ಹುಬ್ಬಳ್ಳಿಯಲ್ಲಿ ದೇವಸ್ಥಾನಗಳ ತೆರವಿನ ವಿರುದ್ಧ ಹಿಂದೂಗಳ ಆಂದೋಲನ ಹಾಗೂ ದೇವಸ್ಥಾನದ ಪುನರ್ನಿರ್ಮಾಣ
ಭಾಜಪ ಸರಕಾರದ ಹಿಂದೂದ್ರೋಹ

ಯಂತ್ರದಿಂದ ದೇವಸ್ಥಾನವನ್ನು ಬೀಳಿಸುತ್ತಿರುವ ಸರಕಾರಿ ಅಧಿಕಾರಿ







ದೇವಸ್ಥಾನದ ಪುನರ್ನಿರ್ಮಾಣ ಮಾಡುತ್ತಿರುವ ಹಿಂದೂಗಳು
 ಹುಬ್ಬಳ್ಳಿ : ಸರಕಾರವು ೧೯.೨. ೨೦೧೧ರಂದು ಬೆಳಗ್ಗೆ ಇಲ್ಲಿನ ಬೆಂಗೇರಿಯಲ್ಲಿ ಚೌಗಮ್ಮ ದೇವಿಯ ದೇವಸ್ಥಾನ ಹಾಗೂ ಮಸೀದಿಯೊಂದನ್ನು ಬೀಳಿಸಿತು. ಈ ಕೃತ್ಯಕ್ಕೆ ಅನೇಕ ಹಿಂದೂಪರ ಸಂಘಟನೆಗಳು ಹಾಗೂ ಹಿಂದೂಗಳು ಪ್ರತಿರೋಧ ಒಡ್ಡಿದರು. ಹಿಂದೂಗಳು ಅಧಿಕಾರಿಗಳಿಗೆ ತಿಳಿಸಿ ಹೇಳಲು ಪ್ರಯತ್ನಿಸಿದರು ಹಾಗೂ ಕಲ್ಲು ತೂರಾಟ ನಡೆಯಿತು. ಆದರೂ ದೇವಸ್ಥಾನವನ್ನು ಬೀಳಿಸಲಾಯಿತು. ಅದರಿಂದ ಆಕ್ರೋಶಗೊಂಡ ಧರ್ಮಾಭಿಮಾನಿಗಳು ರಸ್ತೆ ನಡುವೆ ಟೈಯರ್‌ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದರಿಂದ ಸುಮಾರು ೨ ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತು ಮಾತ್ರವಲ್ಲದೇ ಮನವೊಲಿಸಲು ಬಂದ ಪಾಲಿಕೆಯ ಆಯುಕ್ತರೇ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ ಮರಳುವಂತೆ ಮಾಡಿದರು. ಯಂತ್ರಗಳು ಹಿಂತಿರುಗಿದ ನಂತರ ಉಪಸ್ಥಿತ ಧರ್ಮಾಭಿಮಾನಿಗಳು ಕೂಡಲೇ ದೇವಸ್ಥಾನ ಪುನರ್ನಿರ್ಮಾಣದ ಕಾರ್ಯವನ್ನು ಆರಂಭಿಸಿದರು. ಧರ್ಮಾಭಿಮಾನಿಗಳು ದೇವಸ್ಥಾನ ಇರುವಲ್ಲಿಯೇ ದೇವರ ಮೂರ್ತಿಯನ್ನು ಪುನಃ ಸ್ಥಾಪಿಸಿದರು ಹಾಗೂ ಸಣ್ಣ ಡೇರೆಯನ್ನು ಕಟ್ಟಿದರು.

No comments:

Post a Comment