ಒಳ್ಳೆಯ ಸಂಬಂಧಿಕರಿಗಿಂತ ನಮ್ಮೊಂದಿಗೆ ಸರಿಯಾಗಿ ನಡೆದುಕೊಳ್ಳದ ಸಂಬಂಧಿಕರೇ ಹೆಚ್ಚು ಉಪಯುಕ್ತ!
‘ತಂದೆ-ತಾಯಿ, ಹೆಂಡತಿ, ಮಕ್ಕಳು, ಸಂಬಂಧಿಕರು, ನೆರೆಹೊರೆಯವರು, ಸಹಚರರು ಇವರೆಲ್ಲರೂ ಒಳ್ಳೆಯ ರೀತಿಯಲ್ಲಿ ನಡೆದುಕೊಳ್ಳುವವರಾಗಿದ್ದರೆ ವ್ಯಕ್ತಿಯು ಅವರ ಮಾಯೆಯಲ್ಲಿ ಎಷ್ಟು ಸಿಲುಕಿಕೊಳ್ಳುತ್ತಾನೆಂದರೆ ಅವನಿಗೆ ದೇವರ ನೆನಪೇ ಆಗುವುದಿಲ್ಲ. ಅವನ ಜೀವನವೆಲ್ಲ ಮಾಯೆಯಲ್ಲಿಯೇ ಮುಗಿದು ಹೋಗುತ್ತದೆ. ಆದುದರಿಂದ ವ್ಯಕ್ತಿಯೊಂದಿಗೆ ಜಗಳವಾಡುವ, ಒಳ್ಳೆಯದಾಗಿ ನಡೆದುಕೊಳ್ಳದವರು ಮುಂತಾದವರು ಒಳ್ಳೆಯ ಸಂಬಂಧಿಕರಿಗಿಂತ ಹೆಚ್ಚು ಉಪಯುಕ್ತರಾಗಿದ್ದಾರೆ; ಏಕೆಂದರೆ ಅವರಿಂದ ವ್ಯಕ್ತಿಗೆ ದುಃಖವಾಗುತ್ತದೆ ಹಾಗೂ ಅದು ದೂರವಾಗಲೆಂದು ವ್ಯಕ್ತಿಯು ಸಾಧನೆಯನ್ನು ಮಾಡು ತ್ತಾನೆ. ಕುಂತಿಯು ಇದಕ್ಕಾಗಿಯೇ ಕೃಷ್ಣನಲ್ಲಿ ‘ನನಗೆ ದುಃಖವನ್ನು ಕೊಡು’?ಎಂದು ಪ್ರಾರ್ಥನೆ ಮಾಡಿದ್ದಾಳೆ. - ಡಾ.ಆಠವಲೆ (ವೈಶಾಖ ಶುಕ್ಲ ೬, ಕಲಿಯುಗ ವರ್ಷ ೫೧೧೨ (೨೦.೪.೨೦೧೦))
No comments:
Post a Comment