೧೨ ವರ್ಷದ ಮಕ್ಕಳಿಗೆ ಪ್ರಣಯದ ಅಧಿಕಾರ ನೀಡಲು ಮಹಿಳಾ ಮತ್ತು ಮಕ್ಕಳ (ಅ)ಕಲ್ಯಾಣ

೧೨ ವರ್ಷದ ಮಕ್ಕಳಿಗೆ ಪ್ರಣಯದ ಅಧಿಕಾರ ನೀಡಲು ಮಹಿಳಾ ಮತ್ತು ಮಕ್ಕಳ (ಅ)ಕಲ್ಯಾಣ ಸಚಿವಾಲಯದ ಪ್ರಸ್ತಾಪ
ದೆಹಲಿ: ಪ್ರತ್ಯಕ್ಷ ಲೈಂಗಿಕ ಸಂಬಂಧವೊಂದನ್ನು ಬಿಟ್ಟು ಉಳಿದ ಶಾರೀರಿಕ ಸಂಬಂಧಕ್ಕಾಗಿ ಅರ್ಹತೆಯ ವಯಸ್ಸು ೧೨ ವರ್ಷವೆಂದು ನಿಗದಿಪಡಿಸಬೇಕು ಎಂದು ಕೇಂದ್ರೀಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯವು ಪ್ರಸ್ತಾಪವೊಂದನ್ನು ಮಂಡಿಸಿದೆ. (ಸಮಾಜವನ್ನು ಅನೈತಿಕತೆಯ ಕಂದಕದಲ್ಲಿ ದೂಡುವ ಮಹಿಳಾ ಹಾಗೂ ಮಕ್ಕಳ ಕಲ್ಯಾಣ (?) ಸಚಿವಾಲಯ! - ಸಂಪಾದಕರು)
ಈ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರಕಾರದಿಂದ ಸೂಚನೆ ಹಾಗೂ ದೂರನ್ನು ಕೇಳಲಾಗಿದೆ. ಸಚಿವಾಲಯವು ‘ಲೈಂಗಿಕ ಅತ್ಯಾಚಾರದಿಂದ ಮಕ್ಕಳ ರಕ್ಷಣೆ- ೨೦೧೦’?(ಪ್ರೊಟೆಕ್ಷನ್ ಆಫ್ ಚಿಲ್ಡ್ರನ್ ಫ್ರಮ್ ಸೆಕ್ಸ್‌ಚ್ಯುವಲ್ ಆಫೆನ್ಸ್ ಬಿಲ್ -೨೦೧೦) ಎಂಬ ವಿಧೇಯಕವನ್ನು ಸಿದ್ಧ ಪಡಿಸಿದೆ. ವಿಧೇಯಕದ ಹಿಂದಿನ ಮಸೂದೆಯಲ್ಲಿ ಇತರ ಶಾರೀರಿಕ ಸಂಬಂಧದ ವಯೋಮಿತಿಯು ೧೬ ವರ್ಷದಷ್ಟಿತ್ತು. ಇದರ ಅರ್ಥವೇನೆಂದರೆ ೧೬ ವರ್ಷದ ಹುಡುಗ ಹಾಗೂ ಹುಡುಗಿಯು ಪರಸ್ಪರ ಒಪ್ಪಿಗೆಯಿಂದ ಶಾರೀರಿಕ ಸಂಬಂಧವನ್ನು (ಲೈಂಗಿಕ ಸಂಬಂಧವನ್ನು ಹೊರತುಪಡಿಸಿ) ಇಟ್ಟುಕೊಳ್ಳಲು ಅರ್ಹರಿದ್ದಾರೆ. ಈಗ ಅದರ ಮಿತಿಯನ್ನು ೧೨ ರಿಂದ ೧೪ ವರ್ಷವೆಂದು ನಿರ್ಧರಿಸಲಾಗಿದೆ. ಈ ಮಸೂದೆಯನ್ನು ಕೇಂದ್ರೀಯ ಮಂತ್ರಿಮಂಡಲದ ಸಭೆಯಲ್ಲಿ ಆದಷ್ಟು ಬೇಗ ಮಂಡಿಸಲಾಗುವುದು. ಅನಂತರ ಈ ವಿಧೇಯಕವು ಕಾನೂನಿನಲ್ಲಿ ರೂಪಾಂತರವಾಗುವುದು. ಈ ಸಂದರ್ಭದಲ್ಲಿ ಕೇಂದ್ರೀಯ ಕಾನೂನುಮಂತ್ರಿ ವೀರಪ್ಪ ಮೊಯ್ಲಿಯವರು ಇಂತಹ ನಿರ್ಧಾರ ಅಯೋಗ್ಯವಾಗಿದೆ ಎಂದು ಹೇಳಿದ್ದಾರೆ.

No comments:

Post a Comment