ಭಾರತದಲ್ಲಿ ಗಲ್ಲಿಯಿಂದ ದಿಲ್ಲಿಯ ವರೆಗೆ ಹರಡಿದ ಭ್ರಷ್ಟಾಚಾರವು ಸದ್ಯ ಚರ್ಚೆಯ ವಿಷಯವಾಗಿದೆ. ಇದರ ಬಗ್ಗೆ ಭಾರತೀಯ ಜನತೆಯಲ್ಲಿ ನಿರಾಶೆಯ ಧ್ವನಿ ಕೇಳಿ ಬರುತ್ತಿದೆ. ‘ಭ್ರಷ್ಟಾಚಾರ ಮಿತಿಮೀರಿ ಹೋಗಿರುವುದರಿಂದ ಈಗ ಅದನ್ನು ಹಿಡಿತದಲ್ಲಿಡಲು ಸಾಧ್ಯವಿಲ್ಲ’, ಎಂಬ ನಿರಾಸಕ್ತಿಯು ಜನರಲ್ಲಿ ಕಂಡು ಬರುತ್ತಿದೆ. ನಿಜವೆಂದರೆ ದೇಶದ ಅಭಿವೃದ್ಧಿಗಾಗಿ ಭ್ರಷ್ಟಾಚಾರವೆಂಬ ಈ ಹುಳವನ್ನು ನಾಶ ಮಾಡಲು ಜನರ ಮನಸ್ಸಿನಲ್ಲಿರುವ ಹೊಲಸನ್ನು ದೂರ ಮಾಡುವುದೊಂದೇ ಪರಿಣಾಮಕಾರೀ ಉಪಾಯವಾಗಿದೆ. ಕೇವಲ ಜನಪ್ರಬೋಧನೆ ಮತ್ತು ಪ್ರಬಲ ಸಂಘಟನೆಗಳ ಮುಖಾಂತರ ಭ್ರಷ್ಟಾಚಾರದಲ್ಲಿ ಸಿಲುಕಿದ ಅನೇಕ ದೇಶಗಳು ಅಲ್ಲಿಂದ ಸುಖವಾಗಿ ಹೊರಬಂದಿವೆ. ಭಾರತೀಯರ ಮನಸ್ಸಿನಲ್ಲಿ ಯಾವಾಗ ಭ್ರಷ್ಟಾಚಾರದ ವಿರುದ್ಧ ಪ್ರಚಂಡವಾದ ಕ್ರೋಧ ನಿರ್ಮಾಣವಾಗುತ್ತದೆಯೋ ಅಂದಿನಿಂದ ಭಾರತವು ನಿಜವಾದ ಅರ್ಥದಲ್ಲಿ ಭ್ರಷ್ಟಾಚಾರದಿಂದ ಮುಕ್ತವಾಗುವುದು.
ಭ್ರಷ್ಟಾಚಾರಮುಕ್ತವಾದ ಹಾಂಗಕಾಂಗ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಕೊರಿಯಾ!
ಕ್ರಿ.ಶ.೧೯೭೪ರಲ್ಲಿ ಹಾಂಗಕಾಂಗ್ ದೇಶವು ಭ್ರಷ್ಟಾಚಾರದ ಪಟ್ಟಿಯಲ್ಲಿ ಜಗತ್ತಿನಲ್ಲೇ ಮೊದಲ ಸ್ಥಾನದಲ್ಲಿತ್ತು. ಅಲ್ಲಿ ಪೊಲೀಸರು ಮತ್ತು ಅಪರಾಧಿಗಳಲ್ಲಿ ಮೈತ್ರಿ ಬೆಸೆದಿತ್ತು. ಸಂಪೂರ್ಣ ದೇಶವು ಭ್ರಷ್ಟಾಚಾರದಲ್ಲಿ ಮುಳುಗಿದ್ದರಿಂದ ಅಲ್ಲಿ ಅರಾಜಕತೆಯು ತುಂಬಿ ತುಳುಕುತ್ತಿತ್ತು. ಅದರ ನಂತರ ಅಲ್ಲಿ ರಾಷ್ಟ್ರಾಭಿಮಾನಿಗಳು ಸಂಘಟಿತರಾದರು. ಭ್ರಷ್ಟಾಚಾರದ ವಿರುದ್ಧ ಲಕ್ಷಗಟ್ಟಲೆ ಜನರು ಸಂಘಟಿತ ಭಾವನೆಯಿಂದ ರಸ್ತೆಗಿಳಿದರು. ಅದರಿಂದ ರಾಜಕಾರಣಿಗಳ ಮೇಲೆ ಒತ್ತಡ ನಿರ್ಮಾಣವಾಯಿತು ಮತ್ತು ರಾಜಕಾರಣಿಗಳು ಭ್ರಷ್ಟಾಚಾರದ ವಿರುದ್ಧ ಕಠೋರ ಕಾರ್ಯಾಚರಣೆ ಮಾಡಬೇಕಾಯಿತು. ಪ್ರಚಂಡ ಇಚ್ಛಾಶಕ್ತಿಯ ಬಲದಲ್ಲಿ ಹಾಂಗಕಾಂಗ್‌ನ ಜನತೆಯು ಸಂಪೂರ್ಣ ದೇಶವನ್ನು ಭ್ರಷ್ಟಾಚಾರದ ತೆಕ್ಕೆಯಿಂದ ಹೊರಗೆಳೆಯಿತು. ಜನತೆಯ ನೇತೃತ್ವದಿಂದ ಅಲ್ಲಿ ‘ಭ್ರಷ್ಟಾಚಾರದ ವಿರುದ್ಧ ಸ್ವತಂತ್ರ ಆಯೋಗ’ (ಇಂಡಿಪೆಂಡೆಂಟ್ ಕಮಿಶನ್ ಎಗೇನೆಸ್ಟ್ ಕರಪ್ಶನ್)ವನ್ನು ಸ್ಥಾಪಿಸಲಾಯಿತು. ಈ ಆಯೋಗವು ಹಂತ ಹಂತವಾಗಿ ಕಾರ್ಯನಿರತವಾಗಿತ್ತು. ಎಲ್ಲಕ್ಕಿಂತ ಮೊದಲು ಭ್ರಷ್ಟಾಚಾರದ ಪ್ರಕರಣವನ್ನು ಬಹಿರಂಗ ಪಡಿಸುವುದು, ಅದನ್ನು ಜನತೆಯ ಎದುರಿನಲ್ಲಿ ಮಂಡಿಸುವುದು, ಅದರ ಬಗ್ಗೆ ಜನಪ್ರಬೋಧನೆ ಮಾಡುವುದು, ಅದಕ್ಕಾಗಿ ದೇಶದಾದ್ಯಂತ ಶಾಲೆ-ಮಹಾವಿದ್ಯಾಲಯಗಳಲ್ಲಿ ಹಾಗೂ ವಿವಿಧ ಸೇವಾಭಾವಿ ಸಂಸ್ಥೆಗಳಲ್ಲಿ ಸಭೆಯನ್ನು ತೆಗೆದುಕೊಳ್ಳುವುದು ಇತ್ಯಾದಿ ಈ ಆಯೋಗದ ಕಾರ್ಯಪದ್ಧತಿಯಾಗಿತ್ತು. ಈ ಆಯೋಗವು ಅನೇಕ ಕಠೋರ ಉಪಾಯಗಳನ್ನು ಆಯೋಜಿಸಿತ್ತು. ಅದರಲ್ಲಿ ಭ್ರಷ್ಟ ಪೊಲೀಸ್ ಅಧಿಕಾರಿಗಳನ್ನು ಸೆರೆಮನೆಗೆ ತಳ್ಳುವುದು, ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸುವುದು ಇತ್ಯಾದಿ ಕೃತಿಗಳನ್ನೂ ತಕ್ಷಣ ಕೈಗೊಂಡಿತ್ತು. ಅದಕ್ಕೆ ಕೆಲವು ಪ್ರವೃತ್ತಿಯವರಿಂದ ವಿರೋಧವಾಯಿತು; ಆದರೆ ಜನಮತದೆದುರು ಆ ವಿರೋಧವು ಬದಿಗೆ ಸರಿಯಿತು. ಹಾಂಗಕಾಂಗ್‌ನಲ್ಲಿ ಇಂದಿಗೂ ಈ ಆಯೋಗವು ಇದೇ ಪದ್ಧತಿಯಿಂದ ಕಾರ್ಯನಿರತವಾಗಿದೆ. ಈ ಆಯೋಗದ ವತಿಯಿಂದ ಸರಕಾರಿ ಮತ್ತು ಖಾಸಗಿ ಸಂಸ್ಥೆಯ ಸದಸ್ಯರಿಗೆ ಭ್ರಷ್ಟಾಚಾರದ ವಿರುದ್ಧ ತರಬೇತಿ ನೀಡಲಾಗಿದೆ. ಅದರ ನಂತರ ಆಸ್ಟ್ರೇಲಿಯಾದಲ್ಲಿಯೂ ‘ಭ್ರಷ್ಟಾಚಾರದ ವಿರುದ್ಧ ಸ್ವತಂತ್ರ ಆಯೋಗ’ವನ್ನು ಸ್ಥಾಪಿಸಲಾಯಿತು. ಅಲ್ಲಿಯೂ ಗಮನಾರ್ಹ ಪರಿಣಾಮಗಳು ಕಂಡುಬಂದಿವೆ. ಕ್ರಿ.ಶ. ೨೦೦೨ರಲ್ಲಿ ದಕ್ಷಿಣ ಕೊರಿಯಾ ಮತ್ತು ಇಂಡೋನೇಶಿಯಾ ದೇಶದಲ್ಲಿಯೂ ಈ ಆಯೋಗವನ್ನು ಸ್ಥಾಪಿಸಿ ದೇಶವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಲಾಯಿತು.
ಭ್ರಷ್ಟಾಚಾರಮುಕ್ತಕ್ಕೆ ಸಂತರ ನೇತೃತ್ವದ ಸಂಘಟನೆ ಬೇಕು
‘೨-ಜಿ ಸ್ಪೆಕ್ಟ್ರಂ ಹಗರಣ’, ‘ಕಾಮನ್‌ವೆಲ್ತ್ ಸ್ಪರ್ಧಾ ಹಗರಣ’, ‘ಆದರ್ಶ ಹಗರಣ’ ಇವೆಲ್ಲ ಭಾರತದಲ್ಲಿನ ಭ್ರಷ್ಟಾಚಾರದ ಕೆಲವು ತಾಜಾ ಉದಾಹರಣೆಗಳಾಗಿವೆ. ಅದರ ಹೊರತು ಕಳೆದ ಆರು ದಶಕಗಳಿಂದ ಈ ದೇಶದಲ್ಲಿನ ಭ್ರಷ್ಟ ರಾಜಕಾರಣಿಗಳು ಮತ್ತು ಉದ್ಯೋಗಿಗಳು ಜನತೆಯನ್ನು ದೋಚಿ ೨೦ಲಕ್ಷ ೮೫ ಸಾವಿರ ಕೋಟಿ ರೂಪಾಯಿಗಳ ಕಪ್ಪು ಹಣವನ್ನು ‘ಸ್ವಿಸ್ ಬ್ಯಾಂಕ್’ನಲ್ಲಿ ಸಂಗ್ರಹಿಸಿಟ್ಟಿದ್ದಾರೆ. ದೇಶದಲ್ಲಿ ಅತಿಶಯ ಹಣವಿದೆ, ಸಾಧನಾ ಸಾಮಗ್ರಿಗಳಿವೆ, ನಿಸರ್ಗ ಸಂಪತ್ತಿದೆ; ಆದರೆ ಈಗಿನ ಭ್ರಷ್ಟ ರಾಜಕಾರಣಿಗಳು ಮತ್ತು ವ್ಯಾಪಾರಿಗಳು ಈ ರೀತಿಯಲ್ಲಿ ಅವುಗಳನ್ನು ದೋಚುತ್ತಿದ್ದಾರೆ, ಇದರಿಂದ ದೇಶದಲ್ಲಿನ ಒಂದು ವರ್ಗವು ಬಡತನದ ಇನ್ನೂ ಕೆಳ ಮಟ್ಟಕ್ಕೆ ತಲುಪುತ್ತಿದ್ದರೆ ಇನ್ನೊಂದು ವರ್ಗವು ಶ್ರೀಮಂತಿಕೆಯ ಇನ್ನೂ ಮೇಲ್ಮಟ್ಟಕ್ಕೆ ತಲುಪುತ್ತಿದೆ. ಭಾರತದಲ್ಲಿನ ಜನತೆಯಲ್ಲಿಯೂ ಹಾಂಗಕಾಂಗ್ ಮತ್ತು ಆಸ್ಟ್ರೇಲಿಯಾದ ಜನತೆಯಂತೆ ರಾಷ್ಟ್ರಾಭಿಮಾನದ ಚೇತನಾ ನಿರ್ಮಾಣವಾಗಬೇಕು. ಭಾರತವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಲು ಯೋಗಗುರು ಪೂ.ರಾಮದೇವಬಾಬಾರವರು ನೇತೃತ್ವ ವಹಿಸಿರುವುದು ಭಾರತದ ಭಾಗ್ಯವಾಗಿದೆ. ಅದರ ಬಗ್ಗೆ ಅವರು, ‘ನಾನು ಸಂಪೂರ್ಣ ಭಾರತವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸುವವನಿದ್ದು ನನ್ನ ಈ ಸಂಕಲ್ಪವು ಸಿದ್ಧಿಗೆ ಒಯ್ಯಲು ದೇಶದಾದ್ಯಂತ ೩ಕೋಟಿ ಜನತೆಯ ಸಮುದಾಯವಾದ ಸಂಪೂರ್ಣ ದೇಶವನ್ನು ಬದಲಾಯಿಸಲಿದ್ದೇನೆ. ಈ ಕಾರ್ಯದಲ್ಲಿ ಯಾರಾದರೂ ಅಡ್ಡ ಬಂದರೆ ನಾನು ಅವರನ್ನು ತಿವಿದು ಹಾಕುವೆನು ಎಂದು ಹೇಳಿದ್ದಾರೆ. ಪ್ರಖರ ರಾಷ್ಟ್ರಾಭಿಮಾನದಿಂದ ಪ್ರೇರಿತರಾದ ಪೂ.ರಾಮದೇವಬಾಬಾ ಇವರು ಭ್ರಷ್ಟಾಚಾರದ ವಿರುದ್ಧ ಜನರನ್ನು ಸಂಘಟಿಸಲು ಪಣ ತೊಟ್ಟಿದ್ದಾರೆ. ಭಾರತೀಯರೂ ಈಗ ತಮ್ಮಲ್ಲಿ ಪ್ರಖರ ರಾಷ್ಟ್ರಾಭಿಮಾನ ಜಾಗೃತಗೊಳಿಸಿ ಪೂ.ರಾಮದೇವಬಾಬಾ ರವರ ಜೊತೆಗೆ ದೇಶವನ್ನು ಉಳಿಸಲು ತಮ್ಮನ್ನು ಸಮರ್ಪಿಸಿಕೊಂಡಾಗಲೇ ದೇಶವು ಭ್ರಷ್ಟಾಚಾರದಿಂದ ಮುಕ್ತವಾಗುವುದು.

No comments:
Post a Comment