಲಾಗುತ್ತದೆ. ಇದರಿಂದ ಶಿಕ್ಷಣ ಕ್ಷೇತ್ರದ ನೈತಿಕತೆಯು ಎಷ್ಟು ಕೀಳುಮಟ್ಟಕ್ಕೆ ಇಳಿದಿದೆ ಎಂಬುದು ಸಿದ್ಧವಾಗುತ್ತದೆ. ಜಾತ್ಯತೀತ ರಾಜಕಾರಣಿಗಳು ಹಿಂದೂಗಳನ್ನು ಧರ್ಮ ಶಿಕ್ಷಣದಿಂದ ವಂಚಿತಗೊಳಿಸುವುದರ ದುಷ್ಪರಿಣಾಮವಾಗಿದೆ. ಇದನ್ನು ತಡೆಗಟ್ಟಲು ಧರ್ಮಪ್ರೇಮಿ ರಾಜಕಾರಣಿಗಳು ಆಡಳಿತದಲ್ಲಿ ಬರದೇ ಪರ್ಯಾಯವಿಲ್ಲ. - ಸಂಪಾ ದಕರು)‘ಮಹಾರಾಷ್ಟ್ರ ನವ ನಿರ್ಮಾಣ ವಿದ್ಯಾರ್ಥಿ ಸೇನೆ’ಗೆ ಈ ಪ್ರಕರಣದ ಬಗ್ಗೆ ತಿಳಿಯುತ್ತಲೇ ವಿದ್ಯಾಪೀಠಕ್ಕೆ ದಾಳಿ ನಡೆಸಿ ಇದನ್ನು ತಡೆದರು. ಈ ಪ್ರಕರಣದ ಮಾಹಿತಿ ಯನ್ನು ಅವರು ಪೊಲೀಸರಿಗೂ ನೀಡಿದರು.
ಎಲ್ಲೆಲ್ಲಿ ಹಿಂದೂಭಾವ ಲೋಪವಾಗಿದೆಯೋ ಅಲ್ಲಿ ಭಾರತ ದುರ್ಬಲವಾಗಿದೆ.’ - ಮೋಹನ ಭಾಗವತ (ಅಭಯ ಭಾರತ)

No comments:

Post a Comment