ದೇವರ ಕೃಪೆ ಪಡೆಯಲು ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆ ಹಾಗೂ ಅದರ ಹಿಂದಿನ ಶಾಸ್ತ್ರ
ಧರ್ಮಶಾಸ್ತ್ರದಲ್ಲಿ ದೇವತೆಗಳನ್ನು ಆವಾಹನೆ ಮಾಡುವುದು, ಅವರಿಗೆ ಕುಳಿತುಕೊಳ್ಳಲು ಆಸನವನ್ನು ಕೊಡುವುದು, ಅವರಿಗೆ ಚರಣಗಳನ್ನು ತೊಳೆದುಕೊಳ್ಳಲು ನೀರನ್ನು ಕೊಡುವುದು ಮುಂತಾದ ಕ್ರಮವಾದ ೧೬ ಉಪಚಾರಗಳನ್ನು ಕಲಿಸಿ ವಿಧಿಪೂರ್ವಕ ಮತ್ತು ಭಾವಪೂರ್ಣವಾಗಿ ಧರ್ಮಾಚರಣೆಯನ್ನು ಮಾಡಲು ಕಲಿಸಲಾಗಿದೆ.
೧೬ ಉಪಚಾರಗಳಲ್ಲಿ ಗಂಧವನ್ನು ಹಚ್ಚುವುದು, ಹೂವುಗಳನ್ನು ಅರ್ಪಿಸುವುದು, ಧೂಪವನ್ನು ತೋರಿಸುವುದು, ದೀಪವನ್ನು ಬೆಳಗುವುದು, ನೈವೇದ್ಯವನ್ನು ತೋರಿಸುವುದು ಈ ಐದು ಉಪಚಾರಗಳಿಗೆ ‘ಪಂಚೋಪಚಾರ’ ಎನ್ನುತ್ತಾರೆ. ಹದಿನಾರು ಉಪಚಾರಗಳನ್ನು ಮಾಡಲು ಆಗದಿದ್ದರೆ ಈ ಐದು ಉಪಚಾರಗಳಿಂದಾದರೂ ದೇವರ ಪೂಜೆಯನ್ನು ಮಾಡಬೇಕು. ಈ ಲೇಖನ ಮಾಲಿಕೆಯಲ್ಲಿ ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆಯ ಮಾಹಿತಿಯನ್ನು ನೀಡಲಾಗುತ್ತಿದೆ. (ಮುಂದುವರಿದ ಭಾಗ)೬ ಆ ೧. ತಟ್ಟೆಯ ಸುತ್ತಲೂ ಬಿಡಿಸಿರುವ ರಂಗೋಲಿ ಮತ್ತು ನೀರಿನ ಮಂಡಲಗಳ ತುಲನೆ : ಕೆಲವೊಮ್ಮೆ ತಟ್ಟೆಯ ಸುತ್ತಲೂ ರಂಗೋಲಿಯನ್ನೂ ಹಾಕುತ್ತಾರೆ. ರಂಗೋಲಿ ಮತ್ತು ನೀರಿನ ಮಂಡಲ ಇವುಗಳ ಕಾರ್ಯವು ಒಂದೇ ಆಗಿದೆ. ಕೇವಲ ಅವುಗಳ ಕಾರ್ಯಕ್ಷಮತೆ ಮತ್ತು ಲಹರಿಗಳ ಪ್ರಕ್ಷೇಪಣೆಯಲ್ಲಿ ವ್ಯತ್ಯಾಸವಿದೆ. ನೀರಿನ ಮಂಡಲವು ರಂಗೋಲಿಗಿಂತ ಹೆಚ್ಚು ಸೂಕ್ಷ ಸ್ತರದಲ್ಲಿ ಕಾರ್ಯವನ್ನು ಮಾಡುತ್ತದೆ. ರಂಗೋಲಿಯು ಎಲ್ಲ ಕಡೆಗಳಲ್ಲಿ ಸಹಜವಾಗಿ ಉಪಲಬ್ಧವಾಗುವುದಿಲ್ಲ. ಆದುದರಿಂದ ಹೆಚ್ಚಾಗಿ ತಟ್ಟೆಯ ಸುತ್ತಲೂ ನೀರಿನ ಮಂಡಲವನ್ನೇ ಹಾಕುತ್ತಾರೆ. - ಓರ್ವ ವಿದ್ವಾಂಸ (ಸೌ. ಅಂಜಲಿ ಗಾಡಗೀಳರ ಮಾಧ್ಯಮದಿಂದ, ೮.೫.೨೦೦೫, ಮಧ್ಯಾಹ್ನ ೫.೧೦)
೬ ಇ. ದೇವರಿಗೆ ನೈವೇದ್ಯವನ್ನು ಅರ್ಪಿಸುವಾಗ ಕಣ್ಣುಗಳನ್ನೇಕೆ ಮುಚ್ಚಿಕೊಳ್ಳಬೇಕು ? : ಆಹಾರವನ್ನು ನೋಡಿದಾಗ ತಿನ್ನುವ ವಾಸನೆಯು ಜಾಗೃತವಾಗುತ್ತದೆ, ಹಾಗಾಗಬಾರದೆಂದು ಮತ್ತು ವಾಸನಾರಹಿತ ಶುದ್ಧ ನೈವೇದ್ಯವು ದೇವರಿಗೆ ಅರ್ಪಣೆಯಾಗಬೇಕೆಂದು ನೈವೇದ್ಯವನ್ನು ಅರ್ಪಿಸುವಾಗ ಕಣ್ಣುಗಳನ್ನು ಮುಚ್ಚಿಕೊಳ್ಳಬೇಕು.
೬ ಈ. ದೇವರಿಗೆ ನೈವೇದ್ಯವನ್ನು ಅರ್ಪಿಸುವ ಕೃತಿ
೬ ಈ ೧. ಪದ್ಧತಿ ೧ - ಕರ್ಮಕಾಂಡದ ಸ್ತರ : ನೈವೇದ್ಯದ ಮೇಲೆ ತುಳಸಿಯ ಎರಡು ಎಲೆಗಳಿಂದ ನೀರನ್ನು ಸಿಂಪಡಿಸಿ ಒಂದನ್ನು ನೈವೇದ್ಯದ ಮೇಲಿಡಬೇಕು ಮತ್ತು ಇನ್ನೊಂದನ್ನು ದೇವರ ಚರಣಗಳಿಗೆ ಅರ್ಪಿಸಬೇಕು. ಅನಂತರ ‘ಪ್ರಾಣಾಯ ಸ್ವಾಹಾ...’ ಮುಂತಾದ ಮಂತ್ರಗಳನ್ನು ಹೇಳುತ್ತಾ ಬಲಗೈಯ ಐದೂ ಬೆರಳುಗಳ ತುದಿಗಳಿಂದ ನೈವೇದ್ಯದ ಸುವಾಸನೆಯನ್ನು ದೇವರ ಕಡೆಗೆ ಒಯ್ಯಬೇಕು. ಇದರ ಹಿಂದಿನ ಶಾಸ್ತ್ರವು ಮುಂದಿನಂತಿದೆ - ಐದೂ ಬೆರಳುಗಳಿಂದ ಪಂಚತತ್ತ್ವದ ಲಹರಿಗಳು ಪ್ರಕ್ಷೇಪಿತವಾಗುವುದರಿಂದ ಅವಶ್ಯಕತೆಗನುಸಾರ ಪಂಚತತ್ತ್ವಗಳಿಗೆ ಸಂಬಂಧಿಸಿದ ಬ್ರಹ್ಮಾಂಡದಲ್ಲಿನ ಆಯಾ ದೇವತೆಗಳ ಲಹರಿಗಳು ನಮಗೆ ಒಂದೇ ಸಮಯಕ್ಕೆ ಸಿಗಲು ಸಹಾಯವಾಗುತ್ತದೆ. - ಓರ್ವ ವಿದ್ವಾಂಸ (ಸೌ. ಅಂಜಲಿ ಗಾಡಗೀಳರ ಮಾಧ್ಯಮದಿಂದ, ೨.೧.೨೦೦೫, ರಾತ್ರಿ ೧೦.೩೭)
(ದೇವರಿಗೆ ನೈವೇದ್ಯವನ್ನು ತೋರಿಸುವಾಗ ಕೆಳಗಿನಿಂದ ಮೇಲಿನ ದಿಕ್ಕಿನಲ್ಲಿ ಏಕೆ ತೋರಿಸಬೇಕು? ಎಂಬುದರ ವಿವರವಾದ ಮಾಹಿತಿಯನ್ನು ಗ್ರಂಥದಲ್ಲಿ ಓದಿರಿ.)
೬ ಈ ೨. ಪದ್ಧತಿ ೨ - ಭಾವದ ಸ್ತರ : ನೈವೇದ್ಯದ ಮೇಲೆ ತುಳಸಿಯ ಎರಡು ಎಲೆಗಳಿಂದ ನೀರನ್ನು ಸಿಂಪಡಿಸಿ ಒಂದು ಎಲೆಯನ್ನು ನೈವೇದ್ಯದ ಮೇಲಿಡಬೇಕು ಮತ್ತು ಇನ್ನೊಂದನ್ನು ದೇವತೆಯ ಚರಣಗಳಲ್ಲಿ ಅರ್ಪಿಸಬೇಕು. ಅನಂತರ ಕೈಯನ್ನು ಜೋಡಿಸಿ ‘ಪ್ರಾಣಾಯ ಸ್ವಾಹಾ...’ ಮುಂತಾದ ಮಂತ್ರಗಳಿಂದ ದೇವತೆಗೆ ನೈವೇದ್ಯವನ್ನು ಅರ್ಪಿಸಬೇಕು.
೬ ಉ. ದೇವರಿಗೆ ನೈವೇದ್ಯವನ್ನು ಅರ್ಪಿಸಿದ ನಂತರ ಕೊನೆಗೆ ದೇವರ ಮುಂದೆ ತೆಂಗಿನಕಾಯಿ, ದಕ್ಷಿಣೆ ಮತ್ತು ವೀಳ್ಯದೆಲೆಗಳನ್ನು ಏಕೆ ಇಡಬೇಕು ? (ಪೂಜೆಯಲ್ಲಿನ ‘ತನ್ನ’ ತನವನ್ನು ನಾಶ ಗೊಳಿಸಲು ದೇವರಿಗೆ ನೈವೇದ್ಯವನ್ನು ಅರ್ಪಿಸಿದ ನಂತರ ದೇವರ ಮುಂದೆ ತೆಂಗಿನಕಾಯಿ, ದಕ್ಷಿಣೆ ಮತ್ತು ವೀಳ್ಯದೆಲೆಗಳನ್ನು ಇಡುತ್ತಾರೆ) : ದೇವರಿಗೆ ನೈವೇದ್ಯವನ್ನು ಅರ್ಪಿಸಿದ ನಂತರ ಕೊನೆಗೆ ದೇವರ ಮುಂದೆ ತೆಂಗಿನಕಾಯಿ, ದಕ್ಷಿಣೆ ಮತ್ತು ವೀಳ್ಯದೆಲೆಗಳನ್ನಿರಿಸಿ ಜೀವವು ಪೂಜೆಯಲ್ಲಿನ ‘ತನ್ನ’ ತನದ ಅರಿವಿನಿಂದ ನಿರ್ಮಾಣವಾದ ಕರ್ತೃತ್ವವನ್ನು ದೇವರಿಗೆ ಅರ್ಪಿಸಬೇಕು.
೧. ತೆಂಗಿನಕಾಯಿಯು ಪೂಜೆಯಲ್ಲಿನ ಸಾತ್ತ್ವಿಕ ಕರ್ಮದ ದ್ಯೋತಕವಾಗಿದೆ.
೨. ದಕ್ಷಿಣೆಯು ವ್ಯಾವಹಾರಿಕ ಅಭಿಲಾಷೆಯ ದ್ಯೋತಕವಾಗಿದೆ.
೩. ವೀಳ್ಯದೆಲೆಗಳು ಪೂಜೆಗೆ ಉಪಲಬ್ಧವಾಗಿರುವ ಕರ್ಮಭೂಮಿಯ ಪ್ರತೀಕವಾಗಿವೆ.
ಸಾತ್ತ್ವಿಕ ಕರ್ಮದಿಂದ ಉತ್ಪನ್ನವಾಗಿರುವ ಬ್ರಹ್ಮನಿಗೆ ಸಂಬಂಧಿಸಿದ ಅಹಂಭಾವ ಮತ್ತು ವ್ಯಾವಹಾರಿಕ ಕರ್ಮದಿಂದ ಉತ್ಪನ್ನವಾಗಿರುವ ಮಾಯೆಗೆ ಸಂಬಂಧಿಸಿದ ಅಹಂಭಾವ, ಈ ಎರಡೂ ಘಟಕಗಳನ್ನು ಜೀವವು ದೇವರಿಗೆ ಅರ್ಪಿಸಿ ತ್ಯಾಗವನ್ನು ಮಾಡಬೇಕು. ಪೂಜೆಯ ಕೊನೆಯಲ್ಲಿ ಅರ್ಪಣೆಯಿಂದ ತ್ಯಾಗದ ಭಾವನೆಯು ನಿರ್ಮಾಣವಾದರೆ ಪೂಜೆಯಲ್ಲಿನ ‘ತನ್ನ’ತನವು ನಾಶವಾಗಿ ದೇವತೆಯ ಚೈತನ್ಯದ ಲಾಭವು ಹೆಚ್ಚು ಪ್ರಮಾಣದಲ್ಲಿ ಸಿಗಲು ಸಹಾಯವಾಗುತ್ತದೆ.
೬ ಉ ೧. ಪೂಜೆಯಲ್ಲಿ ದಕ್ಷಿಣೆಯನ್ನು ನಾಣ್ಯದ ರೂಪದಲ್ಲಿ ಏಕೆ ಇಡುತ್ತಾರೆ ? : ಸಾಮಾನ್ಯ ಜೀವವು ಪ್ರಾಥಮಿಕ ಹಂತದಲ್ಲಿ ದಕ್ಷಿಣೆಯನ್ನು ಧನದ ರೂಪದಲ್ಲಿ ನೀಡುವುದು ಅಪೇಕ್ಷಿತವಾಗಿದೆ. ಏಕೆಂದರೆ ಧನದ ತ್ಯಾಗವನ್ನು ಮಾಡಲು ಅದಕ್ಕೆ ಸಹಜ ಸಾಧ್ಯವಿರುತ್ತದೆ. ಆದುದರಿಂದ ಪೂಜೆಯಲ್ಲಿ ದಕ್ಷಿಣೆಯನ್ನು ನಾಣ್ಯದ ರೂಪದಲ್ಲಿಡುತ್ತಾರೆ.
೭. ದೇವತೆಗಳು ನೈವೇದ್ಯವನ್ನು ಹೇಗೆ ಸ್ವೀಕರಿಸುತ್ತಾರೆ?: ದೇವತೆಗಳು ಮೊದಲು ತಮ್ಮಲ್ಲಿನ ಆಕಾಶತತ್ತ್ವವನ್ನು ಜಾಗೃತಗೊಳಿಸುತ್ತಾರೆ. (ಇದರಿಂದ ಇತರ ತತ್ತ್ವಗಳು ಜಾಗೃತವಾಗಲು ಸಹಾಯವಾಗುತ್ತದೆ.) ಅನಂತರ ಅವಶ್ಯಕತೆಗನುಸಾರ ವಾಯು ಅಥವಾ ತೇಜ ತತ್ತ್ವವು ಜಾಗೃತವಾಗುತ್ತದೆ. ಈ ಜಾಗೃತ ತತ್ತ್ವಗಳ ಮಾಧ್ಯಮದಿಂದ ದೇವತೆಗಳಿಗೆ ನೈವೇದ್ಯವನ್ನು ಸ್ವೀಕರಿಸಲು ಸಾಧ್ಯವಾಗುತ್ತದೆ.
ಅ. ಪ್ರತಿಮೆಯ ಮುಂದೆ ನೈವೇದ್ಯವನ್ನಿಟ್ಟರೆ ದೇವತೆಗಳು ವಾಯುತತ್ತ್ವದ ಮಾಧ್ಯಮದಿಂದ ನೈವೇದ್ಯವನ್ನು ಸ್ವೀಕರಿಸುತ್ತಾರೆ.
ಆ. ಹೋಮ-ಹವನಗಳ ಸಮಯದಲ್ಲಿ ಅಗ್ನಿಯು ಪ್ರಜ್ವಲಿತವಾಗಿರುತ್ತದೆ. ದೇವತೆಗಳು ಜಾಗೃತ ತೇಜತತ್ತ್ವದ ಮಾಧ್ಯಮದಿಂದ ನೈವೇದ್ಯವನ್ನು ಸ್ವೀಕರಿಸುತ್ತಾರೆ.
ನೈವೇದ್ಯವನ್ನು ಸ್ವೀಕರಿಸುವಾಗ ದೇವತೆಗಳು ಸೂಕ್ಷದಲ್ಲಿ ನೈವೇದ್ಯವನ್ನು ಸ್ಪರ್ಶಿಸುವುದರಿಂದ ಅದು ಪ್ರಸಾದದಲ್ಲಿ ರೂಪಾಂತರವಾಗುತ್ತದೆ. (ಆಧಾರ : ಸನಾತನ ಸಂಸ್ಥೆಯ ಗ್ರಂಥ ‘ಪಂಚೋಪಚಾರ ಮತ್ತು ಷೋಡ ಶೋಪಚಾರ ಪೂಜೆಯ ಹಿಂದಿನ ಶಾಸ್ತ್ರ’)

No comments:
Post a Comment