ಸಾಧಕರೇ, ಸನಾತನ ಸಂಸ್ಥೆಯ ಮೇಲೆ ನಿರ್ಬಂಧ ಹೇರಿದ ನಂತರ ನೀವೇನು ಮಾಡುವಿರಿ ?

೧.ಅಧರ್ಮಿ ಕಾಂಗ್ರೆಸ್ ಸರಕಾರವು ಸನಾತನ ಸಂಸ್ಥೆಯ ಮೇಲೆ ನಿರ್ಬಂಧ ಹೇರುವುದು ಖಚಿತವಿದೆ. ನಿರ್ಬಂಧ ಹಾಕಿದ ನಂತರ ಕಾರಾಗೃಹದ ಹೊರಗಿರುವ ಸಾಧಕರು ತತ್ಪರತೆಯಿಂದ ಸಮಾಜದಲ್ಲಿ ಹಿಂದುತ್ವವಾದಿಗಳ ಪ್ರತಿಕ್ರಿಯೆಗಳನ್ನು ತೆಗೆದುಕೊಳ್ಳಬೇಕು ಹಾಗೂ ಅವುಗಳನ್ನು ಹಿಂದುತ್ವವಾದಿ ನಿಯತಕಾಲಿಕೆಗಳಿಗೆ ಮತ್ತು  ವಾರ್ತಾವಾಹಿನಿಗಳಿಗೆ ಕಳುಹಿಸಬೇಕು. ಅದಕ್ಕಾಗಿ ಸಾಧಕರು ತಮ್ಮ ವಿಭಾಗದ ಹಿಂದುತ್ವವಾದಿಗಳ ವಿಳಾಸಗಳನ್ನು ಪಡೆದುಕೊಂಡು ಕೇಂದ್ರಗಳಲ್ಲಿ ನೊಂದಣಿ ಮಾಡಿಡಬೇಕು.
ಈ ಪ್ರತಿಕ್ರಿಯೆಗಳು ಎಷ್ಟು ಬೇಗ ಇತರ ಪತ್ರಿಕೆಗಳಲ್ಲಿ ಪ್ರಸಿದ್ಧಿ ಯಾಗುವುದೋ, ಅಷ್ಟು ಪ್ರಮಾಣದಲ್ಲಿ ಅದು ನಮ್ಮ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ದೃಷ್ಟಿಯಿಂದ ಮಹತ್ವದ್ದಾಗಿದೆ ಎಂಬುದನ್ನು ಗಮನದಲ್ಲಿಡಿರಿ.
೨.ಕಾರಾಗೃಹದ ಹೊರಗಿರುವ ಸಾಧಕರು ಕಾರಾಗೃಹದಲ್ಲಿರುವ ಸಾಧಕರ ಕುಟುಂಬದವರಿಗೆ ಮಾನಸಿಕ ಆಧಾರ ನೀಡಬೇಕು ಹಾಗೂ ನ್ಯಾಯಾಲಯದ ಪ್ರಕ್ರಿಯೆಯಲ್ಲಿ ಏನಾದರೂ ಸಹಾಯ ಬೇಕಿದ್ದರೆ ಅವುಗಳನ್ನು ಪೂರೈಸಬೇಕು.
೩.ನಿರ್ಬಂಧದ ನಂತರ ನಿರ್ಬಂಧದ ಬಗ್ಗೆ ಈಗ ಹೇಗೆ ಜವಾಬ್ದಾರ ಸಾಧಕರು ಬಂದು ಮಾರ್ಗದರ್ಶನ ಮಾಡುತ್ತಾರೋ ಹಾಗೆ ಇರುವುದಿಲ್ಲ. ಆದುದರಿಂದ ಸಾಧಕರು ಇಂದಿನ ವರೆಗೆ ಸನಾತನ ಪ್ರಭಾತದಲ್ಲಿ ನಿಯಮಿತವಾಗಿ ಬಂದಿರುವ ಮಾರ್ಗದರ್ಶನ ಕ್ಕನುಸಾರ ತಮ್ಮ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಜವಾಬ್ದಾರಿಯನ್ನು ಸ್ವತಃ ತೆಗೆದುಕೊಳ್ಳಬೇಕು. ವ್ಯಷ್ಟಿ ಸಾಧನೆಯಲ್ಲಿ ಅಷ್ಟಾಂಗ ಸಾಧನೆ ಹೇಗೆ ಮಾಡಬಹುದು ಎಂಬುದನ್ನು ನೋಡಿಕೊಳ್ಳಬೇಕು. ಮುಂಬರುವ ಭೀಕರ ಕಾಲದಲ್ಲಿ ಈಶ್ವರನೇ ನಮ್ಮನ್ನು ರಕ್ಷಿಸಬಲ್ಲನು ಎಂಬುದನ್ನು ಗಮದಲ್ಲಿಟ್ಟುಕೊಳ್ಳಿರಿ. ಅದಕ್ಕಾಗಿ ಇನ್ನೂ ಒಳ್ಳೆಯ ರೀತಿಯಲ್ಲಿ ಸಾಧನೆ ಹೇಗೆ ಮಾಡಬಹುದು ಎಂಬುದನ್ನು ನೋಡಿಕೊಳ್ಳಬೇಕು.
೪.ನಿರ್ಬಂಧ ಹೇರುವ ಸಂದರ್ಭದಲ್ಲಿ ಹಾಗೂ ನಿರ್ಬಂಧ ಹಾಕಿದ ನಂತರ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಬಗ್ಗೆ ಲೇಖನಗಳಿರುವ ಸನಾತನ ಪ್ರಭಾತದ ಸಂಚಿಕೆಗಳನ್ನು ಪುನಃ ಒಮ್ಮೆ  ಒಳ್ಳೆಯ ರೀತಿಯಲ್ಲಿ ಓದಿಕೊಳ್ಳಬೇಕು.
೫.ನಿರ್ಬಂಧದ ನಂತರ ಅದಕ್ಕೆ ಸಂಬಂಧಿಸಿದ ವಿವಿಧ ವಾರ್ತೆಗಳಿರುವ ನಿಯತಕಾಲಿಕೆಗಳನ್ನು ಒಟ್ಟು ಮಾಡಿಟ್ಟುಕೊಳ್ಳಬೇಕು. ಅವುಗಳಲ್ಲಿ ನಮ್ಮ ಪರ ಹಾಗೂ ವಿರೋಧವಿರುವ ವಾರ್ತೆಗಳನ್ನು ವಿಂಗಡಿಸಿ ಎರಡು ಕಟ್ಟುಗಳನ್ನು ಮಾಡಬೇಕು. ಮುಂದೆ ಅವುಗಳನ್ನು ಇತಿಹಾಸವೆಂದು ನಾವು ಉಪಯೋಗಿಸಬಹುದು.
೬.ಯಾರಲ್ಲಿ ವಿಡಿಯೋ ಕ್ಯಾಮೆರಾ ಇದೆಯೋ ಅವರು ವಾರ್ತಾವಾಹಿನಿಯಿಂದ ನಿರ್ಬಂಧದ ಸಂದರ್ಭದಲ್ಲಿ ಪ್ರಸಾರ ಮಾಡಲಾಗುವ ವಾರ್ತೆಗಳನ್ನೂ ‘ರೆಕಾರ್ಡ್’ ಮಾಡಿಡಬೇಕು. ಅವುಗಳಲ್ಲಿಯೂ ನಮ್ಮ ಪರ ಹಾಗೂ ವಿರೋಧವಿರುವ ವಾರ್ತೆಗಳನ್ನು ವಿಂಗಡಿಸಿ ಎರಡು ಕಟ್ಟುಗಳನ್ನು ಮಾಡಬೇಕು. ಮುಂದೆ ಅವುಗಳನ್ನು ಇತಿಹಾಸವೆಂದು ನಾವು ಉಪಯೋಗಿಸಬಹುದು. 


No comments:

Post a Comment