‘ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ, ಕರ್ನಾಟಕ’
ಇದರ ಬೆಂಗಳೂರು ಶಾಖೆಯ ಉದ್ಘಾಟನೆ
‘ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ, ಕರ್ನಾಟಕ’ ಇದರ ಬೆಂಗಳೂರು ಶಾಖೆಯ ಫಲಕವನ್ನು ಅನಾವರಣಗೊಳಿಸುತ್ತಿರುವ ಗಣ್ಯ ವಕ್ತಾರರು
ಬೆಂಗಳೂರು : ೨೪.೨.೨೦೧೧ ರಂದು ‘ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ, ಕರ್ನಾಟಕ’ ಇದರ ಬೆಂಗಳೂರು ಶಾಖೆಯ ಉದ್ಘಾಟನೆಯನ್ನು ಶ್ರೀ ಪ್ರಸನ್ನ ವೀರಾಂಜನೇಯ ಸನ್ನಿಧಿ, ಮಹಾಲಕ್ಷ್ಮೀಪುರಂನಲ್ಲಿ ಮಾಡಲಾಯಿತು. ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿ ದೇವಸ್ಥಾನದ (ಮಹಾಲಕ್ಷ್ಮೀಪುರಂ) ಕಾರ್ಯದರ್ಶಿ ಶ್ರೀ.ಕೃಷ್ಣಮೂರ್ತಿಯವರು ದೀಪ ಪ್ರಜ್ವಲಿಸಿದರು. ಅನಂತರ ಮಹಾಸಂಘದ ಫಲಕವನ್ನು ಅನಾವರಣಗೊಳಿಸಲಾಯಿತು. ವ್ಯಾಸಪೀಠದಲ್ಲಿ ರಾಷ್ಟ್ರೀಯ ರತ್ನ ಪಾರಿತೋಷಕ ಪುರಸ್ಕೃತ ಮತ್ತು ಬೆಂಗಳೂರಿನ ತಾವರೆಕೆರೆಯ ರಾಜರಾಜೇಶ್ವರಿ ದೇವಸ್ಥಾನದ ಸಂಸ್ಥಾಪಕ ಧರ್ಮದರ್ಶಿ ವೇದಬ್ರಹ್ಮ ಶರ್ಮಾ ಗುರೂಜಿ, ಯಲಹಂಕಾ ಉಪ ನಗರದ ಆಂಜನೇಯ ಸ್ವಾಮಿ ದೇವಸ್ಥಾನದ ಕಾರ್ಯದರ್ಶಿ ಶ್ರೀ. ವೆಂಕಟೇಶ ಮೂರ್ತಿ, ಶ್ರೀ ಮಹಾಲಕ್ಷ್ಮೀ ದೇವಸ್ಥಾನ (ಸುದಾಮಾ ನಗರ) ಇದರ ಪ್ರಧಾನ ಕಾರ್ಯದರ್ಶಿ ಶ್ರೀ. ಮುದ್ದುಕುಮಾರ, ಹಿಂದೂ ಜನಜಾಗೃತಿ ಸಮಿತಿ ಕರ್ನಾಟಕ ರಾಜ್ಯ ವಕ್ತಾರ ಶ್ರೀ. ಮೋಹನ ಗೌಡ, ಮಹಾಸಂಘದ ಉಪಾಧ್ಯಕ್ಷ ಶ್ರೀ. ಲಕ್ಷ್ಮೀಶ ಗಬ್ಲಡ್ಕ, ಮಹಾ ಸಂಘದ ಕಾರ್ಯದರ್ಶಿ ಶ್ರೀ. ರಮಾನಂದ ಗೌಡ ಮುಂತಾದವರು ಉಪಸ್ಥಿತರಿದ್ದರು. ಬೆಂಗಳೂರಿನ ಮಹಾಸಂಘದ ಶಾಖೆಯ ಸಮನ್ವಯಕ ಶ್ರೀ. ಸದಾಶಿವರವರು ಸ್ವಾಗತ ಭಾಷಣ ಮಾಡಿದರು. ಶ್ರೀ. ರಮಾನಂದ ಗೌಡರವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ, ‘ಈ ಮಹಾಸಂಘವು ಹಿಂದುತ್ವಕ್ಕೆ ಬರಲಿರುವ ಎಲ್ಲ ಸಂಕಟವನ್ನು ಎಲ್ಲ ಹಿಂದೂಗಳು ಸಂಘಟಿತರಾಗಿ ಎದುರಿಸುವ ಕಾರ್ಯ ಮಾಡಲಿಕ್ಕಿದೆ’ ಎಂದರು. ನಂತರ ಶ್ರೀ. ಮೋಹನ ಗೌಡರವರು ಮಾತನಾಡುತ್ತಾ, ಧರ್ಮಾಂಧ ಆಕ್ರಮಣಕಾರರ ಕಾಲದಿಂದ ಇಂದಿನ ಜಾತ್ಯತೀತ ರಾಜಕಾರಣಿಗಳ ವರೆಗೆ ಎಲ್ಲರೂ ಹಿಂದೂ ಧರ್ಮದ ಮೇಲೆ ಆಘಾತ ಮಾಡಿದ್ದಾರೆ. ಸೋಮನಾಥ ದೇವಸ್ಥಾನದ ಉದಾಹರಣೆ ನೀಡುವುದಾದರೆ ಮೊಘಲರು ಎಷ್ಟು ಸಮಯ ದೇವಸ್ಥಾನವನ್ನು ಬೀಳಿಸಿದರೋ ಅಷ್ಟು ಸಮಯ ನಮ್ಮ ಪೂರ್ವಜರು ಅದನ್ನು ಪುನಃ ನಿರ್ಮಿಸಿದರು. ನಾವೂ ಅಂತಹ ಆದರ್ಶವನ್ನು ಎದುರಿಗಿಟ್ಟುಕೊಳ್ಳಬೇಕು’ ಎಂದರು.
ಮಹಾಸಂಘದ ಉಪಾಧ್ಯಕ್ಷ ಶ್ರೀ. ಲಕ್ಷ್ಮೀಶ ಗಬ್ಲಡ್ಕರವರು ಮಾತನಾಡುತ್ತಾ, ‘ರಾಜಕಾರಣಿಯ ಕಾರ್ಯಕ್ರಮ ನಡೆಯುವಾಗ ಯಾರಾದರೂ ಮದ್ಯಪಾನ ಮಾಡಿ ಕುಣಿಯುತ್ತಿದ್ದರೆ ಅವರು ಸುಮ್ಮ ನಿರುವರೇ? ಹಾಗಾದರೆ ನಮ್ಮ ಗಣೇಶೋತ್ಸದಲ್ಲಿ ಹೀಗೆ ಆಗುವುದನ್ನು ನಾವೇಕೆ ಸಹಿಸುತ್ತೇವೆ?’ ಎಂದು ಪ್ರಶ್ನಿಸಿದರು.
No comments:
Post a Comment