ಸನಾತನವು ಹೇಳುತ್ತಿದ್ದ ಕೆಟ್ಟ ಕಾಲ ಇದೇ !
ಮಹಾಲಿಂಗಪುರ (ಕರ್ನಾಟಕ): ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಲ್ಲಿರುವ ಬಸವಣ್ಣನವರ ಪುತ್ಥಳಿಯನ್ನು ಫೆಬ್ರವರಿ ೨ ರಂದು ರಾತ್ರಿ ಅಜ್ಞಾತ ಹಿಂದೂದ್ವೇಷಿಗಳು ಭಗ್ನಗೊಳಿಸಿದ್ದಾರೆ. ಈ ಘಟನೆಯ ನಂತರ ಅಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. (ಒಂದೆಡೆ ಕರ್ನಾಟಕದ ಭಾಜಪ ಸರಕಾರವು ಹಿಂದೂಗಳ ೫ ಸಾವಿರ ದೇವಸ್ಥಾನಗಳನ್ನು ಕೆಡಹುತ್ತಿದೆ ಮತ್ತು ಇನ್ನೊಂದೆಡೆ ಹಿಂದೂ ದ್ವೇಷಿಗಳು ಹಿಂದೂಗಳ ಮೇಲೆ ಆಘಾತ ಮಾಡುತ್ತಿದ್ದಾರೆ. ಹೀಗೆ ಅಡ್ಡಕತ್ತರಿಯಲ್ಲಿ ಸಿಕ್ಕಿಕೊಂಡ ಹಿಂದೂಗಳು ಈಗ ಸಂಘಟಿತರಾಗಿ ರಾಷ್ಟ್ರ ಮತ್ತು ಧರ್ಮ ಪ್ರೇಮಿಗಳ ಕೈಗೆ ಅಧಿಕಾರವನ್ನು ಒಪ್ಪಿಸಲು ಸಿದ್ಧರಾಗಬೇಕು-ಸಂಪಾದಕರು) ಹಿಂದೂದ್ವೇಷಿಗಳು ಮೂರ್ತಿಯನ್ನು ಭಗ್ನಗೊಳಿಸುವ ಮೊದಲು ಈ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದರು. ಪೊಲೀಸರು ಈ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಈ ಪುತ್ಥಳಿಯ ಮೂಗನ್ನು ಕಲ್ಲಿನಿಂದ ಜಜ್ಜಲಾಗಿದ್ದು ಕುತ್ತಿಗೆ ಯನ್ನು ಸೀಳಲು ಪ್ರಯತ್ನಿಸಲಾಗಿದೆ.
No comments:
Post a Comment