ಮೂಲ್ಕಿಯ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ೨ ಲಕ್ಷ ರೂಪಾಯಿಗಳ ಕನ್ನ!

ಮಂಗಳೂರು: ಮೂಲ್ಕಿ ಹತ್ತಿರದ ತೋಕೂರಿನ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಫೆಬ್ರವರಿ ೬ರಂದು ರಾತ್ರಿ ವೇಳೆ ಕಳ್ಳರು ಬೆಳ್ಳಿಯ ಆಭರಣ ಮತ್ತು ನಗದು ಹೀಗೆ ಒಟ್ಟು ೨ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ದೋಚಿದ್ದಾರೆ. ಫೆಬ್ರವರಿ ೭ ರಂದು ಬೆಳಗ್ಗೆ ದೇವಸ್ಥಾನದ ಅರ್ಚಕರು ದೇವಸ್ಥಾನವನ್ನು ತೆರೆದಾಗ ಈ ಘಟನೆಯು ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಮೂಲ್ಕಿ ಪೊಲೀಸ್ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

No comments:

Post a Comment