ಬೇಲೂರಿನಲ್ಲಾದ ಹಿಂದೂ ಧರ್ಮಜಾಗೃತಿ ಸಭೆ

ದೀಪಪ್ರಜ್ವಲನೆ ಮಾಡುತ್ತಿರುವ ಶ್ರೀ.ಹರ್ಷವರ್ಧನ ಶೆಟ್ಟಿ, ಪಕ್ಕದಲ್ಲಿ ಶ್ರೀ.ನಾಗೇಶ ಹೆಚ್.ಜಿ. ಹಾಗೂ ಸೌ.ಸುಮಾ ಮಂಜೇಶ

ಬೇಲೂರು : ೩೦.೧.೨೦೧೧ ರಂದು ಬೇಲೂರಿನ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಸಮುದಾಯ ಭವನದಲ್ಲಿ ಹಿಂದೂ ಧರ್ಮಜಾಗೃತಿ ಸಭೆಯು ನೆರವೇರಿತು. ಈ ಸಭೆಯ ಉದ್ಘಾಟನೆಯನ್ನು ಮುಖ್ಯ ವಕ್ತಾರರಾದ ಸ್ಥಳೀಯ ಋತ್ವಿಕ ಮಾಸಿಕ ಪತ್ರಿಕೆ ಸಂಪಾದಕರಾದ ಶ್ರೀ.ನಾಗೇಶ್ ಹೆಚ್.ಜಿ. ನೆರವೇರಿಸಿದರು. ಈ ಸಮಯದಲ್ಲಿ ಹಿಂದೂ ಜನ ಜಾಗೃತಿ ಸಮಿತಿಯ ಶ್ರೀ. ಹರ್ಷವರ್ಧನ ಹಾಗೂ ಸನಾತನ ಸಂಸ್ಥೆಯ ಸೌ.ಸುಮಾ ಮಂಜೇಶ ಇವರು ವ್ಯಾಸಪೀಠದಲ್ಲಿ ಉಪಸ್ಥಿತರಿದ್ದರು. ಇದರಲ್ಲಿ ಒಟ್ಟು ೧೫೦ ಧರ್ಮಾಭಿಮಾನಿಗಳು ಉಪಸ್ಥಿತರಿದ್ದರು.


No comments:

Post a Comment