ಉಡುಪಿಯಲ್ಲಿ ಓರ್ವ ಕ್ರೈಸ್ತನಿಂದಾಗುತ್ತಿದ್ದ ದೇವತೆಗಳ ವಿಡಂಬನೆಯನ್ನು ತಡೆದ ಹಿಂದೂ ಧರ್ಮಾಭಿಮಾನಿ ಸೋಮಶೇಖರ!
ಉಡುಪಿ : ಇಲ್ಲಿನ ಪತ್ರಿಕೆಯೊಂದರ ಪ್ರಚಾರಾರ್ಥ ‘ನಗೆ ಹಬ್ಬ’ ಎಂಬ ಹಾಸ್ಯ ಕಾರ್ಯಕ್ರಮದಲ್ಲಿ ರಿಚರ್ಡ್ ಲುಯೀಸ್ ಎಂಬ ಕ್ರೈಸ್ತನು ಹಿಂದೂ ದೇವತೆಗಳ ವಿಡಂಬನೆಯನ್ನು ಮಾಡುತ್ತಿದ್ದನು. ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಧರ್ಮಾಭಿಮಾನಿ ಶ್ರೀ. ಸೋಮಶೇಖರರವರು ಈ ವಿಡಂಬನೆಯನ್ನು ತಡೆದರು. (ದೇವತೆಗಳ ವಿಡಂಬನೆಯನ್ನು ತಡೆಯುವ ಶ್ರೀ. ಸೋಮಶೇಖರರಿಗೆ ಅಭಿನಂದನೆಗಳು. ಇಂತಹ ಧರ್ಮಾಭಿಮಾನಿಗಳು ಎಲ್ಲೆಡೆ ನಿರ್ಮಾಣವಾದರೆ ದೇವತೆಗಳ ವಿಡಂಬನೆ ನಿಲ್ಲಲು ಸಮಯ ತಗಲಲಾರದು! - ಸಂಪಾದಕರು)
ಫೆಬ್ರವರಿ ೨೦ ರಂದು ನಡೆದ ಕಾರ್ಯಕ್ರಮವೊಂದರಲ್ಲಿ ಲುಯೀಸ್‌ನು ದ್ರೌಪದಿ ವಸ್ತ್ರಾಪಹರಣ ಮತ್ತು ಶ್ರೀ ಗಣೇಶನ ವಿಡಂಬನೆ ಮಾಡುತ್ತಿದ್ದನು. ಈ ಸಮಯದಲ್ಲಿ ಕಾರ್ಯಕ್ರಮ ವೀಕ್ಷಿಸುತ್ತಿದ್ದ ಶ್ರೀ. ಸೋಮಶೇಖರರು ಎದ್ದು ನಿಂತು ಅದನ್ನು ವಿರೋಧಿಸಿದರು. ಅವರ ಧ್ವನಿ ಯಾರಿಗೂ ಸರಿಯಾಗಿ ಕೇಳಿಸದಿದ್ದುದರಿಂದ ಅವರು ವ್ಯಾಸಪೀಠದ ಹತ್ತಿರ ಹೋಗಿ ಲುಯೀಸ್ ನಿಗೆ ವಿರೋಧಿಸಿದರು. “ನಿನಗೆ ವಿಡಂಬನೆ ಮಾಡುವುದಿದ್ದರೆ ಯೇಸು ಮತ್ತು ಮೇರಿಯ ವಿಡಂಬನೆ ಮಾಡು. ನಮ್ಮ ದೇವತೆಗಳದ್ದು ಬೇಡ. ನೀನು ಈ ಮೊದಲೂ ಇಂತಹ ಕಾರ್ಯಕ್ರಮಗಳನ್ನು ಮಾಡಿದ್ದಿ. ದೂರದರ್ಶನದಲ್ಲಿಯೂ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತೀಯಾ. ಅಲ್ಲಿ ನಾವೇನು ಮಾಡಲಾರೆವು. ಆದರೆ ಇವತ್ತು ನಿನ್ನನ್ನು ಪ್ರಶ್ನಿಸುವ ಅವಕಾಶ ಸಿಕ್ಕಿದೆ. ಇದೆಲ್ಲ ನಿಲ್ಲಿಸಿ ಹೊರಟು ಹೋಗು" ಎಂದರು.
ಅದಕ್ಕೆ ರಿಚರ್ಡ್ ಲುಯೀಸ್‌ನು ‘ನಾನು ಇದೇ ಮೊದಲ ಬಾರಿಯಲ್ಲ, ಈ ಹಿಂದೆಯೂ ಇಂತಹ ಕಾರ್ಯಕ್ರಮ ಮಾಡಿದ್ದೇನೆ. ನನಗೆ ಹಿಂದೂ ಧರ್ಮದ ಬಗ್ಗೆ ಗೌರವವಿದೆ. ನಾನು ನಾಟಕ ಮಾಡುವವನಾಗಿದ್ದೇನೆ, ನನಗೆ ಧರ್ಮದ ಬಗ್ಗೆ ಹೆಚ್ಚು ಗೊತ್ತಿಲ್ಲ. ನಿಮಗೆ ದುಃಖವಾಗಿದ್ದರೆ ಕ್ಷಮಿಸಿ’ ಎಂದನು. ಅದಕ್ಕೆ ಸೋಮಶೇಖರರು, ‘ಕ್ಷಮೆಯಲ್ಲ. ನೀನು ಇಲ್ಲಿಂದ ಹೊರಟು ಹೋಗು" ಎಂದರು. ಈ ಪ್ರಸಂಗ ನಡೆಯುತ್ತಿರುವಾಗ ಪೊಲೀಸರು ಬಂದು ಸೋಮಶೇಖರರನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದೊಯ್ದರು. ಆಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸುಮಾರು ೬೦ ಹಿಂದೂಗಳು, ಸೋಮಶೇಖರರು ಮಾಡಿದ ಕೃತಿ ಯೋಗ್ಯವೇ ಆಗಿದೆ. ಅವನನ್ನು ಈಗಲೇ ಬಿಟ್ಟುಬಿಡಬೇಕು. ಅವನನ್ನು ಪುನಃ ಇಲ್ಲಿಗೆ ತಂದು ಕೂರಿಸಿ, ಆಗ ಮಾತ್ರ ಕಾರ್ಯಕ್ರಮವನ್ನು ಮುಂದುವರಿಸಲು ಬಿಡುವೆವು’ ಎಂದು ಆಯೋಜಕರಿಗೆ ದಬಾಯಿಸಿದರು. ಹಿಂದೂಗಳ ವಿರೋಧಕ್ಕೆ ಮಣಿದು ಪೊಲೀಸರು ಶ್ರೀ.ಸೋಮಶೇಖರರನ್ನು ಬಿಟ್ಟರು. ಅನಂತರ ಶ್ರೀ. ಸೋಮಶೇಖರರನ್ನು ರಾಜವೈಭವದಲ್ಲಿ ಕರೆದು ಕಾರ್ಯಕ್ರಮದಲ್ಲಿ ಕೂರಿಸಿದರು. ಅನಂತರ ಕಾರ್ಯಕ್ರಮವನ್ನು ಮುಂದುವರಿಸಲು ಬಿಡಲಾಯಿತು. ಈ ಸಮಯದಲ್ಲಿ ರಿಚರ್ಡ್ ಲೂಯೀಸ್‌ನಿಗೆ ಕಾರ್ಯಕ್ರಮ ಮಾಡಲು ನಿರಾಕರಿಸಲಾಯಿತು. ಆದರೆ ಕಾರ್ಯಕ್ರಮದಲ್ಲಿ ಅವನು ಉಪಸ್ಥಿತನಿದ್ದನು. ಕಾರ್ಯಕ್ರಮದ ನಂತರ ಪೊಲೀಸರು ಲುಯೀಸ್ ನನ್ನು ಪೊಲೀಸರ ಭದ್ರತೆಯಲ್ಲಿ ಮಂಗಳೂರಿನ ತನಕ ತಲುಪಿಸಿದರು.
ಈ ಘಟನೆಯ ನಂತರ ಶ್ರೀ. ಸೋಮಶೇಖರರು ‘ಸನಾತನ ಪ್ರಭಾತ’ದ ಪ್ರತಿನಿಧಿ ಶ್ರೀ. ರತೀಶರಲ್ಲಿ ಅಭಿಪ್ರಾಯ ವ್ಯಕ್ತ ಪಡಿಸುತ್ತಾ, ‘ಧರ್ಮದ ರಕ್ಷಣೆ ಮಾಡಿದರೆ ಧರ್ಮ ಹೇಗೆ ನಮ್ಮನ್ನು ರಕ್ಷಿಸುತ್ತದೆ ಎಂಬುದು ಗಮನಕ್ಕೆ ಬಂದಿತು’ ಎಂದರು.
No comments:
Post a Comment