ದೇವತೆಯ ಮೂರ್ತಿಗಳ ತಲೆಯ ಮೇಲೆ ಕಾಲಿಟ್ಟು ...

ದೇವತೆಯ ಮೂರ್ತಿಗಳ ತಲೆಯ ಮೇಲೆ ಕಾಲಿಟ್ಟು
ದೇವಸ್ಥಾನದ ಮೇಲೇರುವ ಧರ್ಮಾಂಧನಿಗೆ ಹಿಂದೂಗಳಿಂದ ಛಡಿಯೇಟು!

ಅಂಬಡ (ಜಾಲ್ನಾ ಜಿಲ್ಲೆ): ಇಲ್ಲಿನ ದೇವಸ್ಥಾನವೊಂದರ ಮೇಲಿರುವ ಜೇನುಗೂಡನ್ನು ತೆಗೆಯಲು ಓರ್ವ ಧರ್ಮಾಂಧನು ದೇವಸ್ಥಾನದ ಗುಮ್ಮಟದ ಮೇಲೆ ಏರಿದನು. ಅವನು ಏರುವಾಗ ದೇವಸ್ಥಾನದ ಗೋಡೆಯ ಮೇಲಿರುವ ಮಾರುತಿ, ರಾಮ, ವಿಠ್ಠಲ ಈ ದೇವತೆಗಳ ಮೂರ್ತಿಗಳ ತಲೆಯ ಮೇಲೆ ಕಾಲಿಟ್ಟನು. (ಹಿಂದೂಗಳ ಧಾರ್ಮಿಕ ಭಾವನೆಗಳನ್ನು ತುಳಿಯಬೇಕೆಂದು ಉದ್ದೇಶಪೂರ್ವಕವಾಗಿ ಈ ಕೃತ್ಯವೆಸಗಿದನು ಎಂಬುದರಲ್ಲಿ ಸಂದೇಹವಿಲ್ಲ. ಈ ದೇಶವು ಹಿಂದೂ ಬಹುಸಂಖ್ಯಾತವಾಗಿದ್ದರೂ ಧರ್ಮಾಂಧರ ಪ್ರಾರ್ಥನಾಸ್ಥಳದ ಮೇಲೇರಲು ಯಾರಾದರೊಬ್ಬ ಹಿಂದೂವಿಗೆ ಧೈರ್ಯವಿದೆಯೇ? - ಸಂಪಾದಕರು) ಕೆಲವು ಹಿಂದೂ ಯುವಕರು ಇದನ್ನು ಗಮನಿಸಿದರು. ಆ ಯುವಕನು ದೇವಸ್ಥಾನದ ಮೇಲಿನಿಂದ ಕೆಳಗಿಳಿಯುವಷ್ಟರಲ್ಲಿ ಅಲ್ಲಿ ೨೦-೨೫ ಹಿಂದೂಗಳು ಒಟ್ಟಾದರು. ಒಟ್ಟಾದ ಹಿಂದೂಗಳು ದೇವತೆಗಳ ಮೂರ್ತಿಗಳ ತಲೆಯ ಮೇಲೆ ಕಾಲಿಟ್ಟು ಮೇಲೇರಿದ ಬಗ್ಗೆ ಆಕ್ರೋಶಿತಗೊಂಡು ಅವನನ್ನು ವಿಚಾರಿಸತೊಡಗಿದರು. ಆಗ ಅವನು ಹಾರಿಕೆಯ ಉತ್ತರ ಕೊಡಲಾರಂಭಿಸಿದನು. ಆಗ ಬಗ್ಗದ ಆ ಧರ್ಮಾಂಧನಿಗೆ ಎಲ್ಲ ಹಿಂದೂಗಳು ಚೆನ್ನಾಗಿ ಥಳಿಸಿದರು. ಅನಂತರ ಅವನು ಸಮಸ್ತ ಹಿಂದೂಗಳ ಕ್ಷಮೆಯಾಚಿಸಿದನು.

No comments:

Post a Comment