ರಾಜ್ಯದ ರೈತರು ಆತ್ಮಹತ್ಯೆ ಮಾಡುತ್ತಿರುವಾಗ ಭಾಜಪ ಮಂತ್ರಿಗಳಿಂದ ದುಂದುವೆಚ್ಚ


‘ರಾಜ್ಯ ಭಾಜಪದ ಕೃಷಿಮಂತ್ರಿ ಉಮೇಶ ಕತ್ತಿಯವರ ಮಗಳ ವಿವಾಹಕ್ಕೆ ಕೋಟಿಗಟ್ಟಲೆ ಹಣವನ್ನು ದುಂದುವೆಚ್ಚ ಮಾಡಲಾಯಿತು. ವಿವಾಹದ ಹಿನ್ನೆಲೆಯಲ್ಲಿ ಮಂಟಪದೆಡೆಗೆ ಹೋಗುವ ಎಲ್ಲ ರಸ್ತೆಗಳನ್ನು ಅಲಂಕರಿಸಲಾಗಿತ್ತು. ಈ ವಿವಾಹದ ಮಂಟಪವನ್ನು ಸುಮಾರು ೩೦ ಎಕರೆ ಜಾಗದಲ್ಲಿ ೨೦೦ x ೪೦೦ ವಿಸ್ತೀರ್ಣದಲ್ಲಿ ಹಾಕಲಾಗಿತ್ತು. ಮಂಟಪ ಹಾಕುವ ಕೆಲಸವು ತಿಂಗಳುಗಟ್ಟಲೆಯಿಂದ ನಡೆಯುತ್ತಿತ್ತು.
ಮಂಟಪದಲ್ಲಿಯೇ ವಾತಾನುಕೂಲಿತ ಕಕ್ಷೆಯ ವ್ಯವಸ್ಥೆಯನ್ನು ಮಾಡಲಾಗಿದೆ. ಕೇವಲ ಮಂಟಪವೊಂದಕ್ಕೇ ಸುಮಾರು ೨ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆಯೆಂದು ಹೇಳಲಾಗುತ್ತದೆ. ಭೋಜನಕ್ಕಾಗಿ ೧೦ ಮಂಟಪಗಳನ್ನು ನಿಲ್ಲಿಸಲಾಗಿದೆ. ಎರಡು ಲಕ್ಷ ಜನರು ವಿವಾಹಕ್ಕೆ ಉಪಸ್ಥಿತರಿರುವರೆಂದು ಅಪೇಕ್ಷಿಸಲಾಗಿದೆ. ಚೌಕಿ ಚೌಕಿಗಳಲ್ಲಿ ಹಾಗೂ ಊರಿನೆಲ್ಲೆಡೆಯ ಪ್ರವೇಶ ದ್ವಾರದಲ್ಲಿ ಸ್ವಾಗತ ಕಮಾನನ್ನು ನಿಲ್ಲಿಸಲಾಗಿದೆ. ಬಾಗೇವಾಡಿಯ ಪ್ರತಿಯೊಂದು ಮನೆಯ ಎದುರು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ವಿವಾಹದಲ್ಲಿ ಭಾಗಿಯಾಗುವ ಮಂತ್ರಿಗಳ ಭದ್ರತೆಗಾಗಿ ಸತತ ೮ ದಿನಗಳಿಂದಲೇ ಮಂಟಪ ಹಾಗೂ ಪರಿಸರದಲ್ಲಿ ಪೊಲೀಸ್ ದಳವು ಕಾರ್ಯನಿರತವಾಗಿತ್ತು.’ (ದೈನಿಕ ‘ಸಕಾಳ’, ಪುಟ ೫, ೧೦.೧೨.೨೦೧೦)

No comments:

Post a Comment