ಓರ್ವ ಶೂರ್ಪನಖಿಯ ಲಂಪಟತನದಿಂದ ರಾವಣನ ಸರ್ವನಾಶವಾಯಿತು. ಇಂದಿನ ಆಡಳಿತಗಾರರು ಶೂರ್ಪನಖಿಯನ್ನೂ ನಾಚಿಸುವಂತಹ ಲಂಪಟತನವನ್ನು ಮೆರೆದಿದ್ದಾರೆ. ರಾವಣನ ಕ್ರೂರತೆಯನ್ನೂ ಕುಬ್ಜವಾಗಿಸುವಂತಹ ಕೃತ್ಯಗಳನ್ನು ಮಾಡುವ ಇಂದಿನ ಆಡಳಿತಾಧಿಕಾರಿಗಳನ್ನು ಕಿತ್ತೊಗೆಯದಿದ್ದರೆ ಜನಸಮಾನ್ಯರು ಸುಖವಾಗಿ ಜೀವನ ನಡೆಸಲು ಸಾಧ್ಯವಿಲ್ಲ ಎನ್ನುವಷ್ಟು ಮಟ್ಟಿಗೆ ಸಾಮಾನ್ಯ ವ್ಯಕ್ತಿಯ ಆಕ್ರೋಶ ವ್ಯಕ್ತಪಡಿಸುವಂತಹ ನಿರ್ಣಯವನ್ನು ಕೇಂದ್ರೀಯ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವಾಲಯವು ತೆಗೆದುಕೊಂಡಿದೆ. ‘ಪ್ರೊಟೆಕ್ಷನ್ ಆಫ್ ಚಿಲ್ಡ್ರನ್ ಫ್ರಮ್ ಸೆಕ್ಸುಅಲ್ ಆಫೆನ್ಸ್ ಬಿಲ್-೨೦೧೦’ ಈ ಕಾಯಿದೆಯ ಮಸೂದೆಯಲ್ಲಿ ತಿದ್ದುಪಡಿ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಆ ಮಸೂದೆಯಲ್ಲಿ ಮಕ್ಕಳಿಗೆ ಹನ್ನೆರಡನೆಯ ವರ್ಷಕ್ಕೇ ಪರಸ್ಪರರ ಅನುಮತಿಯಿಂದ ಪ್ರಣಯ ನಡೆಸಲು ಕಾನೂನು ಬದ್ಧ ಅನುಮತಿ ನೀಡಲಿರುವ ಅಂಶವನ್ನು ಅದರಲ್ಲಿ ಹೇಳಲಾಗಿದೆ. ಈ ನಿರ್ಧಾರವನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಕಳುಹಿಸಿಕೊಡಲಾಗಿದೆ.
ಅದರ ಮೇಲಿನ ಸೂಚನೆಗಳು ಹಾಗೂ ದೂರುಗಳನ್ನು ಕೇಳಲಾಗಿದೆ. ಅಂದರೆ ಹಿಂದೆ ಶಾಲೆಗಳ ಹತ್ತಿರ ನಿರೋಧದ ಪ್ಯಾಕೇಟ್‌ಗಳನ್ನು ಬಹಿರಂಗವಾಗಿ ಮಾರಾಟಕ್ಕೆ ಅನುಮತಿ ನೀಡಿ ಹಾಗೂ ಈಗ ಶಾಲೆಯ ವಯಸ್ಸಿನಲ್ಲಿ ಪ್ರಣಯಕ್ಕೆ ಅನುಮತಿಯನ್ನು ನೀಡುವುದರ ಮೂಲಕ ರಾಷ್ಟ್ರಘಾತಕ ಆಟವಾಡುತ್ತಿದೆ.
ಜನಸಾಮಾನ್ಯರ ಗಮನವನ್ನು ವಿಚಲಿತಗೊಳಿಸುವ ಸಲುವಾಗಿಯೇ?
ಮಹಿಳೆ ಹಾಗೂ ಮಕ್ಕಳ ಕಲ್ಯಾಣದ ಪ್ರಮುಖರಾದ ಶ್ರೀಮತಿ ಕೃಷ್ಣಾ ತೀರ್ಥರವರು ಓರ್ವ ಮಹಿಳೆಯಾಗಿದ್ದುಕೊಂಡು ಇಂತಹ ರೀತಿಯ ನಿರ್ಣಯವನ್ನು ಮುಂದೆ ಕಳುಹಿಸುತ್ತಾರೆ, ಎಂಬ ವಿಷಯವು ಆಶ್ಚರ್ಯಚಕಿತಗೊಳಿಸುವಂತಾಗಿದೆ. ಯಾವ ವಯಸ್ಸಿನಲ್ಲಿ ಯೋಗ್ಯ ಹಾಗೂ ಅಯೋಗ್ಯದ ಬಗ್ಗೆ ಏನೂ ತಿಳಿಯುವುದಿಲ್ಲವೋ, ಅಂತಹ ವಯಸ್ಸಿನಲ್ಲಿ ಇಂತಹ ಅಸಭ್ಯ ಕೃತ್ಯಕ್ಕೆ ಪ್ರೋತ್ಸಾಹನೆಯನ್ನು ನೀಡಲು ಕಾರಣವೇನು? ಇಂದು ಬೆಲೆಯೇರಿಕೆ, ಹಣದುಬ್ಬರ, ಭ್ರಷ್ಟಾಚಾರ, ಕಪ್ಪು ಹಣ, ಭಯೋತ್ಪಾದನೆಯಂತಹ ಸಮಸ್ಯೆಗಳು ಬಗೆಹರಿಯಿತೆಂದು ಆಡಳಿತಗಾರರು ಈ ಕಡೆ ತಿರುಗಿದ್ದಾರೇನು? ಅಥವಾ ಜನಸಾಮಾನ್ಯರನ್ನು ಚರ್ಚೆಗೊಳಪಡಿಸಲು ಒಂದು ವಿಷಯವನ್ನು ತೆಗೆದುಕೊಂಡು ತಮ್ಮ ಕಪ್ಪು ಕೃತ್ಯಗಳಿಂದ ಜನತೆಯ ಗಮನವನ್ನು ವಿಚಲಿತಗೊಳಿಸಲು ಈ ಅಧಿಕ ಪ್ರಸಂಗತನವನ್ನು ಮಾಡುತ್ತಿದ್ದಾರೆಯೇ?
ರೋಗಕ್ಕಿಂತ ಚಿಕಿತ್ಸೆ ಭಯಂಕರ!
ದೆಹಲಿಯಲ್ಲಿನ ‘ರಾಹೀ’ ಎಂಬ ಸಂಸ್ಥೆಯು ಮಾಡಿದ ಸಮೀಕ್ಷೆಗನುಸಾರವಾಗಿ ಭಾರತದಲ್ಲಿ ದಿನಕ್ಕೆ ಸರಾಸರಿಯಾಗಿ ೫೭ ಬಲಾತ್ಕಾರಗಳಾಗುತ್ತವೆ. ಇದರಲ್ಲಿ ೧೨ ರಿಂದ ೧೬ ವರ್ಷದ ವಯಸ್ಸಿನ ಹೆಣ್ಣು ಮಕ್ಕಳ ಸಂಖ್ಯೆ ಶೇ. ೩೫ ಅಂದರೆ ಸಂಖ್ಯೆ ೨೦ರಷ್ಟು ಇದೆ. ‘ಈ ಮೇಲಿನ ನಿರ್ಧಾರದಿಂದ ಲೈಂಗಿಕ ಅತ್ಯಾಚಾರವು ನಿಲ್ಲುತ್ತದೆ’ ಎಂದು ಸಮರ್ಥಿಸಲಾಗುತ್ತಿದೆ. ಇದು ‘ಕಳ್ಳತನವನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದು ಕಳ್ಳರಿಗೆ ನಿಗದಿತ ಸ್ಥಳಗಳಲ್ಲಿ ಕಳ್ಳತನ ಮಾಡಲು ಅನುಮತಿ ನೀಡಿ’ ಎಂದು ಹೇಳಿದಂತಾಗಿದೆ.’ ಬಲಾತ್ಕಾರದಲ್ಲಿ ಆ ಯುವತಿಯ ಅನುಮತಿಯಿರುವುದಿಲ್ಲ ಎಂದು ಊಹಿಸಲಾಗಿದೆ. ಆದ್ದರಿಂದ ಇಂತಹ ಯಾವುದಾದರೂ ನಿರ್ಣಯದಿಂದ ಲೈಂಗಿಕ ಅತ್ಯಾಚಾರಗಳು ಕಡಿಮೆಯಾಗುವುದು ಎಂದು ತಿಳಿದುಕೊಳ್ಳುವುದು ಹಾಸ್ಯಾಸ್ಪದವಾಗಿದೆ. ರಾಜಕಾರಣಿಗಳು ಹೊಡೆದಾಟ-ದಬ್ಬಾಳಿಕೆಯಿಂದ ಈ ಪ್ರಸ್ತಾಪವನ್ನು ಜಾರಿಗೆ ತಂದಲ್ಲಿ, ‘ರೋಗಕ್ಕಿಂತ ಚಿಕಿತ್ಸೆ ಭಯಂಕರ’ ಎಂಬ ಸ್ಥಿತಿಯಾಗುತ್ತದೆ.
ಮುಂದಿನ ಪೀಳಿಗೆಯನ್ನು ನಾಶಗೊಳಿಸುವ ವಿಧಾನ!
ಅಮೇರಿಕಾದಲ್ಲಿ ಇಂತಹ ಮಿತಿ ೧೬ರಿಂದ ೧೮ವರ್ಷಗಳು, ಪಾಕಿಸ್ತಾನದಲ್ಲಿ ಯುವಕರಿಗೆ ೧೮ ಹಾಗೂ ಯುವತಿಯರಿಗೆ ೧೬ ವರ್ಷಗಳು, ಚೀನಾ ಹಾಗೂ ಬ್ರಿಟನ್‌ನಲ್ಲಿ ೧೬ವರ್ಷಗಳು ಹಾಗೂ ಸ್ಪೇನ್‌ನಲ್ಲಿ ೧೩ ವರ್ಷಗಳಾಗಿದೆ. ಪಾಶ್ಚಾತ್ಯರು ಕೂಡ ತಮ್ಮ ಮಿತಿಯನ್ನು ಕಾಪಾಡಿಕೊಂಡಿರುವಾಗ ಭಾರತವು ನೈತಿಕ ದೃಷ್ಟಿಯಿಂದ ಇಷ್ಟು ಕೆಳಗಿಳಿಯಬೇಕು, ಎಂದು ಸಚಿವಾಲಯಕ್ಕೆ ಏಕೆ ಅನಿಸುತ್ತಿದೆ? ಏಕೆಂದರೆ ಅದು ಅದರ ದುಷ್ಪರಿಣಾಮದ ಬಗ್ಗೆ ಸ್ವಲ್ಪವೂ ಯೋಚನೆಯೇ ಮಾಡಿಲ್ಲ. ಋಷಿಮುನಿಗಳು ಅದನ್ನು ಮಾಡಿದ್ದರು; ಆದ್ದರಿಂದ ಭಾರತದ ಪರಂಪರೆಗೆ ಅನುಸಾರವಾಗಿ ೨೫ ನೇ ವರ್ಷದಲ್ಲಿ ಮದುವೆಯಾಗಲು ಅಪ್ಪಣೆ ನೀಡಿದರು ಹಾಗೂ ಅದನ್ನು ಇಂದು ಕೂಡ ಪಾಲಿಸಲಾಗುತ್ತಿದೆ. ಪ್ರಣಯದ ಅನುಮತಿಯನ್ನು ನೀಡಿದ ಮೇಲೆ ಮುಂದೆ ಏನೂ ನಡೆಯುವುದೇ ಇಲ್ಲ ಎಂಬ ಮುಗ್ಧ(?)ವಾದ ವಿಶ್ವಾಸವು ಸಚಿವಾಲಯಕ್ಕೆ ಇದೆಯೇ? ಮುಂದಿನ ಪೀಳಿಗೆಯನ್ನು ನಾಶ ಮಾಡಲು ಇವೆಲ್ಲವನ್ನು ಮಾಡುತ್ತಿದ್ದಾರೆ. ಭಾರತೀಯ ಸಂಸ್ಕೃತಿಯ ಮಾಹಿತಿಯನ್ನು ಅರಿತುಕೊಂಡು ಜ್ಯೂಲಿಯಾ ರಾಬರ್ಟ್ಸ ನಂತಹ ಪ್ರಖ್ಯಾತಳಾದ ನಟಿಯು ಕೂಡ ಹಿಂದೂ ಧರ್ಮದ ಕಡೆ ಆಕರ್ಷಿತಗೊಳ್ಳುತ್ತಾಳೆ. ಆಸ್ಟ್ರೇಲಿಯದಲ್ಲಿನ ನಾಗರಿಕರು ಗುಂಪುಗುಂಪಾಗಿ ಹಿಂದೂ ಧರ್ಮವನ್ನು ಸ್ವೀಕರಿಸುತ್ತಿದ್ದಾರೆ. ಬರಾಕ್ ಒಬಾಮನ ಆಡಳಿತವು ಅಮೇರಿಕಾದ ವಿಶ್ವವಿದ್ಯಾಲಯಗಳಲ್ಲಿ ಭಗವದ್ಗೀತೆಯನ್ನು ಕಡ್ಡಾಯ ಮಾಡಿದೆ. ಹೀಗಿರಬೇಕಾದರೆ ಚಿಕ್ಕಂದಿನಿಂದಲೇ ವಿವಾಹಬಾಹ್ಯ ಸಂಬಂಧಗಳಿಗೆ ಮನ್ನಣೆ ನೀಡುವಂತಹ ಈ ಪ್ರಸ್ತಾಪವನ್ನು ಮಾಡಿ ಜನತೆಗೆ ದ್ರೋಹವನ್ನು ಬಗೆಯುವ ಅಧಿಕಾರವನ್ನು ಮಹಿಳೆ ಹಾಗೂ ಮಕ್ಕಳ (ಅ)ಕಲ್ಯಾಣ ಸಚಿವಾಲಯಕ್ಕೆ ಯಾರು ನೀಡಿದರು?
ರಾವಣನ ರೂಪದಲ್ಲಿರುವ ಆಡಳಿತಗಾರರನ್ನು ಕೆಳಗಿಳಿಸಿ!
ಗೋಹತ್ಯಾ ನಿರ್ಬಂಧ, ಮತಾಂತರದ ಮೇಲೆ ನಿರ್ಬಂಧ ಇಂತಹ ವಿಷಯಗಳ ಮೇಲೆ ಧೂಳು ಕುಳಿತಿರುವುದರಿಂದ, ಇಂದು ಕಾಂಗ್ರೆಸ್ ಸರಕಾರವು ತನ್ನ ಆಡಳಿತವಿಲ್ಲದ ರಾಜ್ಯಗಳ ಮುಖ್ಯಮಂತ್ರಿಗಳತ್ತ ಗಮನವನ್ನು ನೀಡುತ್ತಿಲ್ಲ ಎಂಬುದು ತಿಳಿದು ಬಂದಿದೆ. ಇದರಿಂದ ಗುಜರಾತಿನಂತಹ ರಾಜ್ಯಾಡಳಿತವು ಈ ಒಪ್ಪಂದಕ್ಕೆ ಅನುಮತಿ ನೀಡಲಿಲ್ಲ, ಆದರೂ ಕಾಂಗ್ರೆಸ್ ಮುಖ್ಯಮಂತ್ರಿಗಳ ಅನುಮತಿಯನ್ನು ಪಡೆದುಕೊಂಡು ಕೇಂದ್ರ ಸರಕಾರವು ಈ ಒಪ್ಪಂದಕ್ಕೆ ಬಹುಮತವನ್ನು ಪಡೆಯಲು ಹಿಂದೆ ಮುಂದೆ ನೋಡುವುದಿಲ್ಲ. ಧರ್ಮಾಂಧರು ಭಾರತದ ಕಾಯದೆಯನ್ನು ಅಂಗೀಕರಿಸುವುದಿಲ್ಲ. ಆದ್ದರಿಂದ ಅವರ ಮದರಸಾಗಳಿಗೆ ಫತ್ವಾವನ್ನು ಹೊರಡಿಸಿ ಈ ನಿರ್ಣಯದ ವಿರುದ್ಧ ಕಾಯದೆಯನ್ನು ಮಾಡಿ ತಮ್ಮ ಯುವತಿಯರನ್ನು ಭದ್ರ ಪಡಿಸಿಕೊಳ್ಳುತ್ತಾರೆ; ಆದರೆ ಇದರಿಂದ ಕೇವಲ ಹಿಂದೂ ಯುವತಿಯರು ಸಿಕ್ಕಿಕೊಳ್ಳುತ್ತಾರೆ. ಇದು ‘ಲವ್ ಜಿಹಾದ್’ಗೆ ಕುಮಕ್ಕು ನೀಡಿದಂತಾಗಿದೆ. ಆದ್ದರಿಂದ ಈ ಪ್ರಸ್ತಾಪಕ್ಕೆ ಸಮಸ್ತ ಹಿಂದೂಗಳು ವಿರೋಧಿಸಬೇಕು ಹಾಗೂ ರಾವಣನ ರೂಪದಲ್ಲಿರುವ ಈ ಆಡಳಿತಗಾರರನ್ನು ಕೆಳಗಿಳಿಸಿ ದೇಶ ಹಾಗೂ ಧರ್ಮ ಪ್ರೇಮಿ ರಾಜಕಾರಣಿಗಳನ್ನು ಅಧಿಕಾರದ ಮೇಲೆ ಕುಳ್ಳಿರಿಸಬೇಕು!

No comments:
Post a Comment