ದಕ್ಷಿಣ ಭಾರತ ಸ್ತರದ ಸನಾತನ ಸಂಸ್ಥೆಯ ಶಿಬಿರ ಸಂಪನ್ನ

ಶಿಬಿರದ ಉದ್ಘಾಟನೆಯನ್ನು ದೀಪಪ್ರಜ್ವಲನೆಯ 
ಮೂಲಕ ಮಾಡುತ್ತಿರುವ ಸನಾತನದ ಸಂತ ಪೂ. ರಾಜೇಂದ್ರ ಶಿಂದೆ
ಮಂಗಳೂರು : ಇಲ್ಲಿನ ಧರ್ಮ ಜಾಗರಣ ಸಭಾಗೃಹದಲ್ಲಿ ಸನಾತನ ಸಂಸ್ಥೆಯ ೪ ದಿನಗಳ ಶಿಬಿರವು ನೆರವೇರಿತು. ಫೆಬ್ರವರಿ ೨೫ ರಂದು ಸನಾತನದ ಸಂತ ಪೂ. ರಾಜೇಂದ್ರ ಶಿಂದೆಯವರು ದೀಪ ಪ್ರಜ್ವಲಿಸಿ ಶಿಬಿರವನ್ನು ಉದ್ಘಾಟಿಸಿದರು. ಈ ಶಿಬಿರದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಹಾಗೂ ಆಂಧ್ರಪ್ರದೇಶ, ತಮಿಳುನಾಡು, ಕೇರಳದ ಸನಾತನದ ಸಾಧಕರು ಉಪಸ್ಥಿತರಿದ್ದರು.

ಪೂ. ರಾಜೇಂದ್ರ ಶಿಂದೆಯವರು ಶಿಬಿರದ ಉದ್ದೇಶವನ್ನು ಸ್ಪಷ್ಟಪಡಿಸುತ್ತಾ, ‘ನಾವು ಸ್ವಲ್ಪ ಪ್ರಮಾಣದಲ್ಲಿ ವ್ಯಷ್ಟಿ- ಸಮಷ್ಟಿ ಸಾಧನೆಯನ್ನು ಒಳ್ಳೆಯ ರೀತಿಯಲ್ಲಿ ಮಾಡುತ್ತಿದ್ದೇವೆ. ಅದರಲ್ಲಿ ಹೇಗೆ ಸಾತತ್ಯವಿಟ್ಟುಕೊಳ್ಳಬೇಕು ಎಂಬ ಬಗ್ಗೆ ಈ ಶಿಬಿರದಲ್ಲಿ ಚಿಂತನೆ ಮಾಡಲಾಗುವುದು. ಸಮಷ್ಟಿ ಸಾಧನೆಗಾಗಿ ಅಧ್ಯಯನ ಹಾಗೂ ಆಯೋಜನಾ ಕೌಶಲ್ಯವಿರುವುದು ಆವಶ್ಯಕವಾಗಿದೆ. ಅದನ್ನು ಬೆಳೆಸಲು ಕಲಿತುಕೊಳ್ಳೋಣ’ ಎಂದರು. ಈ ಸಮಯದಲ್ಲಿ ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿದ ಸನಾತನದ ವಿಶಾಖಪಟ್ಟಣಂನ ಸಾಧಕ ಶ್ರೀ.ವಿಷ್ಣುದಾಸ ಕೀರ್ತನೆಯವರನ್ನು ಸನಾತನದ ಸಂತ ಪೂ. ರಾಜೇಂದ್ರ ಶಿಂದೆಯವರು ಸತ್ಕರಿಸಿದರು. (ಶಿಬಿರದ ಸವಿಸ್ತಾರ ವಾರ್ತೆಯನ್ನು ಮುಂದಿನ ಸಂಚಿಕೆಯಲ್ಲಿ ಓದಿರಿ.)

No comments:

Post a Comment