ಸನಾತನ ಸಂಸ್ಥೆಯ ಮೇಲಿನ ಭಯೋತ್ಪಾದನೆಯ ಆರೋಪವನ್ನು ಸಹಿಸುವುದು ಅಸಾಧ್ಯ!...

ಬಿಜಾಪುರದಲ್ಲಿನ ಹಿಂದೂ ಧರ್ಮಜಾಗೃತಿ ಸಭೆಗೆ ೨,೫೦೦ ಧರ್ಮಾಭಿಮಾನಿಗಳ ಉಪಸ್ಥಿತಿ

ಸನಾತನ ಸಂಸ್ಥೆಯ ಮೇಲಿನ ಭಯೋತ್ಪಾದನೆಯ ಆರೋಪವನ್ನು ಸಹಿಸುವುದು ಅಸಾಧ್ಯ! - ಶ್ರೀ ಸಿದ್ಧಲಿಂಗ ಸ್ವಾಮಿ
ಖಡ್ಗ ಎತ್ತಿ ಹಿಡಿದಿ ರುವ ಹಿಂದೂ ಜನಜಾಗೃತಿ ಸಮಿತಿಯ ಶ್ರೀ.ವಿನಯ ಪಾನವಳಕರ, ಜೊತೆಯಲ್ಲಿ ಅವರನ್ನು ಸತ್ಕರಿಸಿದ ಧರ್ಮಾಭಿಮಾನಿಗಳು

ರಾಷ್ಟ್ರ ಸೇವಿಕಾ ಸಮಿತಿ ಸದಸ್ಯರು ಕು. ಸ್ಫೂರ್ತಿ ಬೆನಕನವಾರಿಯವರಿಗೆ ಖಡ್ಗ ಪ್ರದಾನಿಸುತ್ತಿರುವುದು

ಬಿಜಾಪುರ: ಇಂದು ಧರ್ಮಪ್ರಚಾರ ಮಾಡುವ ಸನಾತನ ಸಂಸ್ಥೆಯ ಮೇಲೆ ನಿರ್ಬಂಧ ಹೇರಲು ಗೋವಾ ಮತ್ತು ಮಹಾರಾಷ್ಟ್ರ ಸರಕಾರಗಳು ಅನೇಕ ಪ್ರಯತ್ನಗಳನ್ನು ನಡೆಸುತ್ತಿವೆ. ಸನಾತನ ಸಂಸ್ಥೆ ಹಾಗೂ ಹಿಂದೂಗಳ ಸಂತರ ಮೇಲಾಗುತ್ತಿ ರುವ ಅನ್ಯಾಯದ ವಿರುದ್ಧ ಎಲ್ಲ ಹಿಂದೂಗಳು ಹೋರಾಡಲೇಬೇಕು. ಕಾಂಗ್ರೆಸ್ ಸರಕಾರವು ಭಯೋತ್ಪಾದಕರನ್ನು ತಯಾರಿಸುತ್ತಿದೆ. ಸನಾತನ ಸಂಸ್ಥೆಯ ಮೇಲಿನ ಭಯೋತ್ಪಾದನೆಯ ಆರೋಪವನ್ನು ಸಹಿಸಲು ಸಾಧ್ಯವಿಲ್ಲ. ಆದುದರಿಂದ ಅದರ ವಿರುದ್ಧ ಎಲ್ಲ ಹಿಂದೂಗಳು ಸಂಘಟಿತರಾಗಿ ಹೋರಾಡುವ ಆವಶ್ಯಕತೆಯಿದೆ, ಎಂಬುದನ್ನು ಕರ್ನಾಟಕದ ಕರುಣೇಶ್ವರ ಮಠದ ಶ್ರೀ ಸಿದ್ಧಲಿಂಗ ಸ್ವಾಮಿಯವರು ಮಂಡಿಸಿದರು. ಹಿಂದೂ ಜನಜಾಗೃತಿ ಸಮಿತಿಯು ದಿನಾಂಕ ೬.೨.೨೦೧೧ರಂದು ಬಿಜಾಪುರದ ದರ್ಬಾರ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಿದ ಹಿಂದೂ ಧರ್ಮಜಾಗೃತಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಆ ಸಮಯದಲ್ಲಿ ಸನಾತನ ಸಂಸ್ಥೆಯ ಕು.ಸ್ಫೂರ್ತಿ ಬೆನಕನವಾರಿ ಮತ್ತು  ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ವಿನಯ ಪಾನವಳಕರರವರೂ ಸಭೆಯಲ್ಲಿ ಮಾರ್ಗದರ್ಶನ ಮಾಡಿದರು. ಈ ಸಭೆಯಲ್ಲಿ ೨೫೦೦ ಹಿಂದೂ ಧರ್ಮಾಭಿಮಾನಿಗಳು ಉಪಸ್ಥಿತರಿದ್ದರು ಹಾಗೂ ಸನಾತನ ಸಂಸ್ಥೆಯ ಸಂತರಾದ ಪೂ.ರಾಜೇಂದ್ರ ಶಿಂದೆಯವರ ವಿಶೇಷ ಉಪಸ್ಥಿತಿಯಿತ್ತು. ಸಭೆಯಲ್ಲಿ ಧರ್ಮಾಭಿಮಾನಿಗಳು ಶ್ರೀ.ಪಾನವಳಕರರಿಗೆ ಖಡ್ಗ ನೀಡಿ ಸತ್ಕರಿಸಿದರೆ, ರಾಷ್ಟ್ರಸೇವಾ ಸಮಿತಿಯ ಸದಸ್ಯರು ಕು.ಸ್ಫೂರ್ತಿಯವರಿಗೂ ಖಡ್ಗ ನೀಡಿ ಸತ್ಕರಿಸಿದರು.

ಕ್ಷಣಚಿತ್ರ: ೧.೨೦೦ಕ್ಕೂ ಹೆಚ್ಚು ಯುವಕರು ಸಂವಾದ ಕಾರ್ಯಕ್ರಮದಲ್ಲಿ  ಉಪಸ್ಥಿತರಿದ್ದರು.
೨.ಸಭೆಯ ನಂತರ ೩೦ಯುವ ಧರ್ಮಾಭಿಮಾನಿಗಳು ೭ ಗಂಟೆಗಳ ಕಾಲ ಸೇವೆ ಮಾಡಿದರು.
೩.೭೦೦ಕ್ಕೂ ಹೆಚ್ಚು ಹಿಂದೂಗಳು ಹಿಂದುತ್ವದ ಅಭಿಮಾನ ಜಾಗೃತಗೊಳಿಸುವ ಕಿರುಸಂದೇಶಕ್ಕೆ ಹೆಸರು ನೀಡಿದರು.

No comments:

Post a Comment