ಸರಕಾರದ ತೆಕ್ಕೆಗೆ ಪ್ರಸಿದ್ಧ ಶನಿಶಿಂಗಣಾಪುರದ ಶನೈಶ್ವರ ದೇವಸ್ಥಾನ ಮತ್ತು ಇತರ...

ಬಲಾಢ್ಯ ಹಿಂದುತ್ವವಾದಿ ಸಂಘಟನೆಗಳು ಈ ಬಗ್ಗೆ ಏನಾದರೂ ಹೇಳುವವೋ ಅಥವಾ ನಿತ್ಯದಂತೆ ಕೈಕಟ್ಟಿಕೊಂಡು ಬಾಯಿಗೆ ಬೀಗ ಜಡಿದು ಸುಮ್ಮನಿರುವವೋ?
 ಸರಕಾರದ ತೆಕ್ಕೆಗೆ ಪ್ರಸಿದ್ಧ ಶನಿಶಿಂಗಣಾಪುರದ ಶನೈಶ್ವರ ದೇವಸ್ಥಾನ ಮತ್ತು ಇತರ ೯ ದೇವಸ್ಥಾನಗಳು ಸೇರಲಿದೆ!

ಸರಕಾರಕ್ಕೆ ಜನರು ನೀಡಿದ ರಾಜ್ಯವನ್ನು ನಿರ್ವಹಿಸಲು ಆಗುವುದಿಲ್ಲ. ಒಂದೂ ಕ್ಷೇತ್ರವನ್ನು ಭ್ರಷ್ಟಾಚಾರಮುಕ್ತಗೊಳಿಸಲು ಬರುವುದಿಲ್ಲ. ರೈತರ ಆತ್ಮಹತ್ಯೆಗಳನ್ನು ತಡೆಗಟ್ಟಲು ಆಗುತ್ತಿಲ್ಲ. ಇಂತಹ ಸರಕಾರವು ಹಿಂದೂಗಳ ದೇವಸ್ಥಾನಗಳನ್ನು ವಶಪಡಿಸಿಕೊಂಡು ಅವುಗಳನ್ನು ನಾಶ ಮಾಡಲಿದೆ ಎಂಬುದರಲ್ಲಿ ಸಂದೇಹವಿಲ್ಲ!
ನಗರ: ಮಹಾರಾಷ್ಟ್ರ ಸರಕಾರವು ಹೆಚ್ಚುತ್ತಿರುವ ಭಕ್ತರ ಜನದಟ್ಟಣೆ ಮತ್ತು ಹೆಚ್ಚುತ್ತಿರುವ ದೇವಸ್ಥಾನದ ಆದಾಯ ಇವುಗಳಿಂದಾಗಿ ಶನಿಶಿಂಗಣಾಪುರದ ಶ್ರೀಕ್ಷೇತ್ರ ಶನೈಶ್ವರ ದೇವಸ್ಥಾನವನ್ನು ವಶಪಡಿಸಿಕೊಳ್ಳುವ ಚಟುವಟಿಕೆಗಳನ್ನು ಆರಂಭಿಸಿದೆ. ಈ ದೇವಸ್ಥಾನದ ವಾರ್ಷಿಕ ಆದಾಯವು ಸುಮಾರು ೧೨ಕೋಟಿಯಷ್ಟಿದೆ. ಕೋಟಿಗಟ್ಟಲೆ ವಾರ್ಷಿಕ ಆದಾಯವಿರುವ ಶನಿ ದೇವಸ್ಥಾನ ಸಹಿತ ಜಿಲ್ಲೆಯಲ್ಲಿಯ ಶ್ರೀಕ್ಷೇತ್ರ ಮೊಹಟಾದೇವಿ, ಮಢಿ, ಶೆಗ್ಗಾಂವಿನ ಶ್ರೀಗಜಾನನ ಮಹಾರಾಜ ದೇವಸ್ಥಾನ ಮತ್ತು ತುಳಜಾಪುರದ ಶ್ರೀ ಭವಾನಿಮಾತಾ ದೇವಸ್ಥಾನ ಇತ್ಯಾದಿ ದೇವಸ್ಥಾನಗಳು ಸರಕಾರ ವಶಪಡಿಸಿಕೊಳ್ಳುವ ಪಟ್ಟಿಯಲ್ಲಿವೆ. ಈ ವಾರ್ತೆಯನ್ನು ದೈನಿಕ ‘ಪುಢಾರಿ’ಯು ಪ್ರಕಟಿಸಿದೆ. (ಹಿಂದೂಗಳೇ, ಸರಕಾರವು ದೇವಸ್ಥಾನಗಳನ್ನು ವಶಪಡಿಸಿಕೊಂಡರೆ ನಿಮಗೆ ಈಶ್ವರೀ ಚೈತನ್ಯ ನೀಡುವ ದೇವಸ್ಥಾನರೂಪಿ ಏಕೈಕ ಈಶ್ವರೀ ಚೈತನ್ಯದ ಸ್ರೋತದ ಪಾವಿತ್ಯವು ನಾಶವಾಗುವುದು ಮತ್ತು ನೀವು ದೇವಸ್ಥಾನಗಳ ಲಾಭಗಳಿಂದ ವಂಚಿತರಾಗುವಿರಿ. ಇದು ವರೆಗಿನ ಅನುಭವಗಳಿಂದ ಇದೇ ತಿಳಿದು ಬಂದಿದೆ ಎಂಬುದನ್ನು ಗಮನದಲ್ಲಿಡಿರಿ! - ಸಂಪಾದಕರು)


No comments:

Post a Comment