‘ತೆಹಲ್ಕಾ’ ಈ ಸಂಕೇತಸ್ಥಳದಲ್ಲಿನ ನಿಯತಕಾಲಿಕೆಯ ಹೊಟ್ಟೆಯುರಿ
ಸನಾತನ ಸಂಸ್ಥೆ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕ್ಕೆ
ಸಹಕರಿಸಿದರೆಂದು ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಮೇಲೆ ಟೀಕೆ!
ಮುಂಬೈ : ಗುಜರಾತಿನ ಮುಖ್ಯಮಂತ್ರಿ ಶ್ರೀ. ನರೇಂದ್ರ ಮೋದಿಯವರು ಠಾಣೆಯಲ್ಲಿನ ಒಂದು ನಾಟಕಗೃಹದಲ್ಲಾದ ಸ್ಫೋಟದ ಪ್ರಕರಣದಲ್ಲಿ ಆರೋಪಿಯಾಗಿರುವ ಹಿಂದೂ ಜನಜಾಗೃತಿ ಸಮಿತಿ ಹಾಗೂ ಸನಾತನ ಸಂಸ್ಥೆಯಂತಹ ಈ ಕೇಸರಿ ಸಂಘಟನೆಗಳಿಗೆ ತಮ್ಮ ಮಣಿನಗರ ಈ ಮತದಾನ ಕ್ಷೇತ್ರದಲ್ಲಿ ಕಾರ್ಯಕ್ರಮವನ್ನು ನಡೆಸಲು ಅನುಮತಿಯನ್ನು ನೀಡಿದ ವಾರ್ತೆಯನ್ನು ‘ತೆಹಲ್ಕಾ’ ನಿಯತಕಾಲಿಕೆಯು ತನ್ನ ಸಂಕೇತಸ್ಥಳದಲ್ಲಿ ಇರುವ ಹೊಸ ಸಂಚಿಕೆಯಲ್ಲಿನ ಆಂಗ್ಲ ಭಾಷೆಯ ಲೇಖನದಲ್ಲಿ ನೀಡಿದೆ. ಈ ಲೇಖನವನ್ನು ರಾಣಾ ಆಯುಬ್‌ನು ಬರೆದಿದ್ದಾನೆ. (ಸ್ಫೋಟದಲ್ಲಿ ಸನಾತನ ಸಂಸ್ಥೆ ಅಥವಾ ಹಿಂದೂ ಜನಜಾಗೃತಿ ಸಮಿತಿಯ ಸಂಬಂಧವಿದೆ ಯೆಂದು ರುಜುವಾತಾಗದಿದ್ದರೂ ಬೇಕೆಂದೇ ಈ ಹಿಂದುತ್ವವಾದಿ ಸಂಘಟನೆಗಳ ತೇಜೋವಧೆ ಮಾಡುವುದರ ಹಿಂದೆ, ‘ತೆಹಲ್ಕಾ’ ಸಂಕೇತ ಸ್ಥಳ ಹಾಗೂ ರಾಣಾ ಆಯುಬ್‌ರವರ ಹಿಂದೂದ್ವೇಷವೇ ಅಡಗಿದೆ. ಈ ತೆಹಲ್ಕಾ ಹಾಗೂ ರಾಣಾ ಇವರಿಬ್ಬರಿಗೆ ದೇಶದ್ರೋಹಿ ಹಾಗೂ ಭಯೋತ್ಪಾದಕರಿಗೆ ಬಹಿರಂಗವಾಗಿ ಬೆಂಬಲಿಸುವ ಸ್ವಬಾಂಧವರ ಮೇಲೆ ಇಂತಹ ಆರೋಪ ಮಾಡುವ ಹಾಗೂ ಧರ್ಮಾಂಧರ ಸಂಘಟನೆಗಳನ್ನು ಹಸಿರು ಸಂಘಟನೆ ಎನ್ನುವ ಧೈರ್ಯ ಇದೆಯೇ? - ಸಂಪಾದಕರು) ‘ಗುಜರಾತ ರಾಜ್ಯವು ಭಯೋತ್ಪಾದಕರ ಆಕ್ರಮಣಗಳಿಗೆ ತೀವ್ರ ಗುರಿಯಾಗಿದೆ’ ಎಂದು ಕಳೆದ ಹತ್ತು ವರ್ಷಗಳಿಂದ ಹೇಳುತ್ತಿರುವ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಭಯೋತ್ಪಾದನೆಯ ಸಂದರ್ಭದಲ್ಲಿ ಆರೋಪಿಯಾಗಿರುವ ಒಂದು ಸಂಘಟನೆಗೆ ತಮ್ಮದೇ ಕ್ಷೇತ್ರದಲ್ಲಿ ಸಭೆಯನ್ನು ತೆಗೆದುಕೊಳ್ಳಲು ಅನುಮತಿಯನ್ನು ಹೇಗೆ ನೀಡಿತು, ಎಂಬ ಗಂಭೀರವಾದ ಪ್ರಶ್ನೆಯು ಈಗ ಉದ್ಭವಿಸಿದೆ’ ಎಂದು ಈ ಲೇಖನದಲ್ಲಿ ಟೀಕಿಸಲಾಗಿದೆ. (ಹಿಂದೂ ಜನಜಾಗೃತಿ ಸಮಿತಿಯು ಯಾವುದೇ ಸ್ಫೋಟದಲ್ಲಿ ಆರೋಪಿಯಾಗಿದೆ ಎಂದು ದೇಶದ ಯಾವುದೇ ತನಿಖಾ ಸಂಸ್ಥೆಯು ಹೇಳಿಲ್ಲ. ಹಿಂದೂ ಜನಜಾಗೃತಿ ಸಮಿತಿಯ ಕಾರ್ಯವನ್ನು ಭಾರತದ ವಿವಿಧ ರಾಜ್ಯಗಳಲ್ಲಿ ಪೊಲೀಸರು ಹಾಗೂ ಜನ ಸಾಮಾನ್ಯರು ಪ್ರಶಂಶಿಸಿದ್ದಾರೆ. ಹೀಗಿರುವಾಗ ರಾಷ್ಟ್ರ ಹಾಗೂ ಧರ್ಮ ಪ್ರೇಮಿ ಹಿಂದೂ ಜನಜಾಗೃತಿ ಸಮಿತಿಯನ್ನು ಆರೋಪಿಯೆಂದು ನಿರ್ಧರಿಸುವ ಮೂಲಕ ಆಯೂಬ್ ರಾಣಾ ತಮ್ಮ ಹಿಂದೂದ್ವೇಷವನ್ನು ವ್ಯಕ್ತ ಪಡಿಸಿದ್ದಾರೆ. ರಾಣಾರವರಿಗೆ ಭಯೋತ್ಪಾದಕರ ಮೇಲೆ ಇಷ್ಟು ಆಕ್ರೋಶವಿದ್ದರೆ, ಅವರು ದೇಶಪ್ರೇಮಿ ಸಂಘಟನೆಯ ಮೇಲೆ ಕಿಡಿಕಾರುವುದಕ್ಕಿಂತ ಭಯೋತ್ಪಾದಕರನ್ನು ಬೆಂಬಲಿಸುವ ಇಮಾಮ್ ಬುಖಾರೀ, ಸಮಾಜವಾದಿ ಪಕ್ಷದ ಅಬೂ ಆಜ್ಮಿ ಹಾಗೂ ಕಾಂಗ್ರೆಸ್ ನೇತಾರರಾದ ದಿಗ್ವಿಜಯ್ ಸಿಂಗ್‌ರನ್ನು ಖಂಡಿಸುವ ಧೈರ್ಯವನ್ನು ತೋರಿಸಲಿ! -ಸಂಪಾದಕರು)
ಈ ಲೇಖನದಲ್ಲಿ ಕ್ರಿ.ಶ. ೨೦೦೮ ರಲ್ಲಿ ನಡೆದ ಒಂದು ಸಭೆಗೆ ಮೋದಿಯವರು ಅನುಮತಿಯನ್ನು ನೀಡಿರುವ ಪತ್ರವು ಸಿಕ್ಕಿರುವುದಾಗಿ ದಾವೆಯನ್ನು ಮಾಡಲಾಗಿದೆ. ಹಾಗೆಯೇ ಈ ಪತ್ರದ ಛಾಯಾಚಿತ್ರವನ್ನು ಪ್ರಕಟಿಸಲಾಗಿದೆ. ತೆಹಲ್ಕಾದಲ್ಲಿನ ಈ ಲೇಖನವನ್ನು ಕರ್ನಾಟಕದಲ್ಲಿನ ‘ವಾರ್ತಾ ಭಾರತೀ’ ಎಂಬ ನಿಯತಕಾಲಿಕೆಯಲ್ಲಿ ಕನ್ನಡ ಭಾಷೆಯಲ್ಲಿ ಪ್ರಕಾಶಿಸಲಾಗಿದೆ.
ಮೋದಿಯವರು ೧೬ ನವೆಂಬರ್ ೨೦೦೮ರಂದು ಬರೆದ ತಮ್ಮ ಪತ್ರದಲ್ಲಿ ‘ಭವಿಷ್ಯದಲ್ಲಿ ಈ ಸಂಘಟನೆಯ ಕಾರ್ಯಕ್ರಮಗಳಿಗೆ ಸಹಕರಿಸುವುದಾಗಿ ಆಶ್ವಾಸನೆಯನ್ನು ನೀಡಿದ್ದಾರೆ’ ಎಂದು ಈ ಲೇಖನದಲ್ಲಿ ಹೇಳಲಾಗಿದೆ. (ಯಾವುದಾದರೂ ದೇಶಪ್ರೇಮಿ ಸಂಘಟನೆಯ ಕಾರ್ಯಕ್ಕೆ ಸಹಾಯ ಮಾಡುವುದು ಅಪರಾಧ ಎಂದು ಆಯೂಬ್ ರಾಣಾರವರಿಗೆ ಹೇಳಬೇಕಾಗಿದೆಯೇ?-ಸಂಪಾದಕರು)
ಮುಂದೆ ಈ ಲೇಖನದಲ್ಲಿ ‘ಠಾಣೆಯಲ್ಲಿನ ಚಲನಚಿತ್ರಗೃಹದಲ್ಲಿ ‘ಜೋಧಾ ಅಕ್ಬರ್’ ಚಲನಚಿತ್ರದ ಪ್ರದರ್ಶನವನ್ನು ಗುರಿಯಾಗಿಟ್ಟುಕೊಂಡು ಈ ಸ್ಫೋಟ ನಡೆಸಲಾಯಿತು. ಈ ಚಲನಚಿತ್ರವನ್ನು ಇತರ ಹಿಂದೂ ಸಂಘಟನೆಗಳು ಕೂಡ ನಿಷೇಧಿಸಿದ್ದವು. ಇದರಲ್ಲಿ ಹಿಂದೂ ಜನಜಾಗೃತಿ ಸಮಿತಿ ಹಾಗೂ ಸನಾತನ ಸಂಸ್ಥೆಗಳು ಆರೋಪಿಗಳಾಗಿವೆ. (ಈ ಸ್ಫೋಟದೊಂದಿಗೆ ಇವೆರಡೂ ಸಂಘಟನೆಗಳ ಯಾವುದೇ ಸಂಬಂಧವಿಲ್ಲ. ಭಾರತದಲ್ಲಿರುವ ಯಾವುದೇ ತನಿಖಾ ಸಂಸ್ಥೆಗಳು ಈ ಸ್ಫೋಟದ ಸಂದರ್ಭದಲ್ಲಿ ಇವೆರಡೂ ಸಂಘಟನೆಗಳ ಮೇಲೆ ಆರೋಪ ಹೊರಿಸಿಲ್ಲ. ಹೀಗಿರುವಾಗ ರಾಣಾರವರು ಈ ರೀತಿಯಲ್ಲಿ ಅಪ್ಪಟ ಸುಳ್ಳು ಮಾಹಿತಿಯನ್ನು ನೀಡಿ ವಾಚಕರನ್ನು ದಾರಿತಪ್ಪಿಸಲು ಪ್ರಯತ್ನಿಸಿದ್ದಾರೆ. ಸನಾತನ ಸಂಸ್ಥೆಯು ಈ ಸಂದರ್ಭದಲ್ಲಿ ಕಾನೂನುಬದ್ಧ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸಲು ನ್ಯಾಯವಾದಿಗಳ ಸಲಹೆಯನ್ನು ಪಡೆಯುತ್ತಿದೆ!- ಸಂಪಾದಕರು) ಇದಾದ ಮೇಲೆ ಕ್ರಿ.ಶ. ೨೦೦೯ರಲ್ಲಿ ಗೋವಾದ ಮಡಗಾಂವ್ ನಲ್ಲಿ ನಡೆದ ಸ್ಫೋಟದ ಪ್ರಕರಣದಲ್ಲಿ ಕೂಡ ಅವರು ಆರೋಪಿಗಳಾಗಿದ್ದಾರೆ. (ಮಡಗಾಂವ್ ಸ್ಫೋಟದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳವು ನಡೆಸುತ್ತಿದೆ. ಈ ದಳವು ಸಲ್ಲಿಸಿದ ಆರೋಪ ಪತ್ರದಲ್ಲಿ ಎಲ್ಲಿಯೂ ಸನಾತನದ ಅಥವಾ ಸಮಿತಿಯ ಹೆಸರಿಲ್ಲ. - ಸಂಪಾದಕರು) ಈ ಹಿನ್ನೆಲೆಯಲ್ಲಿ ಹಿಂದೂ ಜನಜಾಗೃತಿ ಸಮಿತಿ ಹಾಗೂ ಸನಾತನ ಸಂಸ್ಥೆಗಳ ಮೇಲೆ ನಿರ್ಬಂಧ ಹೇರಬೇಕು, ಎಂದು ಭಯೋತ್ಪಾದನಾ ನಿಗ್ರಹ ಪಡೆಯ ಪ್ರಮುಖರಾದ ಹೇಮಂತ್ ಕರಕರೆಯವರು ಗೃಹ ಖಾತೆಗೆ ಒತ್ತಾಯಿಸಿದ್ದರು. (ಕರಕರೆಯವರು ಈ ರೀತಿ ಒತ್ತಾಯಿಸಿದ ಮಾಹಿತಿಯು ಬೇರೆ ಯಾರಿಗೂ ತಿಳಿದಿಲ್ಲದಿರುವಾಗ ರಾಣಾರವರು ಇದನ್ನು ಎಲ್ಲಿಂದ ಹುಡುಕಿ ತೆಗೆದರು. ಹಿಂದುತ್ವವಾದಿ ಸಂಘಟನೆಗಳ ತೇಜೋವಧೆ ಮಾಡಲು ದೇಶದ್ರೋಹಿ ಧರ್ಮಾಂಧರು ಹಾಗೂ ಅವರಿಗೆ ಬೆಂಬಲಿಸುವ ಪ್ರಚಾರ ಮಾಧ್ಯಮಗಳು ಎಷ್ಟು ಕೀಳು ಮಟ್ಟಕ್ಕೆ ಹೋಗುತ್ತಾರೆ ಎಂಬುದನ್ನು ರಾಣಾರವರ ಈ ಲೇಖನವು ಹೇಳುತ್ತಿದೆ! -ಸಂಪಾದಕರು)
‘ನರೇಂದ್ರ ಮೋದಿಯವರು ಹಿಂದೂ ಜನಜಾಗೃತಿ ಸಮಿತಿ ಹಾಗೂ ಸನಾತನ ಸಂಸ್ಥೆಗೆ ತಮ್ಮ ಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಸಲು ಆಮಂತ್ರಿಸಿ ಅಭಿನಂದನೆಯ ಪತ್ರವನ್ನೂ ಬರೆದಿದ್ದಾರೆ. ಗುಜರಾತಿ ಭಾಷೆಯಲ್ಲಿರುವ ಈ ಪತ್ರದಲ್ಲಿ ಅವರು ತಮ್ಮ ಹಸ್ತಾಕ್ಷರವನ್ನು ಮಾಡಿದ್ದಾರೆ. ಈ ಪತ್ರದಲ್ಲಿ ಅವರು ‘ರಾಷ್ಟ್ರದ ಸಂತರನ್ನು ಹಾಗೂ ನೇತಾರರನ್ನು ಒಗ್ಗೂಡಿಸುವ ಪ್ರಯತ್ನಕ್ಕೆ ಇದು ತಕ್ಕ ಸಮಯವಾಗಿದೆ. ಭಯೋತ್ಪಾದನೆಯಂತಹ ವಿಭಜನೆಯನ್ನು ಮಾಡಲು ಇಚ್ಛಿಸುವ ಶಕ್ತಿಗಳನ್ನು ಪರಾಭವ ಮಾಡಲು ನಾವೆಲ್ಲರೂ ದೃಢವಾದ ಸಂಕಲ್ಪವನ್ನು ಮಾಡಬೇಕು ಹಾಗೂ ರಾಷ್ಟ್ರಾಭಿಮಾನಿಗಳಾಗಬೇಕು. ಭಯೋತ್ಪಾದನೆಗೆ ಧರ್ಮವಿರುವುದಿಲ್ಲ. ಭಯೋತ್ಪಾದನೆಯು ಮಾನವತೆಯ ವಿರುದ್ಧವಾಗಿದೆ. ಇಂತಹ ಶಕ್ತಿಗಳ ವಿರುದ್ಧ ಹಿಂದೂ ಜನಜಾಗೃತಿ ಸಮಿತಿಯು ಜಾಗೃತಿ ಮೂಡಿಸುತ್ತಿದೆ, ಇದು ಸ್ವಾಗತಾರ್ಹವಾಗಿದೆ. ಈ ಹಿಂದೂ ಧರ್ಮಜಾಗೃತಿ ಸಭೆಯಲ್ಲಿನ ವಿಶೇಷ ಪ್ರದರ್ಶನಗಳು ಹಾಗೂ ಸಂಸ್ಥೆಯ ಎಲ್ಲ ಕಾರ್ಯಕ್ರಮಗಳು ಯಶಸ್ವಿಯಾಗಲಿ ಎಂದು ನನ್ನ ಶುಭಹಾರೈಕೆಗಳು!’
ಈ ಲೇಖನದ ಕೊನೆಯಲ್ಲಿ, ಮಡಗಾಂವ್ ಸ್ಫೋಟದ ತನಿಖೆಯ ಸಮಯದಲ್ಲಿ ಮುಂಬೈ ಹಾಗೂ ಗೋವಾದಲ್ಲಿ ಕಾರ್ಯಾಲಯವಿರುವ ಹಿಂದೂ ಜನಜಾಗೃತಿ ಸಮಿತಿ ಹಾಗೂ ಸನಾತನ ಸಂಸ್ಥೆಯ ಮೂಲತತ್ತ್ವವಾದಿ ಕಾರ್ಯದ ವಿಸ್ತರಣೆಯಾಗುತ್ತಿದೆ, ಇದರ ಬಗ್ಗೆ ತೆಹಲ್ಕಾವು ತನ್ನ ಗಮನ ಹರಿಸಿತ್ತು ಎಂದು ಹೇಳಲಾಗಿದೆ. (ತೆಹಲ್ಕಾವು ತನ್ನ ಗಮನವನ್ನು ಜಿಹಾದಿ ಭಯೋತ್ಪಾದಕರ ಚಟುವಟಿಕೆಗಳ ಮೇಲೆ ಹರಿಸಿದ್ದು ಎಂದೂ ಕೇಳಿ ಬಂದಿಲ್ಲ. ಹಿಂದೂ ಜನ ಜಾಗೃತಿ ಸಮಿತಿಯು ಮಾಡದಿರುವ ಸ್ಫೋಟದ ಬಗ್ಗೆ ತಪಾಸಣೆ ಮಾಡಿ ಅದರ ಮೇಲೆ ಇಲ್ಲಸಲ್ಲದ ಆರೋಪವನ್ನು ಹೊರೆಸಿ ತನ್ನ ಶಕ್ತಿಯನ್ನು ವ್ಯರ್ಥಗೊಳಿಸುವುದರ ಬದಲು ಜಿಹಾದಿಗಳ ಚಟುವಟಿಕೆಗಳ ಮೇಲೆ ಬೆಳಕು ಚೆಲ್ಲಿದರೆ ದೇಶಕ್ಕೆ ಸ್ವಲ್ಪವಾದರೂ ಒಳಿತಾಗುತ್ತಿತ್ತು! - ಸಂಪಾದಕರು) ಮುಖ್ಯ ಮಂತ್ರಿಗಳ ಕಾರ್ಯಾಲಯದಿಂದ ಕಳುಹಿಸಿಕೊಟ್ಟ ಈ ಪತ್ರದಿಂದ ಅನೇಕ ಗಂಭೀರವಾದ ಪ್ರಶ್ನೆಗಳು ನಿರ್ಮಾಣವಾಗಿವೆ. (ಜಾತ್ಯತೀತ ನೇತಾರರು ಹಾಗೂ ರಾಜಕಾರಣಿಗಳು ಭಯೋತ್ಪಾದಕರೊಂದಿಗಿನ ಚಕಮಕಿಯಲ್ಲಿ ಹುತಾತ್ಮರಾದ ಮೋಹನ ಶರ್ಮಾರಂತಹ ಅಧಿಕಾರಿಗಳ ಮೇಲೆ ಸುಳ್ಳು ಚಕಮಕಿ ಮಾಡಿದ ಆರೋಪವನ್ನು ಹೊರಿಸಿ ಅವರ ಅಪಹಾಸ್ಯ ಮಾಡುತ್ತಾರೆ. ಭಯೋತ್ಪಾದಕರ ಮನೆಗೆ ಭೇಟಿ ನೀಡಿ ಅವರಿಗೆ ಆರ್ಥಿಕ ಸಹಾಯವನ್ನು ಘೋಷಿಸುತ್ತಾರೆ, ಕಾಶ್ಮೀರದಲ್ಲಿಯಂತೂ ಭಯೋತ್ಪಾದಕರಿಗೆ ನೌಕರಿ, ಮಾನಧನ ಹಾಗೂ ಅವರಿಗೆ ಮನೆ ಅಳಿಯನ ಹಾಗೆ ಮರ್ಯಾದೆಯನ್ನು ನೀಡಲಾಗುತ್ತದೆ. ಆದರೆ ಭಯೋತ್ಪಾದಕರೊಂದಿಗೆ ಹೋರಾಡಿ ಅಸುನೀಗಿದ ಭಾರತೀಯ ಸೈನಿಕರ ಕುಟುಂಬದವರನ್ನು ದೇಶಾಂತರ ಮಾಡಲಾಗುತ್ತದೆ. ಇವೆಲ್ಲ ವಿಷಯಗಳು ತೆಹಲ್ಕಾಗೆ ಇಂದಿನ ತನಕ ಕಾಣಲೇ ಇಲ್ಲ. ತೆಹಲ್ಕಾ, ರಾಣಾ ಹಾಗೂ ವಾರ್ತಾಭಾರತಿಗಳು ಇದರ ವಿರುದ್ಧ ಏನನ್ನೂ ಹೇಳುವುದಿಲ್ಲ; ಏಕೆಂದರೆ ಅವರೆಲ್ಲರೂ ಹಿಂದೂ ದ್ವೇಷಿಗಳಾಗಿದ್ದಾರೆ. ಇಂತಹ ಸ್ಥಿತಿಯನ್ನು ಬದಲಾಯಿಸಲು ಹಿಂದೂಗಳ ವ್ಯಾಪಕವಾದ ಸಂಘಟನೆಯಾಗದೆ ಬೇರೆ ಪರ್ಯಾಯವಿಲ್ಲ!-ಸಂಪಾದಕರು)
No comments:
Post a Comment