ನಿರ್ಬಂಧ ಹೇರಲ್ಪಟ್ಟ ಭಯೋತ್ಪಾದಕ ಸಂಘಟನೆಯ ಸದಸ್ಯನಾಗಿರುವುದು ಅಪರಾಧವಲ್ಲ! - ಸರ್ವೋಚ್ಚ ನ್ಯಾಯಾಲಯ
ಹೊಸದೆಹಲಿ: ನಿರ್ಬಂಧವಿರುವ ಭಯೋತ್ಪಾದಕ ಸಂಘಟನೆಯ ಕೇವಲ ಸದಸ್ಯನಾಗಿದ್ದ ಮಾತ್ರಕ್ಕೆ ಆ ವ್ಯಕ್ತಿ ಅಪರಾಧಿಯಾಗುವುದಿಲ್ಲ. ಗಲಭೆ ಯಲ್ಲಿ ಇಂತಹ ವ್ಯಕ್ತಿಯ ಸಹಭಾಗವಿಲ್ಲ ಅಥವಾ ಆ ವ್ಯಕ್ತಿಯು ಗಲಭೆ ನಡೆಸಲು ಪ್ರಚೋದಿಸಿಲ್ಲ ಎಂದಾದರೆ ಅಲ್ಲಿಯ ವರೆಗೆ ಆ ವ್ಯಕ್ತಿಯನ್ನು ಪೊಲೀಸರು ಅಪರಾಧಿಯೆಂದು ನಿರ್ಧರಿಸಲು ಸಾಧ್ಯವಿಲ್ಲ, ಎಂಬ ನಿರ್ಣಯವನ್ನು ಸರ್ವೋಚ್ಚ ನ್ಯಾಯಾಲಯದ ವಿಭಾಗೀಯ ಪೀಠವು ಇತ್ತೀಚೆಗೆ ನೀಡಿದೆ.
ಗೃಹಸಚಿವಾಲಯದ ಸಂಕೇತಸ್ಥಳದಲ್ಲಿ ನಿರ್ಬಂಧ ಹೇರಲ್ಪಟ್ಟ ೩೨ ಭಯೋತ್ಪಾದಕ ಸಂಘಟನೆಗಳ ಪಟ್ಟಿಯನ್ನು ಪ್ರಕಟಿಸಲಾಗಿದ್ದು ಅದರಲ್ಲಿ ಅಲ್‌ಕಾಯದಾ, ಜೈಶ್-ಎ-ಮಹಮ್ಮದ, ಲಷ್ಕರ್-ಎ-ತೋಯಬಾ, ಸಿಮಿ, ಜೆಕೆಎಲ್‌ಎಫ್, ಸಿಪಿಐ(ಎಮ್‌ಎಲ್) ಮತ್ತು ಅವರ ಇತರ ಕೆಲವು ಸಹಕಾರೀ ಸಂಘಟನೆಗಳು ಒಳಗೊಂಡಿವೆ. ಒಂದು ತಿಂಗಳ ಹಿಂದೆ ಸರ್ವೋಚ್ಚ ನ್ಯಾಯಾಲಯದ ಇದೇ ವಿಭಾಗೀಯ ಪೀಠವು ಕೇರಳದಲ್ಲಿನ ಅಧ್ಯಾಪಕರ ಕೈ ಕತ್ತರಿಸಿದ ಓರ್ವ ಆರೋಪಿಗೆ ಔಷಧೋಪಚಾರ ಮಾಡಿದುದಕ್ಕಾಗಿ ಬಂಧಿಸಲಾದ ಡಾಕ್ಟರರಿಗೆ ಜಾಮೀನು ಮಂಜೂರು ಮಾಡಿತ್ತು. ‘ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಆಸಾಮ’ (ಉಲ್ಫಾ) ಈ ನಿರ್ಬಂಧ ಹೇರಲಾದ ಭಯೋತ್ಪಾದಕ ಸಂಘಟನೆಯ ಸದಸ್ಯನಾಗಿರುವ ಅರೂಪ ಭುಯಾನನಿಗೆ ಗೌಹಾಟಿ ನ್ಯಾಯಾಲಯವು ಸದ್ಯ ರದ್ದುಗೊಳಿಸಲಾದ ‘ಟಾಡಾ’ ಕಾನೂನಿನಡಿ ದೋಷಿಯೆಂದು ನಿರ್ಧರಿಸಿತ್ತು. ಈ ನಿರ್ಣಯದ ವಿರುದ್ಧ ಭೂಯಾನನು ಸರ್ವೋಚ್ಚ ನ್ಯಾಯಾಲಯದಲ್ಲಿ ಯಾಚಿಕೆಯೊಂದನ್ನು ದಾಖಲಿಸಿದ್ದನು. ಅದಕ್ಕೆ ತೀರ್ಪು ನೀಡುವಾಗ ಸರ್ವೋಚ್ಚ ನ್ಯಾಯಾಲಯವು ಭೂಯಾನನನ್ನು ನಿರ್ದೋಷಿಯೆಂದು ಘೋಷಿಸಿತು. ನಿಖರ ಪುರಾವೆಯ ಅಭಾವದಿಂದ ಭೂಯಾನನನ್ನು ನಿರ್ದೋಷಿಯೆಂದು ನಿರ್ಧರಿಸಲಾಯಿತು. ಅಪರಾಧ ಒಪ್ಪಿಕೊಳ್ಳಲು ಪೊಲೀಸ್ ‘ಥರ್ಡ್ ಡಿಗ್ರಿ’ ಪದ್ಧತಿಯನ್ನು ಉಪಯೋಗಿಸುತ್ತಾರೆ, ಎಂದು ವಿಭಾಗೀಯ ಪೀಠವು ತೀರ್ಪಿನಲ್ಲಿ ಹೇಳಿದೆ.
No comments:
Post a Comment