ನಿಪ್ಪಾಣಿಯಲ್ಲಿ ‘ಮೋರ್ಚಾ’, ‘ರಸ್ತೆ ತಡೆ’ ಮತ್ತು ಆಯುಕ್ತರಿಗೆ ಮುತ್ತಿಗೆ

ರಾಜ್ಯ ಭಾಜಪ ಸರಕಾರದ ಹಿಂದೂದ್ರೋಹ!

ನಿಪ್ಪಾಣಿ (ಬೆಳಗಾವಿ ಜಿಲ್ಲೆ): ಇಲ್ಲಿನ ಆಡಳಿತಾಧಿಕಾರಿಗಳು ನಗರದ ೨೯ ದೇವಸ್ಥಾನಗಳನ್ನು ಅನಧಿಕೃತವೆಂದು ನಿರ್ಧರಿಸಿ ಅವುಗಳನ್ನು ಕೆಡವಲು ದೇವಸ್ಥಾನಗಳ ಧರ್ಮದರ್ಶಿಗಳಿಗೆ ನೋಟಿಸು ಕಳುಹಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಭಕ್ತರು ನಗರಪಾಲಿಕೆ ಎದುರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಆಯುಕ್ತರ ವಿಳಂಬನೀತಿಯಿಂದ ರೊಚ್ಚಿಗೆದ್ದು ಅವರಿಗೆ ಮುತ್ತಿಗೆ ಹಾಕಿದರು. ಕೆಲವು ಸಮಯ ರಸ್ತೆ ತಡೆ ಆಂದೋಲನವನ್ನೂ ನಡೆಸಲಾಯಿತು.
(ಹಿಂದೂಗಳ ದೇವಸ್ಥಾನಗಳನ್ನು ಅನಧಿಕೃತವೆಂದು ನಿರ್ಧರಿಸಿ ಅವುಗಳನ್ನು ಕೆಡವಲು ಹಾತೊರೆಯುತ್ತಿರುವ ರಾಜ್ಯ ಸರಕಾರ! ಹೀಗೆ ಮಾಡಿ ಸರಕಾರ ಹಿಂದೂಗಳ ಆಕ್ರೋಶದೊಂದಿಗೆ ದೇವತೆಗಳ ಅವಕೃಪೆಗೂ ಪಾತ್ರರಾಗುತ್ತಿದ್ದಾರೆ. -ಸಂಪಾದಕರು) ನೋಟಿಸ್ ದೊರಕಿದ ನಂತರ ಫೆಬ್ರವರಿ ೧ ರಂದು ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಹಿಂದೂ ಜನಜಾಗೃತಿ ಸಮಿತಿ, ದೇವಸ್ಥಾನಗಳ ವಿಶ್ವಸ್ಥರು, ಭಕ್ತರು ಮತ್ತು ಧರ್ಮಾಭಿಮಾನಿಗಳ ಸಭೆಯು ನಡೆಯಿತು. ಈ ಸಭೆಯಲ್ಲಿ ನಿರ್ಧರಿಸಿದಂತೆ ಫೆಬ್ರವರಿ ೨ ರಂದು ಬೆಳಗ್ಗೆ ಶ್ರೀರಾಮ ಮಂದಿರದಿಂದ ಪ್ರತಿಭಟನಾ ಮೆರವಣಿಗೆಯನ್ನು ನಡೆಸಲಾಯಿತು. ಈ ಮೆರವಣಿಗೆಯಲ್ಲಿ ೩೨೫ ಪುರುಷರು ಹಾಗೂ ೭೫ ಮಹಿಳಾ ಧರ್ಮಾಭಿಮಾನಿ ಹಿಂದೂಗಳು ಪಾಲ್ಗೊಂಡಿದ್ದರು.
ತಹಶೀಲ್ದಾರರ ಕಛೇರಿಯಲ್ಲಿ ಅವರ ಪರವಾಗಿ ಎಸ್.ಎನ್.ನಾಯಿಕರವರು ಮನವಿಯನ್ನು ಸ್ವೀಕರಿಸಿದರು. ಅನಂತರ ಈ ಮೆರವಣಿಗೆಯು ನಗರ ಪಾಲಿಕೆಗೆ ಬಂದಿತು. ಆಯುಕ್ತ ಕೆಂಪ ಹನುಮಂತಯ್ಯ ಇವರು ಆಂದೋಲನ ಮಾಡುವವರನ್ನು ಭೇಟಿಯಾಗುವ ಬದಲು ಕಛೇರಿಯ ಕೆಲಸಗಳಿಗೆ ಹೆಚ್ಚಿನ ಮಹತ್ವ ನೀಡಿದರು. ಸ್ವಲ್ಪ ಹೊತ್ತಿನ ನಂತರ ಅವರು ಭೇಟಿಯಾಗಲು ಬಂದಾಗ ಆಕ್ರೋಶಿತ ಆಂದೋಲನಕಾರರು ಅವರಿಗೆ ಮುತ್ತಿಗೆ ಹಾಕಿದರು. ‘ಜನಾಭಿಪ್ರಾಯಕ್ಕೆ ಏನೂ ಬೆಲೆಯಿಲ್ಲವೇ’ ಎಂದು ಪ್ರಶ್ನಿಸಿ ಮುತ್ತಿಗೆ ಹಾಕಿದರು. ಅದೇ ಸಮಯಕ್ಕೆ ಕೆಲವು ನಾಗರಿಕರು ‘ರಸ್ತೆ ತಡೆ’ ಆಂದೋಲನ ನಡೆಸಿದರು. ಆಯುಕ್ತರು ಕ್ಷಮೆ ಯಾಚಿಸಿದ ನಂತರ ಆಂದೋಲನಕಾರರು ಚರ್ಚೆಗಾಗಿ ಸಭಾಗೃಹಕ್ಕೆ ಹೋದರು. (ಜನಾಭಿಪ್ರಾಯಕ್ಕೆ ಬೆಲೆ ನೀಡದವರು ಕ್ಷಮೆ ಯಾಚಿಸುವಂತೆ ಮಾಡಿದ ಹಿಂದೂ ಧರ್ಮಾಭಿಮಾನಿಗಳಿಗೆ ಅಭಿನಂದನೆ! - ಸಂಪಾದಕರು)
ಆಯುಕ್ತರು ಸದರೀ ಮನವಿ ಮತ್ತು ಆಂದೋಲನಕಾರರ ಹೇಳಿಕೆಯನ್ನು ವರಿಷ್ಠರಿಗೆ ತಿಳಿಸುತ್ತೇನೆ ಎಂದು ಹೇಳಿದರು.

No comments:

Post a Comment