ಮಾಲೇಗಾವ ಸ್ಫೋಟದಲ್ಲಿನ ಸಂಶಯಿತನ ಹೆಸರು ‘ಪ್ರವೀಣ ಮುತಾಲಿಕ’ ಅಲ್ಲ, ‘ಪ್ರವೀಣ ಟಕ್ಕಳಕಿ’!
ಬೆಳಗಾವಿ: ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳವು ಮಾಲೇಗಾವ ಬಾಂಬ್‌ಸ್ಫೋಟ ಪ್ರಕರಣದಲ್ಲಿ ಗೋಕಾಕ್ ನಲ್ಲಿ ಬಂಧಿಸಿದ ಸಂಶಯಿತನ ಹೆಸರು ‘ಪ್ರವೀಣ ಮುತಾಲಿಕ’ ಅಲ್ಲ ‘ಪ್ರವೀಣ ಟಕ್ಕಳಕಿ’ ಆಗಿದೆ. ಅವನೊಂದಿಗೆ ನನ್ನ ಮತ್ತು ಶ್ರೀರಾಮ ಸೇನೆಯ ಯಾವುದೇ ಸಂಬಂಧವಿಲ್ಲ; ಆದರೆ ಕೆಲವು ಹಿಂದೂ ವಿರೋಧಿ ಶಕ್ತಿಗಳು ನನ್ನ ತೇಜೋವಧೆ ಮಾಡಲೆಂದೇ ಅವನ ಮತ್ತು ನನ್ನ ಹೆಸರಿನಲ್ಲಿ ಸಮಾನತೆಯ ಲಾಭವನ್ನು ಪಡೆದುಕೊಂಡಿದ್ದಾರೆ. ಹಿಂದೂ ವಿರೋಧಿಗಳು ಹಿಂದೂ ಮುಖಂಡರ ತೇಜೋವಧೆಗಾಗಿ ಸಂಚನ್ನು ರೂಪಿಸಿದ್ದಾರೆ. ‘ಮಹಾರಾಷ್ಟ್ರ ಟೈಮ್ಸ್’ ಪತ್ರಿಕೆಯು ಯಾವುದೇ ಆಧಾರವಿಲ್ಲದೇ ಈ ವಾರ್ತೆಯಲ್ಲಿ ನನ್ನ ಛಾಯಾಚಿತ್ರವನ್ನು ಮೊದಲ ಪುಟದಲ್ಲಿ ಮುದ್ರಿಸಿ ‘ಬೆಳಗಾವಿಯಲ್ಲಿ ಪ್ರವೀಣ ಮುತಾಲಿಕನ ಬಂಧನ’
ಎಂಬ ವಾರ್ತೆಯನ್ನು ಪ್ರಕಟಿಸಿತು. ಈ ಬಗ್ಗೆ ‘ಮಹಾರಾಷ್ಟ್ರ ಟೈಮ್ಸ್’ ಮೊದಲನೇ ಪುಟದಲ್ಲಿ ಕ್ಷಮೆ ಯಾಚಿಸಿ ಸ್ಪಷ್ಟೀಕರಣ ನೀಡದಿದ್ದರೆ ಅದರ ಮೇಲೆ ಖಟ್ಲೆ ಹೂಡುವೆವು ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಶ್ರೀ.ಪ್ರಮೋದ ಮುತಾಲಿಕರವರು ಸುದ್ದಿ ಗೋಷ್ಠಿಯಲ್ಲಿ ಎಚ್ಚರಿಸಿದ್ದಾರೆ. (ಹಿಂದೂಗಳ ತೇಜೋವಧೆ ಮಾಡುವ ವರ್ತಮಾನ ಪತ್ರಿಕೆಯ ವಿರುದ್ಧ ಕಾನೂನು ಮಾರ್ಗದಲ್ಲಿ ಆಂದೋಲನ ಮಾಡುವ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಶ್ರೀ.ಪ್ರಮೋದ ಮುತಾಲಿಕರಿಗೆ ಅಭಿನಂದನೆಗಳು! ಹಿಂದೂಗಳು ಸಂಘಟಿತರಾಗಿ ಹಿಂದೂ ಮುಖಂಡರ ತೇಜೋವಧೆ ಮಾಡುವ ಇಂತಹ ಪ್ರಸಾರ ಮಾಧ್ಯಮಗಳನ್ನು ಬಹಿಷ್ಕರಿಸುವರೇ? -ಸಂಪಾದಕರು) ಈ ಸಮಯದಲ್ಲಿ ಶ್ರೀರಾಮ ಸೇನೆಯ ಪ್ರಧಾನಕಾರ್ಯದರ್ಶಿ ಶ್ರೀ.ವಿಲಾಸ ಪವಾರ ಮತ್ತು ಇತರ ಕಾರ್ಯಕರ್ತರು ಉಪಸ್ಥಿತರಿದ್ದರು. ಈ ಸಮಯದಲ್ಲಿ ಶ್ರೀ.ಮುತಾಲಿಕರವರು, ‘ಮುತಾಲಿಕ ಹೆಸರಿನ ಬಗ್ಗೆ ಗೊಂದಲ ನಿರ್ಮಿಸಲಿಕ್ಕಾಗಿಯೇ ಈ ರಾಜಕೀಯ ಷಡ್ಯಂತ್ರವನ್ನು ರೂಪಿಸಿದ್ದಾರೆ. ‘ಹಿಂದೂ ಭಯೋತ್ಪಾದನೆ’ ಎಂಬ ಸಂಜ್ಞೆಯೂ ಆಯೋಜಿತ ಕುತಂತ್ರವಾಗಿದೆ. ಇದು ಹಿಂದೂಗಳ ಅವಮಾನವಾಗಿದೆ’ ಎಂದರು. ರಾಜ್ಯದ ದೇವಸ್ಥಾನಗಳನ್ನು ಕೆಡಹುವ ಚಟುವಟಿಕೆಗಳ ಬಗ್ಗೆ ಶ್ರೀ.ಮುತಾಲಿಕ ರವರು, ‘ಕೇವಲ ಹಿಂದೂಗಳ ದೇವಸ್ಥಾನಗಳನ್ನು ಮಾತ್ರ ಏಕೆ ಕೆಡಹಲಾಗುತ್ತಿದೆ. ಸರ್ವೋಚ್ಚ ನ್ಯಾಯಾಲಯವು ಹಿಂದೆ ನೀಡಿದ ನಿರ್ದೇಶನದಂತೆ ರಾಜ್ಯಸರಕಾರ ಸಮಾನ ನಾಗರಿಕ ಕಾನೂನು ಏಕೆ ಜಾರಿ ಗೊಳಿಸುವುದಿಲ್ಲ? ಸದ್ಯ ನಡೆಯುತ್ತಿರುವ ದೇವಸ್ಥಾನಗಳನ್ನು ಕೆಡಹುವ ಪ್ರಕ್ರಿಯೆಗೆ ಜಿಲ್ಲಾಡಳಿತ ಜವಾಬ್ದಾರವಾಗಿದ್ದು ಅದನ್ನು ನಿಲ್ಲಿಸದಿದ್ದರೆ ಶ್ರೀರಾಮ ಸೇನೆಯು ತೀವ್ರ ಪ್ರತಿಭಟನೆ ಮಾಡುವುದು’ ಎಂದು ಹೇಳಿದರು. ‘ಸರಕಾರದ ದೇವಸ್ಥಾನ ವಿರೋಧಿ ಧೋರಣೆಯ ವಿರುದ್ಧ ರಸ್ತೆಗಿಳಿಯುವೆವು’ ಎಂದು ಶ್ರೀರಾಮ ಸೇನೆಯ ವತಿಯಿಂದ ಜಿಲ್ಲಾಧಿಕಾರಿ ಡಾ.ಏಕರೂಪ ಕೌರ ಇವರಿಗೆ ಎಚ್ಚರಿಕೆಯ ಮನವಿಯನ್ನು ನೀಡಲಾಗಿದೆ.
No comments:
Post a Comment