ಕರ್ನಾಟಕ
ಜನವರಿ ೮ : ಹಿಂದೂದ್ವೇಷಿ ಕಳ್ಳರು ಕೆಂಜಾರು ಎಂಬಲ್ಲಿನ ಶ್ರೀರಾಮಾಂಜನೇಯ ದೇವಸ್ಥಾನಕ್ಕೆ ರಾತ್ರಿ ಸುಮಾರು ೨ ರಿಂದ ೩ ಗಂಟೆಗೆ ಬಂದು ಶ್ರೀರಾಮ, ಸೀತೆ, ಲಕ್ಷ್ಮಣ ಇವರ ಮುದ್ರೆಯಿರುವ ೫೪ ಬೆಳ್ಳಿಯ ನಾಣ್ಯಗಳು, ಚಿನ್ನದ ಒಂದು ಸರ, ಬೆಳ್ಳಿಯ ಒಂದು ಸರ, ಬೆಳ್ಳಿಯ ೪ ಕಡಗಗಳು, ಅರ್ಪಣೆ ಪೆಟ್ಟಿಗೆಯಲ್ಲಿನ ನೋಟುಗಳು ಮತ್ತು ಕಪಾಟಿನಲ್ಲಿದ್ದ ೫ ಸಾವಿರ ರೂಪಾಯಿಗಳನ್ನು ಅಪಹರಿಸಿದ್ದಾರೆ. ಅಲ್ಲದೇ ಗರ್ಭಗುಡಿಯಲ್ಲಿ ಮೂತ್ರ ವಿಸರ್ಜಿಸಿ ಗೋಪುರದ ಮೇಲೆ ಮಲ ವಿಸರ್ಜನೆ ಮಾಡಿದ್ದಾರೆ. ಈ ಘಟನೆಯ ಮಾರನೇ ದಿನ ಸಮೀಪದ ಬಜ್ಪೆಯಲ್ಲಿನ ವಿಜಯವಿಠ್ಠಲ ದೇವಸ್ಥಾನದಲ್ಲಿ ಹಿಂದೂ ದ್ವೇಷಿ ಕಳ್ಳರು ದೇವತೆಗಳ ಮೂರ್ತಿಗಳನ್ನು ಧ್ವಂಸಗೊಳಿಸಿ ಬೆಳ್ಳಿಯ ಕಿರೀಟ, ಬೆಳ್ಳಿಯ ಗಣೇಶ ಮೂರ್ತಿ, ಚಿನ್ನದ ಮಂಗಲ ಸೂತ್ರ, ಕಿವಿಯ ಬೆಂಡೋಲೆ, ಬೆಳ್ಳಿಯ ದೀಪ ಮತ್ತು ಅರ್ಪಣೆ ಪೆಟ್ಟಿಗೆಯಲ್ಲಿರುವ ಹಣವನ್ನು ಅಪಹರಿಸಿದ್ದಾರೆ.ಜನವರಿ ೯ : ಕುಂದಾಪುರ ತಾಲೂಕಿನ ಕಮಲಶಿಲೆಯ ಪ್ರಸಿದ್ಧ ಹಾಗೂ ಪ್ರಾಚೀನ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ತಡ ರಾತ್ರಿ ನುಗ್ಗಿದ ಕಳ್ಳರು ಸುಮಾರು ೨೦ ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
೧೫ ಜನವರಿ : ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಸುಪ್ರಸಿದ್ಧ ಕ್ಷೇತ್ರ ಕುಪ್ಪೂರು ಶ್ರೀ ಮರುಳ ಸಿದ್ಧೇಶ್ವರ ಮಠದ ದೇವಸ್ಥಾನದಲ್ಲಿ ೧೫ ಕೆ.ಜಿ. ಬೆಳ್ಳಿಯ ಆಭರಣ ಹಾಗೂ ಕಾಣಿಕೆ ಹುಂಡಿಯನ್ನು ಕಳ್ಳರು ದೋಚಿದ್ದಾರೆ.
೨೭ ಜನವರಿ : ಶಿವಮೊಗ್ಗದ ಪ್ರಸಿದ್ಧ ಗುಡ್ಡೇಕಲ್ಲು ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ೭ ಲಕ್ಷ ಮೌಲ್ಯದ ಆಭರಣಗಳನ್ನು ಕಳವು ಮಾಡಲಾಗಿದೆ.
ಗೋವಾ
ಜನವರಿ ೯ : ಫಾತೋರ್ಡಾ, ಮಡಗಾಂವ್‌ನಲ್ಲಿನ ಶ್ರೀ ನಾಗದೇವತೆಯ ದೇವಸ್ಥಾನದ ಹುಂಡಿಯಲ್ಲಿನ ೧೫ ಸಾವಿರ ರೂಪಾಯಿಗಳನ್ನು ಕಳ್ಳತನ ಮಾಡಿದ್ದಾರೆ.
ಜನವರಿ ೯ : ಮಾಲಪೆ, ಪೆಡಣೆಯಲ್ಲಿನ ಶ್ರೀ ಮೂಳವೀರ ದೇವಸ್ಥಾನದ ಹುಂಡಿಯನ್ನು ಒಡೆದು ಕಳ್ಳರು ಸಾವಿರಾರು ರೂಪಾಯಿಗಳನ್ನು ದೋಚಿದ್ದಾರೆ.
ಜನವರಿ ೨೪ : ಮೆಣಕುರೆ, ಡಿಚೋಲಿಯಲ್ಲಿನ ಶ್ರೀ ಮಾವುಲಿ ದೇವಸ್ಥಾನದಲ್ಲಿ ಹುಂಡಿಯಿಂದ ೫ ಸಾವಿರ ರೂಪಾಯಿಗಿಂತ ಹೆಚ್ಚು ಹಣ ದೋಚಿದ್ದಾರೆ.
ಮಹಾರಾಷ್ಟ್ರ
೮ ಜನವರಿ : ಉಭಾದಾಂಡಾ, ವೆಂಗುರ್ಲೆ ಎಂಬಲ್ಲಿನ ಶ್ರೀ ವಾಟೋಬಾ ದೇವಸ್ಥಾನ ಹಾಗೂ ಮಠದಲ್ಲಿನ ಶ್ರೀ ಕಾಪಾದೇವಿ ದೇವಸ್ಥಾನದಲ್ಲಿನ ಹುಂಡಿ ಒಡೆದು ೪ ಸಾವಿರ ರೂಪಾಯಿ ಹಾಗೂ ೧,೨೦೦ ರೂಪಾಯಿಗಳನ್ನು ಕದ್ದಿದ್ದಾರೆ.
೯ ಜನವರಿ : ಮಾಳಶಿರಸ ಶ್ರೀಕ್ಷೇತ್ರ ವೀರ ಎಂಬಲ್ಲಿನ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿನ ೧ ಲಕ್ಷದ ೧೫ ಸಾವಿರ ರೂಪಾಯಿ ಮೌಲ್ಯದ ಬೆಳ್ಳಿಯನ್ನು ಕದ್ದಿದ್ದಾರೆ. ದೇವಸ್ಥಾನದ ೩ ಕಿಲೋ ೫೦೦ ಗ್ರಾಂ ತೂಕದ ಬೆಳ್ಳಿಯ ಪ್ರಭಾವಳಿಯನ್ನು ಕಳ್ಳರು ಕದ್ದಿದ್ದಾರೆ.
ಜನವರಿ ೧೬ : ಪುಣೆ ಜಿಲ್ಲೆಯ ಆಂಬೇಗಾವ ತಾಲೂಕಿನ ಶ್ರೀಕ್ಷೇತ್ರ ರಾಂಜಣಿಯಲ್ಲಿ ನರಸಿಂಹ ದೇವಸ್ಥಾನದ ನರಸಿಂಹನ ಮೂರ್ತಿಯನ್ನು ೨೩೧ ವರ್ಷಗಳಷ್ಟು ಹಳೆಯ ೫ ತೊಲೆ ತೂಕದ ಬಂಗಾರದ ಕಣ್ಣು ಮತ್ತು ದಾನಪೆಟ್ಟಿಗೆಯಲ್ಲಿನ ೧೦ ಸಾವಿರ ರೂಪಾಯಿ ದೋಚಿದ್ದಾರೆ.
೧೭ ಜನವರಿ : ನಾಸಿಕದ ಶ್ರೀ ಕಾಲಿಕಾದೇವಿ ದೇವಸ್ಥಾನದಲ್ಲಿ ಶ್ರೀ ಸರಸ್ವತಿ, ಶ್ರೀ ಲಕ್ಷ್ಮಿ, ಶ್ರೀ ಕಾಲಿಕಾದೇವಿ ಮೂರ್ತಿಗಳಿಗೆ ಹಾಕಿದ ವಜ್ರದ ಹಾರ ಮತ್ತು ಬೆಂಡೋಲೆಯ ಕಳ್ಳತನವಾಯಿತು.
೧೯ ಜನವರಿ : ಸಾವಂತವಾಡಿ ಬಸ್ ನಿಲ್ದಾಣದ ಬದಿಯಲ್ಲಿರುವ ದತ್ತ ದೇವಸ್ಥಾನದಲ್ಲಿ ಹಗಲಿನಲ್ಲಿ ಕಳ್ಳರು ಕಾಣಿಕೆ ಹುಂಡಿಯನ್ನು ಕದ್ದುಕೊಂಡು ಹೋಗಿದ್ದಾರೆ.
ಇತರ ರಾಜ್ಯ ಮತ್ತು ವಿದೇಶ
೧೧ ಜನವರಿ : ಭದೋಹಿ (ಉತ್ತರಪ್ರದೇಶ) ಎಂಬಲ್ಲಿನ ಗೋಪಾಲ ಗಂಜದಲ್ಲಿ ಸುಮಾರು ೨೦೦ ವರ್ಷಗಳಷ್ಟು ಹಿಂದಿನ ರಾಧಾಕೃಷ್ಣ ದೇವಸ್ಥಾನದಲ್ಲಿ ೧೦ ಇಂಚು ಎತ್ತರದ ಮತ್ತು ೮ ಕೆ.ಜಿ. ತೂಕದ ಅಂತಾರಾಷ್ಟ್ರೀಯ ಮಾರು ಕಟ್ಟೆಯಲ್ಲಿ ಸುಮಾರು ೧೬ ಕೋಟಿಯಷ್ಟು ಬೆಲೆ ಬಾಳುವ ಅಷ್ಟಧಾತುವಿನ ಮೂರು ಮೂರ್ತಿಗಳನ್ನು ಕಳ್ಳತನ ಮಾಡಿದ್ದಾರೆ.
೯ ಜನವರಿ : ಢಾಕಾ ನಗರದಲ್ಲಿನ ಪ್ರಸಿದ್ಧ ಢಾಕೇಶ್ವರಿ ದೇವಸ್ಥಾನದಲ್ಲಿ ದೇವಿಯ ೨೦೦ ತೊಲೆಯ ಆಭರಣಗಳನ್ನು ದೋಚಲಾಗಿದೆ. ಬಂಗಾರ-ಬೆಳ್ಳಿಯ ಈ ಆಭರಣಗಳ ಬೆಲೆ ೧ ಕೋಟಿ ರೂಪಾಯಿಯಷ್ಟಿದೆ.

No comments:
Post a Comment