ಸಾಪ್ತಾಹಿಕ ಮತ್ತು ಮಾಸಿಕ ‘ಸನಾತನ ಪ್ರಭಾತ’ ಇವುಗಳ ಚಂದಾದಾರರನ್ನಾಗಿ ಮಾಡುವ ಬಗ್ಗೆ!

ಸನಾತನ ಸಂಸ್ಥೆಯ ಕಾರ್ಯ ಹಾಗೂ ಸಾಧಕರ ಸಂಖ್ಯೆಯು ಕಡಿಮೆಯಿರುವಲ್ಲಿ ಸಂಸ್ಥೆಯ ಕಾರ್ಯ ಹೆಚ್ಚಿಸಲು ಸಾಪ್ತಾಹಿಕ ಅಥವಾ ಮಾಸಿಕ ಇವುಗಳ ಚಂದಾದಾರರನ್ನು ಮಾಡಬಹುದು. ಸಾಪ್ತಾಹಿಕದ ಮಾಧ್ಯಮದಿಂದ ವಾಚಕರಿಗೆ ಧರ್ಮದ ಮೇಲಿನ ಆಘಾತ, ರಾಷ್ಟ್ರರಕ್ಷಣೆ ಮತ್ತು ಧರ್ಮಶಿಕ್ಷಣ ಇವುಗಳ ಬಗ್ಗೆ ಹೆಚ್ಚು ಹೆಚ್ಚು ಮಾಹಿತಿ ನೀಡಿ ಈ ಕಾರ್ಯದ ಬಗ್ಗೆ ಉದ್ಯುಕ್ತಗೊಳಿಸಬಹುದು.
ಅದಕ್ಕಾಗಿ ಪ್ರತಿಯೊಬ್ಬ ಸಾಧಕನು ಹತ್ತಿರದ ಸಂಬಂಧಿಕರು, ಸ್ನೇಹಿತರು ಅಥವಾ ಪರಿಚಯದ ಧರ್ಮಾಭಿಮಾನಿ ವ್ಯಕ್ತಿಗಳನ್ನು ಚಂದಾದಾರ ರನ್ನಾಗಿ ಮಾಡಬಹುದು. ಅಲ್ಲದೇ ವಾಚನಾಲಯ, ವಿವಿಧ ಮಂಡಳಿಗಳನ್ನೂ ಚಂದಾದಾರರನ್ನಾಗಿ ಮಾಡಬಹುದು. ಸದ್ಯದ ಸ್ಥಿತಿಯಲ್ಲಿ ಸಾಪ್ತಾಹಿಕ ಅಥವಾ ಮಾಸಿಕದ ಚಂದಾದಾರರಿದ್ದವರಿಗೂ ನಾವು ವಿನಂತಿಸಬೇಕು. ಅವರೂ ತಮ್ಮ ಆಪ್ತೇಷ್ಟ ರನ್ನು, ಸ್ನೇಹಿತರನ್ನು, ಪರಿಚಯದ ಧರ್ಮಾ ಭಿಮಾನಿಗಳನ್ನು ಚಂದಾದಾರರನ್ನಾಗಿ ಮಾಡಿ ಧರ್ಮಜಾಗೃತಿ ಕಾರ್ಯದಲ್ಲಿ ಸಹಭಾಗಿಯನ್ನಾಗಿ ಮಾಡಬಹುದು. ಅಲ್ಲದೇ ಸದ್ಯ ನಡೆಯುತ್ತಿರುವ ಚಾರ್ತುಮಾಸದ ಕಾಲಾವಧಿಯಲ್ಲಿ ಮತ್ತು ನಡೆ ಯುತ್ತಿರುವ ಶ್ರಾವಣ ತಿಂಗಳಿನ ಹಬ್ಬದ ನಿಮಿತ್ತ ಉಡುಗೊರೆ ನೀಡುವುದರ ಬದಲು ‘ಸನಾತನ ಪ್ರಭಾತ’ದ ಪತ್ರಿಕೆ ಪ್ರಾರಂಭಿಸಿ ಒಂದು ವಿಭಿನ್ನ ರೀತಿಯ ಉಡುಗೊರೆಯೆಂದು ಕೊಡಬಹುದು. ಮೇಲೆ ಹೇಳಿದಂತೆ ದೂರದಲ್ಲಿದ್ದವರಿಗೆ ನಾವು ಅಂಚೆಯ ಮೂಲಕ ಸಂಚಿಕೆಯನ್ನು ಕಳುಹಿಸ ಬಹುದು. ಅದಕ್ಕಾಗಿ ಚಂದಾದಾರರ ವಿವರ ವಾದ ವಿಳಾಸ, ‘ಪಿನ್ ಕೋಡ್’ ಕ್ರಮಾಂಕ, ದೂರವಾಣಿ ಕ್ರಮಾಂಕ ಇವುಗಳ ಮಾಹಿತಿಯನ್ನು ಪಡೆದು ಆ ಹಣವನ್ನು ತಮ್ಮ ಜಿಲ್ಲೆಯ ಸಾಪ್ತಾಹಿಕ, ಮಾಸಿಕ ವರದಿಯ ಸೇವಕರಲ್ಲಿ ಜಮೆ ಮಾಡಿ. ಇದು ಸಾಧ್ಯವಿಲ್ಲದಿದ್ದರೆ ಮುಂದೆ ನೀಡಿದ ಸಂಪರ್ಕ ವಿಳಾಸಕ್ಕೆ ‘ಸಾಪ್ತಾಹಿಕ ಅಥವಾ ಮಾಸಿಕ ಸನಾತನ ಪ್ರಭಾತ’ದ ಹೆಸರಿನಲ್ಲಿ ಮನಿಆರ್ಡರ್ ಮೂಲಕ ಹಣವನ್ನು ಕಳುಹಿಸಬಹುದು. ಕಳುಹಿಸು ವಾಗ ತಮ್ಮ ಪೂರ್ಣ ವಿಳಾಸ, ಪಿನ್‌ಕೋಡ್ ಹಾಗೂ ದೂರವಾಣಿ ಕ್ರಮಾಂಕ ಸಹಿತ ಕಳುಹಿಸಬೇಕು.
ಸಂಪರ್ಕ ವಿಳಾಸ: ಸನಾತನ ಪ್ರಭಾತ ಕಾರ್ಯಾಲಯ, ಕೋಣೆ ಕ್ರ.೪, ನಂ. ೨೨-೧೮, ಚಿತ್ರಾಪು ಗ್ರಾಮ, ಮೂಲ್ಕಿ - ೫೭೪೧೫೪. ದೂ.:(೦೮೨೪) ೩೨೫೦೧೯೧ವಿ-ಅಂಚೆ: spkannada@gmail
ಚಂದಾ ಬೆಲೆ: ಸಾಪ್ತಾಹಿಕ ಸನಾತನ ಪ್ರಭಾತ (ಮರಾಠಿ) ವಾರ್ಷಿಕ ಚಂದಾ: ರೂ.೨೦೦.
ಸಾಪ್ತಾಹಿಕ ಸನಾತನ ಪ್ರಭಾತ (ಕನ್ನಡ) ವಾರ್ಷಿಕ ಚಂದಾ: ರೂ. ೨೫೦
ಮಾಸಿಕ ಸನಾತನ ಪ್ರಭಾತ (ಹಿಂದಿ ಮತ್ತು ಆಂಗ್ಲ)- ಪ್ರತ್ಯೇಕ ರೂ.೯೦
ಮಾಸಿಕ ಸನಾತನ ಪ್ರಭಾತ (ಗುಜರಾತಿ) ರೂ.೫೫
ಟಿಪ್ಪಣಿ: ಸಾಪ್ತಾಹಿಕ ಮತ್ತು ಮಾಸಿಕದ ೩ ಅಥವಾ ೫ವರ್ಷದ ಚಂದಾದಾರರಾಗಬಹುದು.

No comments:

Post a Comment