ಶೃಂಗೇರಿ ಆದಿ ಶಂಕರಾಚಾರ್ಯರ ಪ್ರತಿಮೆ ಸ್ಥಾಪಿಸಲು ನಿಲ್ಲಿಸಿದ ಪೀಠವು ...

ಭಾಜಪ ರಾಜ್ಯದಲ್ಲಿ ಹಿಂದೂಗಳ ಶ್ರದ್ಧಾಸ್ಥಾನಗಳ ಮೇಲೆ ಹೆಚ್ಚುತ್ತಿರುವ ಆಘಾತಗಳು!
ಶೃಂಗೇರಿ ಆದಿ ಶಂಕರಾಚಾರ್ಯರ ಪ್ರತಿಮೆ ಸ್ಥಾಪಿಸಲು ನಿಲ್ಲಿಸಿದ ಪೀಠವು ಅಜ್ಞಾತರಿಂದ ಧ್ವಂಸ
ಶೃಂಗೇರಿ: ಜಗದ್ಗುರು ಆದಿ ಶಂಕರಾಚಾರ್ಯರ ಪ್ರತಿಮೆ ಪ್ರತಿಷ್ಠಾಪಿಸಲು ಸಿದ್ಧಪಡಿಸಲಾಗಿದ್ದ ಪೀಠವನ್ನು ಸೋಮವಾರ ರಾತ್ರಿ ಪಟ್ಟಣದ ಹೊರವಲಯದಲ್ಲಿ ಕಿಡಿಗೇಡಿಗಳು ಧ್ವಂಸ ಗೊಳಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ೧೩ರ ನಾಲ್ಕು ರಸ್ತೆ ಕೂಡುವ ಪಟ್ಟಣದ ಮುಖ್ಯದ್ವಾರದ ಬಳಿಯ ವೃತ್ತದಲ್ಲಿ ನೂತನವಾಗಿ ಕಟ್ಟಡವೊಂದನ್ನು ನಿರ್ಮಿಸಲಾಗಿತ್ತು. ಇದರ ನಡುವಿನಲ್ಲಿ ಬೆಳಕಿಗಾಗಿ ದೀಪದ ಸ್ತಂಭ ಅಳವಡಿಸಿ, ಅದರಡಿಯಲ್ಲಿ ಕ್ಷೇತ್ರದ ಮಹಾ ಗುರು ಶ್ರೀ ಆದಿಶಂಕರಾಚಾರ್ಯರ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ಪೀಠ ತಯಾರಾಗಿತ್ತು. ಫೆಬ್ರವರಿ ೭ ರಂದು ಸಂಜೆ ಪೀಠದ ಕೆಲಸ ಪೂರ್ಣಗೊಂಡಿದ್ದು, ಫೆಬ್ರವರಿ ೯ರಂದು ಶ್ರೀ ಶಂಕರಾಚಾರ್ಯರ ಪ್ರತಿಮೆ ಯನ್ನು ಪ್ರತಿಷ್ಠಾಪಿಸುವ ಕಾರ್ಯಕ್ರಮವಿತ್ತು. ಕಟ್ಟಡವನ್ನು ಕೆಡವಿ, ಅದರಲ್ಲಿನ ಹೊಳೆಯುವ ಕಲ್ಲುಗಳನ್ನು ಪುಡಿಗೈದು ಧ್ವಂಸಗೊಳಿಸಲಾಗಿದೆ.
ಈ ಘಟನೆಯನ್ನು ತಾಲೂಕು ಬಜರಂಗ ದಳ ಮತ್ತು ವಿಹಿಂಪ ಖಂಡಿಸಿದೆ.

No comments:

Post a Comment