ಹಿಂದೂಗಳೇ, ಸರ್ವಪಕ್ಷೀಯ ಅಧರ್ಮಿ ರಾಜಕಾರಣಿಗಳು ದೇವಸ್ಥಾನಗಳನ್ನು...

ಹಿಂದೂಗಳೇ, ಸರ್ವಪಕ್ಷೀಯ ಅಧರ್ಮಿ ರಾಜಕಾರಣಿಗಳು 
ದೇವಸ್ಥಾನಗಳನ್ನು ಕೆಡವಿ ಚೈತನ್ಯದ ಸ್ರೋತವನ್ನು ನಾಶ ಮಾಡಿ ರಾಷ್ಟ್ರ ಮತ್ತು 
ಧರ್ಮ ಇವುಗಳ ಅಸ್ತಿತ್ವದ ಮೇಲೆಯೇ ಆಘಾತ ಮಾಡುತ್ತಿದ್ದಾರೆ ಎಂಬುದನ್ನು ಗಮನದಲ್ಲಿಡಿರಿ!

ಸದ್ಯ ಭಾರತಾದ್ಯಂತ ಹಿಂದೂಗಳ ದೇವಸ್ಥಾನಗಳನ್ನು ಅಭಿವೃದ್ಧಿಕಾರ್ಯದಲ್ಲಿ ಅಡ್ಡಿಯಾಗುತ್ತಿದೆ ಎನ್ನುತ್ತಾ ಹಾಗೂ ಅವುಗಳನ್ನು ಅನಧಿಕೃತವೆಂದು ನಿರ್ಧರಿಸಿ ಕೆಡಹುತ್ತಿದ್ದಾರೆ. ‘ದೇವಸ್ಥಾನಗಳನ್ನು ಕೆಡವಿದರೆ ಅಥವಾ ಸರಿಸಿದರೆ ಏನಾಗುತ್ತದೆ’ ಎಂದು ಕೆಲವರಿಗೆ ಅನಿಸಿದರೆ ಅವರು ಇದರಲ್ಲಿ ಗಮನದಲ್ಲಿಡಬೇಕಾದ ಅಂಶವೆಂದರೆ ದೇವಸ್ಥಾನಗಳು ಸಮಾಜದ ದೇವರಕೋಣೆಯಾಗಿವೆ! ಈಶ್ವರೀಯ ಚೈತನ್ಯದ ಶಾಶ್ವತ ಸ್ರೋತಗಳಾಗಿವೆ! ರಾಜಕಾರಣಿಗಳು ಇಂತಹ ದೇವಸ್ಥಾನಗಳನ್ನು ನಾಶ ಮಾಡಿ ಹಿಂದೂ ರಾಷ್ಟ್ರ ಮತ್ತು ಹಿಂದೂ ಧರ್ಮವನ್ನು ಮುಗಿಸಲು ಪ್ರಯತ್ನಿಸುತ್ತಿದ್ದಾರೆ. ಇದರ ಬದಲು ಈ ಅಧರ್ಮಿ ರಾಜಕಾರಣಿಗಳು ಇತರ ಧರ್ಮೀಯರ ಪ್ರಾರ್ಥನಾಸ್ಥಳಗಳನ್ನು, ಅವರ ಸಾರ್ವಜನಿಕ ಸ್ಥಳಗಳಲ್ಲಾಗುತ್ತಿರುವ ಪ್ರಾರ್ಥನೆ ಮತ್ತು ಕೆಲವು ಸ್ಮಾರಕಗಳನ್ನು ಉಳಿಸಲು ಹರಸಾಹಸ ಪಡುತ್ತಿರುತ್ತಾರೆ. ಸರ್ವಪಕ್ಷೀಯ ಅಧರ್ಮಿ ರಾಜಕಾರಣಿಗಳ ಈ ಓಲೈಕೆಯ ಕೆಲವು ಉದಾಹರಣೆಗಳು.
೧.ಕುತುಬಮಿನಾರ ರಸ್ತೆ ಮಧ್ಯೆ ಬರುತ್ತಿರುವುದರಿಂದ ಅದಕ್ಕೆ ಧಕ್ಕೆಯಾಗ ಬಾರದೆಂದು ರಾಜಕಾರಣಿಗಳು ಮಾರ್ಗವನ್ನೇ ಬದಲಾಯಿಸಿದರು.
೨.ಪುಣೆಯ ರವಿವಾರ ಪೇಟೆಯಲ್ಲಿಯ ಸುಭಾನಶಾಹ ದರ್ಗಾವು ರಸ್ತೆ ಮಧ್ಯದಲ್ಲಿದೆ. ಈ ದರ್ಗಾವನ್ನು ಕೆಡಹಲು ನ್ಯಾಯಾಲಯ ಅದೇಶ ನೀಡಿದ್ದರೂ ರಾಜಕಾರಣಿಗಳು ಅದನ್ನು ಕೆಡಹಲಿಲ್ಲ.
೩.ಮುಂಬೈಯಲ್ಲಿ ವಾಂದ್ರೆ (ಪ.) ರೈಲುನಿಲ್ದಾಣದ ಎದುರಿನಲ್ಲಿಯೇ ಇತರ ಪಂಥೀಯರ ಪ್ರಾರ್ಥನಾಸ್ಥಳವಿದೆ. ಸಾವಿರಾರು ಇತರ ಧರ್ಮೀಯರು ಇದರ ಎದುರು ಪ್ರತಿ ಶುಕ್ರವಾರ ಒಟ್ಟುಸೇರಿ ರಸ್ತೆ ಮೇಲೆ ಪ್ರಾರ್ಥನೆ ಸಲ್ಲಿಸುತ್ತಾರೆ. ಅದರಿಂದ ಈ ಸಂಪೂರ್ಣ ಮಾರ್ಗದಲ್ಲಿ ಸಂಚಾರ ನಿರ್ಬಂಧ ಮಾಡಲಾಗುತ್ತದೆ ಮತ್ತು ವಾಹನಗಳನ್ನು ಬೇರೆ ರಸ್ತೆಯಿಂದ ಹೊರಳಿಸಬೇಕಾಗುತ್ತವೆ. ಇದರ ಬಗ್ಗೆ ಯಾವುದೇ ಕ್ರಮಕೈಗೊಳ್ಳುವುದಿಲ್ಲ.
೫.ಹೊಸದೆಹಲಿಯ ನಿಜಾಮುದ್ದೀನ ಪರಿಸರದಲ್ಲಿಯ ನೂರಗಂಜ ಈ ಅನಧಿಕೃತ ಮಸೀದಿಯನ್ನು ಕೆಡವಿದಾಗ ದೆಹಲಿಯ ಮುಖ್ಯಮಂತ್ರಿ ಶೀಲಾ ದೀಕ್ಷಿತರು ಜಾಮಾ ಮಸೀದಿಯ ಇಮಾಮ ಬುಖಾರಿಯನ್ನು ಭೇಟಿಯಾಗಿ ಮಸೀದಿಯನ್ನು ಪುನಃ ಕಟ್ಟಿಸಿ ಕೊಡುವುದಾಗಿ ಒಪ್ಪಿದರು.
ತದ್ವಿರುದ್ಧ ಹಿಂದೂಗಳ ಭಾವನೆಯನ್ನು ರಾಜಕಾರಣಿಗಳು ಸದಾ ಮೆಟ್ಟುತ್ತಾ ಬಂದಿದ್ದಾರೆ. ಇದರ ಕೆಲವು ಉದಾಹರಣೆಗಳು
೧.ಪುಣೆಯಲ್ಲಿ ಸಂತ ಜ್ಞಾನೇಶ್ವರ ಪಾದುಕಾ ದೇವಸ್ಥಾನವನ್ನು ಧ್ವಂಸಗೊಳಿಸಲಾಗಿದೆ.
೨.ಕರ್ನಾಟಕ ರಾಜ್ಯದಲ್ಲಿ ಇದು ವರೆಗೆ ೨೦೦ ಕ್ಕಿಂತಲೂ ಹೆಚ್ಚು ದೇವಸ್ಥಾನಗಳನ್ನು ಭಾಜಪ ಸರಕಾರವು ಧ್ವಂಸಗೊಳಿಸಿದ್ದು ಇನ್ನೂ ಸಾವಿರಾರು ದೇವಸ್ಥಾನಗಳನ್ನು ಕೆಡಹಲು ನೋಟಿಸುಗಳನ್ನು ಜ್ಯಾರಿಮಾಡಿದೆ.
೩.ಗೋವಾ, ಒರಿಸ್ಸಾ ಮತ್ತು ರಾಜಸ್ಥಾನದಲ್ಲಿ ನೂರಾರು ವರ್ಷಗಳಷ್ಟು ಹಿಂದಿನ ಪ್ರಾಚೀನ ದೇವಸ್ಥಾನಗಳನ್ನು ಅನಧಿಕೃತವೆಂದು ನಿರ್ಧರಿಸಿ ಕೆಡಹಲು  ರಾಜಕಾರಣಿಗಳು ಸಂಚು ರೂಪಿಸಿದ್ದಾರೆ.
ಹಿಂದೂಗಳೇ, ನೀವು ಸಂಘಟಿತರಾಗಿಲ್ಲದಿರುವುದರಿಂದಲೇ ರಾಜಕಾರಣಿಗಳು ನಿಮ್ಮ ಶ್ರದ್ಧಾಸ್ಥಾನಗಳನ್ನು ಧ್ವಂಸ ಮಾಡುತ್ತಿದ್ದಾರೆ! ಈ ರಾಜಕಾರಣಿಗಳು ಎಲ್ಲ ಪಕ್ಷದವರಿಗೆ ಸಂಬಂಧಿತರಾಗಿದ್ದಾರೆ. ಕರ್ನಾಟಕದಲ್ಲಿಯಂತೂ ಭಾಜಪದ ರಾಜ್ಯಾಡಳಿತವಿದೆ. ಅದರಿಂದ ಯಾವುದೇ ರಾಜಕೀಯ ಪಕ್ಷಗಳು ಹಿಂದೂಗಳ ಧಾರ್ಮಿಕಭಾವನೆಗಳ ವಿಚಾರ ಮಾಡುತ್ತಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಈ ಸ್ಥಿತಿಯನ್ನು ಪರಿವರ್ತಿಸಲು ವ್ಯಾಪಕ ಸಂಘಟನೆ ಮಾಡಿ ರಾಜಕಾರಣಿಗಳ ಮೇಲೆ ಅಲ್ಪಸಂಖ್ಯಾತರಂತೆ ಅಂಜಿಕೆ ಮೂಡಿಸಬೇಕು, ಅನ್ಯಥಾ ಹಿಂದೂಗಳ ಅಸ್ತಿತ್ವವೇ ನಾಶವಾಗುವುದು, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

No comments:

Post a Comment