ಹಿಂದೂಗಳ ಸಂಘಟಿತ ಶಕ್ತಿಯಿಂದ ಹಿಂದೆ ಸರಿದ ಧರ್ಮಾಂಧರು
ಬೇಲೂರಿನಲ್ಲಿ ‘ಲವ್ ಜಿಹಾದ್’ನ ಉಲ್ಲೇಖದಿಂದ ‘ವೇಲೆಂಟೈನ್ ಡೇ’ ಕರಪತ್ರ ಹಂಚಲು ಧರ್ಮಾಂಧರಿಂದ ವಿರೋಧ ಕರಪತ್ರ ಸುಡುವ ಬೆದರಿಕೆ
ಬೇಲೂರು: ೧೨.೨.೨೦೧೧ರಂದು ಇಲ್ಲಿನ ಮಹಾವಿದ್ಯಾಲಯದ ವಿದ್ಯಾರ್ಥಿ ಹಾಗೂ ಹಿಂದೂ ಧರ್ಮಾಭಿಮಾನಿ ಶ್ರೀ.ಪ್ರವೀಣರವರು ಹಿಂದೂ ಜನ ಜಾಗೃತಿ ಸಮಿತಿಯ ‘ವೇಲೆಂಟೈನ್ ಡೇ’ಯನ್ನು ವಿರೋಧಿಸುವ ಕರಪತ್ರವನ್ನು ಬಸ್‌ನಲ್ಲಿ ವಿತರಿಸುತ್ತಿದ್ದರು. ಅದರಲ್ಲಿ ‘ಲವ್ ಜಿಹಾದ’ ಬಗ್ಗೆ ಮಾಹಿತಿ ಇರುವುದರಿಂದ ಅದನ್ನು ಹಂಚಲು ಧರ್ಮಾಂಧರು ವಿರೋಧಿಸಿದರು. ‘ಕರಪತ್ರವನ್ನು ಸುಟ್ಟು ಹಾಕುವೆವು’ ಎಂದು ಆ ಧರ್ಮಾಂಧ ಯುವಕರು ಶ್ರೀ.ಪ್ರವೀಣರಿಗೆ ಬೆದರಿಕೆ ಹಾಕಿದರು. ಅದಕ್ಕೆ ಶ್ರೀ. ಪ್ರವೀಣ ಒಬ್ಬರೇ ಅಂಜದೇ ವಿರೋಧವನ್ನು ಶೌರ್ಯದಿಂದ ಎದುರಿಸಿದರು. (ಹಿಂದೂಗಳೇ, ಧರ್ಮಾಂಧರ ಬೆದರಿಕೆಗೆ ಸೊಪ್ಪು ಹಾಕದೇ ಅವರನ್ನು ವಿರೋಧಿಸುವ ಶ್ರೀ.ಪ್ರವೀಣರವರ ಆದರ್ಶ ನಿಮ್ಮ ಮುಂದಿಟ್ಟುಕೊಳ್ಳಿ! -ಸಂಪಾದಕರು) ಅನಂತರ ಅವರಿಗೆ ರಿಕ್ಷಾ ಚಾಲಕ ಹಿಂದೂಗಳು ಬೆಂಬಲ ನೀಡಿದ್ದರಿಂದ ಧರ್ಮಾಂಧರಿಗೆ ಏನೂ ಮಾಡಲಾಗದೇ ಹಿಂದೆ ಹೋಗಬೇಕಾದ ಘಟನೆ ಇತ್ತೀಚೆಗೆ ನಡೆಯಿತು. (ಧರ್ಮಾಂಧರನ್ನು ಸಂಘಟಿತ ರಾಗಿ ವಿರೋಧಿಸಿದ ಬೇಲೂರಿನ ರಿಕ್ಷಾ ಚಾಲಕರಿಗೆ ಅಭಿನಂದನೆ ! - ಸಂಪಾದಕರು)
ಶ್ರೀ.ಪ್ರವೀಣ ಇವರೊಬ್ಬರೇ ಬಸ್ ನಲ್ಲಿ ‘ವೇಲೆಂಟೈನ್ ಡೇ’ ವಿಷಯದ ಪ್ರಬೋಧನೆ ನೀಡುವ ಕರಪತ್ರವನ್ನು ಹಂಚುತ್ತಿದ್ದರು. ಆಗ ಬಸ್‌ನಲ್ಲಿದ್ದ ಕೆಲವು ಧರ್ಮಾಂಧ ಯುವಕರು ಕರಪತ್ರವನ್ನು ಕೇಳಿ ದರು. ಅದರಲ್ಲಿರುವ ‘ಲವ್ ಜಿಹಾದ’ ವಿಷಯವನ್ನು ಓದಿ ಅವರು ಶ್ರೀ. ಪ್ರವೀಣರ ಮೇಲೆ ಕೂಗಾಡುತ್ತಾ, ‘ನಿನಗೆ ಯಾರು ಇದನ್ನು ಹಂಚಲು ಹೇಳಿದರು? ಯಾರು ಕೊಟ್ಟರು? ಇದನ್ನು ಬೇಲೂರಿನಲ್ಲೇಕೆ ಹಂಚುತ್ತಿದ್ದೀಯಾ?’ ಮುಂತಾದ ಪ್ರಶ್ನೆ ಕೇಳಿ ಜಗಳಕ್ಕಿಳಿದರು. (ಧರ್ಮಾಂಧರ ಹಿಂದೂ ವಿರೋಧಿ ಸಂಚನ್ನು ಬಯಲಿಗೆಳೆದ ಹಿಂದೂಗಳನ್ನು ಸಂಘಟಿತರಾಗಿ ವಿರೋಧಿಸುವ ಧರ್ಮಾಂಧರು ! - ಸಂಪಾದಕರು)
ಶ್ರೀ.ಪ್ರವೀಣರವರು ಯಾವುದಕ್ಕೂ ಅಂಜದೇ, ‘ನಾನು ಹಂಚಲು ನಿಮ್ಮದೇನು ಅಡ್ಡಿ? ಹಿಂದೂಸ್ಥಾನದಲ್ಲಿದ್ದು ಹಂಚುವುದಕ್ಕೆ ನಮಗೆ ಯಾರಾದರೂ ಹೇಳಬೇಕೇನು?’ ಎಂದು ಕೇಳಿದರು. ಅದಕ್ಕೆ ಧರ್ಮಾಂಧರು, ‘ನೀನು ಬಸ್ಸಿನಿಂದ ಕೆಳಗೆ ಬಾ. ನಿನ್ನನ್ನು ಮತ್ತೊಮ್ಮೆ ಬೇಲೂರಿಗೆ ಬರದಂತೆ ಮಾಡುತ್ತೇವೆ ನೋಡು. ಕರಪತ್ರವನ್ನು ಬೆಂಕಿಗೆ ಹಾಕುತ್ತೇವೆ’ ಎಂದು ಹೇಳಿದರು. (ಗೂಂಡಾಗಿರಿ ಮಾಡುವ ಧರ್ಮಾಂಧ ಯುವಕರು! - ಸಂಪಾದಕರು) ಶ್ರೀ.ಪ್ರವೀಣರವರು ಬಸ್ಸಿನಿಂದ ಇಳಿದ ಕೂಡಲೇ ೩೦ ಧರ್ಮಾಂಧ ಯುವಕರು ಬಸ್ಸಿನ ಬಳಿ ಒಟ್ಟುಗೂಡಿದ್ದರು. (ಧರ್ಮಂಧರ ಬಗ್ಗೆ ಯಾವುದೇ ಘಟನೆ ನಡೆಯುತ್ತಲೇ ಒಟ್ಟಾಗುವ ಧರ್ಮಾಂಧರಿಂದ ಹಿಂದೂಗಳು ಬೋಧನೆ ಪಡೆಯುವರೇ? - ಸಂಪಾದಕರು) ಆ ಸಮಯದಲ್ಲಿ ಪ್ರವೀಣ ಒಬ್ಬರೇ ಇದ್ದರು. ಬಸ್ಸಿನಿಂದ ಇಳಿದ ಕೂಡಲೇ ಒಟ್ಟು ಸೇರಿದ ಧರ್ಮಾಂಧ ಯುವಕರು ‘ನಿನಗೆ ಯಾರ ಬೆಂಬಲ ಇದೆ? ನಿನ್ನೊಂದಿಗೆ ಯಾರಿದ್ದಾರೆ ಹೇಳು?’ ಎಂದು ಗದರಿಸಿದರು. ಆಗ ಶ್ರೀ.ಪ್ರವೀಣರವರು, ‘ನನ್ನ ಹಿಂದೆ ನನ್ನ ಧರ್ಮವಿದೆ. ನಿಮಗೇಕೆ ಹೆದರಬೇಕು?’ ಎಂದು ಹೇಳಿದರು. (ಧರ್ಮದ ಬಗ್ಗೆ ಇಷ್ಟು ಶ್ರದ್ಧೆ ಎಷ್ಟು ಹಿಂದೂಗಳಲ್ಲಿದೆ? - ಸಂಪಾದಕರು) ಆ ಸಮಯದಲ್ಲಿ ಬಸ್ಸಿನಲ್ಲಿದ್ದ ಓರ್ವ ವ್ಯಕ್ತಿಯು ಅಲ್ಲಿ ಸೇರಿದ್ದ ಧರ್ಮಾಂಧರನ್ನು ಕಂಡು ಶ್ರೀ.ಪ್ರವೀಣರಿಗೆ, ‘ನೀನು ಕೂಡಲೇ ಚಾಲಕನ ಬದಿಯಲ್ಲಿರುವ ಬಾಗಿಲಿನಿಂದ ತಪ್ಪಿಸಿಕೊಂಡು ಹೋಗು. ಏಕೆ ನಿನಗೆ ಇದೆಲ್ಲ ರಗಳೆ’ ಎಂದು ಹೇಳಿ ದಾಗ ಶ್ರೀ.ಪ್ರವೀಣರವರು, ‘ನಾನೇಕೆ ಹೆದರಬೇಕು?’ ಎಂದು ಹೆದರದೆ ಅವರನ್ನು ಎದುರಿಸಲು ಧೈರ್ಯದಿಂದ ನಿಂತನು.
ಅಷ್ಟರಲ್ಲಿ ಇವರನ್ನು ನೋಡಿದ ಓರ್ವ ಹಿಂದೂ ಧರ್ಮಾಭಿಮಾನಿ ರಿಕ್ಷಾ ಚಾಲಕನು ಕೂಡಲೇ ಶ್ರೀ.ಪ್ರವೀಣರವರ ಬಳಿ ಬಂದು ವಿಷಯವನ್ನು ತಿಳಿದು ‘ಇಲ್ಲೇಕೆ ಚರ್ಚೆ ಮಾಡುವುದು? ನೀವು ಕರಪತ್ರಕ್ಕೆ ಬೆಂಕಿ ಹಾಕುವುದಿದ್ದಲ್ಲಿ ಚೆನ್ನಕೇಶವ ದೇವಸ್ಥಾನದ ಎದುರು ಹಾಕಿರಿ ಬನ್ನಿ’ ಎಂದು ಸವಾಲು ಹಾಕಿದರಲ್ಲದೇ ಕೂಡಲೇ ಐದು ರಿಕ್ಷಾವನ್ನು ಕರೆದು ಎಲ್ಲ ಧರ್ಮಾಂಧ ಯುವಕರನ್ನು ರಿಕ್ಷಾದಲ್ಲಿ ಹತ್ತಿಸಿಕೊಂಡು ಚೆನ್ನಕೇಶವ ದೇವಸ್ಥಾನದ ಎದುರು ಕರೆತಂದರು ಮತ್ತು ಅಲ್ಲಿ ಎಲ್ಲರನ್ನು ಇಳಿಸಿ ‘ಈಗ ಧೈರ್ಯ ವಿದ್ದರೆ ಬೆಂಕಿ ಹಾಕಿ ನೋಡೋಣ? ಒಂದೇ ಒಂದು ಕರಪತ್ರವನ್ನು ಹರಿದು ತೋರಿಸಿ’ ಎಂದು ಧರ್ಮಾಂಧ ಯುವಕರಿಗೆ ಆಹ್ವಾನಿಸಿದರು. ಅಷ್ಟರಲ್ಲಿ ಸುದ್ದಿ ತಿಳಿದ ಇನ್ನು ೨೫ ಹಿಂದುತ್ವವಾದಿ ರಿಕ್ಷಾಚಾಲಕರು ಆಗಮಿಸಿದರು. ಅಲ್ಲದೇ ತಮ್ಮ ರಿಕ್ಷಾದಲ್ಲಿದ್ದ ದೊಣ್ಣೆ ತೆಗೆಯಲು ಮುಂದಾದರು. ಕೂಡಲೇ ಅಲ್ಲಿಗೆ ದೇವಸ್ಥಾನದ ಆಡಳಿತದವರು ಆಗಮಿಸಿದರು. ಒಟ್ಟು ೬೦ಹಿಂದುತ್ವವಾದಿಗಳು ಒಟ್ಟು ಕೂಡಿದರು ಮತ್ತು ಧರ್ಮಾಂಧ ಯುವಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಆ ಸಮಯದಲ್ಲಿ ಓರ್ವ ಧರ್ಮಾಂಧರ ಧರ್ಮಗುರು ಅಲ್ಲಿಗೆ ಬಂದು ‘ಹುಡುಗರು ಏನೋ ಹುಡುಗಾಟವಾಡಿದರು, ಕ್ಷಮಿಸಿ. ನಮಗೂ ಹಿಂದೂ ಧರ್ಮದ ಬಗ್ಗೆ ಗೌರವವಿದೆ’ ಎಂದು ಹೇಳಿ ಅವರು ಅಲ್ಲಿದ್ದ ಎಲ್ಲ ಧರ್ಮಾಂಧ ಯುವಕರನ್ನು ಕರೆದುಕೊಂಡು ಹೋದರು. (ಹಿಂದೂಗಳು ಸಂಘಟಿತರಾದುದರಿಂದ ಚಾಣಾಕ್ಷತೆ ತೋರಿ ಹಿಂದೆ ಸರಿಯುವ ಧರ್ಮಾಂಧರ ಧರ್ಮಗುರು! ಇಲ್ಲೇನಾದರೂ ಹಿಂದೂಗಳ ಸಂಖ್ಯೆ ಕಡಿಮೆಯಿರುತ್ತಿದ್ದರೆ ಈ ಧರ್ಮಗುರು ಇಲ್ಲಿಯೇ ಕರಪತ್ರ ಸುಡಲು ಹೇಳುತ್ತಿದ್ದರೆಂದು ಹಿಂದೂಗಳು ಗಮನದಲ್ಲಿಡಬೇಕು! - ಸಂಪಾದಕರು)
ಶ್ರೀ.ಪ್ರವೀಣರವರು ಹಾಸನದಿಂದ ಬೇಲೂರಿಗೆ ಪ್ರಯಾಣ ಮಾಡುವ ಪ್ರತಿಯೊಂದು ಬಸ್ಸಿನಲ್ಲಿ ಒಬ್ಬರೇ ಕರಪತ್ರವನ್ನು ಹಂಚಿದರಲ್ಲದೇ ಬಸ್ಸಿನ ಪ್ರತಿಯೊಂದು ನಿಲ್ದಾಣದಲ್ಲಿ ಇಳಿದು ಮುಂದಿನ ಬಸ್ಸಿಗೆ ಹತ್ತಿ ಕರಪತ್ರವನ್ನು ಹಂಚುತ್ತಿದ್ದರು. ಅಲ್ಲದೇ ಬೇಲೂರಿಗೆ ಬರುವ ಪ್ರವಾಸಿ ಯುವಕರ ಬಸ್ಸಿಗೂ ಕರಪತ್ರವನ್ನು ಹಂಚಿದರು. ಅಲ್ಲದೇ ಬಸ್ಸಿನಲ್ಲಿರುವ ಎಲ್ಲ ಪ್ರಯಾಣಿಕರಿಗೆ ‘ಓದಿದ ನಂತರ ಹರಿದು ಬಿಸಾಡದೇ ಅದನ್ನು ತೆಗೆದು ಕೊಂಡು ಹೋಗಿ ಅಥವಾ ಬಸ್ಸಿನ ಎದುರು ಆಸನದ ಹಿಂದೆ ಮಡಚಿ ಇಟ್ಟಲ್ಲಿ ಅದನ್ನು ಇತರರು ಓದಬಹುದು’ ಎಂದು ಸಲಹೆ ನೀಡುತ್ತಿದ್ದರು. ಅದರಿಂದ ಪ್ರಭೋಧನೆ ಪಡೆದ ನಿರ್ವಾಹಕ ಮತ್ತು ಚಾಲಕರು ‘ಅದನ್ನು ಫೆಬ್ರವರಿ ೧೪ರ ತನಕ ಇಡುವೆವು’ ಎಂದು ಹೇಳಿದರು.
No comments:
Post a Comment