ಸನಾತನದ ಸಂಸ್ಥಾಪಕರಾದ ಪ.ಪೂ.ಡಾ.ಆಠವಲೆಯವರು ಸನಾತನ ಸಂಸ್ಥೆಯ ಸಮಷ್ಟಿ ಕಾರ್ಯದ ಆರಂಭದ ಸಮಯದಲ್ಲಿ ಸಾಧಕರ ಮನಸ್ಸಿನಲ್ಲಿ ‘ಸಾಧನೆ ಹಾಗೂ ಧರ್ಮಜಾಗೃತಿ’ ಎಂಬ ವಿಷಯಗಳ ಬೀಜವನ್ನು ಬಿತ್ತಿದರು; ಆದರೆ ಈ ವಿಷಯಗಳನ್ನು ಸಮಾಜಕ್ಕೆ ೧೯೯೭ರಲ್ಲಿ ಆದ ಬಹಿರಂಗ ಸಭೆಗಳ ಮಾಧ್ಯಮದಿಂದ ಹೇಳಲಾಯಿತು. ಈ ೧೦೦ಕ್ಕಿಂತಲೂ ಹೆಚ್ಚು ಕಡೆಗಳಲ್ಲಿ ನಡೆದ ಈ ಸಭೆಗಳು ನಿಜವಾಗಿಯೂ ರೋಮಾಂಚನಕಾರಿಯಾಗಿದ್ದವು. ಆಗಿನ ಅನೇಕ ಘಟನೆಗಳು ಇಂದಿಗೂ ದೂರದರ್ಶನವನ್ನು ನೋಡಿದಂತೆ ಸ್ಪಷ್ಟವಾಗಿ ಕಣ್ಮುಂದೆ ಬರುತ್ತವೆ. ಅಂದರೆ ಅದು ಮನಸ್ಸಿನಲ್ಲಿ ಅಷ್ಟೊಂದು ಅಚ್ಚೊತ್ತಿದೆ. ಅಂದರೆ ಈ ಎಲ್ಲ ಘಟನೆಗಳು ಗುರುಗಳಾದ ಪ.ಪೂ. ಡಾಕ್ಟರರಿಗೆ ಸಂಬಂಧಿಸಿವೆ. ಹೇಗಿತ್ತು ಆ ಸುವರ್ಣ ಸಮಯ? ಸಂಕಲನಕಾರರು : ಶ್ರೀ.ನಾಗೇಶ ಗಾಡೆ, ಸನಾತನ ಆಶ್ರಮ, ರಾಮನಾಥಿ, ಗೋವಾ (ಪೂರ್ವಾರ್ಧ) (ಮುಂದುವರಿದ ಭಾಗ)
೨ಇ೯.ಉಪಸ್ಥಿತರಿಗೆ ಭಾರತೀಯ ಪದ್ಧತಿಯಂತೆ ಕುಳಿತುಕೊಳ್ಳುವ ವ್ಯವಸ್ಥೆ ಹಾಗೂ ವಯೋವೃದ್ಧರಿಗಾಗಿ ಕುರ್ಚಿಗಳು!: ಇತ್ತೀಚಿನ ಸಭೆಗಳಲ್ಲಿ ಮುಖ್ಯ ಅತಿಥಿಗಳಿಗೆ ಅಥವಾ ಪತ್ರಕರ್ತರಿಗೆ ನೀಡ ಲಾಗುವ ಬೇರೆ ರೀತಿಯ ವ್ಯವಸ್ಥೆಯು ಈ ಸಭೆಗಳ ಸಮಯದಲ್ಲಿ ಇರಲಿಲ್ಲ. ಎಲ್ಲರೂ ಭಾರತೀಯ ಪದ್ಧತಿಯಂತೆ ಕೆಳಗೆ ಕುಳಿತು ಕೊಳ್ಳಬೇಕಾಗುತ್ತಿತ್ತು. ಆದುದರಿಂದ ನ್ಯಾಯಾಧೀಶರು, ಪೊಲೀಸ್ ಅಧಿಕಾರಿಗಳು ಹಾಗೂ ಸರಕಾರೀ ಅಧಿಕಾರಿಗಳನ್ನು ಒಳ ಗೊಂಡಂತೆ ವಿಶೇಷವಾದ ಆಸನ ವ್ಯವಸ್ಥೆ ಯನ್ನು ಅಪೇಕ್ಷಿಸದೆ ಭಾರತೀಯ ಶೈಲಿ ಯಲ್ಲೇ ಕುಳಿತುಕೊಳ್ಳುತ್ತಿದ್ದರು; ಆದರೆ ವಯೋವೃದ್ಧರು ಹಾಗೂ ಅಂಗವಿಕಲರಿಗೆ ಕುಳಿತುಕೊಳ್ಳಲು ಕುರ್ಚಿಗಳನ್ನು ನೀಡಲಾಗುತ್ತಿತ್ತು.
೨ಇ೧೦.ಸಭೆಯ ಮೊದಲು ವ್ಯಾಸಪೀಠದ ಮೇಲೆ ಬೇರೆ ಊರಿನಿಂದ ಬಂದ ಸಾಧಕರ ಪರಿಚಯ ಮಾಡಿಸು ವುದು ಹಾಗೂ ಅದರ ಹಿಂದಿನ ಪ.ಪೂ. ಡಾಕ್ಟರರ ಉದ್ದೇಶ!: ಸಭೆಯ ಪೂರ್ವ ಸಿದ್ಧತೆಯನ್ನು ಕಲಿಯಲು ಮುಂದಿನ ಸಭೆ ಯಿರುವ ಜಿಲ್ಲೆಯಿಂದ ಸಾಧಕರು ಆ ಸಭೆ ಯಲ್ಲಿ ಉಪಸ್ಥಿತರಿರುತ್ತಿದ್ದರು. ಇವರೆಲ್ಲರನ್ನು ವ್ಯಾಸಪೀಠದ ಮೇಲೆ ಕರೆದು ಪರಿಚಯಿಸ ಲಾಗುತ್ತಿತ್ತು. ಸಮಾಜಕ್ಕೆ ಸನಾತನದ ಕಾರ್ಯವು ಎಷ್ಟು ವ್ಯಾಪಕ ಪ್ರಮಾಣದಲ್ಲಿ ನಡೆಯುತ್ತಿದೆ?ಎಂಬುದನ್ನು ತಿಳಿಸಿಕೊಡು ವುದೇ ಪ.ಪೂ.ಡಾಕ್ಟರರ ಉದ್ದೇಶವಾಗಿತ್ತು.
೩.ಜಾಹೀರು ಸಭೆಗಳ ಮೂಲಕ ಪ.ಪೂ.ಡಾಕ್ಟರರ ವ್ಯಾಪಕ ಸೂತ್ರಗಳ ದರ್ಶನ!
೩.ಅ.ಸಭೆಯ ಮಾಧ್ಯಮದಿಂದ ಕಂಡು ಬಂದ ಪ.ಪೂ.ಡಾಕ್ಟರರ ಸರಳತೆ!: ಸಮಾಜವನ್ನು ಅಧ್ಯಾತ್ಮದೆಡೆಗೆ ಹೊರಳಿಸುವ ಉದ್ದೇಶದಿಂದ ಈ ಸಭೆ ಗಳನ್ನು ಆಯೋಜಿಸಲಾಗಿತ್ತು. ಆದುದ ರಿಂದ ಪ.ಪೂ.ಡಾಕ್ಟರರು ಸಭೆಗಳಲ್ಲಿ ಕಂಡು ಬರುವ ವಿಜೃಂಭಣೆಯನ್ನು ಬೇಕೆಂದೇ ದೂರ ಇಟ್ಟಿದ್ದರು. ಇದನ್ನು ದರ್ಶಿಸುವ ಕೆಲವು ಘಟನೆಗಳು ಈ ಕೆಳಗಿನಂತಿವೆ.
೩ಆ.ಹಾರವನ್ನು ಹಾಕಿ ಸತ್ಕಾರ ಮಾಡದಿರುವುದು: ಪ.ಪೂ.ಡಾಕ್ಟರರು ವ್ಯಾಸಪೀಠದ ಮೇಲೆ ತಮ್ಮ ಸ್ಥಾನದಲ್ಲಿ ಕುಳಿತುಕೊಂಡ ನಂತರ ಸ್ಥಳೀಯ ಸಾಧಕ ರಲ್ಲಿ ಓರ್ವ ಸಾಧಕರು ತಮ್ಮ ಪತಿ ಯೊಂದಿಗೆ ಅವರಿಗೆ ತಿಲಕವಿಟ್ಟು ಹೂವಿನ ಗುಚ್ಛವನ್ನು ನೀಡುತ್ತಿದ್ದರು. ಈ ಕಾರ್ಯ ಕ್ರಮದಲ್ಲಿ ಹಾರದ ಪ್ರವೇಶಕ್ಕೆ ಪ.ಪೂ. ಡಾಕ್ಟರರು ಎಂದಿಗೂ ಎಡೆ ಮಾಡಿಕೊಡ ಲಿಲ್ಲ. ಅವರಿಗೆ ನೀಡಲಾಗುತ್ತಿದ್ದ ಹೂವಿನ ಗುಚ್ಛವನ್ನು ಅಂಗಡಿಯಿಂದ ತರಿಸದೇ ಸಾಧಕರೇ ತಯಾರಿಸುತ್ತಿದ್ದರು. ಅಂದರೆ ಸಾಧಕರಿಗೆ ಈ ಸರಳತೆಯನ್ನು ಪ.ಪೂ. ಡಾಕ್ಟರರೇ ಕಲಿಸಿದರು.
೩ಅ೨.ಈ ಸಭೆಗಳಲ್ಲಿ ಅವರು ಎಂದಿಗೂ ಗಣ್ಯವ್ಯಕ್ತಿಗಳು ಹಾಗೂ ನೇತಾರ ರಂತಹ ಇತರ ವ್ಯಕ್ತಿಗಳಿಂದ ಸನ್ಮಾನವನ್ನು ಮಾಡಿಸಿಕೊಳ್ಳಲಿಲ್ಲ.
೩ಅ೩.ಈ ಸಭೆಗಳ ಇನ್ನೊಂದು ವೈಶಿಷ್ಟ್ಯವೆಂದರೆ ವ್ಯಾಸಪೀಠದ ಮಧ್ಯಭಾಗ ದಲ್ಲಿ ಪ.ಪೂ.ಡಾಕ್ಟರರಿಗೆ ಕುಳಿತುಕೊಳ್ಳಲು ಒಂದು ಸಾಮಾನ್ಯ ಕುರ್ಚಿಯಿರುತ್ತಿತ್ತು. (ಸದ್ಯದ ರಾಜಕಾರಣಿಗಳ ಕಾರ್ಯಕ್ರಮದಲ್ಲಿ ವ್ಯಾಸಪೀಠದ ಮೇಲೆ ೨-೩ಸಾಲುಗಳಲ್ಲಿ ಕುಳಿತುಕೊಳ್ಳುವ ನೇತಾರರನ್ನು ನೋಡಿ ರೂಢಿಯಾದ ಜನರಿಗೆ ಇದು ಸ್ವಲ್ಪ ಆಶ್ಚರ್ಯಕರವೇ ಆಗಿತ್ತು.)
೩ಅ೪.ವ್ಯಾಸಪೀಠದ ಹಿಂದಿನ ಪರದೆಯ ಮೇಲೆ ಪ.ಪೂ.ಡಾಕ್ಟರರ ಹೆಸರು ಇಲ್ಲದಿರುವುದು: ಅವರ ಕುರ್ಚಿಯ ಪಕ್ಕದಲ್ಲಿ ಒಂದು ಚಿಕ್ಕ ಹೂದಾನಿ, ಲೇಖನಿ, ಕಾಗದ ಹಾಗೂ ನೀರು ಇಡಲು ಒಂದು ಟೀಪಾಯಿ ಇರುತ್ತಿತ್ತು. ಸಂಪೂರ್ಣವಾಗಿ ವ್ಯಾಸಪೀಠವನ್ನು ವ್ಯಾಪಿಸುವಷ್ಟು ಭವ್ಯವಾದ ಕೃಷ್ಣಾರ್ಜುನರ ಪರದೆಯನ್ನು ಹಾಕಲಾಗು ತ್ತಿತ್ತು; ಆದರೆ ಅದರ ಮೇಲೆ ಪ.ಪೂ. ಡಾಕ್ಟರರ ಹೆಸರು ಅಥವಾ ಯಾವುದೇ ರೀತಿಯ ಉಲ್ಲೇಖವಿರುತ್ತಿರಲಿಲ್ಲ.
೩ಅ೫.ಬಹಿರಂಗ ಸಭೆಯ ನಿಯಮಗಳನ್ನು ಪ.ಪೂ.ಡಾಕ್ಟರರೇ ಮಾಡುತ್ತಿದ್ದರು!: ಪ.ಪೂ.ಡಾಕ್ಟರರು ಬಹಿರಂಗ ಸಭೆಗಳ ಮೊದಲೇ ನಿಯಮ ಗಳನ್ನು ಸಿದ್ಧಪಡಿಸುತ್ತಿದ್ದರು, ಉದಾಹರಣೆ: ನಿವಾಸದ ಸ್ಥಳದಲ್ಲಿ ಊಟಕ್ಕಾಗಿ ಖಿಚಡಿ ಹಾಗೂ ಹಪ್ಪಳ, ಸಭೆಯಲ್ಲಿ ಹಾರ ಬೇಡ, ಹೂಗುಚ್ಛವನ್ನು ನೀಡಲಿ, ನಾನು ಹೋದಲ್ಲಿ ಪಾದಪೂಜೆ ಬೇಡ ಇತ್ಯಾದಿ.
೩ಅ೬.ತಾವು ನಿರ್ಮಿಸಿದ ನಿಯಮ ಗಳನ್ನು ಪ.ಪೂ.ಡಾಕ್ಟರರು ತಪ್ಪದೇ ಪಾಲಿಸುವುದರ ಕೆಲವು ಉದಾಹರಣೆಗಳು
೩ಅ೬ಅ.ಪಾದ ಪೂಜೆಯನ್ನು ಸ್ವೀಕರಿಸದಿರುವುದು: ಗುಹಾಗರ (ರತ್ನಾಗಿರಿ ಜಿಲ್ಲೆ)ದಲ್ಲಿ ಸಭೆಯ ನಂತರ ಪ.ಪೂ. ಡಾಕ್ಟರರು ಉಳಿಯುವ ವ್ಯವಸ್ಥೆಯಿರುವ ಸಾಧಕರ ಮನೆಗೆ ಹೋದಾಗ, ಆ ಸಾಧಕರು ಪ.ಪೂ.ಡಾಕ್ಟರರ ಪಾದಪೂಜೆಯ ಸಿದ್ಧತೆ ಯನ್ನು ಮಾಡಿದ್ದರು. ಇದನ್ನು ನೋಡಿ ಪ.ಪೂ.ಡಾಕ್ಟರರು ತಕ್ಷಣ ವಾಹನವನ್ನು ತೆಗೆದುಕೊಂಡು ಚಿಪಳೂಣನಲ್ಲಿ ಬೇರೆ ಸಾಧಕರಲ್ಲಿ ತಂಗಲು ತೆರಳಿದರು. ಆಗ ರಾತ್ರಿ ೧೦ಘಂಟೆಯಾಗಿತ್ತು.
೩ಅ೬ಆ.ಅಲಂಕರಿಸಿರುವ ಮಂಚದ ಮೇಲೆ ವಿಶ್ರಾಂತಿಯನ್ನು ಪಡೆಯದಿರುವುದು: ಗಣಪತಿಪುಳೆಯಲ್ಲಿ ಪ.ಪೂ.ಡಾಕ್ಟರರು ತಂಗುವ ವ್ಯವಸ್ಥೆಯನ್ನು ಮಾಡಲಾದ ಸಾಧಕರ ಮನೆಯಲ್ಲಿ ಪ.ಪೂ. ಡಾಕ್ಟರರು ಮಲಗುವ ಮಂಚದ ಸುತ್ತಲೂ ಸತ್ಯನಾರಾಯಣ ಪೂಜೆಯ ಸಮಯದಲ್ಲಿ ಬಾಳೆಕಂಬಗಳನ್ನು ಕಟ್ಟಿ ಎಲೆಗಳನ್ನು ಹಾಕುವ ಹಾಗೆ ಅಲಂಕರಿಸಲಾಗಿತ್ತು. ಇದನ್ನು ನೋಡಿದ ತಕ್ಷಣ ಪ.ಪೂ.ಡಾಕ್ಟರರು ಅಲ್ಲಿಂದ ಹೊರಟು ವ್ಯಾಸಪೀಠವನ್ನು ಸಿದ್ಧಗೊಳಿಸುವ ಸಾಧಕರು ತಂಗಿದ್ದ ಸ್ಥಳಕ್ಕೆ ಹೋಗಿ ತಮ್ಮ ಪೂರ್ಣ ದಿನವನ್ನು ಅಲ್ಲಿಯೇ ಕಳೆದರು.
೩ಆ.ಪ.ಪೂ. ಡಾಕ್ಟರರು ಬಹಿರಂಗ ಸಭೆಗಳ ಮಾಧ್ಯಮದಿಂದ
ಸಾಧಕರಿಗೆ ಸಮಯ ಪರಿ ಪಾಲನೆಯ ಬಗ್ಗೆ ನೀಡಿದ ಶಿಕ್ಷಣ
೩ಆ೧.ಸಮಯಕ್ಕೆ ಸರಿಯಾಗಿ ಪ್ರಾರಂಭವಾಗಿ ಹಾಗೂ ಮುಗಿಯುವ ಬಹಿರಂಗ ಸಭೆಗಳು!: ಬಹಿರಂಗ ಸಭೆಗಳ ಸಮಯದಲ್ಲಿ ಪ.ಪೂ.ಡಾಕ್ಟರರ ರಿಂದ ಸಾಧಕರಿಗೆ ಅನೇಕ ಗುಣಗಳು ಕಲಿ ಯಲು ದೊರೆತವು. ಇದರಲ್ಲಿ ಮುಖ್ಯವಾಗಿ ಸಮಯ ಪಾಲನೆಯ ಬಗ್ಗೆ ಹೇಳಬೇಕೆಂದೆನಿಸುತ್ತದೆ. ಈ ನೂರು ಸಭೆಗಳಲ್ಲಿಯೂ ಎಲ್ಲ ಸಭೆಗಳೂ ನಿಗದಿ ಪಡಿಸಿದ ಸಮಯಕ್ಕೆ ಪ್ರಾರಂಭವಾಗುತ್ತಿದ್ದವು ಹಾಗೂ ಮುಗಿಯುತ್ತಿದ್ದವು. ಪ.ಪೂ.ಡಾಕ್ಟರರು ಸಭೆಗೆ ತಲುಪಲು ಅಥವಾ ಇತರ ಕಾರಣದಿಂದಾಗಿ ಸಭೆಯು ೫ನಿಮಿಷ ತಡವಾಗಿ ಪ್ರಾರಂಭ ವಾಯಿತು?ಹೀಗೆ ಎಂದಿಗೂ ಆಗಲಿಲ್ಲ ಹಾಗೂ ವಿಷಯವನ್ನು ಮುಗಿಸಲು ೫ ನಿಮಿಷ ತಡವಾಯಿತು ಅಥವಾ ಸಮಯವು ಮುಗಿಯಿತೆಂದು ವಿಷಯವನ್ನು ಬಿಟ್ಟು ಹೇಳುವುದು ಅಥವಾ ವೇಗವಾಗಿ ಹೇಳಿ ದರು ಎಂಬುದು ಎಂದಿಗೂ ಆಗಲಿಲ್ಲ. ಆದುದರಿಂದಲೇ ಪ್ರಚಾರ ಮಾಡುವಾಗ ಸಾಧಕರು ನಮ್ಮ ಸಭೆಯು ಸಮಯಕ್ಕೆ ಸರಿಯಾಗಿ ಪ್ರಾರಂಭವಾಗುತ್ತದೆ ಹಾಗೂ ಸಮಯಕ್ಕೆ ಸರಿಯಾಗಿ ಮುಗಿಯುತ್ತದೆ? ಎಂದು ಸಮಾಜಕ್ಕೆ ಹೇಳುತ್ತಿದ್ದರು.
೩ಆ೨.ಸಮಯಕ್ಕೆ ಸರಿಯಾಗಿ ಸಭೆಯು ಪ್ರಾರಂಭಿಸುವ ವಿಷಯದಲ್ಲಿನ ಪ.ಪೂ.ಡಾಕ್ಟರರ ದೃಢತೆ: ಸಭೆಯನ್ನು ಸಮಯಕ್ಕೆ ಸರಿಯಾಗಿ ಪ್ರಾರಂಭಿಸುವ ವಿಷಯ ದಲ್ಲಿ ಎಷ್ಟು ದೃಢರಾಗಿದ್ದರು ಎಂಬುದನ್ನು ದರ್ಶಿಸುವ ಪ್ರಸಂಗವು ಸಿಂಧುದುರ್ಗದ ಕುಡಾಳದಲ್ಲಿ ಅನುಭವಿಸಲು ದೊರೆಯಿತು. ಕುಡಾಳದಲ್ಲಿನ ಸಭೆಯ ನಿಮಿತ್ತ ಪ.ಪೂ. ಡಾಕ್ಟರರು ಬೆಳಿಗ್ಗೆ ೫ಘಂಟೆಗೆ ಮುಂಬಯಿ ಯಿಂದ ಹೊರಟರು. ಆಗ ಅವರಿಗೆ ಜ್ವರ ಬಂದಿತ್ತು. ನಿಶ್ಯಕ್ತಿಯಿಂದ ಅವರಿಗೆ ಸರಿಯಾಗಿ ಮಾತನಾಡಲೂ ಆಗುತ್ತಿರಲಿಲ್ಲ. ಆದರೂ ಅವರು ಚತುಷ್ಚಕ್ರ ವಾಹನದಲ್ಲಿ ೧೨ತಾಸು ಪ್ರಯಾಣ ಮಾಡಿ ಸಭೆಯು ಪ್ರಾರಂಭ ವಾಗುವ ೧೫ನಿಮಿಷ ಮೊದಲೇ ಬಂದು ಸೇರಿದರು. ಆಗ ಅವರು ಅಲ್ಪೋಪ ಹಾರ ಅಥವಾ ಚಹಾವನ್ನೂ ಸೇವಿಸದೇ ವ್ಯಾಸ ಪೀಠದ ಮೇಲೆ ಕುಳಿತುಕೊಂಡರು ಹಾಗೂ ಪ್ರವಚನ ಪೂರ್ಣಗೊಳಿಸಿಯೇ ಎದ್ದರು.
೩ಆ೩.ತಡವಾಗಿ ಪ್ರಾರಂಭವಾದ ಸಭೆಯಲ್ಲಿ ಉಪಸ್ಥಿತರಲ್ಲಿ ಕ್ಷಮೆಯಾಚಿಸುವ ಪ.ಪೂ.ಡಾಕ್ಟರರು!: ಒಮ್ಮೆ ಕೊಲ್ಹಾಪುರ ಜಿಲ್ಲೆಯ ಗಡಹಿಂಗ್ಲಜಿನ ಸಭೆಯಲ್ಲಿ ತಪ್ಪಾಯಿತು. ಈ ಸಭೆಯು ನಿಗದಿತ ಸಮಯ ಕ್ಕಿಂತಲೂ ೧೦ನಿಮಿಷ ತಡವಾಗಿ ಪ್ರಾರಂಭವಾಯಿತು. ಸಾಧಕರ ಆಯೋಜನೆಯಲ್ಲಿನ ತಪ್ಪಿನಿಂದಾಗಿ ತಡವಾಯಿತು. ಆದರೂ ಪ.ಪೂ.ಡಾಕ್ಟರರು ಪ್ರವಚನದ ಪ್ರಾರಂಭದಲ್ಲೇ ಉಪಸ್ಥಿತರಲ್ಲಿ ಕ್ಷಮೆ ಕೇಳಿದರು. (ಮುಕ್ತಾಯ)
೩ಆ೨.ಸಮಯಕ್ಕೆ ಸರಿಯಾಗಿ ಸಭೆಯು ಪ್ರಾರಂಭಿಸುವ ವಿಷಯದಲ್ಲಿನ ಪ.ಪೂ.ಡಾಕ್ಟರರ ದೃಢತೆ: ಸಭೆಯನ್ನು ಸಮಯಕ್ಕೆ ಸರಿಯಾಗಿ ಪ್ರಾರಂಭಿಸುವ ವಿಷಯ ದಲ್ಲಿ ಎಷ್ಟು ದೃಢರಾಗಿದ್ದರು ಎಂಬುದನ್ನು ದರ್ಶಿಸುವ ಪ್ರಸಂಗವು ಸಿಂಧುದುರ್ಗದ ಕುಡಾಳದಲ್ಲಿ ಅನುಭವಿಸಲು ದೊರೆಯಿತು. ಕುಡಾಳದಲ್ಲಿನ ಸಭೆಯ ನಿಮಿತ್ತ ಪ.ಪೂ. ಡಾಕ್ಟರರು ಬೆಳಿಗ್ಗೆ ೫ಘಂಟೆಗೆ ಮುಂಬಯಿ ಯಿಂದ ಹೊರಟರು. ಆಗ ಅವರಿಗೆ ಜ್ವರ ಬಂದಿತ್ತು. ನಿಶ್ಯಕ್ತಿಯಿಂದ ಅವರಿಗೆ ಸರಿಯಾಗಿ ಮಾತನಾಡಲೂ ಆಗುತ್ತಿರಲಿಲ್ಲ. ಆದರೂ ಅವರು ಚತುಷ್ಚಕ್ರ ವಾಹನದಲ್ಲಿ ೧೨ತಾಸು ಪ್ರಯಾಣ ಮಾಡಿ ಸಭೆಯು ಪ್ರಾರಂಭ ವಾಗುವ ೧೫ನಿಮಿಷ ಮೊದಲೇ ಬಂದು ಸೇರಿದರು. ಆಗ ಅವರು ಅಲ್ಪೋಪ ಹಾರ ಅಥವಾ ಚಹಾವನ್ನೂ ಸೇವಿಸದೇ ವ್ಯಾಸ ಪೀಠದ ಮೇಲೆ ಕುಳಿತುಕೊಂಡರು ಹಾಗೂ ಪ್ರವಚನ ಪೂರ್ಣಗೊಳಿಸಿಯೇ ಎದ್ದರು.
೩ಆ೩.ತಡವಾಗಿ ಪ್ರಾರಂಭವಾದ ಸಭೆಯಲ್ಲಿ ಉಪಸ್ಥಿತರಲ್ಲಿ ಕ್ಷಮೆಯಾಚಿಸುವ ಪ.ಪೂ.ಡಾಕ್ಟರರು!: ಒಮ್ಮೆ ಕೊಲ್ಹಾಪುರ ಜಿಲ್ಲೆಯ ಗಡಹಿಂಗ್ಲಜಿನ ಸಭೆಯಲ್ಲಿ ತಪ್ಪಾಯಿತು. ಈ ಸಭೆಯು ನಿಗದಿತ ಸಮಯ ಕ್ಕಿಂತಲೂ ೧೦ನಿಮಿಷ ತಡವಾಗಿ ಪ್ರಾರಂಭವಾಯಿತು. ಸಾಧಕರ ಆಯೋಜನೆಯಲ್ಲಿನ ತಪ್ಪಿನಿಂದಾಗಿ ತಡವಾಯಿತು. ಆದರೂ ಪ.ಪೂ.ಡಾಕ್ಟರರು ಪ್ರವಚನದ ಪ್ರಾರಂಭದಲ್ಲೇ ಉಪಸ್ಥಿತರಲ್ಲಿ ಕ್ಷಮೆ ಕೇಳಿದರು. (ಮುಕ್ತಾಯ)
No comments:
Post a Comment