ಸರ್ವೋಚ್ಚ ನ್ಯಾಯಾಲಯದ ಸರ್ವಧರ್ಮಸಮಭಾವ!

ಸರ್ವಧರ್ಮಸಮಭಾವದ ಸಂಕಲ್ಪನೆಗೆ ಅನುಕೂಲಕ್ಕನುಸಾರ ಅರ್ಥ ಹಚ್ಚಿ ಅದರ ಆಧಾರದಿಂದ ಅಲ್ಪಸಂಖ್ಯಾತರ ಒಂದುಗಂಟಿನ ಮತಗಳ ರಾಜಕಾರಣ ಮಾಡುವ ಕಾಂಗ್ರೆಸ್ಸಿನ ದೋಷಪೂರ್ಣ ರಾಜಕಾರಣಕ್ಕೆ ಸರ್ವೋಚ್ಚ ನ್ಯಾಯಾಲಯವು ಅತ್ಯಂತ ದುಬಾರಿ ಛಡಿಯೇಟು ನೀಡಿದೆ. ‘ಹಿಂದೂಗಳು ಸಹಿಷ್ಣುಗಳಾಗಿರುವುದರಿಂದ ಪದೇ ಪದೇ ಅವರ ಕಾನೂನುಗಳಲ್ಲಿ ಮಾರ್ಪಾಡುಗಳನ್ನು ಮಾಡುವ ಸರಕಾರವು, ಇತರ ಪಂಥೀಯರ ಕಾನೂನಿನಲ್ಲಿ ಮಾರ್ಪಾಡು ಮಾಡುವ ಧೈರ್ಯವನ್ನು ಏಕೆ ತೋರಿಸುವುದಿಲ್ಲ? ಇದೆಂತಹ ಸರ್ವಧರ್ಮಸಮಭಾವ? ಧಾರ್ಮಿಕ ಕಾನೂನಿನಲ್ಲಿ ಮಾರ್ಪಾಡು ಮಾಡುವ ವಿಷಯದ ಮೇಲೆ ತೆಗೆದುಕೊಳ್ಳುವ ದ್ವಿಮುಖನೀತಿ, ಅಂಜುಬುರುಕ ಮತ್ತು ಪಕ್ಷಪಾತ ಧೋರಣೆಗಳಿಂದ ಜಾತ್ಯತೀತತೆಯೂ ನಾಶವಾಗುತ್ತದೆ’ ಎಂದು ತೀಕ್ಷ್ಣ ಶಬ್ದಗಳಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ದಲವೀರ ಭಂಡಾರಿಯವರು ಕಾಂಗ್ರೆಸ್ ಸರಕಾರಕ್ಕೆ ಛಡಿಯೇಟು ನೀಡಿದ್ದಾರೆ.
ಮದುವೆಯ ವಯಸ್ಸಿನ ಮಿತಿ ಎಲ್ಲ ಪಂಥದವರಿಗೆ ಅನ್ವಯಿಸಬೇಕು ಹಾಗೂ ಅದರಲ್ಲಿ ಸಮಾನತೆ ಬರಬೇಕು. ಅದಕ್ಕಾಗಿ ದೆಹಲಿಯ ಮಹಿಳಾ ಆಯೋಗವು ಸರ್ವೋಚ್ಚ ನ್ಯಾಯಲಯದಲ್ಲಿ ಯಾಚಿಕೆಯನ್ನು ದಾಖಲಿಸಿದೆ. ಈ ಆಯೋಗವು ತನ್ನ ಯಾಚಿಕೆಯಲ್ಲಿ, ‘ಮದುವೆಯ ವಯಸ್ಸಿನ ಬಗ್ಗೆ ಸರ್ವಧರ್ಮದ ಕಾನೂನಿನಲ್ಲಿ ಸಮಾನತೆ ಇಲ್ಲ. ಆದುದರಿಂದ ಗೊಂದಲಮಯ ಸ್ಥಿತಿಯಿದೆ. ಇತರ ಪಂಥೀಯರಿಗೂ ಏಕಪತ್ನಿ ಕಾನೂನು ಜ್ಯಾರಿಗೆ ಬರಲಿ. ಈ ಕಾನೂನು ಇತರ ಪಂಥೀಯರಿಗೆ ಅನ್ವಯಿಸದಿರುವುದರಿಂದ ಒಂದಕ್ಕಿಂತ ಹೆಚ್ಚು ಮದುವೆ ಮಾಡಿಕೊಳ್ಳುವವರ ಮನೆಯಲ್ಲಿ ಸ್ತ್ರೀಯ ಸ್ಥಿತಿ ಅತ್ಯಂತ ದಯನೀಯವಾಗಿರುತ್ತದೆ. ಅವರ ಧರ್ಮದಲ್ಲಿ ಯಾರಾದರೂ ಹಸ್ತಕ್ಷೇಪ ಮಾಡಿದರೆ ‘ನಮಗೆ ಸಹಿಸಲು ಆಗುವುದಿಲ್ಲ’, ಎಂದು ಇತರ ಪಂಥೀಯರ ಮುಖಂಡರು ಮತ್ತು ಅವರ ಧರ್ಮಗುರುಗಳು ಹೇಳುತ್ತಾರೆ. ಅದರಿಂದ ಸರಕಾರವೂ ಹಿಂದೆ ಸರಿಯಬೇಕಾಗುತ್ತದೆ. ಗೋವಾದಲ್ಲಿ ಪೋರ್ಚುಗೀಸರ ಕಾನೂನು ಇನ್ನು ತನಕ ಜ್ಯಾರಿಯಲ್ಲಿದೆ. ಈ ಕಾನೂನಿಗನುಸಾರ ಇತರ ಪಂಥೀಯರಿಗೂ ಏಕಪತ್ನಿ ಕಾನೂನು ಅನ್ವಯಿಸುತ್ತದೆ. ಅಲ್ಲಿ ಇತರ ಪಂಥೀಯ ಸ್ತ್ರೀಯರ ಸಾಮಾಜಿಕ ಸ್ಥಿತಿ ಹೆಚ್ಚು ಚೆನ್ನಾಗಿರುತ್ತದೆ’, ಎಂದು ಹೇಳಿದೆ.
ಇತರ ಪಂಥೀಯರ ದಬ್ಬಾಳಿಕೆ ಮತ್ತು ರಾಜಕಾರಣಿಗಳು!
ಮಹಿಳಾ ಆಯೋಗವು ಅತ್ಯಂತ ಸಮರ್ಪಕ ಮತ್ತು ನಿರ್ದಿಷ್ಠ ಅಂಶಗಳನ್ನು ಎತ್ತಿ ಹಿಡಿದು ಯಾಚಿಕೆಯನ್ನು ದಾಖಲಿಸಿದೆ. ನಾವು ಮೊದಲು ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ. ಮಹಿಳಾ ಆಯೋಗವು ಈ ರೀತಿ ಧೈರ್ಯದಿಂದ ಯಾಚಿಕೆಯನ್ನು ದಾಖಲಿಸಿ ಇತರ ಪಂಥೀಯರ ಶಕ್ತಿಯೆದುರು ತಲೆ ಬಾಗಿಸುವ ರಾಜಕಾರಣಿಗಳಿಗೆ ತೀಕ್ಷ್ಣ ಏಟು ನೀಡಿದೆ. ‘ಕಾನೂನು ಸುವ್ಯವಸ್ಥೆ ಕೆಡಬಹುದೆಂದು ಇತರ ಪಂಥೀಯರ ಪ್ರಾರ್ಥನಾಸ್ಥಳದ ಎದುರಿನಿಂದ ಗಣೇಶಮೂರ್ತಿ ವಿಸರ್ಜನೆಯ ಮೆರವಣಿಗೆಯನ್ನು ತೆಗೆದು ಕೊಂಡು ಹೋಗುತ್ತಿರುವಾಗ ವಾದ್ಯವನ್ನು ನಿಲ್ಲಿಸಿ’, ಎಂದು ಪೊಲೀಸರು ಪ್ರತಿ ವರ್ಷ ಹಿಂದೂಗಳಿಗೆ ಒತ್ತಡ ಹೇರುತ್ತಿರುತ್ತಾರೆ; ಆದರೆ ಧರ್ಮಾಂಧರ ಪ್ರಾರ್ಥನಾಸ್ಥಳಕ್ಕೆ ಹಚ್ಚಲಾದ ಬಾಂಗ್‌ದಿಂದ ಪ್ರತಿದಿನ ೫ ಬಾರಿ ದೊಡ್ಡ ಸ್ವರದಲ್ಲಿ ಕೂಗುತ್ತಿರುವಾಗ ಆಗುವ ಧ್ವನಿಪ್ರದೂಷಣೆ ಬಗ್ಗೆ ಮಾತ್ರ ಪೊಲೀಸರು ಚಕಾರವೆತ್ತುವುದಿಲ್ಲ, ಆಗ ಕಿವಿಯಲ್ಲಿ ಕೈಯಿಡುತ್ತಾರೆ. ಛತ್ರಪತಿ ಶಿವಾಜಿ ಮಹಾರಾಜರ ಶೌರ್ಯದ ಗುಣಗಾನ ಮಾಡುವಾಗ ಅಫ್ಝಲಖಾನ ವಧೆಯ ಚಿತ್ರ ಹಚ್ಚಿದರೆ ‘ಇತರ ಪಂಥೀಯರ ಭಾವನೆಗೆ ನೋವಾಗುತ್ತದೆ, ಆದುದರಿಂದ ಆ ಚಿತ್ರವನ್ನು ಹಚ್ಚಿದರೆ ನಿಮ್ಮನ್ನು ಬಂಧಿಸುತ್ತೇವೆ’, ಎಂದೂ ಪೊಲೀಸರು ಹೇಳುತ್ತಾರೆ. ‘ಕಾಶ್ಮೀರದಲ್ಲಿನ ಲಾಲ್‌ಚೌಕದಲ್ಲಿ ಗಣರಾಜ್ಯೋತ್ಸವದ ದಿನ ಭಾರತದ ಧ್ವಜ ಹಾರಿಸಬೇಡಿ, ಕಾಶ್ಮೀರದಲ್ಲಿ ಅಶಾಂತಿ ಹರಡುತ್ತದೆ. ಅನಂತರ ಆಕ್ರೋಶಿತ ಇತರ ಪಂಥೀಯರ ಗುಂಪನ್ನು ಚದುರಿಸುವುದು ಕಠಿಣವಾಗುತ್ತದೆ’ ಎಂದು ಅಲ್ಲಿನ ಮುಖ್ಯಮಂತ್ರಿ ಓಮರ ಅಬ್ದುಲ್ಲಾ ಹೇಳುತ್ತಾರೆ. ಇತರ ಪಂಥೀಯರ ಅಟ್ಟಹಾಸದಿಂದ ಪೊಲೀಸರು ಮತ್ತು ರಾಜಕಾರಣಿಗಳು ರಾಜಾರೋಷವಾಗಿ ಸಂವಿಧಾನದಲ್ಲಿನ ಸರ್ವಧರ್ಮ ಸಮಭಾವ ಎಂಬ ತತ್ತ್ವವನ್ನು ಧೈರ್ಯದಿಂದ ಕಾಲಿನಡಿ ತುಳಿಯುತ್ತಾರೆ. ಭಾರತೀಯ ಸಂವಿಧಾನವನ್ನು ವಿಡಂಬನೆ ಮಾಡುತ್ತಾರೆ. ಬೀದಿ ಬೀದಿ ಯಲ್ಲಿನ ಇತರ ಪಂಥೀಯರ ಜನಸಮೂಹಗಳ ಎದುರು ಪೊಲೀಸರು ಹೆದರುತ್ತಾರೆ. ಅಲ್ಲಿ ಅವರು ಹೇಳಿದಂತೆ ನಡೆಯುತ್ತಾರೆ. ಅವರ ವಿರುದ್ಧ ಕಾನೂನನ್ನು ಉಪಯೋಗಿಸಲು ಅವರು ಧೈರ್ಯ ತೋರಿಸುವುದಿಲ್ಲ. ಒಮ್ಮೆ ಮಹಾರಾಷ್ಟ್ರದ ಭಿವಂಡಿಯಲ್ಲಿ ಇತರ ಪಂಥೀಯರೊಂದಿಗೆ ಕಾನೂನಿನಂತೆ ವರ್ತಿಸಿದಕ್ಕಾಗಿ ಇತರ ಪಂಥೀಯರ ಗುಂಪು ಇಬ್ಬರು ಪೊಲೀಸರನ್ನು ಜೀವಂತವಾಗಿ ಸುಟ್ಟು ಕೊಂದಿದ್ದಾರೆ. ಒಂದೆಡೆ ಇತರ ಪಂಥೀಯರಿಗೆ ಹೆದರುವ ಪೊಲೀಸರಿದ್ದಾರೆ ಮತ್ತು ಇನ್ನೊಂದೆಡೆ ಇತರ ಪಂಥೀಯರ ಗುಂಪನ್ನು ಮತದ ಆಸೆಯಿಂದ ನೋಡಿ ಅವರ ಗಡ್ಡವನ್ನು ಸವರುವ ರಾಜಕಾರಣಿಗಳಿದ್ದಾರೆ. ಇಂತಹ ವಿಚಿತ್ರ ಸಮೀಕರಣದಿಂದ ಈ ದೇಶದಲ್ಲಿ ಗಲ್ಲಿಯಿಂದ ದಿಲ್ಲಿಯ ತನಕ ಸರ್ವಧರ್ಮಸಮಭಾವದಲ್ಲಿ ‘ಕಲಬೆರೆಕೆ’ ಕಂಡುಬರುತ್ತದೆ. ಈ ದೇಶದಲ್ಲಿ ಕುಟುಂಬ ಆಯೋಜನೆ ಕೇವಲ ಹಿಂದೂಗಳಿಗೆ ಮಾತ್ರ ಇದೆ. ಹಿಂದೂಗಳು ಕಾನೂನಿನ ಪಾಲನೆಯನ್ನು ಮಾಡಬೇಕಾಗುತ್ತದೆ. ಧ್ವನಿ ಪ್ರದೂಷಣೆಯ ನಿಯಮವನ್ನು ಹಿಂದೂಗಳು ಪಾಲಿಸಬೇಕಾಗುತ್ತದೆ. ರಸ್ತೆಯಲ್ಲಿ ದೇವಸ್ಥಾನಗಳನ್ನು ಕಟ್ಟಬಾರದೆಂಬ ಕರಾರು ಕೇವಲ ಹಿಂದೂಗಳಿಗೆ ತಗಲುತ್ತದೆ. ಆದರೆ ಅದೇ ರಸ್ತೆಯಲ್ಲಿ ಇತರ ಪಂಥೀಯರು ಅನಧಿಕೃತ ಪ್ರಾರ್ಥನಾಸ್ಥಳ ಕಟ್ಟಿದರೆ ಅದನ್ನು ರಾಜಕಾರಣಿಗಳು ಅಧಿಕೃತ ಮಾಡಿಸಿಕೊಡುತ್ತಾರೆ. ಪೊಲೀಸರ ಇಂತಹ ಅನೇಕ ಉದಾಹರಣೆಗಳಿವೆ. ಇಂತಹ ಸಾಮಾಜಿಕ ಅಸಮತೋಲ ವಾತಾವರಣದಲ್ಲಿ ನ್ಯಾಯಾಧೀಶ ದಲವೀರ ಭಂಡಾರಿಯವರ ವಿಚಾರಗಳು ಹಿಂದೂಗಳಿಗೆ ಕಿರಣವಾಗಿದೆ. ಗುಜರಾತಿನಲ್ಲಿ ಕೇವಲ ಹಿಂದೂಗಳ ಅನಧಿಕೃತ ದೇವಸ್ಥಾನಗಳ ಕಾರ್ಯಾಚರಣೆಗಳ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಯಾಚಿಕೆ ದಾಖಲಿಸಿದಾಗ ನ್ಯಾಯಾಧೀಶ ಭಂಡಾರಿಯವರು ಅದರ ಬಗ್ಗೆ ಆದೇಶ ನೀಡುವಾಗ ಮಸೀದಿ, ಇಗರ್ಜಿ ಇವುಗಳ ಅನಧಿಕೃತ ಸಂಖ್ಯೆಗಳು ಎಷ್ಟಿವೆ, ಎಂಬುದರ ಅಂಕಿಅಂಶಗಳನ್ನು ಎಲ್ಲ ರಾಜ್ಯಗಳು ತಿಳಿಸಬೇಕು, ಎಂದು ಹೇಳಿದ್ದರು. ಸರ್ವಧರ್ಮಸಮಭಾವ ಹೇಗಿರಬೇಕು, ಎಂದು ನ್ಯಾಯಮೂರ್ತಿ ಭಂಡಾರಿಯವರು ಆದರ್ಶ ಹಾಕಿ ಕೊಟ್ಟಿದ್ದಾರೆ. ಇಂತಹ ತೀರ್ಪುದಾರರಿದ್ದರೆ ಹಿಂದೂಗಳ ಮೇಲಿನ ಅನ್ಯಾಯ, ಅತ್ಯಾಚಾರಗಳಿಗೆ ನಿಜವಾಗಿಯೂ ನ್ಯಾಯ ದೊರಕುವುದು ಎಂಬುದು ಖಚಿತ!


No comments:

Post a Comment