ಸಾಧಕರಿಗೆ ಸೂಚನೆ
ಸಾಧಕರೇ, ಕೇಂದ್ರಸರಕಾರವು ಸನಾತನವನ್ನು ‘ಭಯೋತ್ಪಾದಕ ಸಂಘಟನೆ’ ಎಂದು ನಿರ್ಧರಿಸಿ ನಿಮ್ಮನ್ನು ಬಂಧಿಸಲು ಸಾಧ್ಯವಿಲ್ಲ ಎಂದು ತಿಳಿದಿರಲಿ!
‘ಸನಾತನದ ರಾಷ್ಟ್ರ ಮತ್ತು ಧರ್ಮ ಕಾರ್ಯ ಜಾತ್ಯತೀತ ರಾಜಕಾರಣಿಗಳ ಕಣ್ಣುಗಳಿಗೆ ಚುಚ್ಚುತ್ತಿರುವುದರಿಂದ ಅವರು ಸನಾತನದ ಮೇಲೆ ನಿರ್ಬಂಧವನ್ನು ಹೇರಲು ಹೊಂಚು ಹಾಕುತ್ತಿದ್ದಾರೆ. ಒಮ್ಮೆ ಸಂಸ್ಥೆಯ ಮೇಲೆ ನಿರ್ಬಂಧ ಹೇರಿದರೆ ಸಾಧಕರನ್ನು ‘ಭಯೋತ್ಪಾದಕರು’ ಎಂದು ನಿರ್ಧರಿಸಿ ಅವರನ್ನು ಬಂಧಿಸಲು ಸರಕಾರವು ಹೊಂಚು ಹಾಕುವುದು. ಭವಿಷ್ಯದಲ್ಲಿ ಸನಾತನದ ಮೇಲೆ ನಿರ್ಬಂಧ ಹೇರಿ ಪೊಲೀಸರು ಸಾಧಕರನ್ನು ಬಂಧಿಸಲು ಬಂದಾಗ ಸಾಧಕರು ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಆಧಾರವಾಗಿಟ್ಟುಕೊಂಡು ‘ನನ್ನನ್ನು ಬಂಧಿಸುವುದು ಹೇಗೆ ಅನ್ಯಾಯಕಾರಿಯಾಗಿದೆ’ ಎಂದು ಪೊಲೀಸರಿಗೆ ಅರಿವು ಮಾಡಿಕೊಡಬೇಕು. ‘ನಿರ್ಬಂಧ ಹೇರಲ್ಪಟ್ಟ ಭಯೋತ್ಪಾದಕ ಸಂಘಟನೆಯ ಕೇವಲ ಸದಸ್ಯನಾಗಿದ್ದೇನೆ ಎಂದ ಮಾತ್ರಕ್ಕೆ ಅವನು ಅಪರಾಧಿಯಾಗುವುದಿಲ್ಲ. ಈ ವ್ಯಕ್ತಿಯು ದಂಗೆಯಲ್ಲಿ ಸಹಭಾಗಿಯಾಗಿಲ್ಲ ಅಥವಾ ದಂಗೆಯನ್ನು ನಡೆಸಲು ಪ್ರಚೋದಿಸಿಲ್ಲ, ಎಂದಾದರೆ ಆ ವ್ಯಕ್ತಿಯನ್ನು ಪೊಲೀಸರು ಅಪರಾಧಿಯೆಂದು ನಿರ್ಧರಿಸಲು ಸಾಧ್ಯವಿಲ್ಲ. ಈ ವಿಷಯದ ವಾರ್ತೆಯನ್ನು ಪಕ್ಕದಲ್ಲಿ ‘ನಿರ್ಬಂಧ ಹೇರಲ್ಪಟ್ಟ ಭಯೋತ್ಪಾದಕ ಸಂಘಟನೆಯ ಸದಸ್ಯರಾಗಿರುವುದು ಅಪರಾಧವಲ್ಲ! - ಸರ್ವೋಚ್ಚ ನ್ಯಾಯಾಲಯ’ ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಲಾಗಿದೆ.
ಸಾಧಕರೇ, ಈ ಸಂಚಿಕೆಯನ್ನು ತಮ್ಮಲ್ಲಿ ಜೋಪಾನವಾಗಿಟ್ಟುಕೊಳ್ಳಿ. ಸನಾತನದ ಮೇಲೆ ನಿರ್ಬಂಧ ಹೇರಿದರೆ ಆರಕ್ಷಕರು ನಿಮ್ಮನ್ನು ಬಂಧಿಸಲು ಬಂದಾಗ ಅವರಿಗೆ ಆ ಸಂಚಿಕೆಯನ್ನು ತೋರಿಸಿ!
No comments:
Post a Comment