ವಿದೇಶದಲ್ಲಿ ಕಪ್ಪು ಹಣ ಇಡುವವರ ಹೆಸರನ್ನು ಬಹಿರಂಗಪಡಿಸಿ! - ಕೇಂದ್ರಸರಕಾರಕ್ಕೆ ಸರ್ವೋಚ್ಚ....

ವಿದೇಶದಲ್ಲಿ ಕಪ್ಪು ಹಣ ಇಡುವವರ ಹೆಸರನ್ನು ಬಹಿರಂಗಪಡಿಸಿ! - 
ಕೇಂದ್ರಸರಕಾರಕ್ಕೆ ಸರ್ವೋಚ್ಚ ನ್ಯಾಯಾಲಯದ ಆದೇಶ

ರಾಷ್ಟ್ರವನ್ನು ಪೂರ್ಣ ಕೊಳ್ಳೆ ಹೊಡೆಯುವವರನ್ನು ಮುಕ್ತವಾಗಿ ಬಿಡುವ ಜಾತ್ಯತೀತ ರಾಜಕಾರಣಿಗಳು!
ಹೊಸದೆಹಲಿ : ವಿದೇಶದಲ್ಲಿ ಸಂಗ್ರಹಿಸಿದ ಕಪ್ಪು ಹಣದ ಬಗ್ಗೆ ಕೇಂದ್ರ ಸರಕಾರವು ಇದುವರೆಗೆ ಯಾವ ಕೃತಿ ಮಾಡಿದೆ ಎಂಬುದರ ಮಾಹಿತಿಯನ್ನು ಪ್ರತಿಜ್ಞಾಪತ್ರದ ಮೂಲಕ ನ್ಯಾಯಾಲಯಕ್ಕೆ ನೀಡಬೇಕು. ಅದರಂತೆ ಕಪ್ಪು ಹಣವನ್ನು ವಿದೇಶದಲ್ಲಿ ಇಟ್ಟವರ ಹೆಸರನ್ನು ಸರಕಾರವು ಬಹಿರಂಗ ಪಡಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ಕೇಂದ್ರ ಸರಕಾರಕ್ಕೆ ಆದೇಶ ನೀಡಿದೆ. ಸರ್ವೋಚ್ಚ ನ್ಯಾಯಾಲಯವು ಕಪ್ಪು ಹಣದ ಬಗ್ಗೆ ಕೇಂದ್ರ ಸರಕಾರವನ್ನು ತೀವ್ರ ತರಾಟೆ ತೆಗೆದುಕೊಂಡ ಮೂರನೇ ಘಟನೆಯಾಗಿದೆ.
(ಯಾವುದಾದರೊಬ್ಬ ಉದ್ಧಟ ವಿದ್ಯಾರ್ಥಿಯನ್ನು ಶಿಕ್ಷಕರು ಪದೇ ಪದೇ ಸಿಟ್ಟು ಮಾಡುವಂತೆ, ಈಗಿನ ಜಾತ್ಯತೀತ ಸರಕಾರದ್ದಾಗಿದೆ. ಸರಕಾರಕ್ಕೆ ರಾಜ್ಯಾಡಳಿತ ಹೇಗೆ ಮಾಡುವುದು ಎಂಬುದರ ಬಗ್ಗೆ ನ್ಯಾಯಾಲಯವು ಆದೇಶ ನೀಡಬೇಕಾಗುತ್ತದೆ ಎಂದರೆ ಸರಕಾರದ ಬಿಳಿ ಆನೆ ನಮಗೇಕೆ? ಈ ಸ್ಥಿತಿಯನ್ನು ಬದಲಾಯಿಸಲು ರಾಷ್ಟ್ರ ಮತ್ತು ಧರ್ಮಪ್ರೇಮಿಗಳ ಕೈಯಲ್ಲಿ ಆಡಳಿತವನ್ನು ಒಪ್ಪಿಸದೇ ಬೇರೆ ಪರ್ಯಾಯವಿಲ್ಲ. - ಸಂಪಾದಕರು)

No comments:

Post a Comment