ಗದಗಿನಲ್ಲಿ ದೇವಸ್ಥಾನಗಳನ್ನು ಕೆಡಹುವ ದುಷ್ಕೃತ್ಯಗಳಿಗೆ ತಡೆ


ಹಿಂದೂ ಜನಜಾಗೃತಿ ಸಮಿತಿಯ ಯಶಸ್ಸು
ಗದಗ: ಜನವರಿ ೨ ರಂದು ಗದಗ ಜಿಲ್ಲೆ ಮತ್ತು ಬೆಟಗೇರಿಯಲ್ಲಿ ೧೨೦ ದೇವಸ್ಥಾನಗಳನ್ನು ಅನಧಿಕೃತವೆಂದು ನಿರ್ಧರಿಸಿ ಕೆಡವಲಾಗಿತ್ತು. ಇದರಲ್ಲಿ ಉಳಿದ ೭೦ ದೇವಸ್ಥಾನಗಳನ್ನೂ ಕೆಡವುದಿತ್ತು; ಆದರೆ ಇದರ ವಿರುದ್ಧ ಹಿಂದೂ ಜನಜಾಗೃತಿ ಸಮಿತಿ ಮತ್ತು ಗದಗಿನ ಧರ್ಮಾಭಿಮಾನಿಗಳು ಒಟ್ಟಾದ ಪರಿಣಾಮದಿಂದ ಸರಕಾರವು ಅದನ್ನು ಸ್ಥಗಿತಗೊಳಿಸಬೇಕಾಯಿತು. (ದೇವಸ್ಥಾನಗಳ ರಕ್ಷಣೆಗಾಗಿ ಸಂಘಟಿತರಾದ ಗದಗ ಜಿಲ್ಲೆಯ ಧರ್ಮಾಭಿಮಾನಿ ಹಿಂದೂಗಳಿಗೆ ಅಭಿನಂದನೆಗಳು!  - ಸಂಪಾದಕರು)ರಾಜ್ಯದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಹಿಂದೂ ಜನಜಾಗೃತಿ ಸಮಿತಿಯು ಈ ಬಗ್ಗೆ ಹೋರಾಡುತ್ತಿದೆ. ಈ ಸಂದರ್ಭದಲ್ಲಿ ಸಮಿತಿಯು ಕಳೆದ ತಿಂಗಳಿನಲ್ಲಿ ಮುಖ್ಯಮಂತ್ರಿಗಳ ಕಾರ್ಯದರ್ಶಿ ನಂದಕುಮಾರ ಇವರನ್ನು ಭೇಟಿಯಾಗಿತ್ತು. ಈ ಸಮಯದಲ್ಲಿ ನಂದಕುಮಾರರವರು ಎಲ್ಲ ಜಿಲ್ಲಾಧಿಕಾರಿಗಳಿಗೆ ಪ್ರತಿಯೊಂದು ಧಾರ್ಮಿಕ ಕೇಂದ್ರಗಳ ಬಗ್ಗೆ ಸಮಗ್ರವಾಗಿ ಅಧ್ಯಯನ ಮಾಡಿ ಸಂಬಂಧಿತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಾಗೂ ಕಾನೂನುರೀತ್ಯಾ ನೋಟಿಸು ನೀಡಿದ ನಂತರವೇ ದೇವಸ್ಥಾನಗಳ ಬಗ್ಗೆ ನಿರ್ಣಯ ತೆಗೆದುಕೊಳ್ಳಬೇಕು
ಎಂಬ ಆಶಯ ವಿರುವ ಪತ್ರವನ್ನು ಕಳುಹಿಸುತ್ತೇನೆ ಮತ್ತು ಈ ಬಗ್ಗೆ ಚರ್ಚೆ ನಡೆಸಲು ಮಂತ್ರಿಮಂಡಲದ ವಿಶೇಷ ಸಭೆಯನ್ನು ತೆಗೆದುಕೊಳ್ಳುತ್ತೇವೆ ಎಂದು ಆಶ್ವಾಸನೆ ನೀಡಿದ್ದರು. ಆದರೂ ಗದಗ ಜಿಲ್ಲೆಯಲ್ಲಿ ೧೨೦ ದೇವಸ್ಥಾನಗಳನ್ನು ಕೆಡಹಲಾಯಿತು. (ಆಶ್ವಾಸನೆಯನ್ನು ಪಾಲಿಸದೇ ದೇವಸ್ಥಾನಗಳನ್ನು ಕೆಡಹುವ ದುಷ್ಕೃತ್ಯ ನಡೆಸುವ ರಾಜ್ಯ ಭಾಜಪ  ಸರಕಾರವು ಹಿಂದೂಗಳ ಸಹನೆಯ ಮಿತಿಯನ್ನು ಪರಿಶೀಲಿಸುತ್ತಿದೆಯೇ?- ಸಂಪಾದಕರು) ಇದರಿಂದ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು ಧಾರ್ಮಿಕದತ್ತಿ ಮಂತ್ರಿ ಡಾ.ವಿ.ಎಸ್.ಆಚಾರ್ಯರನ್ನು ಭೇಟಿಯಾದರು. ಗದಗಿನ ಘಟನೆಯನ್ನು ವಿವರಿಸಿದಾಗ ಡಾ.ಆಚಾರ್ಯರು ಮೊದಲು ಆ ಘಟನೆಯ ಸತ್ಯಾಂಶದ ಬಗ್ಗೆ ಸಂದೇಹವನ್ನು ವ್ಯಕ್ತಪಡಿಸಿದರು. ಅನಂತರ ಸ್ವತಃ ಗದಗಿನ ಜಿಲ್ಲಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಘಟನೆಯ ಸತ್ಯತೆಯನ್ನು ಖಚಿತಪಡಿಸಿಕೊಂಡರು. ಅನಂತರ ಡಾ.ಆಚಾರ್ಯರು, ‘ಈ ದೇವಸ್ಥಾನದಿಂದ ನಿಜವಾಗಿಯೂ ನಾಗರಿಕರಿಗೆ ತೊಂದರೆಯಾಗುತ್ತಿರಬಹುದು ಮತ್ತು ಜಿಲ್ಲಾಧಿಕಾರಿಗಳು ಸರ್ವೋಚ್ಚ ನ್ಯಾಯಾಲಯವು ನೀಡಿದ ಆದೇಶಕ್ಕನುಸಾರ ಕ್ರಿ.ಶ.೨೦೦೯ರ ನಂತರ ಕಟ್ಟಿದ ಧಾರ್ಮಿಕ ಕೇಂದ್ರಗಳನ್ನು ಮಾತ್ರ ಕೆಡಹುತ್ತಿದ್ದಾರೆ’ ಎಂದರು. ಅದಕ್ಕೆ ಸಮಿತಿಯ ಕಾರ್ಯಕರ್ತರು ಅವರಿಗೆ, ‘ಇದು ತಾವು ತಿಳಿದ ಹಾಗೆ ಇಲ್ಲ. ಅನೇಕ ದೇವಸ್ಥಾನಗಳು ೩೦ ವರ್ಷಗಳಿಗಿಂತಲೂ ಹಳೆಯದಾಗಿವೆ. ಯಾವುದೇ ದೇವಸ್ಥಾನಗಳ ಪದಾಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಮತ್ತು ಕೆಲವರಿಗೆ ನೋಟಿಸನ್ನೂ ನೀಡದೇ ಅವುಗಳನ್ನು ಕೆಡವಲಾಗಿದೆ’ ಎಂದು ಹೇಳಿದರು. ಆಗ ಆಚಾರ್ಯರು, ‘ನಾನು ನಾಳೆಯೇ ಈ ವಿಷಯದಲ್ಲಿ ಎಲ್ಲ ಜಿಲ್ಲೆಗಳಿಗೆ ಪತ್ರವನ್ನು ಕಳುಹಿಸುತ್ತೇನೆ’ ಎಂದರು.
ಮರುದಿನ ಗದಗ ಜಿಲ್ಲೆಯ ಉಳಿದ ದೇವಸ್ಥಾನಗಳನ್ನು ಕೆಡಹುವ ಕಾರ್ಯವು ಪ್ರಾರಂಭವಾಗಲಿತ್ತು. ಆದುದರಿಂದ ಅಲ್ಲಿನ ಧರ್ಮಾಭಿಮಾನಿಗಳು ಮತ್ತು ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು ಅಲ್ಲಿನ ಜಿಲ್ಲಾಧಿಕಾರಿಗಳನ್ನು ಭೇಟಿಯಾದರು. ಈ ಸಮಯದಲ್ಲಿ ಜಿಲ್ಲಾಧಿಕಾರಿಗಳು ‘ದೇವಸ್ಥಾನಗಳನ್ನು ಕೆಡಹುವ ವಿಷಯದಲ್ಲಿ ನಮ್ಮಿಂದ ತಪ್ಪಾಗಿದೆ’ ಎಂದರು. (ದೇವಸ್ಥಾನಗಳನ್ನು ಕೆಡಹುವಂತಹ ದುಷ್ಕೃತ್ಯಗಳಿಗೆ ಕೇವಲ ತಪ್ಪಾಯಿತು ಎನ್ನುವುದು ಎಷ್ಟರ ಮಟ್ಟಿಗೆ ಯೋಗ್ಯವಾಗಿದೆ? ಇಂತಹ ತಪ್ಪು ಇತರ ಧರ್ಮೀಯರ ಬಗ್ಗೆ ಘಟಿಸಿದ್ದಲ್ಲಿ ಅವರು ಏನು ಮಾಡುತ್ತಿದ್ದರು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ !-ಸಂಪಾದಕರು) ಹಾಗೆಯೇ ಈ ಕೆಲಸವನ್ನು ಸದ್ಯಕ್ಕೆ ಸ್ಥಗಿತಗೊಳಿಸುತ್ತೇವೆ ಮತ್ತು ಸಂಬಂಧಿತರನ್ನು ವಿಶ್ವಾಸಕ್ಕೆ ತೆಗೆದುಕೊಂಡ ನಂತರವೇ ಕೃತಿ ಮಾಡುವೆವು ಎಂದು ಜಿಲ್ಲಾಧಿಕಾರಿಗಳು ಆಶ್ವಾಸನೆಯನ್ನು ನೀಡಿದರು.

No comments:

Post a Comment