‘ಶಾಲಿಮಾರ ಪೇಂಟ್ಸ್’ ಡಬ್ಬಗಳ ಮೇಲೆ ಹಿಂದೂದ್ವೇಷಿ ಮ.ಫಿ. ಹುಸೇನ ಬಿಡಿಸಿದ ಚಿತ್ರ

ಹಿಂದೂ ಜನಜಾಗೃತಿ ಸಮಿತಿಯ ವಿರೋಧ
ಮುಂಬೈ : ಹಿಂದೂದ್ವೇಷಿ ಚಿತ್ರಕಾರ ಮಕ್ಬುಲ ಫಿದಾ ಹುಸೇನನು ಬಿಡಿಸಿದ ಚಿತ್ರಗಳನ್ನು ‘ಶಾಲಿಮಾರ ಪೇಂಟ್ಸ್’ ಎಂಬ ಬಣ್ಣದ ಡಬ್ಬಿಗಳ ಮೇಲೆ ಮುದ್ರಿಸಲಾಗಿದೆ. (ಇತರ ಪಂಥದವರ ಧಾರ್ಮಿಕ ಭಾವನೆಯನ್ನು ನೋಯಿಸುವವರನ್ನು ವೈಭವೀಕರಿಸುವ ಧೈರ್ಯವನ್ನು ಯಾರಾದರೂ ತೋರಿಸುವರೇ? ಹಿಂದೂಗಳು ಸಂಘಟಿತರಿಲ್ಲದ್ದರಿಂದ ಹಿಂದೂದ್ವೇಷಿಗಳು ಧೈರ್ಯದಿಂದ ವಿಜೃಂಭಿಸುತ್ತಿದ್ದಾರೆ. ಈ ದುಷ್ಕೃತ್ಯವನ್ನು ಎಲ್ಲ ಹಿಂದೂಗಳು ಸಂಘಟಿತರಾಗಿ ಕಾನೂನುಮಾರ್ಗದಿಂದ ಪ್ರತಿಭಟಿಸುವರೇ ? - ಸಂಪಾದಕರು) ಆ ಮೂಲಕ ಹಿಂದೂಗಳ ಧಾರ್ಮಿಕ ಭಾವನೆ ನೋಯಿಸಿದ್ದರಿಂದ ಹಿಂದೂ ಜನಜಾಗೃತಿ ಸಮಿತಿಯು ಅದನ್ನು ವಿರೋಧಿಸಿದೆ.
‘ಶಾಲಿಮಾರ ಪೇಂಟ್ಸ್’ ಕಂಪನಿಯು ‘ಹುಸೇನ ಎಮಲ್ಶನ್ ಪೇಂಟ್ಸ್ ಸೀರಿಸ್’ ಎಂಬ ಹೆಸರಿನಲ್ಲಿ ಬಣ್ಣದ ಡಬ್ಬಿಗಳನ್ನು ಮಾರಾಟಕ್ಕೆ ತಂದಿವೆ. ಇದರ ಮಾಹಿತಿ ತಿಳಿಯುತ್ತಲೇ ಹಿಂದೂ ಜನಜಾಗೃತಿ ಸಮಿತಿಯು ಮುಂಬೈ, ಠಾಣೆ ಮತ್ತು ರಾಯಗಡ ಜಿಲ್ಲೆಗಳ ಸಮನ್ವಯಕರಾದ ಶ್ರೀ. ಶಿವಾಜಿ ವಟಕರ ಇವರು ಶಾಲಿಮಾರ್ ಪೇಂಟ್ಸ್‌ದ ಕಾರ್ಯಾಲಯವನ್ನು ಸಂಪರ್ಕಿಸಿ ವಿ-ಅಂಚೆ ಮೂಲಕ ಖಂಡನಾ ಪತ್ರವನ್ನು ಕಳುಹಿಸಿದರು; ಆದರೆ ಅವರಿಂದ ಯಾವುದೇ ಬೆಂಬಲ ದೊರಕಲಿಲ್ಲ. ಆದುದರಿಂದ ಶ್ರೀ. ವಟಕರ, ಶ್ರೀ. ಸತೀಶ ಸೋನಾರ ಮತ್ತು ಅಶೋಕ ಗಾಯಕವಾಡರವರು ಜನವರಿ ೧೭ ರಂದು ಶಾಲಿಮಾರ್ ಪೇಂಟ್ಸ್‌ನ ಅಂಧೇರಿ (ಮುಂಬೈ)ಯ ಕಾರ್ಯಾಲಯದಲ್ಲಿ ವಿತರಣೆಯ ವ್ಯವಸ್ಥಾಪಕರಾದ ಶ್ರೀ. ಅಲ್ಹಾದ ವಾಡೇಕರ ಇವರನ್ನು ಭೇಟಿಯಾದರು. ಆ ಸಮಯದಲ್ಲಿ ಅವರಿಗೆ ಸಮಿತಿಯು ಹುಸೇನ ವಿರುದ್ಧ ಮಾಡಿದ ಕಾನೂನುಬದ್ಧ ಚಳುವಳಿಯ ಮಾಹಿತಿಯನ್ನು ಕೊಡಲಾಯಿತು. ‘ತಾವು ಇಂತಹ ಚಿತ್ರಗಳನ್ನು ಮುದ್ರಿಸಿ ಹುಸೇನನಿಗೆ ಗೌರವ ಕೊಡುತ್ತಿದ್ದೀರಿ. ಇದು ಹಿಂದೂಗಳಿಗೆ ಅವಮಾನಕಾರಿಯಾಗಿದೆ. ಅದರಿಂದ ಇಂತಹ ಬಣ್ಣದ ಡಬ್ಬಿಗಳ ಉತ್ಪಾದನೆಯನ್ನು ನಿಲ್ಲಿಸಬೇಕು ಮತ್ತು ಎಲ್ಲ ಹಿಂದೂಗಳ ಕ್ಷಮೆ ಕೇಳಬೇಕು’, ಎಂದು ಪತ್ರದ ಮೂಲಕ ಬೇಡಿಕೆ ಸಲ್ಲಿಸಲಾಯಿತು.
ಹಿಂದೂದ್ವೇಷಿಗಳ ವಿರುದ್ಧ ಹಿಂದೂಗಳ ಆಕ್ರೋಶ ಮುಗಿಲುಮುಟ್ಟಿದ್ದು ಅವರು ಈ ಉತ್ಪಾದನೆಗಳನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
ಹಿಂದೂಗಳು ಮುಂದಿನ ಸಂಪರ್ಕ ಕ್ರಮಾಂಕ ಮತ್ತು ವಿ-ಅಂಚೆಯ ವಿಳಾಸಕ್ಕೆ ನಿಷೇಧವನ್ನು ವ್ಯಕ್ತಪಡಿಸುತ್ತಿದ್ದಾರೆ.
ಶಾಲಿಮಾರ್ ಪೇಂಟ್ಸ್ ಲಿಮಿಟೆಡ್, ‘ಸಿ’ ವಿಂಗ್, ೫ ನೇ ಮಹಡಿ, ಓಬೇರಾಯ ಗಾರ್ಡನ್ ಎಸ್ಟೇಟ್, ಚಾಂದಿವಲಿ ಫಾರ್ಮ್ ರೋಡ್, ಚಾಂದಿವಲಿ, ಅಂಧೇರಿ (ಪೂರ್ವ), ಮುಂಬೈ ೪೦೦೦೭೨ ದೂರವಾಣಿ ಕ್ರಮಾಂಕ :  ೦೨೨-೨೮೫೭೬೧೪೭, ೨೮೫೭೪೦೪೩ ಫ್ಯಾಕ್ಸ್ ಕ್ರ.: ೦೨೨ ೨೮೫೭೩೭೨೫
ವಿ-ಅಂಚೆ : info@shalimarpaints.com, splcorp@shalimarpaints.com

No comments:

Post a Comment