ಹಿಂದೂ ಜನಜಾಗೃತಿ ಸಮಿತಿಯ ವಿರಾಟ್ ಹಿಂದೂ ಧರ್ಮಜಾಗೃತಿ ಸಭೆ

ಜಳಗಾವ್: ಜೆಮ್ಸ್‌ಲೆನ್‌ನು ಜೀಜಾ ಮಾತೆ ಮತ್ತು ಮಕ್ಬುಲ ಫಿದಾ ಹುಸೇನನು ಭಾರತಮಾತೆಯ ವಿಡಂಬನೆ ಮಾಡಿದನು. ಹಿಂದೂಗಳಲ್ಲಿರುವ ಅಸಂಘಟಿತತನದಿಂದ ವಿಡಂಬನೆಯಾಗಿದೆ. ಹಿಂದೂ ಯುವತಿಯರು, ‘ಲವ್ ಜಿಹಾದ್’ಗಾಗಿ ಹತ್ತಿರ ಬರುವ ಧರ್ಮಾಂಧ ಯುವಕನಿಗೆ ತಕ್ಕ ಪಾಠ ಕಲಿಸಲು ಸಿದ್ಧರಾಗಬೇಕು. ಸೋನಿಯಾ ಗಾಂಧಿ ಭಾರತದಲ್ಲಿ ಹುಟ್ಟದಿದ್ದಾಗ ಅವರಿಗೆ ರಾಮಾಯಣ ಮತ್ತು ಮಹಾಭಾರತ ಹೇಗೆ ತಿಳಿಯುವುದು?
ನಿಖಿಲ ವಾಗಳೆಯವರು ತಾನು ೫ನಿ. ಪ್ರಶ್ನೆ ಕೇಳುತ್ತಾನೆ ಮತ್ತು ಬಂದವರಿಗೆ ಒಂದು ನಿಮಿಷದಲ್ಲಿ ಉತ್ತರ ಹೇಳಲು ಹೇಳುತ್ತಾನೆ. ಇಂತಹವರಿಗೆ ಪಾಠ ಕಲಿಸಲು ಇಂದು ಪ್ರತಿಯೊಬ್ಬ ಹಿಂದೂ ಸಜ್ಜಾಗಬೇಕು’ ಎಂದು ಹ.ಭ.ಪ. ಜ್ಞಾನೇಶ್ವರ ಮಹಾರಾಜ ಪಾಟೀಲ (ಜಳಕೆಕರ)ರವರು ಎಚ್ಚರಿಕೆ ನೀಡಿದ್ದಾರೆ. ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಇಲ್ಲಿನ ಶಿವತೀರ್ಥ (ಜಿ.ಎಸ್.ಮೈದಾನ) ಎಂಬಲ್ಲಿ ಆಯೋಜಿಸಿದ ವಿರಾಟ ಹಿಂದೂ ಧರ್ಮಜಾಗೃತಿ ಸಭೆಯಲ್ಲಿ ಅವರು ಉಪಸ್ಥಿತರನ್ನು ಸಂಬೋಧಿಸುತ್ತಿದ್ದರು. ಹಿಂದೂಗಳ ಮೇಲಿನ ಆಘಾತಗಳನ್ನು ಎದುರಿಸಲು ಮತ್ತು ಹಿಂದೂಗಳ ಹಿತಕ್ಕಾಗಿ ಹಿಂದೂ ರಾಷ್ಟ್ರವೇ ಆವಶ್ಯಕವೆಂದು ಸಮಸ್ತ ವಕ್ತಾರರು ಈ ಸಭೆಯಲ್ಲಿ ಸ್ಪಷ್ಟ ಪಡಿಸಿದರು. ಈ ಸಭೆಯಲ್ಲಿ ೨೨ಸಾವಿರ ಹಿಂದೂಗಳು ಉಪಸ್ಥಿತರಿದ್ದು ‘ಸಂಘೇ ಶಕ್ತಿ ಕಲೌ ಯುಗೇ’ ಎಂಬುದರ ಅನುಭೂತಿಯನ್ನು ಪಡೆದರು. ಈ ಪ್ರಸಂಗದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಗುಜರಾತ ರಾಜ್ಯದ ವಕ್ತಾರ ಶ್ರೀ.ರಮೇಶ ಶಿಂದೆ ಮತ್ತು ಸನಾತನ ಸಂಸ್ಥೆಯ ವಕ್ತಾರ ಶ್ರೀ. ಅಭಯ ವರ್ತಕರವರೂ ಹಿಂದೂಗಳಿಗೆ ಮಾರ್ಗದರ್ಶನ ಮಾಡಿದರು.
ಹಿಂದುತ್ವದ ವಟವೃಕ್ಷ!
ಹಿಂದೂ ಜನಜಾಗೃತಿ ಸಮಿತಿಯು ೨೦೦೭ರಿಂದ ಹಿಂದೂಗಳ ಸಂಘಟನೆಗಾಗಿ ಹಿಂದೂ ಧರ್ಮಜಾಗೃತಿ ಸಭೆಯನ್ನು ನಡೆಸಲು ಪ್ರಾರಂಭಿಸಿತು. ಜಳಗಾವ್‌ನಲ್ಲಿ ನಡೆದ ಸಭೆಗೆ ಉತ್ತರೋತ್ತರ ದೊರಕುವ ಬೆಂಬಲವು ಹಿಂದುತ್ವದ ಬೀಜವು ವಟವೃಕ್ಷವಾಗಿ ಬೆಳೆದಿರುವ ಸಂಕೇತವಾಗಿದೆ. ೨೦೦೮ರಲ್ಲಿ ಇಲ್ಲಿನ ಸಭೆಗೆ ೮ ಸಾವಿರ, ೨೦೦೯ ರಲ್ಲಿ ೧೬ ಸಾವಿರ, ೨೦೧೦ ರಲ್ಲಿ ೩೨ ಸಾವಿರ ಹಿಂದೂಗಳ ಬೆಂಬಲ ದೊರಕಿದೆ. ಈ ವರ್ಷದ ಸಭೆಗೆ ೨೨ ಸಾವಿರ ಹಿಂದೂಗಳು ಉಪಸ್ಥಿತರಿದ್ದರು.
No comments:
Post a Comment