ಬ್ರಹ್ಮಸನ್ನಿಧಿ ದೈವಸ್ಥಾನದ ಸ್ಥಳಾಂತರಕ್ಕೆ ಯತ್ನ!

ಹಿಂದೂಗಳೇ, ಸರಕಾರ ಉದ್ಧಟತನದಿಂದ ಮತ್ತು ಹಿಂದೂದ್ವೇಷಿಗಳು ಅಪರಾಧಿ ಮಾರ್ಗದಿಂದ ನಿಮ್ಮ ಭಾವನೆಗಳನ್ನು ಹೊಸಕುವ ಮೂಲಕ ಮಾಡುತ್ತಿರುವ ಶ್ರದ್ಧಾಭಗ್ನವನ್ನು ತಡೆಗಟ್ಟಿರಿ!

೮೦೦ ವರ್ಷಗಳಿಗಿಂತಲೂ ಪುರಾತನ ದೈವಸ್ಥಾನ!
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬ್ರಹ್ಮರಕುಟ್ಲುವಿನಲ್ಲಿರುವ ೮೦೦ ವರ್ಷಕ್ಕಿಂತಲೂ ಹೆಚ್ಚು ಪುರಾತನವಾದ ‘ಪೆರಿಯೋಡಿಬೀಡು ಕನ ಪಾಡಿತ್ತಾಯ ಧೂಮಾವತಿ ಬಂಟ ಮತ್ತು ಪರಿವಾರ ದೈವಗಳ ದೇವಸ್ಥಾನ’ ಎಂಬ ಧಾರ್ಮಿಕ ಕೇಂದ್ರವನ್ನು ರಸ್ತೆ ಅಗಲೀಕರಣದ ನೆಪದಲ್ಲಿ ಸ್ಥಳಾಂತರಿಸಲು ರಾಜ್ಯ ಭಾಜಪ ಸರಕಾರವು ಪ್ರಯತ್ನಿಸುತ್ತಿದೆ. ಇದನ್ನು ಸ್ಥಳೀಯ ಹಿಂದೂಗಳು ಸಂಘಟಿತರಾಗಿ ವಿರೋಧಿಸುತ್ತಿದ್ದಾರೆ.

ಸರಕಾರವು ರಾಷ್ಟ್ರೀಯ ಹೆದ್ದಾರಿ ೪೮ರ ಅಗಲೀಕರಣಕ್ಕಾಗಿ ಈ ದೈವಸ್ಥಾನವನ್ನು ಸ್ಥಳಾಂತರಿಸಲು ಪ್ರಯತ್ನಿಸುತ್ತಿದೆ. ಇದನ್ನು ವಿರೋಧಿಸಲು ಸ್ಥಳೀಯ ಹಿಂದೂಗಳು ‘ಬ್ರಹ್ಮಸನ್ನಿಧಿ ಹೋರಾಟ ಸಮಿತಿ’ಯನ್ನು ಸ್ಥಾಪಿಸಿದ್ದಾರೆ. ಈ ಸಮಿತಿಯು ೮ ನವೆಂಬರ್ ೨೦೦೯ ರಂದು ೬೦೦ ಭಕ್ತಜನರನ್ನು ಸೇರಿಸಿಕೊಂಡು ಬ್ರಹ್ಮಸನ್ನಿಧಿಯನ್ನು ರಕ್ಷಿಸಲು ಪ್ರತಿಜ್ಞೆಯನ್ನು ಮಾಡಿತ್ತು. ಅನಂತರ ಹಿಂದೂಗಳು ೨೦ ನವೆಂಬರ್ ೨೦೦೯ ರಂದು ಜಡಿ ಮಳೆಯಲ್ಲಿಯೂ ‘ರಸ್ತೆ ತಡೆ’ ಆಂದೋಲನ ನಡೆಸಿದ್ದರು. ಈ ಸಮಯದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ನೀಡಿದಾಗ ರಸ್ತೆಯ ಕಾಮಗಾರಿಯನ್ನು ನಿಲ್ಲಿಸಲಾಗಿತ್ತು. ಸ್ವಲ್ಪ ಸಮಯದ ನಂತರ ಸರಕಾರವು ಮತ್ತೊಮ್ಮೆ ಈ ಕಾಮಗಾರಿಯನ್ನು ಆರಂಭಿಸಲಿದೆ ಎಂಬ ಮಾಹಿತಿಯು ದೊರಕಿದಾಗ ಹಿಂದೂಗಳು ಮತ್ತೊಮ್ಮೆ ಒಟ್ಟಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಬ್ರಹ್ಮಸನ್ನಿಧಿಯ ಎದುರು ರಸ್ತೆ ಅಗಲೀಕರಣಕ್ಕಾಗಿ ಅನುಕೂಲವಾದ ಸರಕಾರೀ ಭೂಮಿಯಿದೆ. ಅಲ್ಲಿ ಪರ್ಯಾಯ ಮಾರ್ಗವನ್ನು ಮಾಡಬಹುದು ಎಂದು ಈ ಹಿಂದೂಗಳು ಸೂಚಿಸಿದರು. ಅನಂತರ ೨೧ ಮೇ ೨೦೧೦ರಂದು  ಮುಖ್ಯಮಂತ್ರಿ ಯಡಿಯೂರಪ್ಪನವರು ಬ್ರಹ್ಮಸನ್ನಿಧಿಯನ್ನು ಸ್ಥಳಾಂತರಿಸಲು ಆದೇಶ ನೀಡಿದರು. ಅದಕ್ಕೆ ಹಿಂದೂಗಳು ಮೇ ೨೨ರ ‘ಹೊಸ ದಿಗಂತ’ ದಿನಪತ್ರಿಕೆಯ ಮಾಧ್ಯಮದಿಂದ ಈ ಆದೇಶವನ್ನು ಮರುಪರಿಶೀಲಿಸಬೇಕೆಂದು ಮನವಿಯನ್ನು ಮಾಡಿದ್ದರು. ಸರ್ವೋಚ್ಚ ನ್ಯಾಯಾಲಯದ ಆದೇಶದ ನಂತರ ಕಳುಹಿಸಲಾಗಿದ್ದ ಸರಕಾರಿ ನೋಟಿಸ್‌ಗೆ ಪ್ರತ್ಯುತ್ತರವೆಂದು ಗ್ರಾಮಸ್ಥರ ಹಸ್ತಾಕ್ಷರ, ಹಿಂದಿನ ದಾಖಲೆಗಳು, ಹಿರಿಯರ ಹೇಳಿಕೆಗಳು, ದೈವಪ್ರಶ್ನೆಯ ಪ್ರತಿ ಸಮೇತ ಒಂದು ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಯಿತು.
ಬ್ರಹ್ಮಸನ್ನಿಧಿ ವಿಷಯದಲ್ಲಿನ ಮುಂದಿನ ಘಟನೆಗಳು ಬುದ್ಧಿಪ್ರಾಮಾಣ್ಯವಾದಿಗಳಿಗೆ ಛಡಿಯೇಟು !
೧.ಕ್ರಿಸ್ತಶಕ ೧೯೭೪ರಲ್ಲಿ ಬಂದ ಚಂಡಮಾರುತದಿಂದ ಬ್ರಹ್ನಸನ್ನಿಧಿಯು ಸಂಪೂರ್ಣವಾಗಿ ಮುಳುಗಡೆಯಾಗಿತ್ತು. ಕೇವಲ ಅದರ ಛಾವಣಿಯು ತೇಲುತ್ತಿತ್ತು. ಆಗ ಒಂದು ಹೆಬ್ಬಾವು ಅದರ ಸುತ್ತಲೂ ಅದನ್ನು ಸುತ್ತು ಹಾಕಿ ರಕ್ಷಿಸಿತ್ತು.
೨.ರಸ್ತೆಯ ಕಾಮಗಾರಿ ನಡೆಸುತ್ತಿರುವಾಗ ಸನ್ನಿಧಿಯನ್ನು ಕೆಡಹಲು ಬಂದ ಒಂದು ಯಂತ್ರವು ಅಲ್ಲಿಯೇ ಸುಟ್ಟು ಭಸ್ಮವಾಗಿತ್ತು.
೩.ರಸ್ತೆಯ ಮಾಪನ ಪಡೆಯುವ ಪ್ರಕ್ರಿಯೆಯು ನಡೆಯುತ್ತಿರುವಾಗ ಓರ್ವ ಅಭಿಯಂತರನಿಗೆ ದೂರದರ್ಶಕದಲ್ಲಿ ಐದು ಹೆಡೆಗಳ ಹಾವೊಂದು ಕಾಣಿಸಿತ್ತು.
೪.ಬುಲ್ಡೋಜರ್ ನಿಂದ ಬ್ರಹ್ಮಸನ್ನಿಧಿಯ ಸುತ್ತಲೂ ಮರಗಳನ್ನು ಕೆಡಹಲು ಪ್ರಯತ್ನಿಸಿದಾಗ ಬುಲ್ಡೋಜರ್ ಕೆಟ್ಟು ಹೋಯಿತು.
೫.ಅನೇಕ ಅಧಿಕಾರಿಗಳು ಈ ದುಷ್ಕೃತ್ಯಕ್ಕೆ ಕೈಹಾಕಿದ್ದರೂ ಅವರೆಲ್ಲರೂ ವಿಫಲರಾಗಿ ಪಾಪ ಪರಿಹಾರಕ್ಕಾಗಿ ಇಲ್ಲಿಯೇ ಬಂದಿದ್ದಾರೆ.
೬.ಇತ್ತೀಚಿನ ದಿನಗಳಲ್ಲಿ ಊರಿನ ಹಲವು ಕಡೆಗಳಲ್ಲಿ ವಿಚಿತ್ರ ರೂಪದ ಕೋಣವೊಂದು ಗ್ರಾಮಸ್ಥರಿಗೆ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಅವರೆದುರಿನಲ್ಲಿಯೇ ಮಾಯವಾದ ಘಟನೆಗಳಾಗುತ್ತಿವೆ.
೭.ಬ್ರಹ್ನಸನ್ನಿಧಿಯ ಮೊಕ್ತೇಸರರು ಮತ್ತು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ದೈವಪ್ರಶ್ನೆಯನ್ನು ಇಡಲಾಗಿತ್ತು. ಅದರಲ್ಲಿ ಈ ಬ್ರಹ್ನಸನ್ನಿಧಿಯನ್ನು ಯಾವುದೇ ಕಾರಣಕ್ಕೂ ಇಲ್ಲಿಂದ ಸ್ಥಳಾಂತರಿಸಬಾರದು ಮತ್ತು ಹಾಗೆ ಮಾಡಿದರೆ ಪ್ರಾಣಹಾನಿ ಸಂಭವಿಸಬಹುದು ಎಂಬ ಉತ್ತರ ಬಂದಿತ್ತು.

No comments:

Post a Comment